ಸೋಲಿನ ಭೀತಿಯಿಂದ ಕಾಂಗ್ರೆಸ್ ಪಕ್ಷ ಎಸ್‌ಡಿಪಿಐ ಜೊತೆಗೆ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಗಂಭೀರ ಆರೋಪ ಮಾಡಿದ್ದಾರೆ.
ವಿಜಯಪುರ (ಮಾ.18) : ಸೋಲಿನ ಭೀತಿಯಿಂದ ಕಾಂಗ್ರೆಸ್ ಪಕ್ಷ ಎಸ್‌ಡಿಪಿಐ ಜೊತೆಗೆ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ(Pralhad joshi) ಅವರು ಗಂಭೀರ ಆರೋಪ ಮಾಡಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲಲು ಎಸ್‌ಡಿಪಿಐ(SDPI) ಸ್ಪರ್ಧೆಯಿಂದ ಹಿಂದೆ ಸರಿದಿದೆ. ಕಾಂಗ್ರೆಸ್ (Congress)ವಿನಂತಿ ಮೇರೆಗೆ ಬಿಜೆಪಿ ವಿರುದ್ಧ ಸ್ಪಧೆÜರ್ ಬಂದ್ ಮಾಡಿದ್ದೇವೆ ಎಂದು ಎಸ್‌ಡಿಪಿಐ ಹೇಳಿದೆ ಎಂದರು.
ಬಿಜೆಪಿಗೆ ಮುಂಬರುವ ಚುನಾವಣೆಯಲ್ಲಿ 140 ಸ್ಥಾನ ಖಚಿತ: ಜಗದೀಶ ಶೆಟ್ಟರ್
ಪಾಕಿಸ್ತಾನದ ಜೊತೆಗೂ ಕಾಂಗ್ರೆಸ್ ಒಳ ಒಪ್ಪಂದ ಮಾಡಿಕೊಂಡಿದೆ. ಜಾಗತಿಕ ಮಟ್ಟದಲ್ಲಿ ಭಾರತವು ಪಾಕಿಸ್ತಾನ ಪ್ರೇರಿತ ಉಗ್ರವಾದ ನಿಯಂತ್ರಣಕ್ಕೆ ಪ್ರಯತ್ನಿಸುತ್ತಿದೆ. ಆದರೆ, ಕಾಂಗ್ರೆಸ್ ಅವರ ಜೊತೆಗೆ ಒಳ ಒಪ್ಪಂದ ಮಾಡಿಕೊಂಡಿದೆ. ಕಾಂಗ್ರೆಸ್ಸಿಗೆ ವಿದೇಶ ವ್ಯಾಮೋಹ ಹೆಚ್ಚಿದೆ ಎಂದು ಹೇಳಿದರು.
ಅಮೆರಿಕ ಹಾಗೂ ಯುರೋಪಿಯನ್ ಯೂನಿಯನ್ ಭಾರತದ ಆಂತರಿಕ ವಿಷಯಗಳಲ್ಲಿ ಮಧ್ಯ ಪ್ರವೇಶ ಮಾಡಬೇಕು ಎಂದು ರಾಹುಲ್ ಗಾಂಧಿ ವಿನಂತಿಸಿದ್ದಾರೆ. ನಮ್ಮದು ಪ್ರಜಾಸತ್ತಾತ್ಮಕ ಸ್ವತಂತ್ರ ಗಣರಾಜ್ಯವಾಗಿದೆ. 35 ವರ್ಷದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತದಲ್ಲಿ ಪೂರ್ಣ ಪ್ರಮಾಣದ ಬಹುಮತ ಬಿಜೆಪಿಗೆ ಬಂದಿದೆ. ರಾಹುಲ್ ಗಾಂಧಿ ಅವರಿಗೆ ವಿದೇಶಿ ಶಕ್ತಿಗಳ ಮೇಲೆ ವಿಶ್ವಾಸವಿದೆ. ಇದಕ್ಕಾಗಿಯೇ ಅವರು ಟಿಪ್ಪು ಜಯಂತಿ ಮಾಡುತ್ತಾರೆ ಎಂದರು.
ಭಾರತದ ಮೇಲೆ ಎರಗಿ ಬರುವಂತೆ ಅಪಘಾನಿಸ್ತಾನಕ್ಕೆ ಟಿಪ್ಪು ಆಹ್ವಾನ ಕೊಟ್ಟು ಪತ್ರ ಬರೆದಿದ್ದ ಎಂದು ಸ್ಮರಿಸಿದ ಅವರು, ಮೋದಿ ಎಲೆಕ್ಟೆಡ್ ಲೀಡರ್, ರಾಹುಲ್‌ನಂತೆ ಸೆಲೆಕ್ಟೆಡ್ ಲೀಡರ್ ಅಲ್ಲ ಎಂದು ಕುಟುಕಿದರು.
ಕಾಂಗ್ರೆಸ್ ಪಕ್ಷವನ್ನು ದೇಶದಲ್ಲಿ ತಿರಸ್ಕಾರ ಮಾಡಲಾಗಿದೆ. ಈಶಾನ್ಯ ಭಾರತದಲ್ಲಿ ಕಾಂಗ್ರೆಸ್ಸಿಗೆ ಒಂದೂ ಲೋಕಸಭೆ ಸ್ಥಾನವಿಲ್ಲ. ಎಲ್ಲ ಕಡೆಗೆ ಕಾಂಗ್ರೆಸ್ ಸೋತಿದೆ. ಕಾಂಗ್ರೆಸ್ ಒಳ ಒಪ್ಪಂದದ ರಾಜಕಾರಣದಲ್ಲಿ ತೊಡಗಿದೆ. ಎಸ್‌ಡಿಪಿಐ ಜೊತೆ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿದ್ದು ಖಂಡನಾರ್ಹ ಎಂದರು.
ಸೋಲಿನ ಭೀತಿಯಿಂದ ಕಾಂಗ್ರೆಸ್ ಯಾವುದೇ ಶಕ್ತಿಯ ಜೊತೆಗಾದರೂ ಹೊಂದಾಣಿಕೆ ಮಾಡಿಕೊಳ್ಳುತ್ತದೆ. ಅದು ಕೆಟ್ಟಶಕ್ತಿಯಾದರೂ ಇರಲಿ. ಒಳ್ಳೆಯ ಶಕ್ತಿಯಾದರೂ ಇರಲಿ. ಹೊಂದಾಣಿಕೆ ಮಾಡಿಕೊಳ್ಳುತ್ತದೆ. ಅವರಿಗೆ ಹೇಗಾದರೂ ಮಾಡಿ ಬಿಜೆಪಿ ಸೋಲಬೇಕು ಎಂಬುದು ಮುಖ್ಯವಾಗಿದೆ ವಿನಾ ರಾಷ್ಟ್ರದ ಶ್ರೇಯೋಭಿವೃದ್ಧಿ ಹಾಗೂ ಕಲ್ಯಾಣ ಅಲ್ಲ ಎಂದು ತಿಳಿಸಿದರು.
ರಾಹುಲ್ ಗಾಂಧಿಗೆ ಮಾನಸಿಕ ತೊಂದರೆ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಕೋಲಾರದಿಂದ ಸಿದ್ದು ಸ್ಪಧೆÜರ್ ಬೇಡ ಎಂಬ ರಾಹುಲ್ ಗಾಂಧಿ ಸಲಹೆಗೆ ಪ್ರತಿಕ್ರಿಯಿಸಿದ ಜೋಶಿ ಅವರು, ರಾಹುಲ್ ಗಾಂಧಿ ತಮ್ಮ ಅಪಾರ ಅನುಭವದ ಆಧಾರದ ಮೇಲೆ ಸಲಹೆ ನೀಡಿದ್ದಾರೆ. ಉತ್ತರಪ್ರದೇಶ, ಅಮೇಥಿಯಲ್ಲಿ ತಮ್ಮ ಸೋಲಿನ ಅನುಭವದಿಂದ ರಾಹುಲ್ ಈ ಸಲಹೆ ಕೊಟ್ಟಿರಬಹುದು. ಅದರಲ್ಲೂ ಅಮೇಥಿಯಲ್ಲಿ ರಾಹುಲ್ ಗಾಂಧಿ ತಲೆ ತಲಾಂತರವಾಗಿ ಸ್ಪರ್ಧಿಸಿದ್ದರೂ ಸೋತಿದ್ದಾರೆ. ಆ ಕಾರಣಕ್ಕಾಗಿ ಸಿದ್ದುಗೆ ಈ ರೀತಿ ಮುನ್ನೆಚ್ಚರಿಕೆಯ ಸಲಹೆ ನೀಡಿರಬಹುದು ಎಂದು ಜೋಶಿ ವ್ಯಂಗ್ಯವಾಡಿದರು.