* ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳಾದರೂ ರಾಜ್ಯದಲ್ಲಿ ಅಭಿವೃದ್ಧಿ ಮರೀಚಿಕೆ
* ಬಿಜೆಪಿಯದ್ದು ಸುಳ್ಳಿನ ಫ್ಯಾಕ್ಟರಿ
* ಮೋದಿ ಜೊತೆ ಮಾತನಾಡುವ ಧೈರ್ಯವಿಲ್ಲ
ರಾಣಿಬೆನ್ನೂರು(ಮಾ.10): ಇಲ್ಲಿನದು ಡಬಲ್ ಎಂಜಿನ್ ಸರ್ಕಾರವಲ್ಲ ಡಬ್ಬಾ ಸರ್ಕಾರ ಎಂದು ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಹೇಳಿದರು. ತಾಲೂಕಿನ ಚಳಗೇರಿ ಗ್ರಾಮಕ್ಕೆ ಭೇಟಿ ನೀಡಿದ ನಂತರ ನಗರದ ಕಾಂಗ್ರೆಸ್(Congress) ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳಾದರೂ ರಾಜ್ಯದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ. ಬಿಜೆಪಿಯದ್ದು(BJP) ಸುಳ್ಳಿನ ಫ್ಯಾಕ್ಟರಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೇಕೆದಾಟು(Mekedatu) ವಿಚಾರದಲ್ಲಿ ಯಾವುದೇ ವಿವಾದವಿಲ್ಲ. ಕೇಂದ್ರ ಜಲ ಸಚಿವ ಗಜೇಂದ್ರಸಿಂಗ್ ಶೇಖಾವತ್(Gajendra Singh Shekhawat) ಕೇವಲ ಓಟಿಗಾಗಿ ತಮಿಳುನಾಡು ಸರ್ಕಾರದ(Government of Tamil Nadu) ಪರವಾಗಿ ಹೇಳಿಕೆ ನೀಡಿದ್ದಾರೆ. ಕರ್ನಾಟಕ(Karnataka), ತಮಿಳುನಾಡು, ಕೇರಳ, ಪಾಂಡಿಚೇರಿ ರಾಜ್ಯಗಳಿಗೆ ಕಾವೇರಿ ನೀರಿನ ಹಂಚಿಕೆ ಕುರಿತು ಸುಪ್ರಿಂಕೋರ್ಟ್(Supreme Court) 16-02-2018 ರಂದು ಸ್ಪಷ್ಟತೀರ್ಪು ನೀಡಿದೆ. ನಮ್ಮ ಪಾಲಿನ ನೀರು ನಾವು ಬಳಕೆ ಮಾಡಲು ಯಾರ ಅಪ್ಪಣೆಯೂ ಬೇಕಾಗಿಲ್ಲ. ಮೇಕೆದಾಟು ಯೋಜನೆಗೆ ಪರಿಸರ ಸಚಿವಾಲಯದ ಅನುಮತಿ ಪಡೆಯುವುದೊಂದೆ ಬಾಕಿಯಿದೆ. ಅದನ್ನು ಪಡೆದುಕೊಳ್ಳಲು ಬಿಜೆಪಿ ಸರ್ಕಾರಕ್ಕೆ ಸಾಧ್ಯವಾಗದಿರುವುದು ಡಬಲ್ ಎಂಜಿನ್ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ.
undefined
ದೇಶ, ರಾಜ್ಯವನ್ನು ಆರ್ಥಿಕ ದಿವಾಳಿಯಾಗಿಸಿದ ಬಿಜೆಪಿ ಸರ್ಕಾರ, Siddaramaiah ಟೀಕೆ
ಮೋದಿ ಜೊತೆ ಮಾತನಾಡುವ ಧೈರ್ಯವಿಲ್ಲ:
ರಾಜ್ಯದಿಂದ ಬಿಜೆಪಿಯ 25 ಲೋಕಸಭೆ ಸದಸ್ಯರಿದ್ದರೂ ಪ್ರಧಾನಿ ಮೋದಿ(Narendra Modi) ಎದುರು ಮಾತನಾಡುವ ಧೈರ್ಯ ಯಾರೊಬ್ಬರಿಗೂ ಇಲ್ಲ. ರಾಜ್ಯದಿಂದ .3 ಲಕ್ಷ ಕೋಟಿ ತೆರಿಗೆ ಸಂಗ್ರಹಿಸಿ ಕೇಂದ್ರಕ್ಕೆ ಪಾವತಿಸಲಾಗುತ್ತದೆ. ಅದರಲ್ಲಿ ಅವರು ನಮ್ಮ ರಾಜ್ಯಕ್ಕೆ ಶೇ. 42 ರಂತೆ ಕೊಟ್ಟರೆ .1.26 ಲಕ್ಷ ಕೋಟಿ ಆಗುತ್ತದೆ. ಅವರು ಕೊಡುತ್ತಿರುವುದು ಕೇವಲ .47 ಸಾವಿರ ಕೋಟಿ ಮಾತ್ರವಾಗಿದ್ದು ಅದನ್ನು ಕೂಡ ಮುಂದಿನ ವರ್ಷ ನೀಡಲಾಗುತ್ತದೆ.
ಮನಮೋಹನ ಸಿಂಗ್(Manmohan Singh) ಪ್ರಧಾನಿಯಾಗಿದ್ದ ಅವಧಿಯಲ್ಲಿ 53.11 ಲಕ್ಷ ಕೋಟಿ ಸಾಲವಿತ್ತು. ಇಂದು ಅದು .152 ಲಕ್ಷ ಕೋಟಿಗೆ ತಲುಪಿದೆ. 7-8 ವರ್ಷಗಳ ಅವಧಿಯಲ್ಲಿ 100 ಲಕ್ಷ ಕೋಟಿ ಸಾಲ ಹೆಚ್ಚಾಗಿದೆ. ಇವರು ಅಧಿಕಾರಕ್ಕೆ ಬಂದ ನಂತರ ಎಲ್ಲ ಅಗತ್ಯ ವಸ್ತುಗಳು ಹಾಗೂ ಇಂಧನಗಳ ಬೆಲೆ ಗಗನಕ್ಕೇರಿದೆ. ನಾನು ಸಿಎಂ ಆಗಿದ್ದಾಗ ರಾಜ್ಯದ ಸಾಲ .2.42 ಲಕ್ಷ ಕೋಟಿಯಿತ್ತು. ಮುಂದಿನ ವರ್ಷದ ಮಾರ್ಚ್ ವೇಳೆಗೆ ಅದು 5,18,345 ಲಕ್ಷ ಕೋಟಿಯಾಗಲಿದೆ. ಹೀಗಾಗಿ ಅಸಲು 14 ಸಾವಿರ ಕೋಟಿ ಹಾಗೂ ಬಡ್ಡಿ ರೂಪದಲ್ಲಿ 29 ಸಾವಿರ ಕೋಟಿ ಹಣ ಕಟ್ಟಬೇಕಾಗುತ್ತದೆ. ಇವರ ಕೈಯಲ್ಲಿದ್ದರೆ ರಾಜ್ಯ ಉಳಿಯುತ್ತದೆಯಾ ಎಂದು ವ್ಯಂಗ್ಯವಾಡಿದರು.
ಮೇಕೆದಾಟು ಕುರಿತು ಕುಮಾರಸ್ವಾಮಿ(HD Kumaraswamy) ಹೇಳಿಕೆ ವಿಚಾರವಾಗಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಕುಮಾರಸ್ವಾಮಿ ಹತಾಷರಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದರು.
Karnataka Politics: ನಾವೇನು ರಾಜಕೀಯ ಸನ್ಯಾಸಿಗಳಲ್ಲ, ಬಿಜೆಪಿ ಸರ್ಕಾರ ಕಿತ್ತೊಗೆಯಲು ಹೋರಾಟ: ಸಿದ್ದು
ಈ ವೇಳೆ ವಿಧಾನಸಭೆಯ ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ, ಮಾಜಿ ಸಚಿವರುಗಳಾದ ಬಸವರಾಜ ಶಿವಣ್ಣನವರ, ರುದ್ರಪ್ಪ ಲಮಾಣಿ, ಜಯಮಾಲಾ, ಮಾಜಿ ಶಾಸಕರುಗಳಾದ ಅಜ್ಜಂಫೀರ ಖಾದ್ರಿ, ಬಿ.ಎಚ್. ಬನ್ನಿಕೋಡ, ಸೋಮಣ್ಣ ಬೇವಿನಮರದ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ. ಹಿರೇಮಠ, ಪ್ರಕಾಶ ಕೋಳಿವಾಡ, ಎಸ್.ಆರ್. ಪಾಟೀಲ, ಮಂಜನಗೌಡ ಪಾಟೀಲ, ಏಕನಾಥ ಭಾನುವಳ್ಳಿ, ಶೇರು ಕಾಬೂಲಿ, ಮೀರಾ ಪ್ರಭಾಕರ, ಶಿರಿನ್‌ತಾಜ ಶೇಖ್ ಮತ್ತಿತರರಿದ್ದರು.
ನವೀನ್ ಮನೆಗೆ ಸಿದ್ದರಾಮಯ್ಯ ಭೇಟಿ: ಪೋಷಕರಿಗೆ ಸಾಂತ್ವನ
ರಾಣಿಬೆನ್ನೂರು(ಮಾ.10): ಉಕ್ರೇನ್(Ukraine) ಯುದ್ಧದಲ್ಲಿ ಮೃತಪಟ್ಟ ತಾಲೂಕಿನ ಚಳಗೇರಿ ಗ್ರಾಮದ ನವೀನ್(Naveen) ಮನೆಗೆ ಬುಧವಾರ ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ನವೀನ್ ಪೋಷಕರಿಗೆ ಸಾಂತ್ವನ(Condolences) ಹೇಳಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈದ್ಯನಾಗಿ ಗ್ರಾಮದ ಬಡಜನರ ಸೇವೆ ಮಾಡುವ ಮಹದಾಸೆ ಹೊಂದಿದ್ದ ನವೀನ್ ಕನಸು ಅವನ ಸಾವಿನಿಂದ ಕಮರಿ ಹೋಗಿದೆ. ಯುದ್ಧದಿಂದಾಗಿ(War) ನವೀನ್ ಮೃತಪಟ್ಟಿರುವುದು ನಾಡಿಗೆ ಆಗಿರುವ ನಷ್ಟವಾಗಿದೆ. ಮಗನ ಶವಕ್ಕಾಗಿ ಆತನ ಪೋಷಕರು ಕಾತುರರಾಗಿದ್ದಾರೆ. ನಾನು ಪ್ರಧಾನಮಂತ್ರಿ ಹಾಗೂ ವಿದೇಶಾಂಗ ಸಚಿವರ ಜತೆ ಖುದ್ದಾಗಿ ಮಾತನಾಡಿ ಆದಷ್ಟು ಶೀಘ್ರ ಪ್ರಾರ್ಥಿವ ಶರೀರ(Deadbody) ತರಿಸಲು ವ್ಯವಸ್ಥೆ ಮಾಡುತ್ತೇನೆ ಎಂದರು.