Karnataka BJP: ವಿಜಯನಗರಕ್ಕೆ ಒಲಿದ ಬಿಜೆಪಿ ಕಾರ್ಯಕಾರಣಿ ಯೋಗ

Kannadaprabha News   | Asianet News
Published : Feb 23, 2022, 09:32 AM IST
Karnataka BJP: ವಿಜಯನಗರಕ್ಕೆ ಒಲಿದ ಬಿಜೆಪಿ ಕಾರ್ಯಕಾರಣಿ ಯೋಗ

ಸಾರಾಂಶ

*  ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಹೊಸಪೇಟೆಯಲ್ಲಿ ರಾಜ್ಯ ಕಾರ್ಯಕಾರಣಿ *  ಮಾ. 28 ಮತ್ತು 29ರಂದು ಕಾರ್ಯಕಾರಿಣಿ *  ನೂತನ ಜಿಲ್ಲೆಗೆ ಒಲಿದ ಅದೃಷ್ಟ  

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ(ಫೆ.23):  ಕಲ್ಯಾಣ ಕರ್ನಾಟಕದ(Kalyana Karnataka) ಹೆಬ್ಬಾಗಿಲು, ಐತಿಹಾಸಿಕ ನೂತನ ವಿಜಯನಗರ(Vijayanagara) ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲಿ(Hosapete) ಬಿಜೆಪಿಯ ರಾಜ್ಯ ಕಾರ್ಯಕಾರಿಣಿ ನಿಗದಿಯಾಗಿದ್ದು, ಪಕ್ಷದ ಸಂಘಟನೆಗೆ ‘ಬೂಸ್ಟರ್‌ ಡೋಸ್‌’ ಆಗಿ ಪರಿಣಮಿಸಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

2023ರ ವಿಧಾನಸಭೆ ಚುನಾವಣೆಯನ್ನು(Assembly Election) ದೃಷ್ಟಿಯಲ್ಲಿಟ್ಟುಕೊಂಡು ಕಲ್ಯಾಣ ಕರ್ನಾಟಕದ ನೂತನ ವಿಜಯನಗರ ಜಿಲ್ಲೆಯಲ್ಲಿ ರಾಜ್ಯ ಕಾರ್ಯಕಾರಿಣಿಯನ್ನು(Bjp Working Committee) ಮಾ.28 ಮತ್ತು 29ರಂದು ನಿಗದಿಗೊಳಿಸಲಾಗಿದೆ. ವಿಜಯನಗರ ಜಿಲ್ಲೆ ರಚನೆಯಾಗಿ ಒಂದು ವರ್ಷ ಪೂರೈಸಿದ್ದು, ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಜಿಲ್ಲೆಗೆ ಅಕ್ಟೋಬರ್‌ 2ರಂದು ಚಾಲನೆ ನೀಡಿದ್ದರು. ಆಗಿನ ಸಿಎಂ ಬಿ.ಎಸ್‌. ಯಡಿಯೂರಪ್ಪನವರು(BS Yediyurappa) 2021ರ ಫೆಬ್ರವರಿ 8ರಂದು ಜಿಲ್ಲೆಗೆ ಅಧಿಕೃತ ಮುದ್ರೆ ಒತ್ತಿದ್ದರು. ವಿಜಯನಗರ ಜಿಲ್ಲೆ ರೂವಾರಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್‌(Anand Singh) ಅವರ ತವರು ಕ್ಷೇತ್ರದಲ್ಲೇ ರಾಜ್ಯ ಕಾರ್ಯಕಾರಣಿ ನಡೆಯಲಿರುವುದರಿಂದ, ಅಕ್ಕಪಕ್ಕದ ಜಿಲ್ಲೆಯಲ್ಲೂ ಪಕ್ಷ ಸಂಘಟನೆ ಮಾಡಲು ಅನುಕೂಲ ಆಗಲಿದೆ ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ಚಿಂತಕರ ಚಾವಡಿಯಲ್ಲಿ ಕೇಳಿಬರುತ್ತಿದೆ.

Karnataka Politics: ಕಾಂಗ್ರೆಸ್‌ಗೆ ಭವಿಷ್ಯವೇ ಇಲ್ಲ: ಸಿಎಂ ಬೊಮ್ಮಾಯಿ

ಅನುದಾನ ನಿರೀಕ್ಷೆ:

ವಿಜಯನಗರ ಹೊಸ ಜಿಲ್ಲೆಗೆ ಮಾ.4ರಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಮಂಡಿಸಲಿರುವ ಬಜೆಟ್‌ನಲ್ಲಿ ವಿಶೇಷ ಅನುದಾನದ ನಿರೀಕ್ಷಿಸಲಾಗಿದೆ. ಈಗಾಗಲೇ ಫೆ.4ರಂದು ನಡೆದ ವಿಜಯನಗರ ಜಿಲ್ಲೆಯ ಕುಂದುಕೊರತೆ ಸಭೆಯಲ್ಲಿ ಸಿಎಂ ಜಿಲ್ಲೆಗೆ ಅನುದಾನ ನೀಡುವ ಭರವಸೆ ನೀಡಿದ್ದಾರೆ. ವಿಜಯನಗರ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಸಾಥ್‌ ನೀಡುವೆ ಎಂದು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಮತ್ತು ಪ್ರವಾಸೋದ್ಯಮ ಸಚಿವ ಆನಂದ ಸಿಂಗ್‌ ಅವರಿಗೆ ಅಭಯ ನೀಡಿದ್ದಾರೆ.

ವಿಜಯನಗರದಲ್ಲೇ ಕಾರ್ಯಕಾರಿಣಿ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಈ ಬಾರಿ ಬಜೆಟ್‌ನಲ್ಲಿ ನೂತನ ಜಿಲ್ಲೆ ಅಭಿವೃದ್ಧಿಗೆ ವಿಶೇಷ ಅನುದಾನ ದೊರೆಯುವುದು ಪಕ್ಕಾ ಆಗಿದೆ.

450 ರೂಮ್‌ಗಳ ಬುಕ್‌:

ವಿಜಯನಗರ ಜಿಲ್ಲೆಯ ರೆಸಾರ್ಟ್‌, ಹೋಟೆಲ್‌ಗಳು ಸೇರಿ ಮಾ.28 ಮತ್ತು 29ರಂದು 450 ರೂಮ್‌ಗಳು ರಾಜ್ಯ ಕಾರ್ಯಕಾರಿಣಿಗಾಗಿ ಬುಕ್‌ ಆಗಿವೆ. ರಾಜ್ಯ ಕಾರ್ಯಕಾರಿಣಿಯನ್ನು ವಿಜಯನಗರದ ಜಿಲ್ಲಾ ಬಿಜೆಪಿ ಕಚೇರಿ ನಿರ್ಮಾಣಕ್ಕಾಗಿ ನಿಗದಿಗೊಳಿಸಿರುವ ಬೈಪಾಸ್‌ ರಸ್ತೆಯ ಖಾಲಿ ಜಾಗದಲ್ಲಿ ಇಲ್ಲವೇ ದೊಡ್ಡ ಸಭಾಂಗಣದಲ್ಲಿ ನಡೆಸುವುದರ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಅರುಣ ಸಿಂಗ್‌ ಆಗಮನ:

ಈ ಕಾರ್ಯಕಾರಿಣಿಯಲ್ಲಿ ಭಾಗವಹಿಸಲು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್‌(Arun Singh) ಆಗಮಿಸಲಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್‌ವೈ ಸೇರಿದಂತೆ ಮಾಜಿ ಸಿಎಂ ಮತ್ತು ಕೇಂದ್ರ ಸಚಿವರು, ಸಂಸದರು, ರಾಜ್ಯದ ಸಚಿವರು ಮತ್ತು ಶಾಸಕರು ಹಾಗೂ ಪಕ್ಷದ ರಾಜ್ಯ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಜತೆಗೆ ಪಕ್ಷದ ಆಹ್ವಾನಿತರು ಭಾಗವಹಿಸಲಿದ್ದು, ಈ ಕಾರ್ಯಕಾರಿಣಿಯಲ್ಲಿ ಪಕ್ಷ ಸಂಘಟನೆಯ ಸಂದೇಶವನ್ನು ವರಿಷ್ಠರು ರವಾನಿಸಲಿದ್ದಾರೆ.

ನೂತನ ಜಿಲ್ಲೆಗೆ ಒಲಿದ ಅದೃಷ್ಟ

ಬಳ್ಳಾರಿಯಲ್ಲಿ(Ballari) ರಾಜ್ಯ ಕಾರ್ಯಕಾರಿಣಿ ನಡೆಸಲು ಕಳೆದ ಮೂರು ವರ್ಷಗಳಿಂದ ಸತತ ಕೋರಿಕೆ ಸಲ್ಲಿಸಲಾಗಿತ್ತು. ಆದರೆ, ಅಲ್ಲಿ ರಾಜ್ಯ ಕಾರ್ಯಕಾರಿಣಿ ನಡೆಸುವ ಆಶಯ ಈಡೇರಿಲ್ಲ. ನೂತನ ವಿಜಯನಗರಕ್ಕೆ ಜಿಲ್ಲೆ ರಚನೆಯಾದ ವರ್ಷದ ಬಳಿಕ ಆ ಅದೃಷ್ಟಒದಗಿ ಬಂದಿದೆ.

Karnataka Politics: 20 ಕಾಂಗ್ರೆಸಿಗರಿಂದ ನೂರಾರು ಶಾಸಕರ ಹಕ್ಕು ದಮನ: ಅಶೋಕ್‌

ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಣಿ ಸಭೆ ಮಾ.28 ಮತ್ತು 29ರಂದು ನಡೆಯಲಿದೆ. ಇದಕ್ಕಾಗಿ ಈಗಾಗಲೇ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಅಂತ ವಿಜಯನಗರ ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್‌ ತಿಳಿಸಿದ್ದಾರೆ.  

ವಿಜಯನಗರದಲ್ಲಿ ರಾಜ್ಯ ಕಾರ್ಯಕಾರಣಿ ನಿಗದಿಯಾಗಿರುವುದು ಪಕ್ಷ ಸಂಘಟನೆಗೆ ಅನುಕೂಲ ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಪಕ್ಷದ ಬಲವರ್ಧನೆಗೂ ಅನುಕೂಲ ಆಗಲಿದೆ ಅಂತ ವಿಜಯನಗರ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಅಯ್ಯಾಳಿ ತಿಮ್ಮಪ್ಪ ಹೇಳಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಉ.ಕರ್ನಾಟಕ ಬಗ್ಗೆ ರಾಜ್ಯ ಸರ್ಕಾರ ದಿವ್ಯ ನಿರ್ಲಕ್ಷ್ಯ: ವಿಜಯೇಂದ್ರ
ಆರ್‌ಟಿಒ ಕಚೇರಿಗಳಲ್ಲಿ ಬ್ರೋಕರ್‌ ಹಾವಳಿ ತಡೆಗೆ ಕ್ರಮ: ಸಚಿವ ರಾಮಲಿಂಗಾರೆಡ್ಡಿ