Latest Videos

ಕಾಂಗ್ರೆಸ್‌ ಶಾಸಕ ಲಂಚ ಪಡೆದ್ರೆ ಉಚ್ಚಾಟನೆ: ಸುರ್ಜೇವಾಲಾ

By Kannadaprabha NewsFirst Published Feb 23, 2023, 11:30 PM IST
Highlights

ಕಾಂಗ್ರೆಸ್‌ ಆಡಳಿತಕ್ಕೆ ಬಂದ್ರೆ ಒಂದು ಪೈಸೆ ಲಂಚವನ್ನು ತಿನ್ನದಂತೆ ಕ್ರಮವಹಿಸುತ್ತೇವೆ ಸರ್ಕಾರದ ಎಲ್ಲ ಹಣವನ್ನು ಅಭಿವೃದ್ಧಿಗೆ ಬಳಸುತ್ತೇವೆ ಎಂದ ರಣದೀಪಸಿಂಗ್‌ ಸುರ್ಜೇವಾಲಾ.

ಬೀದರ್‌(ಫೆ.23):  ರಾಜ್ಯದ ಬಿಜೆಪಿ ಸರ್ಕಾರದ ಲಂಚಗುಳಿತನದಿಂದಾಗಿ ಜನ ರೋಸಿ ಹೋಗಿದ್ದಾರೆ. ಶೇ.40 ಲಂಚ ಪಡೆಯುವ ಈ ಬಿಜೆಪಿ ಆಡಳಿತ ಕಿತ್ತೆಸೆದು ಕಾಂಗ್ರೆಸ್‌ ಅಧಿಕಾರಕ್ಕೆ ತನ್ನಿ. ನಮ್ಮ ಶಾಸಕರಾರ‍ಯರಾದ್ರೂ ಲಂಚ ತಿನ್ನುವಾಗ ಸಿಕ್ಕಿಬಿದ್ರೆ ಅವರನ್ನು ಪಕ್ಷದಿಂದಲೇ ಹೊರ ಅಟ್ಟುತ್ತೇವೆ ಇದು ನನ್ನ ಪ್ರಮಾಣ ಎಂದು ರಾಜ್ಯದ ಕಾಂಗ್ರೆಸ್‌ ಉಸ್ತುವಾರಿ ರಣದೀಪಸಿಂಗ್‌ ಸುರ್ಜೇವಾಲಾ ಭರವಸೆ ನೀಡಿದರು. ಅವರು ಬುಧವಾರ ಜಿಲ್ಲೆಯ ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್‌ ಉದ್ಘಾಟನೆ ಹಾಗೂ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಕಾಂಗ್ರೆಸ್‌ ಆಡಳಿತಕ್ಕೆ ಬಂದ್ರೆ ಒಂದು ಪೈಸೆ ಲಂಚವನ್ನು ತಿನ್ನದಂತೆ ಕ್ರಮವಹಿಸುತ್ತೇವೆ ಸರ್ಕಾರದ ಎಲ್ಲ ಹಣವನ್ನು ಅಭಿವೃದ್ಧಿಗೆ ಬಳಸುತ್ತೇವೆ ಎಂದು ತಿಳಿಸಿದರು.

ಬಿಜೆಪಿ ಅಧಿಕಾರಾವಧಿಯಲ್ಲಿ ಭ್ರಷ್ಟಾಚಾರ ಜೀವಗಳನ್ನೇ ಪಡೆದಿದ್ರೂ ಪಕ್ಷ ಮೌನಿ:

ಬಿಜೆಪಿ ಆಡಳಿತಾವದಿಯಲ್ಲಿ ಈ ಸರ್ಕಾರದ ಲಂಚಗುಳಿತನ ಹಲವಾರು ಜೀವಗಳನ್ನೇ ನುಂಗಿದೆ. ಲಂಚಕ್ಕಾಗಿ ನಿಂತಿರುವ ಸರ್ಕಾರಕ್ಕೆ ನಾನು ಬೇಡಿಯಾದರೂ ತಂದು ಹಣ ಕೊಡ್ತೇವೆ ಹೋದ ಜೀವಗಳನ್ನು ತಂದುಕೊಡುತ್ತಾ ಎಂದು ಪ್ರಶ್ನಿಸಿದ ಅವರು ಲಿಂಗಾಯತ ಮಠಗಳನ್ನೂ ಈ ಸರ್ಕಾರದ ಲಂಚಗುಳಿತನ ಬಿಟ್ಟಿಲ್ಲ, ಅಲ್ಲಿಯೂ ಕಮಿಷನ್‌ ಕೇಳಿದೆ ಎಂದು ಆರೋಪಿಸಿದರು.

ಈಶ್ವರ್ ಖಂಡ್ರೆಗೆ ಅವಮಾನಿಸಿದ ಆರೋಪ; ಸ್ಪೀಕರ್ ಕಾಗೇರಿ ವಜಾಕ್ಕೆ ವೀರಶೈವ ಮಹಾಸಭಾ ಆಗ್ರಹ

ಪಿಎಸ್‌ಐ ಹಗರಣ ಎಡಿಜಿಪಿ ಜೈಲಿಗಟ್ಟಿದರೂ ಗೃಹ ಸಚಿವ, ಸಿಎಂ ತನಿಖೆ ಏಕಾಗಿಲ್ಲ:

ಪಿಎಸ್‌ಐ ಹಗರಣದಲ್ಲಿ ರಾಜ್ಯದ ಒಬ್ಬ ಎಡಿಜಿಪಿ ಜೈಲಿಗೆ ಹೋದ ಇದು ಇಡೀ ದೇಶದಲ್ಲಿಯೇ ಪ್ರಥಮ. ಪೊಲೀಸ್‌ ಇಲಾಖೆಯ ಉನ್ನತಾಧಿಕಾರಿ ಕೋಟ್ಯಂತರ ರುಪಾಯಿ ಹಗರಣದ ಲಂಚಗುಳಿತನದಲ್ಲಿ ಸಿಕ್ಕಿ ಬಿದ್ದು ಜೈಲಿಗೆ ಹೋದ. ಆದರೆ, ಇದರಲ್ಲಿ ಗೃಹಮಂತ್ರಿ ಮತ್ತು ಮುಖ್ಯಮಂತ್ರಿಗೆ ಉನ್ನತಾಧಿಕಾರಿಯಿಂದ ಲಂಚದ ಪಾಲು ಸಿಕ್ಕಿರುವದಿಲ್ಲವೇ ಈ ಬಗ್ಗೆ ತನಿಖೆಯಾಗುತ್ತಿಲ್ಲ ಏಕೆ ಎಂದು ಸುರ್ಜೇವಾಲಾ ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ, ಬಿಜೆಪಿ ಆಡಳಿತರದಲ್ಲಿ ಜನರನ್ನು ಹಿಂಸಿಸುವದೇ ಪ್ರಮುಖ ಅಂಶವಾಗಿದೆ. ಭ್ರಷ್ಟಾಚಾರ ಎಲ್ಲರನ್ನೂ ಸಂಕಷ್ಟಕ್ಕೆ ಈಡು ಮಾಡಿದೆ, ಏಪ್ರಿಲ್‌ ಅಂತ್ಯಕ್ಕೆ ವಿಧಾನಸಬೆಗೆ ಚುನಾವಣೆಯ ಸಂಭವವಿದ್ದು ಎಲ್ಲರೂ ಕಾಂಗ್ರೆಸ್‌ ಅಧಿಕಾರಕ್ಕೆ ತರಲು ಶ್ರಮಿಸಬೇಕೆಂದರು.

click me!