ಸರ್ಕಾರ-ಜನರ ನಡುವೆ ಸೇತುವೆಯಾಗದ ಎಚ್‌ಡಿಕೆ: ಸಿ.ಪಿ.ಯೋಗೇಶ್ವರ್‌

By Kannadaprabha News  |  First Published Feb 27, 2023, 1:28 PM IST

ಸಾರ್ವಜನಿಕರು ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುವುದು ಶಾಸಕರ ಕೆಲಸ. ಆದರೆ ಮಾಜಿ ಸಿಎಂ ಕುಮಾರಸ್ವಾಮಿ ಆ ಕೆಲಸ ಮಾಡಲಿಲ್ಲ. ಅವರು ಕ್ಷೇತ್ರದ ಜನರೊಂದಿಗೆ ಸಂಬಂಧ ಬೆಸೆಯಲು ಮುಂದಾಗಲೇ ಇಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ವಾಗ್ದಾಳಿ ನಡೆಸಿದರು.


ಚನ್ನಪಟ್ಟಣ (ಫೆ.27): ಸಾರ್ವಜನಿಕರು ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುವುದು ಶಾಸಕರ ಕೆಲಸ. ಆದರೆ ಮಾಜಿ ಸಿಎಂ ಕುಮಾರಸ್ವಾಮಿ ಆ ಕೆಲಸ ಮಾಡಲಿಲ್ಲ. ಅವರು ಕ್ಷೇತ್ರದ ಜನರೊಂದಿಗೆ ಸಂಬಂಧ ಬೆಸೆಯಲು ಮುಂದಾಗಲೇ ಇಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ವಾಗ್ದಾಳಿ ನಡೆಸಿದರು.

ನಗರದ ಎಲೇಕೇರಿಯಲ್ಲಿ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ನಗರಸಭೆ ಮಾಜಿ ಉಪಾಧ್ಯಕ್ಷ, ಕಾಂಗ್ರೆಸ್‌ ಮುಖಂಡ ಬಿ.ಪಿ.ಮುದ್ದುಕೃಷ್ಣೇಗೌಡರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿ, ಇಲ್ಲಿನ ಜನರಿಂದ ಆಯ್ಕೆಯಾದವರು ಸೇತುವೆಯಂತೆ ಕರ್ತವ್ಯ ನಿರ್ವಹಿಸದ ಪರಿಣಾಮ ತಾಲೂಕಿನ ಸಮಸ್ಯೆಗಳು ಪರಿಹಾರವಾಗದೆ ಉಳಿದಿವೆ. ನಗರದ ಎಲೇಕೇರಿ ಸೇತುವೆ ಕಾಮಗಾರಿ, ಕಸದ ಸಮಸ್ಯೆ, ಖಾಸಗಿ ಬಸ್‌ ಟರ್ಮಿನಲ್‌ ನಿಲ್ದಾಣದ ಕುರಿತು ಕಾಳಜಿ ವಹಿಸಲಿಲ್ಲ. ಸಿಎಂ ಆಗಿದ್ದವರು ಮನಸ್ಸು ಮಾಡಿದ್ದರೆ ಕ್ಷಣಾರ್ಧದಲ್ಲಿ ಇರುವ ತೊಡಕು ಸರಿಪಡಿಸಿ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಬಹುದಿತ್ತಾದರೂ ಅವರು ಆಸಕ್ತಿ ತೋರಲಿಲ್ಲ ಎಂದು ಆರೋಪಿಸಿದರು.

Tap to resize

Latest Videos

ಡಿಕೆಶಿ ಕೈಗೆ ತಂಬೂರಿ ಕೊಟ್ಟು ಜ್ಯೋತಿಷ್ಯ ಹೇಳಿ ಎನ್ನಬೇಕು: ಶಾಸಕ ಎನ್‌.ಮಹೇಶ್‌

ನಗರದಲ್ಲಿ ಯುಜಿಡಿ ಕಾಮಗಾರಿಗಾಗಿ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿ ಇದೀಗ 106 ಕೋಟಿ ಅನುದಾನ ಮಂಜೂರು ಮಾಡಿಸಿದ್ದೇನೆ. ಕೆಲ ದಿನಗಳ ಹಿಂದೆ ನಗರದ ಅಭಿವೃದ್ಧಿಗೆ 20 ಕೋಟಿ ಅನುದಾನ ತಂದಿದ್ದೇನೆ. ಇದೀಗ ಚುನಾವಣೆ ಸಂದರ್ಭದಲ್ಲಿ ಎಚ್ಚೆತ್ತುಕೊಂಡಿರುವ ಕುಮಾರಸ್ವಾಮಿ ಅನುದಾನಕ್ಕಾಗಿ ಮುಖ್ಯಮಂತ್ರಿಗಳ ಮೇಲೆ ಒತ್ತಡ ತರುತ್ತಿದ್ದಾರೆ. ಚುನಾವಣೆ ಸಮಯದಲ್ಲಿ ಅವರಿಗೆ ಕ್ಷೇತ್ರ ಅಭಿವೃದ್ಧಿ ನೆನಪಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕ್ಷೇತ್ರಕ್ಕೆ ಆಕಸ್ಮಿಕವಾಗಿ ಬಂದ ಕುಮಾರಸ್ವಾಮಿ, ಒಡವೆ ಸಾಲ, ಸ್ತ್ರೀ ಶಕ್ತಿ ಸಾಲ ಮನ್ನಾ ಮಾಡುವ ಆಶ್ವಾಸನೆ ನೀಡುವ ಮೂಲಕ ಮಹಿಳೆಯರನ್ನು ಮೋಸಗೊಳಿಸಿ ಇಲ್ಲಿಂದ ಗೆದ್ದರು. 14 ತಿಂಗಳು ಕಾಲ ಸಿಎಂ ಆಗಿದ್ದ ಅವರು ಒಮ್ಮೆಯೂ ಕ್ಷೇತ್ರಕ್ಕೆ ಬರಲಿಲ್ಲ. ಇದೀಗ ಚುನಾವಣೆ ಸಮಯದಲ್ಲಿ ಅವರಿಗೆ ಕ್ಷೇತ್ರದ ನೆನಪಾಗಿದೆ. ಅವರು ಇನ್ನೊಂದು ತಿಂಗಳ ಶಾಸಕ ಅಷ್ಟೇ. ನೀರಾವರಿ ಯೋಜನೆ ಸೇರಿದಂತೆ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟುಕೆಲಸ ಮಾಡಿದರೂ ಕಳೆದ ಬಾರಿ ಜನ ಎಚ್‌ಡಿಕೆ ಸುಳ್ಳು ಆಶ್ವಾಸನೆ ನಂಬಿ ನನ್ನ ಸೋಲಿಸಿದರು. ಸೋತ ನಂತರ ನಾನು ಅವರಂತೆ ಕಣ್ಣೀರು ಹಾಕಲಿಲ್ಲ. ಜೇಬಿನಲ್ಲಿ ಕರ್ಚೀಫ್‌ ಇಟ್ಟುಕೊಂಡು ಓಡಾಡಲಿಲ್ಲ ಎಂದು ವ್ಯಂಗ್ಯವಾಡಿದರು.

ರಾಜ್ಯ ಹಾಗೂ ಕೇಂದ್ರದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದ್ದರೆ ಅಭಿವೃದ್ಧಿ ಕಾರ್ಯಗಳಿಗೆ ಅನುಕೂಲವಾಗುತ್ತದೆ. ಬಿಜೆಪಿ ನೇತೃತ್ವದ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ. ಕುಮಾರಸ್ವಾಮಿ ಆವರ ಆಡಳಿತ ವೈಖರಿ ನೋಡಿ ಬೇಸತ್ತಿರುವ ಜನ ಈ ಬಾರಿ ನನಗೆ ಆಶೀರ್ವದಿಸುವ ಭರವಸೆ ಇದೆ. ಸ್ವಾಭಿಮಾನ ಸಂಕಲ್ಪ ಯಾತ್ರೆಗೆ ದೊರೆಕುತ್ತಿರುವ ಅಭೂತಪೂರ್ವ ಬೆಂಬಲ ನನ್ನ ವಿಶ್ವಾಸ ಇಮ್ಮಡಿಗೊಳಿಸಿದೆ ಎಂದರು.

ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದಾಗ ನಾನು ಮತ್ತು ಮುದ್ದುಕೃಷ್ಣೇಗೌಡ ಒಟ್ಟಾಗಿ ಕೆಲಸ ಮಾಡಿದ್ದೇವೆ. ನಾನು ಕಾಂಗ್ರೆಸ್‌ ತ್ಯಜಿಸಿದರೂ ಅವರು ಕಾಂಗ್ರೆಸ್‌ನಲ್ಲೇ ಉಳಿದಿದ್ದರಾದವೂ ನನ್ನ ಬಗ್ಗೆ ಪ್ರೀತಿ ಇಟ್ಟುಕೊಂಡಿದ್ದರು. ತಾಲೂಕಿನ ಅಭಿವೃದ್ಧಿ ಕುಂಠಿತಗೊಂಡಿರುವ ಕುರಿತು ನನ್ನೊಂದಿಗೆ ಅನೇಕ ಬಾರಿ ಅಳಲು ತೋಡಿಕೊಂಡಿದ್ದ ಅವರು, ಇದೀಗ ಬಿಜೆಪಿಗೆ ಬಂದಿದ್ದಾರೆ. ಅವರ ಸೇರ್ಪಡೆಯಿಂದ ಪಕ್ಷಕ್ಕೆ ಬಲ ಬಂದಿದೆ ಎಂದರು. ಈ ಸಂದರ್ಭದಲ್ಲಿ ಬಮೂಲ್‌ ನಾಮಿನಿ ನಿರ್ದೇಶಕ ಎಸ್‌.ಲಿಂಗೇಶ್‌ಕುಮಾರ್‌, ತಾಲೂಕು ಬಿಜೆಪಿ ಅಧ್ಯಕ್ಷ ಕೆ.ಟಿ.ಜಯರಾಮು, ನಗರ ಬಿಜೆಪಿ ಅಧ್ಯಕ್ಷ ಶಿವಕುಮಾರ್‌, ನಗರಸಭಾ ಸದಸ್ಯ ಕೋಟೆ ಚಂದ್ರು, ತಾಲೂಕು ಬಿಜೆಪಿ ವಕ್ತಾರ ಜಯಕುಮಾರ್‌, ಮುಖಂಡ ಆನಂದಸ್ವಾಮಿ ಉಪಸ್ಥಿತರಿದ್ದರು.

Chikkaballapur: ನೇಕಾರರ ಶ್ರೇಯೋಭಿವೃದ್ಧಿಗೆ ಬಿಜೆಪಿ ಬದ್ಧ: ಸಚಿವ ಸುಧಾಕರ್‌

ನಗರದಲ್ಲಿ ಬಿಜೆಪಿ ಬಲವರ್ಧನೆ: ಸ್ವಾಭಿಮಾನಿ ಸಂಕಲ್ಪ ನಡಿಗೆ ಮೂಲಕ ಗ್ರಾಮೀಣ ಭಾಗದಲ್ಲಿ ವರ್ಚಸ್ಸು ವೃದ್ಧಿಗೆ ಮುಂದಾಗಿರುವ ವಿಧಾನಪರಿಷತ್‌ ಸದಸ್ಯ ಯೋಗೇಶ್ವರ್‌, ಇದೀಗ ನಗರ ಪ್ರದೇಶದಲ್ಲಿ ಪಕ್ಷ ಬಲವರ್ಧನೆಗೆ ಮುಂದಾಗಿದ್ದು, ನಗರಸಭಾ ಮಾಜಿ ಉಪಾಧ್ಯಕ್ಷ ಹಾಗೂ ಕಾಂಗ್ರೆಸ್‌ ಮುಖಂಡ ಮುದ್ದುಕೃಷ್ಣೇಗೌಡ, ನಗರಸಭಾ ಮಾಜಿ ಅಧ್ಯಕ್ಷೆ ಅಖಿಲಾಬಾನು, ನಗರಸಭಾ ಮಾಜಿ ಸದಸ್ಯ ಕಿರಣ್‌ ಸೇರಿದಂತೆ ಹಲವು ಮುಖಂಡರನ್ನು ಬಿಜೆಪಿಗೆ ಸೆಳೆಯುವಲ್ಲಿ ಸಫಲರಾಗಿದ್ದಾರೆ. ಮುದ್ದುಕೃಷ್ಣೇಗೌಡ 2013ರ ವಿಧಾನಸಭೆ ಚುನಾವಣೆಯಲ್ಲಿ ನಗರ ವ್ಯಾಪ್ತಿಯಲ್ಲಿ ಮತ ಸೆಳೆದು ಯೋಗೇಶ್ವರ್‌ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಇದೀಗ ಮುದ್ದುಕೃಷ್ಣ ಅವರನ್ನು ಬಿಜೆಪಿಗೆ ಕರೆತರುವಲ್ಲಿ ಯಶಸ್ವಿಯಾಗಿರುವ ಯೋಗೇಶ್ವರ್‌ ನಗರದ ಪ್ರದೇಶದಲ್ಲಿ ಪಕ್ಷಕ್ಕೆ ಬಲತುಂಬಲು ಮುಂದಾಗಿದ್ದಾರೆ.

click me!