ಯಾರಾದ್ರು ಏಳಕ್ಕೆ ಏಳು ಗೆಲ್ಲಲೇಬೇಕು, ಆದರೆ ಜೆಡಿಎಸ್ ಎಷ್ಟು ಬಿಜೆಪಿ ಎಷ್ಟು ಕಾಂಗ್ರೆಸ್ ಎಷ್ಟು ಎಂದು ಫಲಿತಾಂಶದ ದಿನ ಗೊತ್ತಾಗುತ್ತೆ. ವಿಪಕ್ಷಗಳು ಹಾಸನ ಕ್ಷೇತ್ರದ ಟಿಕೇಟ್ ಇನ್ನೂ ಅಂತಿಮಗೊಳಿಸಿಲ್ಲ.
ಹಾಸನ (ಮಾ.23): ಯಾರಾದ್ರು ಏಳಕ್ಕೆ ಏಳು ಗೆಲ್ಲಲೇಬೇಕು, ಆದರೆ ಜೆಡಿಎಸ್ ಎಷ್ಟು ಬಿಜೆಪಿ ಎಷ್ಟು ಕಾಂಗ್ರೆಸ್ ಎಷ್ಟು ಎಂದು ಫಲಿತಾಂಶದ ದಿನ ಗೊತ್ತಾಗುತ್ತೆ. ವಿಪಕ್ಷಗಳು ಹಾಸನ ಕ್ಷೇತ್ರದ ಟಿಕೇಟ್ ಇನ್ನೂ ಅಂತಿಮಗೊಳಿಸಿಲ್ಲ. ನಮ್ಮ ಟಿಕೆಟ್ ಕೂಡ ರಾಷ್ಟ್ರೀಯ ನಾಯಕರು ಇನ್ನೂ ಘೋಷಣೆ ಮಾಡಿಲ್ಲ. ಎಲ್ಲದಕ್ಕು ಕಾಯುತ್ತಿದ್ದೇವೆ, ಅಖಾಡದಲ್ಲಿ ಯಾರು ಅಭ್ಯರ್ಥಿ ಆಗ್ತಾರೆ ಅದಾದ ಮೇಲೆ ಕಾವೇರುತ್ತೆ ಎಂದು ಜಿಲ್ಲೆಯಲ್ಲಿ ಏಳಕ್ಕೆ ಏಳು ಕ್ಷೇತ್ರ ಜೆಡಿಎಸ್ ಗೆಲ್ಲುತ್ತೆ ಎಂಬ ದಳಪತಿಗಳ ಹೇಳಿಕೆ ವಿಚಾರವಾಗಿ ಶಾಸಕ ಪ್ರೀತಂಗೌಡ ಹೇಳಿದರು.
ನಂತರ ಸ್ಪೀಡ್ ಬೌಲರ್‌ಗೆ ಯಾವತರ ಫುಟ್ ಹಾಕಬೇಕು. ಸ್ಪಿನ್, ಮೀಡಿಯಂ ಸ್ಪೇಸರ್ ಆದ್ರೆ ಹೇಗೆ ಆಡಬೇಕು ವರ್ಕೌಟ್ ಮಾಡಿದ್ದೀನಿ. ಯಾವ ಬೌಲರ್ ಬರ್ತಾರೆ ನೋಡಿ, ಪವರ್ ಪ್ಲೇ ಹೇಗೆ ಆಡಬೇಕು, ಸ್ಲ್ಯಾಗ್ ಓವರ್ ಹೇಗೆ ಆಡಬೇಕು ಮಧ್ಯದಲ್ಲಿ ಹೇಗೆ ಆಡಬೇಕು ಎಂದು ನೋಡುತ್ತೇನೆ. ಯಾವುದೇ ಬೌಲಿಂಗ್ ಬಂದರೂ ಉತ್ತಮ ಸ್ಕೋರ್ ಕೊಡಲು ಪ್ರಯತ್ನ ಮಾಡುತ್ತೇನೆ. ರಾಜ್ಯದ ಜನ ತಿರುಗಿ ನೋಡುವಂತೆ ಫಲಿತಾಂಶ ಕೊಡಲು ಜನ ತಯಾರಾಗಿದ್ದಾರೆ ಎಂದು ಪ್ರೀತಂಗೌಡ ತಿಳಿಸಿದರು.
undefined
ಕಾಮಗಾರಿ ಯಾವುದು ಮುಗಿದಿದೆ ಅದರ ಉದ್ಘಾಟನೆ ಮಾಡಿದ್ದೇವೆ: ರೇವಣ್ಣಗೆ ತಿರುಗೇಟು ನೀಡಿದ ಶಾಸಕ ಪ್ರೀತಂಗೌಡ
ರೇವಣ್ಣ ಸ್ಪರ್ಧೆ ಮಾಡಿದ್ರೆ ಐವತ್ತು ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂಬ ಸವಾಲು ವಿಚಾರವಾಗಿ ನಂದೇನಿಲ್ಲ ಜನರು ಏನು ಹೇಳ್ತಾರೆ ಅದಕ್ಕೆ ಬದ್ದ. ಆಗ ನಾನು ಶಾಸಕನಾಗಿ ಅಭಿವೃದ್ಧಿ ವಿಚಾರ ಬಂದಾಗ ಮಾತಾಡಿದ್ದೆ, ಈಗ ಅಭ್ಯರ್ಥಿ ಯಾಗಿ ಏನನ್ನೂ ಮಾತನಾಡಲ್ಲ. ನನ್ನ ಎಷ್ಟು ಸಾವಿರದಲ್ಲಿ ಗೆಲ್ಲಿಸುತ್ತಾರೆ ಎಂದು ಜನರು ತೀರ್ಮಾನ ಮಾಡ್ತಾರೆ ಎಂದರು. ರೇವಣ್ಣ ವಿರುದ್ದದ ಸವಾಲಿಗೆ ಯೂಟರ್ನ್ ಹೊಡೆದ ಪ್ರೀತಂಗೌಡ ನಾನು ಅದರ ಬಗ್ಗೆ ಮಾತನಾಡಿದರೆ ಅಪ್ರಸ್ತುತ ಆಗುತ್ತೆ. ಚುನಾವಣೆ ಸಮಯದಲ್ಲಿ ಮತದಾರರು ತೀರ್ಮಾನ ಮಾಡ್ತಾರೆ. ಅವತ್ತು ನಾನು ಹೇಳಿದ್ದು ಅವರು ಅಭಿವೃದ್ಧಿ ಕಾಮಗಾರಿ ಗೆ ತೊಡಕು ಮಾಡಿದ್ಧರಿಂದ ಆ ಉತ್ತರ ಕೊಟ್ಟಿದ್ದೆ ಎಂದು ಹೇಳಿದರು.
ಈಗ ಚುನಾವಣೆ ನಾನು ಅಂದು ಕೊಟ್ಟಿದ್ದ ಹೇಳಿಕೆಯನ್ನು ಜನರು ಗಮನಿಸಿದ್ದಾರೆ. ಪ್ರೀತಂಗೌಡ ಸರಿಯಾಗಿ ಹೇಳಿದ್ದಾನೆ ಅಂದ್ರೆ ಜನ ಸಾಮಾನ್ಯರೆ ಅದನ್ನು ಮಾಡ್ತಾರೆ. ನನ್ನದು ಯೂ ಟರ್ನ್ ಇಲ್ಲವೇ ಇಲ್ಲ, ನೇರವಾಗಿ ಹೋಗೋದೆ ನನ್ನ ಕೆಲಸ. ನೇರವಾಗಿ ಹೋಗುವಾಗ ಹಂಪ್ಸ್ ಬಂದರೆ ಸ್ಲೋ ಮಾಡೊದು ಟ್ರಾಫಿಕ್ ಸಿಗ್ನಲ್ ಬಂದಾಗ 30 ಸೆಕೆಂಡ್ ನಿಂತು ಮುಂದೆ ಹೊರಡಬೇಕು.ಗುರಿ ನಿಚ್ಚಳವಾಗಿದೆ ಗುರು ಮೋದಿಯವರ ಮಾರ್ಗದರ್ಶನ ಕೂಡ ಸರಿಯಾಗಿ ಇದೆ. ಹಾಗಾಗಿ ಯೂ ಟರ್ನ್ ಇಲ್ಲ, ಲೆಫ್ಟ್, ರೈಟ್ ಇಲ್ಲ ನೇರ ಹೋಗೋದೆ ಎಂದರು.
ರೇವಣ್ಣ, ಎಚ್ಡಿಕೆ ನಡುವೆ ಭಿನ್ನಾಭಿಪ್ರಾಯ ಇಲ್ಲ: ಸಿ.ಎಂ.ಇಬ್ರಾಹಿಂ
ರೇವಣ್ಣ ತಮ್ಮ ವಿರುದ್ದ ಸ್ಪರ್ಧೆ ಮಾಡಿದ್ರೆ 49999 ಮತಗಳ ಅಂತದಲ್ಲಿ ಗೆದ್ದು ಐವತ್ತು ಸಾವಿರಕ್ಕೆ ಒಂದೇ ಮತ ಕಡಿಮೆಯಾದ್ರು ರಾಜಿನಾಮೆ ನೀಡೋ ಸವಾಲು ವಿಚಾರವಾಗಿ ಈ ಸವಾಲಿಗೆ ಕಂಡಿಷನ್ ಅಪ್ಲೆ ಇದೆ, ಯಾರು ಅಭ್ಯರ್ಥಿ ಆಗ್ತಾರೆ, ಬರಲಿ ಫೀಲ್ಡ್ ರೆಡಿಯಾಗಲಿ. ನಾವು ಯಾರು ಬಂದ್ರು ಗೆಲ್ತಿನಿ, ಯಾರು ಬಂದ್ರು ಐವತ್ತು ಸಾವಿರ ಲೀಡ್ ಅಂತಾ ನಾನು ಮಾತೇ ಆಡಿಲ್ಲ. ನನಗೆ ಸಮಸ್ಯೆ ಮಾಡುತ್ತಿದ್ದಿರಿ ಇದನ್ನ ಜನರ ಮುಂದೆ ಹೇಳ್ತಿನಿ ಅಂತಾ ಹೇಳಿದ್ದೆ. ನೀವು ಅಭಿವೃದ್ಧಿ ಮಾಡೋಕೆ ಬಿಡ್ತಿಲ್ಲ, ಫುಡ್ ಕೋರ್ಟ್ ಆಟೋ ಸ್ಟ್ಯಾಂಡ್ ಮಾಡೋಕೆ ಬಿಡ್ತಿಲ್ಲ,ರಸ್ತೆ ಪಾರ್ಕ್ ಮಾಡೋಕೆ ಬಿಡ್ತಿಲ್ಲ. ಇವೆಲ್ಲಾ ತೊಂದರೆ ಕೊಡ್ತಾ ಇದೀರಾ, ನೀವೇನಾದರು ಬಂದರೆ ನೀವು ಮಾಡಿರೊ ಸಮಸ್ಯೆಗಳನ್ನು ಹಾಸನದ ಜನರ ಮುಂದೆ ಹೇಳ್ತಿನಿ ಎಂದಿದ್ದೆ. ಅವರು ನಿಮ್ಮನ್ನ ಐವತ್ತು ಸಾವಿರ ಹಿನ್ನಡೆ ಮಾಡ್ತಾರೆ ಅಂತಾ ಹೇಳಿದ್ದೆ. ಅದಕ್ಕೆ ಈಗಲು ಬದ್ದ. ಅವರು ಬಂದು ನಿಂತ ಮೇಲೆ ನಾನು ಕಮೆಂಟ್ ಮಾಡ್ತೇನೆ ಅಂತೆ ಕಂತೆಗಳಿಗೆ ಉತ್ತರ ಕೊಡಲ್ಲ ಎಂದು ಪ್ರೀತಂಗೌಡ ವಾಗ್ದಾಳಿ ನಡೆಸಿದರು.