ಯುವಕರ ಮತ ಸೆಳೆಯಲು ಬಿಜೆಪಿಯಿಂದ ಫುಟ್ಬಾಲ್ ಕಪ್: ಶಾಸಕ ಅಪ್ಪಚ್ಚು ರಂಜನ್ ಸಹಕಾರದಲ್ಲಿ ಮ್ಯಾಚ್ ಆಯೋಜನೆ

Published : Mar 23, 2023, 06:29 AM IST
ಯುವಕರ ಮತ ಸೆಳೆಯಲು ಬಿಜೆಪಿಯಿಂದ ಫುಟ್ಬಾಲ್ ಕಪ್: ಶಾಸಕ ಅಪ್ಪಚ್ಚು ರಂಜನ್ ಸಹಕಾರದಲ್ಲಿ ಮ್ಯಾಚ್ ಆಯೋಜನೆ

ಸಾರಾಂಶ

ಶನಿವಾರಸಂತೆ, ಕೊಡ್ಲಿಪೇಟೆ ಭಾಗದಲ್ಲಿ ಜೆಡಿಎಸ್ ಪ್ರಾಬಲ್ಯ ಹಿನ್ನೆಲೆಯಲ್ಲಿ ಯುವಕರ ಮತ ಸೆಳೆಯಲು ಬಿಜೆಪಿಯು ಹಿಂದೂ ಫುಟ್ಬಾಲ್ ಕಪ್ ಆಯೋಜನೆ ಮಾಡಿದೆ.

ಕೊಡಗು (ಮಾ.23): ಶನಿವಾರಸಂತೆ, ಕೊಡ್ಲಿಪೇಟೆ ಭಾಗದಲ್ಲಿ ಜೆಡಿಎಸ್ ಪ್ರಾಬಲ್ಯ ಹಿನ್ನೆಲೆಯಲ್ಲಿ ಯುವಕರ ಮತ ಸೆಳೆಯಲು ಬಿಜೆಪಿಯು ಹಿಂದೂ ಫುಟ್ಬಾಲ್ ಕಪ್ ಆಯೋಜನೆ ಮಾಡಿದೆ. ಹಿಂದೂ ಗೆಳೆಯರ ಬಳಗದಿಂದ ಹಿಂದೂ ಫುಟ್ಬಾಲ್ ಕಪ್ ಆಟವನ್ನು ಹಮ್ಮಿಕೊಂಡಿದ್ದು, ಶನಿವಾರಸಂತೆ ಸಮೀಪದ ಗೌಡಹಳ್ಳಿಯಲ್ಲಿ ಆಯೋಜನೆ ಮಾಡಲಾಗಿದೆ. ಯುಗಾದಿ ಹಬ್ಬದ ಹಿನ್ನೆಲೆ ಫುಟ್ಬಾಲ್ ಪಂದ್ಯಾಟವನ್ನು ಶಾಸಕ ಅಪ್ಪಚ್ಚು ರಂಜನ್ ಅವರ ಸಹಕಾರದಲ್ಲಿ ಆಯೋಜನೆ ಮಾಡಲಾಗಿದ್ದು, ಸೋಮವಾರಪೇಟೆ ತಾಲ್ಲೂಕಿನ ಗೌಡಹಳ್ಳಿಯಲ್ಲಿ ಮ್ಯಾಚ್ ಆಯೋಜನೆಗೊಂಡಿತ್ತು.

ಬಿಜೆಪಿ ಮಂಡಲ ಎಸ್‌ಟಿ ಮೋರ್ಚಾ ಸಮಾವೇಶ ಉದ್ಘಾಟನೆ: ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ನಂತರ ತುಳಿತಕ್ಕೆ ಒಳಗಾದ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಿದೆ. ರಾಜ್ಯದಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಎಸ್‌ಸಿ- ಎಸ್‌ಟಿ ಕಾಲೋನಿಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದರೊಂದಿಗೆ ರಸ್ತೆಗಳನ್ನು ಸಂಪೂರ್ಣ ಕಾಂಕ್ರೀಟಿಕರಣಗೊಳಿಸಲಾಗಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್‌ ಹೇಳಿದರು. ಕುಶಾಲನಗರದಲ್ಲಿ ನಡೆದ ಸೋಮವಾರಪೇಟೆ ಬಿಜೆಪಿ ಮಂಡಲದ ಎಸ್‌ಟಿ ಮೋರ್ಚಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಕಾಮಗಾರಿ ಯಾವುದು ಮುಗಿದಿದೆ ಅದರ ಉದ್ಘಾಟನೆ ಮಾಡಿದ್ದೇವೆ: ರೇವಣ್ಣಗೆ ತಿರುಗೇಟು ನೀಡಿದ ಶಾಸಕ ಪ್ರೀತಂಗೌಡ

ಎಸ್‌ಟಿ ಮೋರ್ಚಾ ಜಿಲ್ಲಾಧ್ಯಕ್ಷ ಮಿಟ್ಟು ರಂಜಿತ್‌ ಮಾತನಾಡಿ, ಆದಿವಾಸಿ ಸಮುದಾಯಕ್ಕೆ ನಿಗಮ ಮಂಡಳಿ ಸ್ಥಾಪಿಸಲು ಶಾಸಕರು ಕ್ರಮ ವಹಿಸಬೇಕಿದೆ ಎಂದು ಆಗ್ರಹಿಸಿದರು. ಎಸ್‌ಟಿ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಭಾಕರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಜೆಪಿ ಜನಪರ ಆಡಳಿತದ ಕಾರಣಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳು ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿದ್ದಾರೆಯೇ ಹೊರತು ಯಾವುದೇ ಆಮಿಷಕ್ಕೆ ಒಳಗಾಗಿ ಅಲ್ಲ ಎಂದರು.

ಕರಗ ಉತ್ಸವಕ್ಕೆ 40 ಲಕ್ಷ ಮುಂಗಡ ಅನುದಾನ: ತುಷಾರ್‌ ಗಿರಿನಾಥ್‌

ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್‌ ದೇವಯ್ಯ ಮಾತನಾಡಿದರು. ಕಾರ್ಯಕ್ರಮದಲ್ಲಿ ದ.ಕ. ಪ್ರಭಾರಿ ಬಿ.ಬಿ. ಭಾರತೀಶ್‌, ಮಂಡಲ ಅಧ್ಯಕ್ಷ ಮನುಕುಮಾರ್‌ ರೈ, ಎಸ್‌ಟಿ ಘಟಕದ ರಾಜ್ಯ ಕಾರ್ಯದರ್ಶಿ ಮಂಜುಳಾ, ಬಿ.ಕೆ. ಮೋಹನ್‌, ಎಸ್‌ಟಿ ಮೋರ್ಚಾ ತಾಲೂಕು ಅಧ್ಯಕ್ಷ ರವಿ, ನಗರ ಘಟಕ ಅಧ್ಯಕ್ಷ ಚಂದ್ರಶೇಖರ್‌, ಕುಶಾಲನಗರ ಪುರಸಭೆ ಅಧ್ಯಕ್ಷ ಬಿ. ಜೈವರ್ಧನ್‌, ಕೂಡುಮಂಗಳೂರು ಗ್ರಾ.ಪಂ. ಉಪಾಧ್ಯಕ್ಷ ಭಾಸ್ಕರ್‌ ನಾಯಕ್‌, ನಗರ ಬಿಜೆಪಿ ಅಧ್ಯಕ್ಷ ಉಮಾಶಂಕರ್‌, ಬಸವನಹಳ್ಳಿ ಅಧ್ಯಕ್ಷ ಆರ್‌.ಕೆ. ಚಂದ್ರ, ಬ್ಯಾಡಗೊಟ್ಟಹಾಡಿ ಮುಖಂಡ ಸಿದ್ದು, ಗುಡ್ಡೆಹೊಸೂರು ಗ್ರಾ.ಪಂ. ಸದಸ್ಯೆ ಉಮಾ, ಸಮಾವೇಶದಲ್ಲಿ ಎಸ್‌ಟಿ ಮುಖಂಡರು, ಎಸ್‌ಟಿ ಸಮುದಾಯದ ಗ್ರಾ.ಪಂ. ಜನಪ್ರತಿನಿಧಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಸಭಾಕಾರ್ಯಕ್ರಮದ ಮುನ್ನ ಕಾರ್ಯಕರ್ತರು ಪಟ್ಟಣದಲ್ಲಿ ಬೃಹತ್‌ ಸಂಖ್ಯೆಯಲ್ಲಿ ಸಭಾಂಗಣ ತನಕ ಮೆರವಣಿಗೆ ತೆರಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!