ಪ್ರಿಯಾಂಕ್ ಖರ್ಗೆ ಜೈಲಿಗೆ ಹೋಗುವ ಸಮಯ ಬಂದಿದೆ: ಫಾರ್ಮ್‌-7 ದುರ್ಬಳಕೆ ವಿಚಾರ, ಛಲವಾದಿ ಹೇಳಿಕೆ ಸಂಚನಲ

Kannadaprabha News   | Kannada Prabha
Published : Oct 07, 2026, 08:38 AM IST
Chalavadi Narayanaswamy slams Congress

ಸಾರಾಂಶ

ಸಚಿವ ಪ್ರಿಯಾಂಕ್ ಖರ್ಗೆ ಅವರು ಫಾರ್ಮ್ 7 ದುರ್ಬಳಕೆ ನೆಪದಲ್ಲಿ ಪೊಲೀಸರ ಮೂಲಕ ಎಫ್‌ಐಆರ್ ದಾಖಲಿಸಿ ಜನರಲ್ಲಿ ಭಯ ಹುಟ್ಟಿಸುತ್ತಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ. ಇಲಾಖೆ ನಿರ್ವಹಣೆಯಲ್ಲಿ ವಿಫಲರಾಗಿರುವ ಖರ್ಗೆ ಅವರೇ ಶೀಘ್ರದಲ್ಲೇ ಜೈಲಿಗೆ ಹೋಗಲಿದ್ದಾರೆಂದು ತಿರುಗೇಟು ನೀಡಿದ್ದಾರೆ.

ಬೆಂಗಳೂರು (ಅ.7): ಗೃಹ ಸಚಿವ ಪ್ರಿಯಾಂಕ್‌ ಖರ್ಗೆ(Priyank kharge) ಜೈಲಿಗೆ ಹೋಗುವ ಕಾಲ ಬಂದಿದೆ. ಮೊದಲು ಇವರನ್ನೇ ಜೈಲಿಗೆ ಕಳಹಿಸಬೇಕು ಎಂದು ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ(Chalavadi narayanaswamy) ಕಿಡಿಕಾರಿದ್ದಾರೆ.

ಅಲ್ಪನಿಗೆ ಐಶ್ವರ್ಯ ಬಂದರೆ ಮಧ್ಯರಾತ್ರೀಲಿ ಛತ್ರಿ ಹಿಡಿದಂತೆ

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅಲ್ಪನಿಗೆ ಐಶ್ವರ್ಯ ಬಂದರೆ ಮಧ್ಯರಾತ್ರೀಲಿ ಛತ್ರಿ ಹಿಡಿದಂತೆ ಗೃಹ ಸಚಿವ ಪ್ರಿಯಾಂಕ್ ನಡೆದುಕೊಳ್ಳುತ್ತಿದ್ದಾರೆ. ಅವರು ಇಲಾಖೆ ಬಿಟ್ಟು ಬೇರೆ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಇಲಾಖೆ ನಿರ್ವಹಣೆ ಮಾಡಲು ಅವರಿಗೆ ಆಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಎಸ್ಐಆರ್‌ ವಿಚಾರದಲ್ಲಿ ಫಾರ್ಮ್‌ 7 ದುರ್ಬಳಕೆ ಮಾಡಿದರೆ ಎಲ್ಲರನ್ನೂ ಜೈಲಿಗೆ ಕಳುಹಿಸುತ್ತೇವೆ ಎಂದು ಪ್ರಿಯಾಂಕ್ ಹೇಳಿದ್ದಾರೆ. ಆದರೆ, ಅವರೇ ಜೈಲಿಗೆ ಹೋಗುವ ಕಾಲ ಕೂಡಿ ಬಂದಿದೆ. ಫಾರ್ಮ್‌ 7 ಸಂಬಂಧ ಎಫ್‌ಐಆರ್‌ ಹಾಕಲು ಪೊಲೀಸರಿಗೆ ಅಧಿಕಾರವಿಲ್ಲ. ನ್ಯಾಯಾಲಯ ಸಹ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಕ್ಯಾಬಿನೆಟ್‌ ಸಭೆ ಬದಿಗೊತ್ತಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಬಳಿ ಧರಣಿ ಮಾಡಿ ಅಪಹಾಸ್ಯಕ್ಕೀಡಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌ ಸರ್ಕಾರವು ಪೊಲೀಸರ ಮೇಲೆ ಒತ್ತಡ ಹಾಕಿ ಫಾರ್ಮ್‌ 7 ತುಂಬುವವರ ವಿರುದ್ಧ ಎಫ್‌ಐಆರ್‌ ದಾಖಲಿಸಿ ಜನರಲ್ಲಿ ಭಯ ಹುಟ್ಟಿಸುತ್ತಿದೆ. ಇದು ಕಾನೂನುಬಾಹಿರ. ಇದನ್ನು ರಾಜ್ಯಪಾಲರ ಗಮನಕ್ಕೆ ತಂದಿದ್ದೇವೆ. ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ಛಲವಾದಿ ಹೇಳಿದರು.

ಪೊಲೀಸರ ಮೇಲೆ ಒತ್ತಡ ಹಾಕಿ ಎಫ್‌ಐಆರ್‌:

ಈಗಾಗಲೇ ರಾಜ್ಯ ಮುಖ್ಯ ಚುನಾವಣಾಧಿಕಾರಿ ಫಾರ್ಮ್‌ 7 ಬಗ್ಗೆ ಸಮಜಾಯಿಷಿ ನೀಡಿದ್ದಾರೆ. ಫಾರ್ಮ್‌ 7 ತುಂಬಿದ ಮೇಲೆ ಒಂದೇ ಒಂದು ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿಲ್ಲ. ಅರ್ಜಿ ಪರಿಶೀಲನೆ ವೇಳೆ ದಾಖಲೆಗಳು ಸರಿ ಇದ್ದರೆ ಊರ್ಜಿತಗೊಳಿಸಲಾಗುವುದು. ಇಲ್ಲವಾದರೆ ತಿರಸ್ಕರಿಸಲಾಗುವುದು ಎಂದಿದ್ದಾರೆ. ಹೀಗಿದ್ದರೂ ಪೊಲೀಸರ ಮೇಲೆ ಒತ್ತಡ ಹಾಕಿ ಈ ಪ್ರಿಯಾಂಕ್ ಖರ್ಗೆ ಬೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾಹುಲ್ ಗಾಂಧಿ ಜೊತೆಗಿನ ಸಂಘರ್ಷದಿಂದ ಬೇಸತ್ತ ಶಶಿ ತರೂರ್ ಬರ್ಲಿನ್‌ನಿಂದಲೇ ಸ್ಫೋಟಕ ಹೇಳಿಕೆ!
'ಫಾರ್ಮ್‌ 7 ದೂರಿನ ಪ್ರತಿ ಕೈ ಸೇರಿದ್ದೇಗೆ? ಗೌಪ್ಯತೆ ಕಾಪಾಡೋದು ಆಯೋಗದ ಕೆಲಸ, ಸಿಟಿ ರವಿ ಸ್ಫೋಟಕ ಹೇಳಿಕೆ