ಬೆಂಗಳೂರು ದಕ್ಷಿಣ: ಮೋದಿ V/S ರಾಮಲಿಂಗಾರೆಡ್ಡಿ ವರ್ಚಸ್ಸು, ತೇಜಸ್ವಿ V/S ಸೌಮ್ಯಾ ರೆಡ್ಡಿ ಸಾಧನೆ..!

Published : Apr 21, 2024, 12:06 PM IST
ಬೆಂಗಳೂರು ದಕ್ಷಿಣ: ಮೋದಿ V/S ರಾಮಲಿಂಗಾರೆಡ್ಡಿ ವರ್ಚಸ್ಸು, ತೇಜಸ್ವಿ V/S ಸೌಮ್ಯಾ ರೆಡ್ಡಿ ಸಾಧನೆ..!

ಸಾರಾಂಶ

ಬಿಜೆಪಿಯ ತೇಜಸ್ವಿ ಸೂರ್ಯ ಅವರು ಪ್ರಧಾನಿ ನರೇಂದ್ರ ಮೋದಿ ಮೋದಿ ನಾಮಬಲ, ಸಂಸದರಾಗಿ ತಾವು ಮಾಡಿದ ಕೆಲಸವನ್ನು ಮುಂದಿ ಟ್ಟುಕೊಂಡು ಮತ ಯಾಚಿಸುತ್ತಿದ್ದರೆ, ಕಾಂಗ್ರೆಸ್‌ನ ಸೌಮ್ಯಾ ರೆಡ್ಡಿ ಅವರು ತಮ್ಮ ತಂದೆ ಸಚಿವ ರಾಮಲಿಂಗಾರೆಡ್ಡಿ ಅವರ ವರ್ಚಸ್ಸು, ಶಾಸಕಿಯಾಗಿ ತಾವು ಮಾಡಿದ ಕಾರ್ಯವನ್ನು ತಿಳಿಸುತ್ತಾ ಮತದಾರ ನ್ನು ಸೆಳೆಯುವ ಕೆಲಸ ಮಾಡುತ್ತಿದ್ದಾರೆ. 

ಗಿರೀಶ್‌ ಗರಗ

ಬೆಂಗಳೂರು(ಏ.21):  ಕಳೆದ ಮೂರು ದಶಕಗಳಿಂದ ಬಿಜೆಪಿ ತೆಕ್ಕೆಯಲ್ಲಿ ರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಭರ್ಜರಿ ಹೋರಾಟ ಕಂಡು ಬಂದಿದೆ.

ಬಿಜೆಪಿಯ ತೇಜಸ್ವಿ ಸೂರ್ಯ ಅವರು ಪ್ರಧಾನಿ ನರೇಂದ್ರ ಮೋದಿ ಮೋದಿ ನಾಮಬಲ, ಸಂಸದರಾಗಿ ತಾವು ಮಾಡಿದ ಕೆಲಸವನ್ನು ಮುಂದಿ ಟ್ಟುಕೊಂಡು ಮತ ಯಾಚಿಸುತ್ತಿದ್ದರೆ, ಕಾಂಗ್ರೆಸ್‌ನ ಸೌಮ್ಯಾ ರೆಡ್ಡಿ ಅವರು ತಮ್ಮ ತಂದೆ ಸಚಿವ ರಾಮಲಿಂಗಾರೆಡ್ಡಿ ಅವರ ವರ್ಚಸ್ಸು, ಶಾಸಕಿಯಾಗಿ ತಾವು ಮಾಡಿದ ಕಾರ್ಯವನ್ನು ತಿಳಿಸುತ್ತಾ ಮತದಾರ ನ್ನು ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ, ಲೋಕಸಭೆ ಸ್ಪೀಕರ್ ಆಗಿದ್ದನ್ನಾ. ಕೆ.ಎಸ್.ಹೆಗ್ಡೆ, ಅರ್ಥಶಾಸ್ತ್ರಜ್ಞ ಕಟಗಿರಿಗೌಡ, ಮಾಜಿ ಸಿಎಂ ಆರ್.ಗುಂಡೂರಾವ್, ಕೇಂದ್ರ ದಲ್ಲಿ ಪ್ರಭಾವಿ ಸಚಿವರಾಗಿದ್ದ ಅನಂತಕುಮಾರ್ ಸಂಸದರಾಗಿದ್ದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕಣ ರಂಗೇರಿದೆ. ಅನಂತಕುಮಾರ್ ಅವರ ಬಿಗಿ ಹಿಡಿತದಿಂದಾಗಿ 1991ರಿಂದ ಈವರೆಗೆ ಕ್ಷೇತ್ರವನ್ನು ಬಿಜೆಪಿ ಬಿಟ್ಟುಕೊಟ್ಟಿಲ್ಲ. ಅನಂತಕುಮಾ‌ರ್ ನಿಧನದಿಂದಾಗಿ 2019ರ ಚುನಾವಣೆಯಲ್ಲಿ ಬಿಜೆಪಿಯ ಯುವನಾಯಕ ತೇಜಸ್ವಿ ಸೂರ್ಯ ಗೆಲ್ಲುವ ಮೂಲಕ ಕ್ಷೇತ್ರದಲ್ಲಿ ಮುಂದುವರಿಸಿದ್ದರು.

ಲೋಕಸಭಾ ಚುನಾವಣೆ 2024: ಮೋದಿ ಹೆಸರಲ್ಲಿ ಮತ ಕೇಳಿದರೆ ತಪ್ಪೇನು?, ತೇಜಸ್ವಿ ಸೂರ್ಯ

ಪ್ರತಿ ಚುನಾವಣೆಯಲ್ಲೂ ಹುಡುಕಾಟದ ಗೊಂದಲದಲ್ಲಿರುತ್ತಿದ್ದ ಕಾಂಗ್ರೆ ಸ್ ಇದೇ ಮೊದಲ ಬಾರಿಗೆ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಮಾಜಿ ಶಾಸಕಿ ಸೌಮ್ಯಾ ರೆಡ್ಡಿ ಅವರನ್ನು ಒಮ್ಮತದ ಅಭ್ಯರ್ಥಿಯನ್ನಾಗಿಸಿ ಕಣಕ್ಕಿಳಿಸಿದೆ. ಇದರಿಂದಾಗಿ ಇಬ್ಬರು ಯುವ ನೇತಾರರ ನಡುವೆ ಚುನಾವಣೆ ನಡೆಯುತ್ತಿರುವುದು ಕುತೂಹಲ ಮೂಡಿಸುವಂತಾಗಿದೆ. ಕ್ಷೇತ್ರದ ತುಂಬಾ ಬಿಜೆಪಿ ಬೇರೂರಿದ್ದರೂ, ಅದಕ್ಕೆ ಸರಿಸಮನಾಗಿ ಸಚಿವ ರಾಮಲಿಂಗಾರೆಡ್ಡಿ ಅವರ ವರ್ಚಸ್ಸು ನೆಲೆನಿಂತಿದೆ. ಹೀಗಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಭರ್ಜರಿ ಪೈಪೋಟಿಗೆ ಬೆಂಗಳೂರು ದಕ್ಷಿಣ ಈ ಬಾರಿ ಸಾಕ್ಷಿಯಾಗಿದೆ.

ಬಿಜೆಪಿ ಶಾಸಕರೇ ಹೆಚ್ಚು: 

ಲೋಕಸಭಾ ಕ್ಷೇತ್ರ ಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಮೂರರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ವಿಪಕ್ಷ ನಾಯಕ ಆರ್.ಅಶೋಕ್ ಬೆಂಬಲಿಗರಾಗಿದ್ದ ಮಾಜಿ ಉಪಮೇಯರ್‌ ಎಲ್‌.ಶ್ರೀನಿವಾಸ್‌ ಸೇರಿದಂತೆ ಹಲವರು ಕಾಂಗ್ರೆಸ್ ಸೇರಿರುವುದು, ಎಲ್ಲ ಪಕ್ಷದವರೊಂದಿಗೂ ಸೌಹಾರ್ದ ಸಂಬಂಧ ಹೊಂದಿರುವ ರಾಮಲಿಂಗಾರೆಡ್ಡಿ ಅವರು ನಡೆಸುತ್ತಿರುವ ತಂತ್ರಗಾರಿಕೆಯ ವರಿಣಾಮ ಗೆಲ್ಲುತ್ತಿದ್ದ ಬಿಜೆಪಿಗೆ ಈ ಬಾರಿ ಪ್ರಬಲ ಇದುವರೆಗೂ ಸರಾಗವಾಗಿ ಈ ಕ್ಷೇತ್ರ ಎದುರಾಳಿ ಸಿಕ್ಕಂತಾಗಿದೆ. 

ಮಧ್ಯಮ ವರ್ಗದ ಮತಗಳೇ ನಿರ್ಣಾಯಕ:

ಗಾರ್ಮೆಂಟ್ಸ್, ಆಟೋ ಚಾಲಕರು ಸೇರಿದಂತೆ ಇನ್ನಿತರ ಮಧ್ಯಮ, ಕೆಳ ಮಧ್ಯಮ ವರ್ಗಕ್ಕೆ ಸೇರಿದ ಜನಸಂಖ್ಯೆ ಹೆಚ್ಚಿದ್ದು, ಆ ಮತಗಳೇ ನಿರ್ಣಾಯಕವಾಗಲಿದೆ. ಹೀಗಾಗಿ ಈ ವರ್ಗದ ಮತಗಳು ಯಾವ ಪಕ್ಷಕ್ಕೆ ಸಿಗಲಿ ದೆಯೋ ಅದಕ್ಕೆ ಅದೃಷ್ಟ ಖುಲಾಯಿಸಲಿದೆ. 

ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ 

ಬಿಜೆಪಿ ಪ್ರಭಾವಿ ನಾಯಕ ಅನಂತಕುಮಾರ್‌ ಅವರ ನಿಧನದ ನಂತರ 2019ರಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಎಬಿವಿಪಿಯ ಸಕ್ರಿಯ ಕಾರ್ಯಕರ್ತ ತೇಜಸ್ವಿ ಸೂರ್ಯ ಅವರಿಗೆ ಬಿಜೆಪಿ ನೀಡಿತ್ತು. ಕಾನೂನು ವೃತ್ತಿಯಲ್ಲಿ ತೊಡಗಿದ್ದ, ವಿದ್ಯಾರ್ಥಿ ನಾಯಕರಾಗಿದ್ದ ಗುರುತಿಸಿಕೊಂಡಿದ್ದ ತೇಜಸ್ವಿ ತಮ್ಮ 28ನೇ ವರ್ಷದಲ್ಲಿ ಸಂಸದರಾಗಿ ಆಯ್ಕೆಯಾದರು. ಬಿಜೆಪಿ ಮಟ್ಟಿಗೆ ಯುವ ಫೈರ್ ಬ್ಯಾಂಡ್ ಎಂದೇ ಕರೆಸಿಕೊಳ್ಳುವ ತೇಜಸ್ವಿ ಸೂರ್ಯ 2020ರಿಂದ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. 

ಸೌಮ್ಯಾ ರೆಡ್ಡಿ ಕಾಂಗ್ರೆಸ್

ಕಾಂಗ್ರೆಸ್‌ನ ಪ್ರಭಾವಿ ನಾಯಕ, ಹಾಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ. ನ್ಯೂಯಾರ್ಕ್‌ನಲ್ಲಿ ಪರಿಸರ ತಂತ್ರ ಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಸೌಮ್ಯಾ ರೆಡ್ಡಿ, ಪರಿಸರ ಸಂರಕ್ಷಣೆ ಸೇರಿದಂತೆ ಇನ್ನಿತರ ಸಮಾಜಮುಖ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. 2018 ರಲ್ಲಿ ಜಯನಗರ ಶಾಸಕ ಬಿ.ಎನ್.ವಿಜಯಕುಮಾರ್ ನಿಧನದ ನಂತರ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದರು. ಶಾಸಕಿಯಾಗಿ ಕ್ಷೇತ್ರದ ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕ್ಷೇತ್ರದ ಸಮಸ್ಯೆ ನಿವಾರಿಸುವ ಕೆಲಸ ಮಾಡಿದವರು.

ತೇಜಸ್ವಿ ಸೂರ್ಯ ವಿರುದ್ಧ ‘ಸೂರ್ಯ ಬಂಡಲ್‌ ಬ್ಯಾಂಕ್‌’ ಕಾಂಗ್ರೆಸ್‌ ಅಭಿಯಾನ

ಜಾತಿ-ಮತ ಲೆಕ್ಕಾಚಾರ

ಕ್ಷೇತ್ರದಲ್ಲಿ ಒಕ್ಕಲಿಗರ ಪ್ರಾಬಲ್ಯ ಹೆಚ್ಚಿದೆ. ಬಸವನಗುಡಿ, ಜಯನಗರ ಕ್ಷೇತ್ರಗಳಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು ಹೆಚ್ಚಿದ್ದಾರೆ. ಉಳಿದಂತೆ ಎಸ್ಸಿ/ಎಸ್ಟಿ, ಕುರುಬ ಸೇರಿದಂತೆ ಒಬಿಸಿ, ಮುಸ್ಲಿಂ ಸಮುದಾಯದ ಮತದಾರರರು ಹೆಚ್ಚಿದ್ದಾರೆ. ಕನ್ನಡಿಗರಿಗೆ ಸರಿಸಮನಾಗಿ ತಮಿಳು, ತೆಲುಗರಿದ್ದಾರೆ.

ಕ್ಷೇತ್ರದ ಮತದಾರರ ವಿವರ

• ಪುರುಷರು 11,95,285
• ಮಹಿಳೆಯರು 1121,788
ಇತರರು 399
ಒಟ್ಟು 23,17,472

2019ರ ಫಲಿತಾಂಶ: 

ತೇಜಸ್ವಿ ಸೂರ್ಯ(ಬಿಜೆಪಿ) 7,39,229  ಬಿ.ಕೆ. ಹರಿಪ್ರಸಾದ್‌(ಕಾಂಗ್ರೆಸ್‌) 4,08,037

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್