ಬಾದಾಮಿ (ಜು.06): ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರನ್ನು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪುನಃ ಬಾದಾಮಿಯಿಂದಲೇ ಸ್ಪರ್ಧಿಸುವಂತೆ ಮನವಿ ಮಾಡಲು ಕ್ಷೇತ್ರದ 150ಕ್ಕೂ ಹೆಚ್ಚಿನ ಮುಖಂಡರು, ಅಭಿಮಾನಿಗಳು ಸೋಮವಾರ ರಾತ್ರಿ ಬಾದಾಮಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ.
ಮಂಗಳವಾರ ಬೆಳಗ್ಗೆ ಸಿದ್ದರಾಮಯ್ಯ ಅವರ ಬೆಂಗಳೂರಿನ ನಿವಾಸದಲ್ಲಿ ಭೇಟಿಯಾಗಲಿರುವ ಅಭಿಮಾನಿಗಳು ಬರುವ ಚುನಾವಣೆಯಲ್ಲೂ ಬಾದಾಮಿಯಿಂದಲೇ ಸ್ಪರ್ಧಿಸಬೇಕು.
'ನಾನು ಚಾಮರಾಜಪೇಟೆ ಅಳಿಯ, ಇಲ್ಲಿ ನನ್ನ ಮಾವನ ಮನೆಯಿತ್ತು, ಈಗಲೂ ಇದೆ'
ಈಗಾಗಲೇ ತಾವು ಆಯ್ಕೆಯಾದ ಮೂರು ವರ್ಷಗಳಲ್ಲಿ ಸಾವಿರಾರು ಕೋಟಿ ಅನುದಾನ ಬಾದಾಮಿ ಮತ ಕ್ಷೇತ್ರಕ್ಕೆ ಮಂಜೂರಿ ಮಾಡಿಸಿ ಸಾಕಷ್ಟುಅಭಿವೃದ್ಧಿ ಮಾಡಿದ್ದೀರಿ. ಮುಂದಿನ ಚುನಾವಣೆಗೂ ತಾವೇ ಬಾದಾಮಿಯಿಂದ ಸ್ಪರ್ಧೆ ಮಾಡಬೇಕು ಎಂದು ಮತಕ್ಷೇತ್ರದ ಎಲ್ಲರ ಪರವಾಗಿ ಮನವಿ ಮಾಡಲಿದ್ದಾರೆ.