ಪಿಕ್ ಪಾಕೆಟ್ ಕಲೆ ಕಾಂಗ್ರೆಸ್‌ಗೆ ಮಾತ್ರ ಗೊತ್ತು: ಸಿ.ಟಿ.ರವಿ ವ್ಯಂಗ್ಯ

By Kannadaprabha News  |  First Published Apr 21, 2024, 12:06 PM IST

ಜೇಬು ಮುಟ್ಟದೇ ಕಿಸೆ ಕಳ್ಳತನ ಮಾಡುವ ಕಲೆ ಏನಾದರೂ ಗೊತ್ತಿದ್ದರೆ ಅದು ಕಾಂಗ್ರೆಸ್ ಹತ್ತಿರ ಕಲಿಯಬೇಕು ಎಂದು ಹಾಸನ ನಗರದಲ್ಲಿ ನಡೆದ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಬಿಜೆಪಿ ಜೆಡಿಎಸ್ ಶಕ್ತಿ ಪ್ರದರ್ಶನದಲ್ಲಿ ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಸಿ.ಟಿ.ರವಿ ವ್ಯಂಗ್ಯವಾಡಿದರು.


ಹಾಸನ (ಏ.21): ಜೇಬು ಮುಟ್ಟದೇ ಕಿಸೆ ಕಳ್ಳತನ ಮಾಡುವ ಕಲೆ ಏನಾದರೂ ಗೊತ್ತಿದ್ದರೆ ಅದು ಕಾಂಗ್ರೆಸ್ ಹತ್ತಿರ ಕಲಿಯಬೇಕು ಎಂದು ಹಾಸನ ನಗರದಲ್ಲಿ ನಡೆದ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಬಿಜೆಪಿ ಜೆಡಿಎಸ್ ಶಕ್ತಿ ಪ್ರದರ್ಶನದಲ್ಲಿ ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಸಿ.ಟಿ.ರವಿ ವ್ಯಂಗ್ಯವಾಡಿದರು. ನಗರದ ರಿಂಗ್ ರಸ್ತೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಬಳಿ ಆವಣರದಲ್ಲಿ ಲೋಕಸಭಾ ಚುನಾವಣೆ ಅಂಗವಾಗಿ ಸಂಜೆ ಹಮ್ಮಿಕೊಳ್ಳಲಾಗಿದ್ದ ಹಾಸನ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

‘ದೇಶದ ಹಿತ ನಮ್ಮ ಕೈಲಿ ಇದೆ. ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ್ ಘಟನೆ ಬಗ್ಗೆ ಕೇಳಿದರೆ ಇದನ್ನು ವೈಯಕ್ತಿಕ ಘಟನೆ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಇದು ಜಾತಿ ಉಳಿಸುವ ಚುನಾವಣೆ ಅಲ್ಲ. ದೇಶ ಉಳಿಸುವ ಚುನಾವಣೆ. ದೇಶದ ಹಿತಕ್ಕಾಗಿ ಬಿಜೆಪಿ ಬೆಂಬಲಿತ ಪ್ರಜ್ವಲ್ ಗೆಲ್ಲಿಸಬೇಕು. ಒಂದು ಕಡೆ ಗ್ಯಾರಂಟಿ ನೀಡಿ ಇನ್ನೊಂದು ಕಡೆ ಎಣ್ಣೆ ಬಾಟಲಿಯ ಬೆಲೆ ದುಪ್ಪಟ್ಟು ಹಣ ಮಾಡಲಾಗುತ್ತಿದೆ. ಇದೊಂದು ಜೇಬು ಮುಟ್ಟದೇ ಕಿಸೆ ಕಳ್ಳತನ ಮಾಡುವ ಕಲೆ. ಇದನ್ನು ಕಾಂಗ್ರೆಸ್ ಬಳಿ ಕಲಿಯಬೇಕು’ ಎಂದು ಮೂದಲಿಸಿದರು.

Latest Videos

undefined

ಈ ಚುನಾವಣೆಯಲ್ಲಿ ಗೆದ್ದು, ಮೋದಿ ಪ್ರಧಾನಿಯಾಗುವುದಕ್ಕೆ ಕೈ ಎತ್ತುವೆ: ಕೆ.ಎಸ್‌.ಈಶ್ವರಪ್ಪ

‘ಒಂದು ಕಡೆ ಫ್ರೀ, ಇನ್ನೊಂದು ಕಡೆ ವಿದ್ಯುತ್ ಬಿಲ್ ಹೆಚ್ಚಿಗೆ. ಇದೆಲ್ಲಾ ಸಿದ್ದರಾಮಯ್ಯ ಅವರ ವಂಚನೆಯ ತಂತ್ರ. ಎಸ್‌ಸಿ, ಎಸ್‌ಟಿ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಅಂಬೇಡ್ಕರ್ ಆ ಕಾಲದಲ್ಲೆ ಹೇಳಿದ್ದಾರೆ. ಇದು ದೇಶ ಉಳಿಸುವ ಚುನಾವಣೆಯೇ ಹೊರತು ಜಾತಿ ಉಳಿಸುವ ಚುನಾವಣೆಯಲ್ಲ. ಜೆಡಿಎಸ್ ಬಿಜೆಪಿ ಹೊಂದಾಣಿಕೆ ಆಗುತ್ತಿದ್ದಂತೆ ಕಾಂಗ್ರೆಸ್ ಪಕ್ಷದವರಿಗೆ ಲೂಸ್ ಮೋಷನ್ ಪ್ರಾರಂಭವಾಗಿದೆ. ಈಗ ದೇಶ ಉಳಿಸುವುದಕ್ಕೆ ಓಟ್ ಹಾಕಬೇಕಾಗಿದೆ. ಕಾಂಗ್ರೆಸ್ ಗೆದ್ದರೆ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗುತ್ತಾರೆ. ನಾವು ಶ್ರೀರಾಮ ಜಪ ಮಾಡುವವರು’ ಎಂದು ಹೇಳಿದರು.

ಮಾಜಿ ಸಚಿವ ಅಶ್ವಥ್ ನಾರಾಯಣ್ ಮಾತನಾಡಿ, ‘ಈಗಾಗಲೇ ಸಾಕಷ್ಟು ಅಭಿವೃದ್ಧಿಗೊಳಿಸಿ ಬಹಳಷ್ಟು ಪರಿಣಾಮಕಾರಿಯಾಗಿ ಮೈತ್ರಿ ಅಭ್ಯರ್ಥಿ ನಿರ್ವಹಿಸಿದ್ದು, ದೇಶಕ್ಕಾಗಿ ಮೋದಿ ಬೇಕು. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಯಾವ ರೀತಿ ಆಡಳಿತದಲ್ಲಿ ಗ್ಯಾರಂಟಿ ಒಂದಾಗಿದ್ದರೆ ಅಭಿವೃದ್ಧಿಯಲ್ಲಿ ಶೂನ್ಯ. ಕಾನೂನು ಸುವ್ಯವಸ್ಥೆಯಲ್ಲಿ ಶೂನ್ಯವಾಗಿದೆ. ಜಾತಿ ಜಾತಿಗಳ ಮಧ್ಯೆ ವ್ಯತ್ಯಾಸ ತರುತ್ತಿರುವರು ಕಾಂಗ್ರೆಸ್ ಪಕ್ಷದ ಸಾಧನೆಯಾಗಿದೆ’ ಎಂದು ಲೇವಡಿ ಮಾಡಿದರು.

ಎಚ್.ಡಿ.ಕುಮಾರಸ್ವಾಮಿ ಪರ ಪ್ರಚಾರಕ್ಕೆ ಬಿಜೆಪಿ ನನ್ನ ಕರೆದಿಲ್ಲ: ಸುಮಲತಾ ಅಂಬರೀಶ್

ಮೈತ್ರಿ ಅಭ್ಯರ್ಥಿ ಪ್ರಜ್ಬಲ್ ರೇವಣ್ಣ ಮಾತನಾಡಿ, ‘ಕಾಂಗ್ರೆಸ್ ಬಂದಾಗಲೆಲ್ಲ ಬರಗಾಲ ಖಚಿತ. ಇಡೀ ರಾಜ್ಯದಲ್ಲಿ ಬೆಳೆದಿರುವ ಕಾಂಗ್ರೆಸ್ ಗಿಡವನ್ನು ಈ ಚುನಾವಣೆಯಲ್ಲಿ ಕಿತ್ತು ಹಾಕಿ. ದುರಾಡಳಿತದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಂಗ್ರೆಸ್ ನಲ್ಲಿ ಸಮರ್ಪಕ ನಾಯಕವಿಲ್ಲ. ನಾಯಕನ್ನು ಇದುವರೆಗೂ ಸೂಚಿಸಿಲ್ಲ’ ಎಂದು ಟೀಕಿಸಿದರು. ಮೈಸೂರು ಸಂಸದ ಪ್ರತಾಪ್ ಸಿಂಹ, ಶಾಸಕ ಎಚ್.ಪಿ. ಸ್ವರೂಪ್, ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕ ಸುಮುಖ ರಘುಗೌಡ, ಪ್ರೇಮಮ್ಮ, ಡಿ.ವೈ.ಗೋಪಾಲ್, ಚಂದ್ರೇಗೌಡ, ವಾಸುದೇವ್, ಕಮಲ್ ಕುಮಾರ್, ಡಾ.ಅಂಜನಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ದಯಾನಂದ್, ಈಶ್ವರ್, ಎಚ್.ಎಂ.ಸುರೇಶ್ ಕುಮಾರ್, ಜಿಪಂ ಶಿಕ್ಷಣ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಭವಾನಿ ರೇವಣ್ಣ, ಗಿರೀಶ್, ಹೊಂಗೆರೆ ರಘು ಇದ್ದರು.

click me!