ಕಳೆದ ರಾಜ್ಯಸಭಾ ಚುನಾವಣೆಯಲ್ಲಿ ನಡೆದಿದ್ದ ಹೈಡ್ರಾಮಾ ಈ ಬಾರಿಯ ಎಲೆಕ್ಷನ್ ನಲ್ಲಿ ಮುಂದುವರಿದಿದೆ. ಈಗಾಲೇ ಕಾಂಗ್ರೆಸ್ ನ ಐವರು ಶಾಸಕರು ರಾಜೀನಾಮೆ ನೀಡಿದ್ದು, ಈ ಅಖಾಡಕ್ಕಿ ಡಿಕೆಶಿ ಎಂಟ್ರಿ ಕೊಡುತ್ತಾರಾ..?
ಅಹಮದಾಬಾದ್, [ಮಾ.15]: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಶಾಸಕರ ರಾಜೀನಾಮೆ ಪರ್ವದ ಬೆನ್ನಲ್ಲೇ ಇದೀಗ ಗುಜರಾತ್ನಲ್ಲೂ ರಾಜ್ಯಸಭಾ ಚುನಾವಣೆಗಾಗಿ ಹೈಡ್ರಾಮಾಗಳು ಶುರುವಾಗಿವೆ.
ಮಾರ್ಚ್ 26 ರಂದು ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನೆಲ್ಲಾ ಶಾಸಕರನ್ನ ಜೈಪುರಕ್ಕೆ ಶಿಫ್ಟ್ ಮಾಡಿದೆ. ಹೀಗಿದ್ದೂ ಕಾಂಗ್ರೆಸ್ನ ಐವರು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
undefined
ಗುಜರಾತ್'ಗೆ ಮರಳಿದ 44 ಕಾಂಗ್ರೆಸ್ ಶಾಸಕರು: ಶಾಸಕರೊಂದಿಗೆ ಹೊರಟ ಸಚಿವ ಡಿ ಕೆ ಶಿವಕುಮಾರ್
ನಾಲ್ವರು ಶಾಸಕರು ನೇರವಾಗಿ ಸ್ಪೀಕರ್ ಅವರನ್ನ ಭೇಟಿಯಾಗಿ ರಾಜೀನಾಮೆ ನೀಡಿದರೆ, ಮತ್ತೊಬ್ಬ ಶಾಸಕ ಪ್ರವೀಣ್ ಮಾರೋ ಅನ್ನೋರು ಪತ್ರದ ಮೂಲಕ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಕ್ರಾಸ್ ವೋಟಿಂಗ್ ಗೆ ಬೆದರಿದ ಕೈ
ಮಾರ್ಚ್ 26 ರಂದು ರಾಜ್ಯಸಭೆಗೆ ಚುನಾವಣೆ ನಡೆಯಲಿದೆ. ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಕುದುರೆ ವ್ಯಾಪಾರ ಆರೋಪ ಮಾಡಿದೆ. ಅಲ್ಲದೇ ತನ್ನ 22 ಶಾಸಕರನ್ನ ಜೈಪುರದ ರೆಸಾರ್ಟ್ ಒಂದರಲ್ಲಿ ಇಟ್ಟಿದೆಯಂತೆ.
182 ವಿಧಾನಸಭಾ ಕ್ಷೇತ್ರಗಳ ಗುಜರಾತ್ನಲ್ಲಿ ಬಿಜೆಪಿಗೆ 103 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್ 73 ಶಾಸಕರನ್ನ ಹೊಂದಿದೆ. ಭಾರತೀಯ ಟ್ರೈಬಲ್ ಪಾರ್ಟಿ 2, ಎನ್ಸಿಪಿ ಹಾಗೂ ಪಕ್ಷೇತರ 1 ಶಾಸಕರಿದ್ದಾರೆ.
ಡಿಕೆ ಶಿವಕುಮಾರ್'ಗೆ ಶುರುವಾಯ್ತಾ ಶುಕ್ರದೆಸೆ?
ನಾಲ್ಕು ರಾಜ್ಯಸಭಾ ಸ್ಥಾನಗಳಿಗಾಗಿ ಗುಜರಾತ್ನಲ್ಲಿ ಚುನಾವಣೆ ನಡೆಯಲಿದೆ. ಈಗಾಗಲೇ ಬಿಜೆಪಿ ಮೂವರು ಅಭ್ಯರ್ಥಿಗಳನ್ನ ಕಣಕ್ಕೆ ಇಳಿಸಿದೆ. ಇತ್ತ ಕಾಂಗ್ರೆಸ್ ಇಬ್ಬರನ್ನ ಅಖಾಡಕ್ಕಿಳಿಸಿದ್ದು, ಕಾಂಗ್ರೆಸ್ಗೆ ಕ್ರಾಸ್ ವೋಟಿಂಗ್ ಭಯ ಶುರುವಾಗಿದ್ದು, ಬಿಜೆಪಿಗೆ ಮೂರು ಸೀಟು ಗೆಲ್ಲಲು 111 ಮತದಾನದ ಅವಶ್ಯಕತೆ ಇದೆ. ಇತ್ತ ಕಾಂಗ್ರೆಸ್ ಎರಡು ಸೀಟು ಗೆಲ್ಲಲು 74 ಶಾಸಕರ ಬೆಂಬಲದ ಅಗತ್ಯ ಇದೆ.
ಈ ಹಿಂದೆಯೂ ನಡೆದಿತ್ತು ಹೈಡ್ರಾಮಾ
ಈ ಹಿಂದೆ ಗುಜರಾತ್ ರಾಜ್ಯಸಭೆ ಚುನಾವಣೆಯಲ್ಲೂ ಸಹ ಬಿಜೆಪಿಗೆ ಹೆದರಿ ಕಾಂಗ್ರೆಸ್ ತನ್ನೆಲ್ಲ ಶಾಸಕರನ್ನ ಬೆಂಗಳೂರಿನ ಈಗಲ್ ಟನ್ ರೇಸಾರ್ಟ್ ನಲ್ಲಿ ಇರಿಸಿತ್ತು. ಇದಕ್ಕೆ ಕಾವಲಾಗಿ ಈಗಿನ ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಿಕೆ ಶಿವಕುಮಾರ್ ಇದ್ದರು. ಕೊನೆಗೆ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕರಾದ ಅಹಮ್ಮದ್ ಪಟೇಲ್ ಗೆಲ್ಲಿಸುವಲ್ಲಿ ಡಿಕೆಶಿ ಯಶಸ್ವಿಯಾಗಿದ್ದರು.
ಇದೀಗ ಮತ್ತೆ ಗುಜರಾತ್ ನಲ್ಲಿ ಹೈಡ್ರಾಮಾ ನಡೆದಿದ್ದು, ಯಾವ ಹಂತಕ್ಕೆ ತಲುಪುತ್ತೆ ಎನ್ನುವುದನ್ನ ಕಾದುನೋಡಬೇಕಿದೆ.