Karnataka Politics: ಡಿಕೆಶಿ ಬ್ರದರ್ಸ್‌ ಮಣ್ಣಿನ ಮಕ್ಕಳಲ್ಲ, ಕಲ್ಲಿನ ಮಕ್ಕಳು: HDK

By Kannadaprabha News  |  First Published Feb 24, 2022, 6:26 AM IST

*  ದೇವೇಗೌಡರು ಇರುವವರೆಗೂ ಸಮಾಜ ಕೈಬಿಡುವುದಿಲ್ಲ
*  ನಾನು ಯಾವುದೇ ರಿವರ್ಸ್‌ ಆಪರೇಷನ್‌ ಮಾಡಲ್ಲ
*  ಒಕ್ಕಲಿಗ ಮತಕ್ಕೆ ಕೈ ಹಾಕಿದ್ರೆ ಡಿಕೆಶಿ ಕುತ್ತಿಗೆಗೆ ಬರುತ್ತದೆ 


ಮೈಸೂರು(ಫೆ.24): ಒಕ್ಕಲಿಗ ಮತಗಳ ಬುಟ್ಟಿಗೆ ಕೈ ಹಾಕಿದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌(DK Shivakumar) ಕುತ್ತಿಗೆಗೆ ಬರುತ್ತದೆ ಎಂದು ಎಚ್ಚರಿಕೆ ನೀಡಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ(HD Kumaraswamy), ದೇವೆಗೌಡರು(HD Devegowda) ಬದುಕಿರುವವರೆಗೂ ಈ ಸಮಾಜ ಅವರನ್ನು ಕೈಬಿಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಕಾಂಗ್ರೆಸ್‌(Congress) ಸೇರುವವರ ಪಟ್ಟಿ ದೊಡ್ಡದಿದೆ ಎಂಬ ಡಿ.ಕೆ.ಶಿವಕುಮಾರ್‌ ಕೇಳಿಕೆಗೆ ತಿರುಗೇಟು ನೀಡಿರುವ ಅವರು, ಡಿ.ಕೆ.ಶಿವಕುಮಾರ್‌ ಒಕ್ಕಲಿಗ ಶಾಸಕರನ್ನಾದರೂ ಸೆಳೆಯಲಿ, ಇನ್ಯಾರನ್ನಾದರೂ ಸೆಳೆಯಲಿ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ದೇವೆಗೌಡರು ಇರೋವವರೆಗೂ ಯಾರೂ ಏನು ಮಾಡಲು ಸಾಧ್ಯವಿಲ್ಲ ಎಂದರು.

Tap to resize

Latest Videos

Harsha Murder Case: ಹರ್ಷ ಸಾವಿಗೆ ಸರ್ಕಾರದ ವೈಫಲ್ಯವೇ ಕಾರಣ: ಎಚ್‌ಡಿಕೆ

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಕ್ಕಲಿಗ ಶಾಸಕರಿಗೆ ಗಾಳ ಹಾಕಿರೋದು ಅವರ ಕುತ್ತಿಗೆಗೆ ಬರಲಿದೆ. ಈ ಸಂಬಂಧ ನಾನು ಯಾವುದೇ ರಿವರ್ಸ್‌ ಆಪರೇಷನ್‌ ಮಾಡಲ್ಲ. ನನ್ನ ಸಂಪರ್ಕದಲ್ಲಿ ಯಾವ ಕಾಂಗ್ರೆಸ್‌ ಶಾಸಕರು, ಮುಖಂಡರೂ ಇಲ್ಲ. ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ನ ಬೆಳವಣಿಗೆ ನೋಡಿ ಆ ಪಕ್ಷದವರೇ ಬರುತ್ತಾರೆ ಎಂದು ಅವರು ಹೇಳಿದರು.

ಡಿಕೆಶಿ ಬ್ರದರ್ಸ್‌ ಮಣ್ಣಿನ ಮಕ್ಕಳಲ್ಲ, ಕಲ್ಲಿನ ಮಕ್ಕಳು

ಡಿ.ಕೆ. ಸಹೋದರರು(DK Brothers) ಮಣ್ಣಿನ ಮಕ್ಕಳಲ್ಲ, ಕಲ್ಲಿನ ಮಕ್ಕಳು ಎಂದು ಎಚ್‌.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ನಾವೆಂದು ಮಣ್ಣಿನ ಮಕ್ಕಳು ಅಂತ ಹೇಳಿಕೊಂಡಿಲ್ಲ. ನೀವೆ ಮಣ್ಣಿನ ಮಕ್ಕಳೆಂದು ಬೋರ್ಡ್‌ ಹಾಕಿಕೊಂಡು ಹೋಗಿ ಎಂದು ಅವರು ಡಿಕೆ ಸಹೋದರರನ್ನು ಟೀಕಿಸಿದರು. ಮೇಕೆದಾಟು(Mekedatu) ಎರಡನೇ ಹಂತದ ಪಾದಯಾತ್ರೆ(Padayatra)s ಈಗ ಯಾಕೆ? ನೀವೆ ಮಣ್ಣಿನ ಮಕ್ಕಳೆಂದು ಬೋರ್ಡ್‌ ಹಾಕೊಂಡು ಹೋಗಿ, ನಾವೆಂದು ಮಣ್ಣಿನಮಕ್ಕಳು ಅಂತ ಹೇಳಿಕೊಂಡಿಲ್ಲ. ನಿಮಗೆ ಕಲ್ಲಿನ ಮಕ್ಕಳು ಅಂತ ಕರೆಯುತ್ತಾರೆ. ಈಗೇನೋ ಮಣ್ಣಿನ ಮಕ್ಕಳು ಅಂತ ಬಿಂಬಿಸಿಕೊಳ್ಳಲು ಹೋಗುತ್ತಿದ್ದೀರಾ? ಬೋರ್ಡ್‌ ಹಾಕಿಕೊಳ್ಳಿ ಎಂದು ತಿರುಗೇಟು ನೀಡಿದರು.

‘ಕೈ’ಗೆ ಸ್ಪೀಕರ್‌ ಅವಾರ್ಡ್‌ ಕೊಡಲಿ:

ಜೆಡಿಎಸ್‌(JDS) ಎಂದೂ ಕೂಡ ಸದನದ ಕಲಾಪಕ್ಕೆ ಅಡ್ಡಿಪಡಿಸಿಲ್ಲ. ಬಾವುಟ ತಂದವರು ಇವರೇ ಅಂತೆ, ಮಾತಾಡೋ ಸ್ವಾತಂತ್ರ್ಯ ಕೊಟ್ಟವರು ಇವರೇ ಅಂತೆ. ಅವತ್ತು ಹೋರಾಟ ಮಾಡಿದವರು ಬೇರೆ, ಇವರೇ ಬೇರೆ. ಅವತ್ತಿನ ಹೋರಾಟವನ್ನು ಹೈಜಾಕ್‌ ಮಾಡಿಕೊಂಡವರು ಇವರು. ಕಾಂಗ್ರೆಸ್‌ನವರ ಈ ಹೋರಾಟಕ್ಕೆ ಸ್ಪೀಕರ್‌ ಯಾವುದಾದರೂ ಅವಾರ್ಡ್‌ ಇದ್ದರೆ ಕೊಡಲಿ ಎಂದು ವ್ಯಂಗ್ಯವಾಡಿದರು. ಇದೇವೇಳೆ ಕಾಂಗ್ರೆಸ್‌ ನಡವಳಿಕೆ ಬಗ್ಗೆ ಅನುಮಾನವಿದೆ. ನೀವು ಹೊಡೆದ್ಹಂಗೆ ಮಾಡಿ ನಾವು ಅತ್ತಂಗೆ ಮಾಡ್ತಿವಿ ಅಂತಾ ಬಿಜೆಪಿ(BJP) - ಕಾಂಗ್ರೆಸ್‌ ನಡುವೆ ಒಪ್ಪಂದ ನಡೆದಿರಬಹುದು ಎಂದು ಆರೋಪಿಸಿದರು.

2 ವರ್ಷದ ಹಿಂದೆಯೇ ಆ ಹಿಂದೂ ಕಾರ್ಯಕರ್ತ ಹರ್ಷ ಕೊಲೆಗೆ ಘೋಷಣೆ, ಎಚ್‌ಡಿಕೆ ಸ್ಫೋಟಕ ಮಾಹಿತಿ

ಹಿಜಾಬ್‌ಗೂ- ಹತ್ಯೆಗೂ ಸಂಬಂಧವಿಲ್ಲ

ಹಿಜಾಬ್‌ಗೂ(Hijab) ಗಲಾಟೆಗೂ ಶಿವಮೊಗ್ಗದ(Shivamogga) ಪ್ರಕರಣಕ್ಕೂ ಸಂಬಂಧ ಇಲ್ಲ ಎಂದು ಎಚ್‌.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್‌ ಒಂದೇ ನಾಣ್ಯದ ಎರಡು ಮುಖಗಳು. ಹಿಜಾಬ್‌ಗೂ ಗಲಾಟೆಗೂ ಶಿವಮೊಗ್ಗದ ಪ್ರಕರಣಕ್ಕೂ ಸಂಬಂಧ ಇಲ್ಲ. ಶೇ.200ರಷ್ಟು ಹೇಳುತ್ತೇನೆ ಇವರೆಡರ ನಡುವೆ ಸಂಬಂಧ ಇಲ್ಲ. ಮುಂದಿನ ಚುನಾವಣೆವರೆಗೂ ಇಂಥ ಗಲಾಟೆ ನಡೆಯುತ್ತಿರುತ್ತವೆ. ಕೋಮು ಸೌಹಾರ್ದತೆ ವಿಚಾರದಲ್ಲಿ ರಾಜಕೀಯ ಪಕ್ಷಗಳ ಮುಖಂಡರ ಮಕ್ಕಳು ಸಾಯುವುದಿಲ್ಲ. ಎರಡೂ ಪಕ್ಷಕ್ಕೂ ಕೋವಿಡ್‌ ಬಂದಿದೆ ಎಂದು ಆರೋಪಿಸಿದರು.

ಕಾರ್ಯಕರ್ತರನ್ನು ರಕ್ಷಿಸಿಕೊಳ್ಳಲಾಗದ ನಿಮ್ಮದೆಂಥಾ ಸರ್ಕಾರ?

ಭಜರಂಗದಳ ಕಾರ್ಯಕರ್ತ ಹರ್ಷ ಅವರ ಹತ್ಯೆ ಪ್ರಕರಣದಲ್ಲಿ (Harsha Murder Case ) ಸರ್ಕಾರದ ವೈಫಲ್ಯದ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ನಿಮ್ಮದೇ ಕಾರ್ಯಕರ್ತನನ್ನು ರಕ್ಷಿಸಿಕೊಳ್ಳಲಾಗದ ನಿಮ್ಮದೆಂಥಾ ಸರ್ಕಾರ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
 

click me!