ರಾಜ್ಯ​ದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆಂದು ಕಾಂಗ್ರೆ​ಸ್ಸಿ​ಗರು ಮೀಸೆ ತಿರುವುತ್ತಿದ್ದಾರೆ: ಬಿ.ಎ​ಸ್‌.​ಯ​ಡಿ​ಯೂ​ರಪ್ಪ

Published : Mar 02, 2023, 04:40 AM IST
ರಾಜ್ಯ​ದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆಂದು ಕಾಂಗ್ರೆ​ಸ್ಸಿ​ಗರು ಮೀಸೆ ತಿರುವುತ್ತಿದ್ದಾರೆ: ಬಿ.ಎ​ಸ್‌.​ಯ​ಡಿ​ಯೂ​ರಪ್ಪ

ಸಾರಾಂಶ

ಕಾಂಗ್ರೆ​ಸ್‌​ನಲ್ಲಿ ನಾಯ​ಕರ ಕೊರತೆ ಇದೆ. ಬಿಜೆ​ಪಿ​ಯಲ್ಲಿ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ರಂಥ ಘಟಾ​ನು​ಘಟಿ ನಾಯ​ಕ​ರಿ​ದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎ​ಸ್‌.​ಯ​ಡಿ​ಯೂ​ರಪ್ಪ ಹೇಳಿ​ದ​ರು. 

ಚಾಮರಾಜನಗರ (ಮಾ.02): ಕಾಂಗ್ರೆ​ಸ್‌​ನಲ್ಲಿ ನಾಯ​ಕರ ಕೊರತೆ ಇದೆ. ಬಿಜೆ​ಪಿ​ಯಲ್ಲಿ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ರಂಥ ಘಟಾ​ನು​ಘಟಿ ನಾಯ​ಕ​ರಿ​ದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎ​ಸ್‌.​ಯ​ಡಿ​ಯೂ​ರಪ್ಪ ಹೇಳಿ​ದ​ರು. ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಬುಧ​ವಾರ ಬಿಜೆಪಿ ಸಂಕಲ್ಪ ಯಾತ್ರೆಗೆ ಚಾಲನೆ ನೀಡುವ ಕಾರ್ಯ​ಕ್ರಮದಲ್ಲಿ ಮಾತ​ನಾ​ಡಿ, ಕಾಂಗ್ರೆಸ್‌ನಿಂದಾಗಿ ದೇಶ​ ದಿವಾ​ಳಿ​ಯಾ​ಯಿತು. ಈಗ ರಾಜ್ಯ​ದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆಂದು ಕಾಂಗ್ರೆ​ಸ್ಸಿ​ಗರು ಮೀಸೆ ತಿರುವುತ್ತಿದ್ದಾರೆ. ಈ ಬಾರಿ ಸ್ಪಷ್ಟಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ ಎಂದ​ರು.

ಪರಿಶಿಷ್ಟಜಾತಿ, ಪಂಗಡದ ಹಾಗೂ ಹಿಂದುಳಿದವರ ಕಲ್ಯಾಣಕ್ಕೆ ಬಿಜೆಪಿ ಸರ್ಕಾರ ಹಲ​ವು ಕಾರ್ಯಕ್ರಮ ಜಾರಿಗೆ ತಂದಿ​ದೆ. ಈ ಭಾಗದಲ್ಲಿ ಎಸ್‌.ಟಿ.ಸಮುದಾಯದವರು ಇದ್ದಾರೆ. ಎಸ್ಸಿ, ಎಸ್ಟಿಮೀಸ​ಲಾ​ತಿ​ಯನ್ನು ಬಿಜೆಪಿ ಸರ್ಕಾರ ಹೆಚ್ಚಳ ಮಾಡಿದೆ. ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತರಲಾಗಿದೆ. ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಹೆಚ್ಚಳ ಮಾಡಿದ್ದೇವೆ ಎಂದ​ರು. ಪ್ರಧಾನಿ ಮೋದಿ ಹಾಗೂ ಮುಖ್ಯ​ಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರದ ಜನಪ್ರಿಯ ಕಾರ್ಯಕ್ರಮಗಳನ್ನು ಮನೆ ಮನೆಗೆ ತಲುಪಿಸುವ ಮೂಲಕ ಈ ಬಾರಿ ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು 15-20 ಸಾವಿರ ಮತಗಳ ಅಂತರದಿಂದ ಗೆಲ್ಲಿ​ಸ​ಬೇಕು ಎಂದು ಇದೇ ವೇಳೆ ಯಡಿ​ಯೂ​ರಪ್ಪ ಮನವಿ ಮಾಡಿ​ದ​ರು.

ಎಟಿ​ಆರ್‌, ಮಂಜು, ಸ್ವರೂಪ್‌ ‘ಕಾಂಗ್ರೆಸ್‌’ ಸಂಪ​ರ್ಕ​ದ​ಲ್ಲಿ​ದ್ದಾ​ರೆ: ಡಿ.ಕೆ.ಶಿವಕುಮಾರ್‌

ಜನತೆಯ ಶೇ 90ರಷ್ಟು ಅಪೇಕ್ಷೆಗಳನ್ನು ಈಡೇರಿಸಿದ ತೃಪ್ತಿ ಇದೆ: ನನ್ನ ಅಧಿಕಾರಾವಧಿಯಲ್ಲಿ ಜಿಲ್ಲೆಯ ಜನತೆಯ ಎಲ್ಲಾ ಅಪೇಕ್ಷೆಗಳಲ್ಲಿ ಶೇ. 90ರಷ್ಟು ಈಡೇರಿಸಿದ ತೃಪ್ತಿ ಇದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು. ಇಲ್ಲಿನ ನಗರದ ಬೆಕ್ಕಿನಕಲ್ಮಠದಲ್ಲಿ ಮಲೆನಾಡು ವೀರಶೈವ ಲಿಂಗಾಯತ ಮಠಾಧೀಶರ ಪರಿಷತ್‌ ವತಿಯಿಂದ ಬಿ.ಎಸ್‌. ಯಡಿಯೂರಪ ಅವರಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ವಿಮಾನ ನಿಲ್ದಾಣ ಪ್ರಧಾನಿ ಉದ್ಘಾಟಿಸಿ ಹೋಗಿದ್ದಾರೆ. ಮುಂದೆ ಶಿವಮೊಗ್ಗ ಜಿಲ್ಲೆಗೆ ವ್ಯಾಪಕ್‌ ಉದ್ಯೋಗಾವಕಾಶ ಸಿಗಲಿದೆ. 

ಶಿವಶರಣರ ನಾಡಾದ ಜಿಲ್ಲೆಯ ಉಡುತಡಿ ಮತ್ತು ಬಳ್ಳಿಗಾವಿಯಲ್ಲಿ 10ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಯಾಗುತ್ತಿದೆ. ಎಲ್ಲಾ ಮಠ ಮಂದಿರಗಳಿಗೆ ನನ್ನ ಅವಧಿಯಲ್ಲಿ ಅನುದಾನ ನೀಡಿದ್ದೇನೆ. ಎಲ್ಲಾ ಸಮಾಜಕ್ಕೂ ಅನುದಾನ ಹಂಚಿಕೆ ಮಾಡಿದ್ದೇನೆ. ಶಕ್ತಿ ಮೀರಿ ರಾಜ್ಯದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ಹೇಳಿದರು. ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ಮಾತನಾಡಿ, ಯಡಿಯೂರಪ್ಪನವರಿಗೆ ಪರ್ಯಾಯ ಶಕ್ತಿಯೇ ಇಲ್ಲ.  ಅವರಿಗೆ ಹಾರ ತುರಾಯಿಯ ಸನ್ಮಾನ ಬೇಕಿಲ್ಲ. ನಾಡಿನ ಸಾಮಾನ್ಯ ಜನತೆ ಕೂಡ ಅವರನ್ನು ಅಭಿನಂದಿಸಲು ಹಾತೊರೆಯುತ್ತಿರುವುದು ಅವರ ಜನಪ್ರಿಯತೆಗೆ ಸಾಕ್ಷಿ. 

ಪಕ್ಷ ಸೇರ್ಪಡೆ, ಸ್ಪರ್ಧೆ ಬಗ್ಗೆ ಜನರ ಅಭಿಪ್ರಾಯ ಕೇಳುವೆ: ಸುಮಲತಾ ಅಂಬರೀಶ್

ಕನ್ನಡ ನಾಡಿನ ಅಭಿವೃದ್ಧಿಗೆ ಕೊಡುಗೆ ನೀಡಿದ ಅಪರೂಪದ ರಾಜಕಾರಣಿ ಎಂದು ಬಣ್ಣಿಸಿದರು. ಆರೋಗ್ಯ ಶಿಕ್ಷಣ, ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಮಲೆನಾಡು ಅಭಿವೃದ್ಧಿಗೆ ಬಿಎಸ್‌ವೈ ಕೊಡುಗೆ ಅಪಾರ. ಅವರ ಋುಣವನ್ನು ಜಿಲ್ಲೆಯ ಜನತೆ ಮರೆಯುವುದಿಲ್ಲ. ಅವರ ಇಚ್ಛಾಶಕ್ತಿಗೆ ಸಾಟಿ ಯಾರೂ ಇಲ್ಲ. ನುಡಿದಂತೆ ನಡೆದ ರಾಜಕಾರಣಿಗಳಲ್ಲಿ ಯಡಿಯೂರಪ್ಪ ಮುಂಚೂಣಿಯಲ್ಲಿ ನಿಲ್ಲುತ್ತಾರೆ ಎಂದು ವರ್ಣಿಸಿದರು. ಈ ಸಂದರ್ಭದಲ್ಲಿ ಸಂಸದ ಬಿ.ವೈ. ರಾಘವೇಂದ್ರ, ವಿಧಾನ ಪರಿಷತ್‌ ಸದಸ್ಯರಾದ ಡಿ.ಎಸ್‌. ಅರುಣ್‌, ಎಸ್‌. ರುದ್ರೇಗೌಡ ಸೇರಿದಂತೆ ವಿವಿಧ ಮಠದ ಮಠಾಧೀಶರು ಹಾಗೂ ಯಡಿಯೂರಪ್ಪ ಅಭಿಮಾನಿಗಳು ಪಾಲ್ಗೊಂಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಿಧಾನಸಭೆಯಲ್ಲಿ ಸಿಎಂ ಕುರ್ಚಿಯದ್ದೇ ಗುದ್ದಾಟ: ಬೈರತಿ 'ಕಿಂಗ್ ಅಲೈವ್' ಅಂದಿದ್ದು ಯಾಕೆ? ಆರ್ ಅಶೋಕ್, ಬೈರತಿ ವಾಕ್ಸಮರ!
ವಿಧಾನಸಭೆಯಲ್ಲಿ 'ಉತ್ತರ ಕರ್ನಾಟಕ' ವಿವಾದ: ಶಿವಲಿಂಗೇಗೌಡರ ಮಾತುಗಳಿಗೆ ಗರಂ ಆದ ಯತ್ನಾಳ್, ಗ್ಯಾರಂಟಿ, ಗುಂಡಿ ವಿಚಾರಕ್ಕೆ ಜಟಾಪಟಿ!