ಚುನಾವಣೋತ್ತರ ಸಮೀಕ್ಷೆ; ಗುಜರಾತ್, ಹಿಮಾಚಲ ಗೆದ್ದು MCD ಅಧಿಕಾರ ಕಳೆದುಕೊಂಡ ಮೋದಿ!

By Suvarna News  |  First Published Dec 5, 2022, 8:02 PM IST

ಚುನಾವಣೋತ್ತರ ಸಮೀಕ್ಷೆಗಳು ಪ್ರಕಟಗೊಂಡಿದೆ. ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಮ್ಯಾಜಿಕ್ ವರ್ಕೌಟ್ ಆಗಿದೆ. ಆದರೆ ದೆಹಲಿಯ ಕಾಲಬುಡದಲ್ಲಿದ್ದ ಅಧಿಕಾರ ಬಿಜೆಪಿ ಕೈತಪ್ಪಲಿದೆ ಎಂದು ಸಮೀಕ್ಷೆಗಳು ಹೇಳುತ್ತಿದೆ.


ನವದೆಹಲಿ(ಡಿ.05):  ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಅಧಿಕಾರ ಯಾರಿಗೆ? ದೆಹಲಿ ಮಹಾನಗರ ಪಾಲಿಕೆ ಗದ್ದುಕೆ ಯಾರ ಕೈಗೆ ಅನ್ನೋ ಕುತೂಹಲಗಳಿಗೆ ಸಮೀಕ್ಷೆಗಳು ಉತ್ತರ ನೀಡುವ ಪ್ರಯತ್ನ ಮಾಡಿದೆ. ಗುಜರಾತ್‌ನಲ್ಲಿ  ಬಹುತೇಕ ಸಮೀಕ್ಷೆಗಳು ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದಿದೆ. ಆದರೆ ಹಿಮಾಚಲ ಪ್ರದೇಶದಲ್ಲಿ ಅತಂತ್ರ ಸೃಷ್ಟಿಯಾಗಲಿದೆ ಎಂದು ಸಮೀಕ್ಷೆಗಳು ಹೇಳುತ್ತಿದೆ. ಆದರೆ ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಅನ್ನೋ ಸೂಚನೆಯನ್ನು ನೀಡಿದೆ. ಈ ಎರಡೂ ರಾಜ್ಯದಲ್ಲಿ ಸದ್ಯ ಬಿಜೆಪಿ ಅಧಿಕಾರದಲ್ಲಿದೆ. ಗುಜರಾತ್ ಮೋದಿ ತವರಾಗಿದೆ. ಇನ್ನು ಹಿಮಾಚಲ ಪ್ರದೇಶದಲ್ಲಿ ಪ್ರತಿ 5 ವರ್ಷಕ್ಕೊಮ್ಮೆ ಸರ್ಕಾರ ಬದಲಿಸುವ ಸಂಪ್ರದಾಯವಿದೆ. ಆದರೆ ಈ ಬಾರಿ ಬಿಜೆಪಿ ಈ ಸಂಪ್ರದಾಯ ಮುರಿಯಲಿದೆ ಎಂದು ಸಮೀಕ್ಷೆಗಳು ಹೇಳುತ್ತಿದೆ. ಈ ಎರಡು ರಾಜ್ಯಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಭರ್ಜರಿ ಪ್ರಚಾರ ನಡೆಸಿದ್ದರು. ಆದರೆ ದೆಹಲಿಯಲ್ಲೇ ಅಧಿಕಾರ ನಡೆಸುವ ಮೋದಿ, ಅದೇ ದೆಹಲಿಯ ಮಹಾನಗರ ಪಾಲಿಕೆ ಚುನಾವಣೆ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸಮೀಕ್ಷೆಗಳು ಹೇಳುತ್ತಿದೆ.

ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ಅಧಿಕಾರಕ್ಕೆ ಏರಲಿದೆ ಎಂದು ಸಮೀಕ್ಷೆಗಳು ಹೇಳುತ್ತಿದೆ. ಸದ್ಯ ದೆಹಲಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ದೆಹಲಿ ಆಳುತ್ತಿರುವ ಆರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್, ಇದೀಗ ಮಹಾನಗರ ಪಾಲಿಕೆಯನ್ನು ಕೈವಶ ಮಾಡಲಿದೆ ಎಂದು ಚುನಾವಣೆ ಸಮೀಕ್ಷೆಗಳು ಹೇಳುತ್ತಿದೆ.

Tap to resize

Latest Videos

HIMACHAL PRADESH EXIT POLLS ಕಾಂಗ್ರೆಸ್‌ಗೆ ಅಧಿಕಾರ ಎಂದ ಇಂಡಿಯಾ ಟುಡೆ ಸಮೀಕ್ಷೆ!

ದೆಹಲಿ ಮಹಾನಗರ ಪಾಲಿಕೆ ಚುನಾವಣೋತ್ತರ ಸಮೀಕ್ಷೆ(ಇಂಡಿಯಾ ಟುಡೆ)
ಆಮ್ ಆದ್ಮಿ ಪಾರ್ಟಿ: 149 ರಿಂದ 171 ಸ್ಥಾನ
ಬಿಜೆಪಿ: 69 ರಿಂದ 91 ಸ್ಥಾನ
ಕಾಂಗ್ರೆಸ್: 3 ರಿಂದ 7 ಸ್ಥಾನ
ಇತರರ: 5 ರಿಂದ 9 ಸ್ಥಾನ

ದೆಹಲಿ ಮಹಾನಗರ ಪಾಲಿಕೆ ಚುನಾವಣೋತ್ತರ ಸಮೀಕ್ಷೆ(ಜನ್ ಕಿ ಬಾತ್)
ಆಮ್ ಆದ್ಮಿ ಪಾರ್ಟಿ:  159 ರಿಂದ 175 ಸ್ಥಾನ
ಬಿಜೆಪಿ: 70 ರಿಂದ 92 ಸ್ಥಾನ
ಕಾಂಗ್ರೆಸ್: 4 ರಿಂದ 7 ಸ್ಥಾನ
ಇತರರ: 01 ಸ್ಥಾನ

Gujarat Assembly Elections: ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿಗೆ ದಾಖಲೆಯ ಬಹುಮತ,

ಗುಜರಾತ್‌ನಲ್ಲಿ ಬಿಜೆಪಿ ದಾಖಲೆಯ ಬಹುಮತ ಪಡೆಯಲಿದೆ ಎಂದು ಸಮೀಕ್ಷೆಗಳು ಹೇಳುತ್ತಿದೆ. ಮೋದಿ ತವರಿನಲ್ಲಿ ಮತ್ತೆ ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದು ಸಮೀಕ್ಷೆಗಳು ವರದಿ ನೀಡಿದೆ.

ಗುಜರಾತ್ ಚುನಾವಣೋತ್ತರ ಸಮೀಕ್ಷೆ ( ನ್ಯೂಸ್ ಎಕ್ಸ್ ) 
ಬಿಜೆಪಿ - 117 ರಿಂದ 140 ಸ್ಥಾನ
ಕಾಂಗ್ರೆಸ್ - 34 ರಿಂದ  51 ಸ್ಥಾನ
ಆಪ್ - 06 ರಿಂದ 13 ಸ್ಥಾನ

ಗುಜರಾತ್ ಚುನಾವಣೋತ್ತರ ಸಮೀಕ್ಷೆ ( ಜನ್ ಕಿ ಬಾತ್ )
ಬಿಜೆಪಿ - 117 ರಿಂದ 140 ಸ್ಥಾನ
ಕಾಂಗ್ರೆಸ್ - 34 ರಿಂದ  51 ಸ್ಥಾನ
ಆಪ್ - 6 ರಿಂದ 13  ಸ್ಥಾನ
ಇತರೆ -  01 ಸ್ಥಾನ

ದೆಹಲಿ ಮಹಾನಗರ ಪಾಲಿಕೆ ಚುನಾವಣೋತ್ತರ ಸಮೀಕ್ಷೆ, ಬಿಜೆಪಿಗೆ ಸೋಲು

ಹಿಮಾಚಲ ಪ್ರದೇಶದಲ್ಲಿ  ಬಿಜೆಪಿಗೆ ಅಧಿಕಾರ ಹಿಡಿಯಲಿದೆ ಎಂದು ಕೆಲ ಸಮೀಕ್ಷೆಗಳು ಹೇಳಿದೆ. ಆದರೆ ಇಂಡಿಯಾ ಟುಡೆ ಕಾಂಗ್ರೆಸ್‌ಗೆ ಅಧಿಕಾರ ಎಂದಿದೆ. ಇತ್ತ ಕೆಲ ಸಮೀಕ್ಷೆಗಳು ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದೆ ಎಂದಿದೆ.

ಹಿಮಾಚಲ ಪ್ರದೇಶ ಚುನಾವಣೋತ್ತರ ಸಮೀಕ್ಷೆ ( ಪಿ ಮಾರ್ಕ್ )
ಬಿಜೆಪಿ - 34 ರಿಂದ 39 ಸ್ಥಾನ
ಕಾಂಗ್ರೆಸ್ - 28 ರಿಂದ 33 ಸ್ಥಾನ
ಆಪ್ - 01 ಸ್ಥಾನ

ಹಿಮಾಚಲ ಪ್ರದೇಶ ಚುನಾವಣೋತ್ತರ ಸಮೀಕ್ಷೆ(ETG )
ಬಿಜೆಪಿ - 38 ಸ್ಥಾನ
ಕಾಂಗ್ರೆಸ್ - 28 ಸ್ಥಾನ
ಆಪ್ - 00 ಸ್ಥಾನ
ಇತರೆ - 02 ಸ್ಥಾನ

ಹಿಮಾಚಲ ಪ್ರದೇಶ ( ಜನ್ ಕೀ ಬಾತ್ )
ಬಿಜೆಪಿ - 32 ರಿಂದ 40 ಸ್ಥಾನ
ಕಾಂಗ್ರೆಸ್ - 27 ರಿಂದ 34 ಸ್ಥಾನ
ಆಪ್ - 00  ಸ್ಥಾನ
ಇತರೆ - 01ರಿಂದ 02 ಸ್ಥಾನ
 

click me!