ರಾಜ್ಯದಲ್ಲಿ ಅಧಿಕಾರ ನಡೆಸಿದ ರಾಷ್ಟ್ರೀಯ ಪಕ್ಷಗಳು ಮುಸಲ್ಮಾನರನ್ನು ನೆಮ್ಮದಿಯಾಗಿ ಇರಲು ಬಿಟ್ಟಿಲ್ಲ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ಗೆ ಅಧಿಕಾರ ನೀಡಿ. ನಿಮ್ಮ ತಂಟೆಗೆ ಯಾರು ಬರುತ್ತಾರೆ ನೋಡೋಣ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಬಾಳೆಹೊನ್ನೂರು (ಫೆ.27): ರಾಜ್ಯದಲ್ಲಿ ಅಧಿಕಾರ ನಡೆಸಿದ ರಾಷ್ಟ್ರೀಯ ಪಕ್ಷಗಳು ಮುಸಲ್ಮಾನರನ್ನು ನೆಮ್ಮದಿಯಾಗಿ ಇರಲು ಬಿಟ್ಟಿಲ್ಲ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ಗೆ ಅಧಿಕಾರ ನೀಡಿ. ನಿಮ್ಮ ತಂಟೆಗೆ ಯಾರು ಬರುತ್ತಾರೆ ನೋಡೋಣ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಪಟ್ಟಣದ ಜೇಸಿ ವೃತ್ತದಲ್ಲಿ ಜೆಡಿಎಸ್ ಭಾನುವಾರ ಆಯೋಜಿಸಿದ್ದ ಪಂಚರತ್ನ ರಥ ಯಾತ್ರೆ ಸಾರ್ವಜನಿಕ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾವು ಇಂದು ರಾಜ್ಯವನ್ನು ಕಟ್ಟಬೇಕಾಗಿರುವುದು ರಕ್ತದ ಓಕುಳಿ ಆಡಲು, ಬಡವರ ಬದುಕಿನ ಜೊತೆ ಚೆಲ್ಲಾಟ ಆಡಲು ಅಲ್ಲ. ಜನಸಾಮಾನ್ಯರ ಬದುಕು ಕಟ್ಟಲು ಎಂದರು.
ರಾಜ್ಯದ ಹಲವಾರು ಹಳ್ಳಿಗಳಲ್ಲಿ ರೈತರ ಪರಿಸ್ಥಿತಿ ತೀವ್ರ ಹದಗೆಟ್ಟಿದ್ದು, ಯಾರೂ ಕೇಳದಂತಾಗಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷ ಪಂಚರತ್ನ ಯಾತ್ರೆ ಆಯೋಜಿಸಿದೆ. ಈ ಯೋಜನೆ ಮಾಡಲು ಯಾವುದೇ ಆರ್ಥಿಕ ತಜ್ಞರು ಹೇಳಿಲ್ಲ. ರಾಜ್ಯದ ರೈತರು, ಮಹಿಳೆಯರು, ಯುವಜನರ ಸದುದ್ದೇಶದ ಕಾರಣ ಯೋಜನೆ ಆಯೋಜಿಸಿದೆ ಎಂದು ಹೇಳಿದರು. ಜೆಡಿಎಸ್ ಪಕ್ಷಕ್ಕೆ 5 ವರ್ಷ ಸಂಪೂರ್ಣ ಆಡಳಿತ ನಡೆಸಲು ಅವಕಾಶ ನೀಡಿದರೆ ಯಾವುದೇ ಧರ್ಮ, ಜಾತಿಯ ಸೋಂಕಿಲ್ಲದೆ ಪಂಚರತ್ನ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗುವುದು. ನಾನು ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲಮನ್ನಾಕ್ಕೆ ಎರಡೂ ರಾಷ್ಟ್ರೀಯ ಪಕ್ಷಗಳು ವಿರೋಧಿಸಿದ್ದವು ಎಂದರು.
2-3 ದಿನದಲ್ಲಿ ಹಾಸನ ಟಿಕೆಟ್ ಕಗ್ಗಂಟು ಇತ್ಯರ್ಥ: ಎಚ್.ಡಿ.ಕುಮಾರಸ್ವಾಮಿ
ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಒತ್ತುವರಿ, ಎಲೆ ಚುಕ್ಕಿ ರೋಗ, ಹಳದಿ ಎಲೆ ರೋಗ, ಕಸ್ತೂರಿ ರಂಗನ್ ಸಮಸ್ಯೆಗೆ ಸೂಕ್ತ ಪರಿಹಾರ ನೀಡಲಾಗುವುದು. 6 ತಿಂಗಳಲ್ಲಿ ಎಲೆಚುಕ್ಕಿ ರೋಗಕ್ಕೆ ಔಷಧಿ ಕಂಡು ಹಿಡಿಯಲಾಗುವುದು. ಇಲ್ಲದಿದ್ದರೆ ರೈತರ ಜೀವನ ಉಳಿಯಲ್ಲ. ಅಡಕೆ ಬೆಳೆಗಾರರ ಜೀವನ ಉಳಿಯಬೇಕು ಎಂಬುದು ನಮ್ಮ ಉದ್ದೇಶ. ಕೇಂದ್ರ ಸರ್ಕಾರವು ರೈತರ ಮೇಲೆ ಪ್ರಹಾರ ಮಾಡಲು ಹೊರಟಿದ್ದು, ಭೂತಾನ್‌ನಿಂದ ಅಡಕೆ ಆಮದಿಗೆ ಅವಕಾಶ ನೀಡಿದ್ದಾರೆ. ರೈತ ವಿರೋಧಿ ಸಾಹುಕಾರ ಯಾವುದಾದರೂ ಇದ್ದರೆ ಅದು ಬಿಜೆಪಿ ಮಾತ್ರ ಎಂದರು.
ಈ ಸಂದರ್ಭದಲ್ಲಿ ಶೃಂಗೇರಿ ಜೆಡಿಎಸ್ ನಿಯೋಜಿತ ಅಭ್ಯರ್ಥಿ ಸುಧಾಕರ್ ಎಸ್.ಶೆಟ್ಟಿ, ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ, ಮುಖಂಡರಾದ ಕೆ.ಎನ್.ಮರಿಗೌಡ ಕೊಳಲೆ, ಕೆ.ಆರ್.ದೀಪಕ್, ಕೆ.ಟಿ.ಗೋವಿಂದೇಗೌಡ, ಗೋವಿಂದರಾಜು, ಕೆ.ಸಿ.ವೆಂಕಟೇಶ್, ಉದಯ್ ಸುವರ್ಣ, ಕುಂಚೂರು ವಾಸು, ಅನಿಲ್ ನಾರ್ವೆ, ಶಿವಶಂಕರ್ ಇದ್ದರು.
5 ಸಾವಿರ ರು. ವೃದ್ಧಾಪ್ಯ ವೇತನ: ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದರೆ 65 ವರ್ಷದಾಟಿದವರಿಗೆ ಪ್ರತಿ ತಿಂಗಳು 5 ಸಾವಿರ ರುಪಾಯಿ ವೃದ್ಧಾಪ್ಯ ವೇತನ ನೀಡುತ್ತೇವೆ. ರೈತರಿಗೆ ರಸಗೊಬ್ಬರವನ್ನು ಸಹಾಯಧನದಲ್ಲಿ ನೀಡುತ್ತೇವೆ. ಗ್ರಾಮೀಣ ಭಾಗದ ಯುವಕರಿಗೆ ಉದ್ಯೋಗ ಸೃಷ್ಟಿಮಾಡುತ್ತೇವೆ. ಮನೆ ಇಲ್ಲದವರಿಗೆ ಸೂರು ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ. ಉಚಿತ ಶಿಕ್ಷಣ, ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸರ್ಕಾರಿ ಆಸ್ಪತ್ರೆ ಪ್ರಾರಂಭಿಸಿ ಅಗತ್ಯವಿದ್ದಷ್ಟುವೈದ್ಯರು, ಸಿಬ್ಬಂದಿ ನೇಮಕ ಮಾಡುತ್ತೇವೆ. ಜೆಡಿಎಸ್ ಪಕ್ಷದ ಪ್ರಣಾಳಿಕೆಗಳನ್ನು ಈಡೇರಿಸಬೇಕಾದರೆ 2.50 ಲಕ್ಷ ಕೋಟಿ ರುಪಾಯಿ ಕ್ರೋಡಿಕರಿಸಬೇಕಾಗಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಬೇರೆ ಪಕ್ಷ ಅವಲಂಬನೆ ಮಾಡದೆ ಜೆಡಿಎಸ್ ಪಕ್ಷ ಸ್ವಂತ ಶಕ್ತಿಯಿಂದ ಸರ್ಕಾರ ರಚನೆ ಮಾಡುವಷ್ಟುಬಹುಮತ ನೀಡಬೇಕು ಎಂದು ಮನವಿ ಮಾಡಿದರು.
ಎಚ್‌ಡಿಕೆ ಅಧಿಕಾರ ಇದ್ದಾಗ ಏಕೆ ಪಂಚರತ್ನ ಜಾರಿ ಮಾಡಲಿಲ್ಲ?: ಸಚಿವ ಸುಧಾಕರ್ ಪ್ರಶ್ನೆ
ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸ ಬಿಜೆಪಿ ಮಾಡುತ್ತಿದೆ. ಈ ನಾಡನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ಮಾಡಬೇಕಾಗಿದೆ. ಬಿಜೆಪಿ ದೇಶಕ್ಕೆ, ರಾಜ್ಯಕ್ಕೆ ಕೆಟ್ಟಸರ್ಕಾರ ನೀಡಿದೆ. ಬಿಜೆಪಿಗೆ ಅಭಿವೃದ್ಧಿಗಿಂತ ಸಮಾಜ ಒಡೆಯುವ ಕೆಲಸಕ್ಕೆ ಹೆಚ್ಚು ಪ್ರಾದಾನ್ಯತೆ ನೀಡುತ್ತಾರೆ. ಧರ್ಮವನ್ನು ಬೀದಿಗೆ ತರಬಾರದು. ಜನರಿಗೆ ಬದುಕು ಕಟ್ಟಿಕೊಡಬೇಕು. ಸುಧಾಕರ ಶೆಟ್ಟರನ್ನು ಶೃಂಗೇರಿ ಕ್ಷೇತ್ರದಲ್ಲಿ ಗೆಲ್ಲಿಸಬೇಕು ಎಂದರು. ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಶೃಂಗೇರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸುಧಾಕರ ಶೆಟ್ಟಿಹಾಗೂ ಪಕ್ಷದ ಮುಖಂಡರು ಹಾಜರಿದ್ದರು.