ಸಾವರ್ಕರ್‌ ಚಿತ್ರದ ಬಗ್ಗೆ ಗಲಾಟೆ ಮಾಡಿದವನಿಗೆ ಶಿಕ್ಷೆ ಆಗಲಿ: ಬಿಎಸ್‌ವೈ

By Govindaraj S  |  First Published Aug 15, 2022, 4:45 AM IST

ವೀರ ಸಾವರ್ಕರ್‌ ಅವರ ಭಾವಚಿತ್ರವನ್ನು ತೆಗೆಯುವಂಥ ಪ್ರಯತ್ನದ ಮೂಲಕ ಮಾಡಿರುವ ಕೃತ್ಯ ಅಕ್ಷಮ್ಯ ಅಪರಾಧ, ಅವರನ್ನು ಬಂಧಿಸಿದ್ದಾರೆ ಎಂಬ ಮಾಹಿತಿಯಿದೆ. ಅಂತಹವರಿಗೆ ಶಿಕ್ಷೆಯಾದಾಗ ಮಾತ್ರ ಇಂತಹ ಘಟನೆಗಳು ಮರುಕಳಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ  ಅಭಿಪ್ರಾಯಪಟ್ಟರು. 


ಶಿವಮೊಗ್ಗ (ಆ.15): ವೀರ ಸಾವರ್ಕರ್‌ ಅವರ ಭಾವಚಿತ್ರವನ್ನು ತೆಗೆಯುವಂಥ ಪ್ರಯತ್ನದ ಮೂಲಕ ಮಾಡಿರುವ ಕೃತ್ಯ ಅಕ್ಷಮ್ಯ ಅಪರಾಧ, ಅವರನ್ನು ಬಂಧಿಸಿದ್ದಾರೆ ಎಂಬ ಮಾಹಿತಿಯಿದೆ. ಅಂತಹವರಿಗೆ ಶಿಕ್ಷೆಯಾದಾಗ ಮಾತ್ರ ಇಂತಹ ಘಟನೆಗಳು ಮರುಕಳಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಭಿಪ್ರಾಯಪಟ್ಟರು. ಶಿವಮೊಗ್ಗದ ಮಾಲ್‌ನಲ್ಲಿ ವೀರ ಸಾವರ್ಕರ್‌ ಭಾವಚಿತ್ರ ತೆರವು ಮಾಡಿದ್ದ ಪ್ರಕರಣ ಸಂಬಂಧ ಭಾನುವಾರ ಸುದ್ದಿಗಾರರೊಂದಿಗೆ ಪ್ರತಿಕ್ರಿಯೆ ನೀಡಿದ ಅವ​ರು, ಇಡೀ ವಿಶ್ವವೇ ಸಾವರ್ಕರ್‌ ಅವ​ರನ್ನು ಕೊಂಡಾಡುತ್ತಿದೆ. ಅಂತಹದರಲ್ಲಿ ಶಿವಮೊಗ್ಗದಲ್ಲಿ ನಡೆದಿರುವ ಕಿಡಿಗೇಡಿಗಳ ಈ ವರ್ತನೆ ಖಂಡನೀಯ. 

ಸಾವರ್ಕರ್‌ ಬಗ್ಗೆ ಹಗುರವಾದ ಮಾತನಾಡಿರುವುದು ಬಹಳ ನೋವುಂಟು ಮಾಡುವ ಸಂಗತಿ. ಆ ಕಿಡಿಗೇಡಿಯನ್ನು ಬಂಧಿಸಲಾಗಿದೆ. ಆತನಿಗೆ ಶಿಕ್ಷೆ ಕೂಡ ಆಗುತ್ತದೆ. ಈ ನಿಟ್ಟಿನಲ್ಲಿ ಕಾನೂನನ್ನು ಕೈಗೆ ತೆಗೆದುಕೊಳ್ಳುವ ಕೆಲಸಕ್ಕೆ ಹೋಗಬಾರದು. ಕಿಡಿಗೇಡಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಇನ್ನೂ ಬೆಂಗಳೂರಿನಲ್ಲಿ ನಡೆದ ಟಿಪ್ಪು ಸುಲ್ತಾನ್‌ ಬ್ಯಾನರ್‌ ತೆಗೆದ ವಿಚಾರಕ್ಕೆ ಸಂಬಂಧಿಸಿದಂತೆ ಈ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ. ಸದ್ಯ ಸಾವರ್ಕರ್‌ ಭಾವಚಿತ್ರ ತೆರವುಗೊಳಿಸಿದ ವಿಚಾರದ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆ ಅದರ ಬಗ್ಗೆ ಪ್ರತಿಕ್ರಿಯಿಸುತ್ತೇನೆ. ಉಳಿದಂತಹ ವಿಚಾರದಲ್ಲಿ ನನಗೆ ವಾಸ್ತವಿಕ ಸಂಗತಿ ನನಗೆ ಗೊತ್ತಿಲ್ಲ ಎಂದರು.

Tap to resize

Latest Videos

ಅಧಿಕಾರ ಮುಖ್ಯವೂ ಅಲ್ಲ, ಶಾಶ್ವತವೂ ಅಲ್ಲ: ಮಾಜಿ ಸಿಎಂ ಯಡಿಯೂರಪ್ಪ

ಪ್ರವಾಸದ ನಂತರ ಕಾಂಗ್ರೆಸ್‌ಗೆ ಬಿಜೆಪಿ ಶಕ್ತಿ ತಿಳಿಯಲಿದೆ: ನಾವೆಲ್ಲಾ ಒಟ್ಟಾಗಿ ಪ್ರವಾಸ ಮಾಡುವ ಮೂಲಕ ಪಕ್ಷದ ಸಂಘಟನೆ ಮಾಡಲಿದ್ದೇವೆ. ಆಗ ಕಾಂಗ್ರೆಸ್‌ಗೆ ಬಿಜೆಪಿ ಶಕ್ತಿ ಅರಿವಾಗುತ್ತದೆ. ಸಿಎಂ ಅಗುವ ಕನಸು ಕಾಣುವ ಕಾಂಗ್ರೆಸ್‌ನವರ ಆಸೆ ಈಡೇರುವುದಿಲ್ಲ, ಸರ್ಕಾರದ ಸಾಧನೆಯನ್ನು ಜನೋತ್ಸವದ ಮೂಲಕ ಜನರಿಗೆ ತಿಳಿಸುತ್ತೇವೆ ಎಂದರು. ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ ಗೆಲವು ನಿಶ್ಚಿತ. ಸಿಎಂ ಭಷ್ಟಾಚಾರದ ಬಗ್ಗೆ ಟೀಕಿಸುತ್ತಾ ಕಾಂಗ್ರೆಸ್‌ನ ಪ್ರಿಯಾಂಕ್‌ ಖರ್ಗೆ ನೀಡಿರುವ ಹೇಳಿಕೆ ಖಂಡನೀಯ. ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಅವರ ಹೇಳಿಕೆ ಅಕ್ಷಮ್ಯ, ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದು ಕಟುವಾಗಿ ಹೇಳಿದರು.

ಸಾರ್ವಕರ್ ಬಗ್ಗೆ ಎಸ್‌ಡಿಪಿಐ ಮಾತುಗಳು ಯಾವ ಹಂತದಲ್ಲಿಯೂ ಕ್ಷಮಿಸಲು ಅರ್ಹವಲ್ಲ: ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಡಿದ್ದ ಎಂದ ಮಾತ್ರಕ್ಕೆ ಆತನ ಉಳಿದೆಲ್ಲವನ್ನೂ ಕ್ಷಮಿಸಬೇಕು ಎಂದರೆ ಅದು ಸಾಧ್ಯವಿಲ್ಲ ಎಂದು ಶಾಸಕ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ಚಿಕ್ಕಮಗಳೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬ್ಯಾನರ್ ಹರಿದು ಹಾಕುವ ಮೂಲಕ ಆತನ ವ್ಯಕ್ತಿತ್ವ ಹರಿಯಬಹುದು ಅಂತಾ ನಾನು ಭಾವಿಸುವುದಿಲ್ಲ. ಟಿಪ್ಪು ಅಂದ ತಕ್ಷಣವೇ ನರಮೇಧ ಕಣ್ಣ ಮುಂದೆ ಬರುತ್ತೆ. ಆತ ಬ್ರಿಟಿಷರ ವಿರುದ್ಧ ಮಾತ್ರ ಹೋರಾಟ ಮಾಡಿದ ಅಂದರೆ ನೂರಕ್ಕೆ ನೂರು ಅಂಕ ಕೊಡಬಹುದು. 

ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲವೇ ಇಲ್ಲ: ಬಿ.ಎಸ್‌.ಯಡಿಯೂರಪ್ಪ

ಟಿಪ್ಪು ಮತ್ತು ಅವರ ಅಪ್ಪ ಮೈಸೂರು ಮಹಾರಾಣಿಯನ್ನು ಸೆರೆಮನೆಯಲ್ಲಿಟ್ಟು ಮೋಸದಿಂದ ಸಾಮಾಜ್ಯವನ್ನು ಕಬಳಿಸಿದ್ದಕ್ಕೂ ಕೂಡ ಅಂಕ ಕೊಡಲೇ ಬೇಕಾಗುತ್ತೆ. ಅಫ್ಘಾನಿಸ್ತಾನದ ಸುಲ್ತಾನನನ್ನು ಭಾರತದ ಮೇಲೆ ಅಕ್ರಮಣ ಮಾಡು ಸಹಾಯ ಮಾಡ್ತೇನೆ ಅಂತಾ ಹೇಳಿದಕ್ಕೆ, ದೇಶದ್ರೋಹ, ರಾಜ್ಯ ದ್ರೋಹದ ಪಟ್ಟವನ್ನು ಕಟ್ಟಲೇ ಬೇಕಾಗುತ್ತದೆ ಎಂದರು. ಹಿಂದೂಗಳ ಮಾರಣ ಹೋಮ ಮಾಡಿದ್ದಕ್ಕೆ ರಕ್ತಪಿಪಾಸು ಅಂತಾ ಹೇಳಲೇ ಬೇಕಾಗುತ್ತೆ. ಕೊಡಗವರ ಮಾರಣ ಹೋಮ ಮಾಡಿದ್ದಕ್ಕೆ ನರಹಂತಕ ಅಂತಾ ಹೇಳದೆ ಬೇರೆನೂ ಹೇಳೋಕ್ಕಾಗುತೆ ? ಕೇರಳದಲ್ಲಿ ಮತಾಂತರ ಮಾಡಿದ್ದಕ್ಕೆ ಮತಾಂಧ ಅಂತಾ ಸರ್ಟಿಫಿಕೇಟ್ ಕೊಡಲೇ ಬೇಕಾಗುತ್ತೆ. ಬ್ರಿಟಿಷರ ವಿರುದ್ಧ ಹೋರಾಡಿದ ಕಾರಣಕ್ಕೆ ಇದೆಲ್ಲವನ್ನೂ ಕ್ಷಮಿಸಲು ಸಾಧ್ಯವಿಲ್ಲ ಎಂದರು.

click me!