ಮುಂಬರುವ ಚುನಾವಣೆಗೆ ಕೋಡಿಹಳ್ಳಿ ಚಂದ್ರಶೇಖರ್ ನೂತನ ಪಕ್ಷ ರಚನೆ ಘೋಷಣೆ

By Suvarna News  |  First Published Mar 30, 2022, 7:10 PM IST
  • ಎಪ್ರಿಲ್ 21 ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸಿ ಹೊಸ ಪಕ್ಷ ಘೋಷಣೆ ಸಾಧ್ಯತೆ
  • ವಿವಿಧ ರೈತ ಸಂಘಗಳನ್ನು ಒಗ್ಗೂಡಿ ಸುವ ಪ್ರಯತ್ನ, ರಾಜ್ಯಾದ್ಯಂತ ಪ್ರವಾಸ, 
  • 2023 ರ ವಿಧಾನಸಭಾ ಚುನಾವಣೆಗೆ 224 ಕ್ಷೇತ್ರಗಳಲ್ಲಿ ಹೊಸ ಪಕ್ಷದಿಂದ ಅಭ್ಯರ್ಥಿಗಳ ಸ್ಪರ್ಧೆ ಬಗ್ಗೆ ಇಂಗಿತ 
  • ಪ್ರಾದೇಶಿಕ,ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆದು ಹೊಸ ಪಕ್ಷದ ತೀರ್ಮಾನ

ವರದಿ: ಆಲ್ದೂರು ಕಿರಣ್ ,  ಏಷ್ಯಾನೆಟ್ ಸುವರ್ಣನ್ಯೂಸ್

ಚಿಕ್ಕಮಗಳೂರು (ಮಾ.30): ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ (Karnataka Assembly Election) ಇನ್ನು ಒಂದು ವರ್ಷ ಬಾಕಿ ಇದೆ. ಆದ್ರೂ ರಾಷ್ಟ್ರೀಯ ಪಕ್ಷಗಳು , ಪ್ರಾದೇಶಿಕ ಪಕ್ಷಗಳು ಚುನಾವಣಾ ತಯಾರಿಯನ್ನು ತೆರೆಮರೆಯಲ್ಲಿ ಈಗಾಗಲೇ ಅರಂಭಿಸಿದೆ. ಇದರ ನಡುವೆ ಹೊಸಪಕ್ಷವೊಂದನ್ನು (New Political Party) ಅಖಾಡಕ್ಕೆ ತರುವ ತಯಾರಿಯನ್ನು ರೈತ ಮುಖಂಡರು ನಡೆಸುತ್ತಿದ್ದಾರೆ. 

Tap to resize

Latest Videos

ಚಿಕ್ಕಮಗಳೂರಿನಲ್ಲಿ ಹೊಸ ಪಕ್ಷ ರಚನೆ ಬಗ್ಗೆ ಚಂದ್ರಶೇಖರ್ ಮಾತು: ರಾಜ್ಯದ ರೈತರು ಬೇರೆಯವರನ್ನು ನಂಬಿ ಪದೇ ಪದೇ ಮೋಸ ಹೋಗೋದು ಸಾಕು ನಮ್ಮ ಕೆಲಸವನ್ನು ನಾವೆ ಮಾಡಿಕೊಳ್ಳಲು ಅಣಿಯಾಗಬೇಕೆಂದು ಪರ್ಯಾಯ ಚಿಂತನೆಯನ್ನು ಎಪ್ರಿಲ್ 21 ರಂದು ಪ್ರಕಟ ಮಾಡುತ್ತೇವೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ (Kodihalli Chandrashekar) ಚಿಕ್ಕಮಗಳೂರಿನಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ತಿಳಿಸಿದ್ದಾರೆ.

ಕೋಟೆನಾಡಿನಲ್ಲಿ ಅಕ್ರಮವಾಗಿ ತಲೆ ಎತ್ತುತ್ತಿರುವ ಲೇಔಟ್!

ರಾಜಕೀಯ ಪಕ್ಷಗಳಿಗೆ, ವ್ಯಕ್ತಿಗಳಿಗೆ ಸಿದ್ದಾಂತಗಳಿಲ್ಲ, ವೈಯುಕ್ತಿಕ ಶಿಸ್ತು ಮೊದಲೆ ಇಲ್ಲಾ ಇಂತಹವರಿಂದ ನಮ್ಮನ್ನು ಉದ್ದಾರ ಮಾಡಿ ಎಂದು ನಿರೀಕ್ಷೆ ಮಾಡೋದು ನಮ್ಮ ಮೂರ್ಖತನ ಈ ಕಾರಣಕ್ಕೆ ಪರ್ಯಾಯ ರಾಜಕಾರಣದ ಚಿಂತನೆಯನ್ನು ಬೆಂಗಳೂರಿನಲ್ಲಿ ನಡೆಯುವ ಸಮಾವೇಶದ ಮೂಲಕ ತೀರ್ಮಾನ ಕೈಗೊಳ್ಳಲಾಗುತ್ತದೆ. ಹಳ್ಳಿಗಳಲ್ಲಿ ರೈತರಿರಬೇಕು, ಕೃಷಿ ಮುಂದುವರೆಯಬೇಕೆಂದರೆ ಈ ಕಾಯ್ದೆಗಳು ವಾಪಸ್ಸು ಪಡೆಯಬೇಕು ಒತ್ತಾಯಿಸಿ ಎಪ್ರಿಲ್ 21 ರಂದು ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶದ ಸಿದ್ದತೆ ಮಾಡಿಕೊಳ್ಳಲಾಗಿದೆ . ಅಲ್ಲಿ ಮುಂದಿನ ತೀರ್ಮಾನದ ಘೋಷಣೆ ಮಾಡುತ್ತೇವೆ ಎಂದರು. 

2023 ರ ವಿಧಾನಸಭಾ ಚುನಾವಣೆಗೆ 224 ಕ್ಷೇತ್ರಗಳಲ್ಲಿ ಹೊಸ ಪಕ್ಷದಿಂದ ಅಭ್ಯರ್ಥಿಗಳ ಸ್ಪರ್ಧೆ ಬಗ್ಗೆ ಇಂಗಿತ:  ಈಗಾಗಲೇ ಜಿಲ್ಲಾವಾರು ಪ್ರವಾಸ ಕೈಗೊಂಡಿದ್ದು ರೈತರ ಅಭಿಪ್ರಾಯವನ್ನು ಸಂಗ್ರಹ ಮಾಡಲಾಗುತ್ತಿದೆ. ಪ್ರಾದೇಶಿಕ, ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆದು ಹೊಸ ಪಕ್ಷದ ತೀರ್ಮಾನವನ್ನು ಸಮಾವೇಶದಲ್ಲಿ ಕೈಗೊಳ್ಳುವ ಬಗ್ಗೆ ಮುನ್ಸೂಚನೆಯನ್ನು ಕೋಡಿಹಳ್ಳಿ ಚಂದ್ರಶೇಖರ್ ನೀಡಿದರು.

KALABURAGI SSLC EXAM ವಿದ್ಯಾರ್ಥಿಗಳಿಗೆ ಚೀಟಿ ಕೊಡಲು ಗೋಡೆ ಹತ್ತಿ ಸರ್ಕಸ್!

ಈ ದೇಶದಲ್ಲಿ ಈ ಎಲ್ಲಾ ರಾಜಕೀಯ ಪಕ್ಷಗಳಿಂದ ಏನು ಸಾಧನೆ ಮಾಡಲು ಸಾಧ್ಯವಿಲ್ಲ. ಓಟು ಪಡೆದಯ ಜನರನ್ನು ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದ್ದು ಅದಕ್ಕಾಗಿ ನಾಡಿನ ಜನರ ಹಿತಕ್ಕಾಗಿ ಮುಂದಿನ ವಿಧಾನ ಸಭಾ ಚುನಾವಣೆಗೆ 224 ಕ್ಷೇತ್ರಗಳಲ್ಲಿ ಹೊಸ ಪಕ್ಷದಿಂದ ಅಭ್ಯರ್ಥಿಗಳನ್ನು ಅಖಾಡಕ್ಕೆ ಇಳಿಸುವ ಇಂಗಿತವನ್ನು ಅವರು ಹೊರಹಾಕಿದರು. ಅದಕ್ಕಾಗಿ ಜಿಲ್ಲಾವಾರು ಪ್ರವಾಸವನ್ನು ಕೈಗೊಂಡಿದ್ದು ಸಂಘಟನೆ ಮಾಡುವ ಮೂಲಕ ತಯಾರಿಯನ್ನ ಆರಂಭಿಸಿದ್ದೇವೆ. ನಾಡಿನ ಜನರ ಹಿತಕ್ಕಾಗಿ ಹೊಸಪಕ್ಷದ ಅಗತ್ಯವನ್ನು ಅವರು ಪ್ರತಿಪಾದಿಸಿದರು.

ಒಟ್ಟಾರೆ ರೈತಮುಖಂಡ ಕೋಡಿಹಳ್ಳಿ  ಚಂದ್ರಶೇಖರ್ ಜಿಲ್ಲಾ ಪ್ರವಾಸದಲ್ಲಿ ಸಾಕಷ್ಟು ರೈತರೊಂದಿಗೆ ಚರ್ಚೆ ನಡೆಸಿದರು. ಅಲ್ಲದೆ ಮುಂದಿನ ತಿಂಗಳು ನಡೆಯುವ ಸಮಾವೇಶಕ್ಕೂ ರೈತರಿಗೆ ಆಹ್ವಾನ ನೀಡಿ ಸರ್ಕಾರ ಕಾಯ್ದೆಗಳನ್ನು ಟೀಕೆಸಿದರು.

click me!