* ಸಭಾಪತಿ ಬಸವರಾಜ ಹೊರಟ್ಟಿ ವಿರುದ್ಧ ಎಫ್ಐಆರ್ ದಾಖಲು ವಿಚಾರ
* ಕಾಂಗ್ರೆಸ್ ಸದಸ್ಯ ಯು.ಬಿ.ವೆಂಕಟೇಶ್ ಪರಿಷತ್ ಕಲಾಪದಲ್ಲಿ ಪ್ರಸ್ತಾಪ
* ಸದನದಲ್ಲಿ ಸರ್ಕಾರ, ಎಸ್.ಪಿ. ವಿರುದ್ದ ಆಕ್ರೋಶ
* ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು
ಬೆಂಗಳೂರು(ಮೇ 10) ಸಭಾಪತಿ (Legislative Council) ಬಸವರಾಜ ಹೊರಟ್ಟಿ (Basavaraj Horatti) ವಿರುದ್ಧ ಎಫ್ಐಆರ್ (FIR)ದಾಖಲು ವಿಚಾರ ಪರಿಷತ್ ನಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಯಿತು. ಕಾಂಗ್ರೆಸ್ (Congress)ಸದಸ್ಯ ಯು.ಬಿ.ವೆಂಕಟೇಶ್ ಪರಿಷತ್ ಕಲಾಪದಲ್ಲಿ ಪ್ರಸ್ತಾಪ ಮಾಡಿದರು. ಸದನದಲ್ಲಿ ಸರ್ಕಾರ, ಎಸ್.ಪಿ. ವಿರುದ್ದ ಆಕ್ರೋಶ ಹೊರಹಾಕಿದರು.'
ಸಭಾಪತಿ ಪೀಠಕ್ಕೆ ಎಫ್ ಐ ಆರ್ ಆಗಿರುವುದರಿಂದ ಅಗೌರವ ತೋರಿದಂತಾಗಿದೆ. ನಿಯಮ ಉಲ್ಲಂಘನೆ ಕೂಡ ಆಗಿದೆ ಎಂದು ಯು ಬಿ ವೆಂಕಟೇಶ ಬಜೆಟ್ ಚರ್ಚೆ ವೇಳೆ ವಿಷಯ ಪ್ರಸ್ತಾಪ ಮಾಡಿದರು.
ಎಸ್ ಪಿ ಬಂದು ಸದನದಲ್ಲಿ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ಸದಸ್ಯರು ಆಗ್ರಹಿಸಿದರು. ಯಾವುದೇ ಶಾಸಕರನ್ನು ಬಂಧಿಸಬೇಕು ಅಂದರು ಮೊದಲು ಸಭಾಪತಿ ಗಳ ಅನುಮತಿ ಪಡೆದುಕೊಳ್ಳಬೇಕು. ಇಂಥ ಸಂವಿಧಾನಿಕ ಹುದ್ದೆಯಲ್ಲಿರುವ ಸಭಾಪತಿ ವಿರುದ್ದವೇ ಎಫ್ ಐ ಆರ್ ಆದರೆ ಅದು ನಿಯಮ ಬಾಹಿರ. ಎಫ್ ಐ ಆರ್ ಆದ ಸಂದರ್ಭದಲ್ಲಿ ತಾನು ಬೆಂಗಳೂರಿನಲ್ಲೇ ಇದ್ದೆ. ಬೆಳಗಿನ ಜಾವ 3 ಗಂಟೆಗೆ ಎಸ್ ಪಿ ಫೋನ್ ಮಾಡ್ತಾರೆ. ಪೋನ್ ಮಾಡಿ ಎಸ್ ಪಿ ಕ್ಷಮೆ ಕೇಳುವಂತಹ ಪರಿಸ್ಥಿತಿ ಎಂದ ಸದಸ್ಯರು ಸಭೆಯಲ್ಲಿ ಪೊಲೀಸ್ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಆಗಬೇಕು ಎಂದು ಒತ್ತಾಯಿಸಿದರು
UP Elections: 5 ವರ್ಷಗಳ ಆಡಳಿತ, ಯೋಗಿ ಆ ಒಂದು ಕಾರ್ಯಕ್ಕೆ ಯುಪಿ ಜನತೆ ಕೊಟ್ಟ ಗೆಲುವಿನ ಗಿಫ್ಟ್!
ಸಭಾಪತಿ ವಿರುದ್ದ ಎಫ್ ಐ ಆರ್ ದಾಖಲಿಸಿದ ವಿಚಾರಕ್ಕೆ ಸಂಬಂಧಿಸಿ ಪರಿಷತ್ ಬಾವಿಗಿಳಿದು ಜೆಡಿಎಸ್ ಧರಣಿ ನಡೆಸಿದರು. ಎಸ್.ಪಿ ಹಾಗೂ ಅಧಿಕಾರಿಯನ್ನು ಸಸ್ಪೆಂಡ್ ಮಾಡಲೇಬೇಕು ಅಂತ ಆಗ್ರಹಿಸಿ ಬಾವಿಗಿಳಿದು ಘೋಷಣೆ ಕೂಗಿದರು. ಎರಡು ಮೂರು ದಿನಗಳಲ್ಲಿ ಕ್ರಮ ತೆಗೆದುಕೊಳ್ಳುತ್ತೇನೆ ಎಂದ ಗೃಹ ಸಚಿವ ಆರಗ ಜ್ಞಾನೇಂದ್ರ ಭರವಸೆ ನೀಡಿದ ಮೇಲೆ ಧರಣಿ ಹಿಂದಕ್ಕೆ ಪಡೆಯಲಾಯಿತು . ಶಿಕ್ಷಣ ಸಂಸ್ಥೆಯ ವಿಚಾರವೊಂದಕ್ಕೆ ಸಂಬಂಧಿಸಿ ಹೊರಟ್ಟಿ ವಿರುದ್ಧ ದೂರು ದಾಖಲಾಗಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿ ಪೊಲೀಸರು ಕ್ರಮ ತೆಗೆದುಕೊಂಡಿದ್ದರು.
ಹೊರಟ್ಟಿ ಬಿಜೆಪಿ ಸೇರುವ ಮಾತು: ಪರಿಷತ್ ಚುನಾವಣೆಯೊಳಗೆ ಬಸವರಾಜ ಹೊರಟ್ಟಿ ಬಿಜೆಪಿ ಸೇರಲಿದ್ದಾರೆಯೇ? ಎಂಬ ಮಾತು ಬಂದಿತ್ತು. ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ(Vidhan Parishat Election) ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆಯೇ ಎಂದು ಕೇಳಿ ಬಂದಿದ್ದು ಆಮೇಲೆ ಹೊರಟ್ಟಿಯವರೇ ಎಲ್ಲ ಅನುಮಾನಗಳಿಗೆ ತೆರೆ ಎಳೆದಿದ್ದರು.
ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್ ಮಂಡನೆ ಮಾಡಿದ್ದರು. ವಿಧಾನಸಭೆ ಮತ್ತು ವಿಧಾಣ ಪರಿಷತ್ ನಲ್ಲಿ ಬಜೆಟ್ ಮೇಲೆ ಚರ್ಚೆ ನಡೆಯುತ್ತಿದೆ.