ಬೆಂಗಳೂರಿನ ರಾಮೇಶ್ವರ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಐವರ ಬಂಧನವಾಗಿದೆ ಎಂಬ ಮಾಹಿತಿ ಇದೆ. ಆದರೆ ಇದರ ಬಗ್ಗೆ ಹೆಚ್ಚಿನ ಮಾಹಿತಿ, ಯಾರು, ಏನು ಎಂಬ ಬಗ್ಗೆ ತಿಳಿದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬನವಾಸಿ (ಶಿರಸಿ): ಬೆಂಗಳೂರಿನ ರಾಮೇಶ್ವರ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಐವರ ಬಂಧನವಾಗಿದೆ ಎಂಬ ಮಾಹಿತಿ ಇದೆ. ಆದರೆ ಇದರ ಬಗ್ಗೆ ಹೆಚ್ಚಿನ ಮಾಹಿತಿ, ಯಾರು, ಏನು ಎಂಬ ಬಗ್ಗೆ ತಿಳಿದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕದಂಬೋತ್ಸವಕ್ಕೆ ಚಾಲನೆ ನೀಡಲು ಸಂಜೆ ಬನವಾಸಿಗೆ ಬಂದಿದ್ದ ಅವರು ಪತ್ರಕರ್ತರೊಂದಿಗೆ ಮಾತನಾಡಿದರು. ಸಿಸಿಬಿ, ಪೊಲೀಸರು ಹಾಗೂ ಎನ್‌ಐಎ ತನಿಖೆ ಮಾಡುತ್ತಿದ್ದಾರೆ. ತನಿಖೆ ಚುರುಕಾಗಿ ನಡೆಯುತ್ತಿದೆ. ಐವರ ಬಂಧನವಾಗಿದೆ ಎಂದು ತಿಳಿದು ಬಂದಿದೆ. ಕೆಲವು ಸುಳಿವುಗಳು ಕೂಡಾ ಸಿಕ್ಕಿವೆ, ಯಾರನ್ನು ಬಂಧಿಸಲಾಗಿದೆ ಎಂದು ಮಾಹಿತಿ ಇಲ್ಲ ಎಂದೂ ಸಹ ಮುಖ್ಯಮಂತ್ರಿಗಳು ಹೇಳಿದರು.
ಪಾಕಿಸ್ತಾನ ಜಿಂದಾಬಾದ್ ಘೋಷಣೆ ಪ್ರಕರಣ ಕುರಿತು ಪ್ರಶ್ನಿಸಿದಾಗ, ಬಿಜೆಪಿ ಕಾಲದಲ್ಲಿ ಮಂಡ್ಯದಲ್ಲಿ ಅವರ ಕಾರ್ಯಕರ್ತರು ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದರು. ಹಾಗಿದ್ದರೆ ಅವರನ್ನು ಏಕೆ ಬಂಧಿಸಿರಲಿಲ್ಲ. ಆ ಪ್ರಕರಣ ವಜಾ ಮಾಡಿದ್ದರು. ಅಂದಾಗ ಯಾರು ದೇಶದ್ರೋಹಿಗಳು ಎಂದು ಪ್ರಶ್ನಿಸಿದ ಅವರು, ನಾವು ಬಿಜೆಪಿ ಕಾರ್ಯಕರ್ತನನ್ನು ಬಂಧಿಸಿದ್ದೇವೆ. ಪಾಕಿಸ್ತಾನ್ ಜಿಂದಾಬಾದ್ ಎಂದ ಪ್ರಕರಣದ ಆರೋಪಿಗಳನ್ನೂ ಬಂಧಿಸಿದ್ದೇವೆ ಎಂದು ಉತ್ತರಿಸಿದರು.
undefined
ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆ ತೀರ್ಮಾನ ತೆಗೆದುಕೊಳ್ಳಬೇಕು: ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕಾಗಿದೆ. ಅವರು ಕಾಂಗ್ರೆಸ್ ವಿಚಾರ, ಸಿದ್ಧಾಂತ ಒಪ್ಪಿಕೊಂಡು ಬಂದರೆ ಸ್ವಾಗತವಿದೆ. ಅವರು ಮೊದಲು ಕಾಂಗ್ರೆಸ್‌ನಲ್ಲಿ ಇದ್ದರು. ಆಮೇಲೆ ಬಿಜೆಪಿಗೆ ಹೋಗಿದ್ದಾರೆ. ಅಲ್ಲಿ ಬೇಸರ ಆಗಿದೆ ಅಂತಿದ್ದಾರೆ, ಮುಂದೆ ನೋಡೋಣ ಎಂದರು.
ಟಿಕೆಟ್ ಘೋಷಣೆ ಶೀಘ್ರ: ಲೋಕಸಭೆ ಟಿಕೆಟ್ ನೀಡಿಕೆ ಕುರಿತು ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ಶೀಘ್ರದಲ್ಲಿ ಲೋಕಸಭೆ ಟಿಕೆಟ್ ಘೋಷಣೆ ಆಗಲಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಡಿಕೆಶಿ 54 ದಿನ ಜೈಲಿಗೆ ಹೋಗಿದ್ದ ಇ.ಡಿ. ಕೇಸೇ ಸುಪ್ರೀಂಕೋರ್ಟ್‌ನಲ್ಲಿ ರದ್ದು!
ಅನಂತಕುಮಾರ ವಿರುದ್ಧ ಹರಿಹಾಯ್ದ ಸಿಎಂ: ಅನಂತಕುಮಾರ ಹೆಗಡೆಗೆ ಸಂಸ್ಕೃತಿ ಇಲ್ಲ. ಕ್ಷೇತ್ರ ಹಾಗೂ ರಾಜ್ಯದ ಅಭಿವೃದ್ಧಿ ಮಾಡುವವರು ಈ ರೀತಿ ಮಾತನಾಡಲ್ಲ. ಜನವಿರೋಧಿಯಾದವರು ಮಾತ್ರ ಭಾವನಾತ್ಮಕವಾಗಿ ಮಾತನಾಡುತ್ತಾರೆ. ನನ್ನನ್ನು ಟಾರ್ಗೆಟ್ ಮಾಡಿದರೆ ಮಾತ್ರ ಅದು ಹಿಂದೂತ್ವ ಆಗುವುದು ಎಂದು ಮಾಡುತ್ತಿದ್ದಾರೆ. ಅವರು ಹಿಂದೂತ್ವವಾದಿಗಳು. ಮನುವಾದಿಗಳು ಎಂದು ದಾಳಿ ನಡೆಸಿದರು. ಅನಂತಕುಮಾರ ಹೆಗಡೆ ಕೇವಲ ಎರಡ್ಮೂರು ತಿಂಗಳಿಂದ ಆ್ಯಕ್ಟೀವ್ ಆಗಿದ್ದಾರೆ. ಅದಕ್ಕಿಂತ ಮುನ್ನ ಎಲ್ಲಿಗೆ ಹೋಗಿದ್ದರು. ಅವರಿಗೆ ಆರೋಗ್ಯ ಸರಿ ಇರಲಿಲ್ಲ ಎಂದಾದರೆ ಸಂಸದ ಸ್ಥಾನಕ್ಕೆ ರಾಜೀನಾಮ ಕೊಡಬೇಕಿತ್ತು. ಲೋಕಸಭಾ ಸದಸ್ಯರಾಗಿ ಅವರು ಕ್ರಿಯಾಶೀಲರಾಗಿ ಇಲ್ಲ. ನನಗೋಸ್ಕರ ಆ್ಯಕ್ಟೀವ್ ಆಗಿದ್ದಾರಾ. ಜನರ ಕೆಲಸ ಮಾಡದವರು. ಆ್ಯಕ್ಟೀವ್ ಇಲ್ಲದವರನ್ನು ಜನರು ಆಯ್ಕೆ ಮಾಡಿದಾರಲ್ವಾ ಎಂದು ವ್ಯಂಗ್ಯವಾಡಿದರು.