ಹಿಮಾಚಲ ಪ್ರದೇಶ ಚುನಾವಣೋತ್ತರ ಸಮೀಕ್ಷೆಯಲ್ಲಿ ಜನ್ ಕಿ ಬಾತ್, ರಿಪಬ್ಲಿಕ್, ಜೀ ಸೇರಿದಂತೆ ಇತರ ಕೆಲ ಸರ್ವೆಗಳು ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದಿದೆ. ಆದರೆ ಇಂಡಿಯಾ ಟುಡೆ ಸಮೀಕ್ಷೆ ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ ಎಂದಿದೆ.
ದೆಹಲಿ(ಡಿ.05): ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ ಸಮೀಕ್ಷೆ ಇದೀಗ ಆಡಳಿತರೂಡ ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಸಿಹಿ ಕಹಿ ನೀಡಿದೆ. ಕಾರಣಲ ಜನ್ ಕಿ ಬಾತ್, ರಿಪಬ್ಲಿಕ್ ಟಿವಿ, ಜೀ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಹಿಮಾಚಲ ಪ್ರದೇಶದಲ್ಲಿ ಸಂಪ್ರದಾಯಕ್ಕೆ ಬ್ರೇಕ್ ಬೀಳಲಿದೆ. ಬಿಜೆಪಿ ಮತ್ತೆ ಅಧಿಕಾರ ಹಿಡಿಯಲಿದೆ ಎಂದಿದೆ. ಆದೆರೆ ಇಂಡಿಯಾ ಟುಡೆ ಸಮೀಕ್ಷೆಯಲ್ಲಿ ಪ್ರತಿ 5 ವರ್ಷಕ್ಕೆ ಸರ್ಕಾರ ಬದಲಿಸುವ ಸಂಪ್ರದಾಯ ಮುಂದುವರಿಯವು ಸೂಚನೆ ನೀಡಿದೆ. ಕಾರಣ ಇಂಡಿಯಾ ಟುಡೆ ಸಮೀಕ್ಷೆಯಲ್ಲಿ ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ 30 ರಿಂದ 40 ಸ್ಥಾನ ಗೆಲ್ಲಲಿದೆ ಎಂದಿದೆ. ಇತ್ತ ಬಿಜೆಪಿ 24 ರಿಂದ 34 ಸ್ಥಾನ ಗೆಲ್ಲುವ ಮೂಲಕ ಎರಡನೇ ಸ್ಥಾನಕ್ಕೆ ಕುಸಿಯಲಿದೆ. ಇಷ್ಟೇ ಅಲ್ಲ ಅಧಿಕಾರ ಕಳೆದುಕೊಳ್ಳಲಿದೆ ಎಂದಿದೆ.
ಹಿಮಾಚಲ ಪ್ರದೇಶದಲ್ಲಿ ಪ್ರತಿ ಚುನಾವಣೆಯಲ್ಲಿ ಸರ್ಕಾರ ಬದಲಿಸುವ ಸಂಪ್ರದಾಯವಿದೆ. ಹೀಗಾಗಿ ಈ ಬಾರಿ ಈ ಸಂಪ್ರದಾಯಕ್ಕೆ ಬಿಜೆಪಿ ಬ್ರೇಕ್ ಹಾಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿತ್ತು. ಇದಕ್ಕೆ ಪೂರಕ ಎಂಬಂತೆ ಹಲವು ಚುನಾವಣೋತ್ತರ ಸಮೀಕ್ಷೆಗಳು ಹೇಳಿತ್ತು. ಆದರೆ ಇಂಡಿಯಾ ಟುಡೆ ಸಮೀಕ್ಷೆ ಈ ಎಲ್ಲಾ ವರದಿಗೆ ತದ್ವಿರುದ್ದ ಸಮೀಕ್ಷೆ ಪ್ರಕಟಿಸಿದೆ.
Himachal Pradesh Exit Polls ಹಿಮಾಚಲದಲ್ಲಿ ಮತ್ತೆ ಬಿಜೆಪಿಗೆ ಅಧಿಕಾರ!
ಹಿಮಾಚಲ ಪ್ರದೇಶ ಚುನಾವಣೋತ್ತರ ಸಮೀಕ್ಷೆ( ಇಂಡಿಯಾ ಟುಡೆ)
ಕಾಂಗ್ರೆಸ್: 30 ರಿಂದ 40
ಬಿಜೆಪಿ:24 ರಿಂದ 34
ಆಮ್ ಆದ್ಮಿ ಪಾರ್ಟಿ: 0
ಇತರರು: 4 ರಿಂದ 8
ಹಿಮಾಚಲ ಪ್ರದೇಶದಲ್ಲಿ 68 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಅಧಿಕಾರ ಹಿಡಿಯಲು 35 ಸ್ಥಾನ ಗೆಲ್ಲಬೇಕು. 2017ರ ಚುನಾವಣೆಯಲ್ಲಿ ಬಿಜೆಪಿ 44 ಸ್ಥಾನ ಗೆದ್ದು ಅಧಿಕಾರ ಹಿಡಿದಿತ್ತು. ಕಾಂಗ್ರೆಸ್ 21 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇಬ್ಬರು ಪಕ್ಷೇತರರು ಗೆಲುವು ಸಾಧಿಸಿದ್ದರೆ, ಕಮ್ಯೂನಿಸ್ಟ್ ಪಾರ್ಟಿ (ಎಂ) 1 ಸ್ಥಾನ ಗೆದ್ದುಕೊಂಡಿತ್ತು.
Gujarat Assembly Elections: ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿಗೆ ದಾಖಲೆಯ ಬಹುಮತ
ಇಂಡಿಯಾ ಟುಡೆ ಹೊರತು ಪಡಿಸಿ ಇನ್ನುಳಿದ ಸಮೀಕ್ಷಾ ವರದಿಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಸಣ್ಮ ಮಟ್ಟದ ಪೈಪೋಟಿ ಕಂಡು ಬರುತ್ತಿದೆ. ಆದರೆ ಯಾರಿಗೆ ಅಧಿಕಾರ ಅನ್ನೋದು ಡಿಸೆಂಬರ್ 8 ರಂದು ಫಲಿತಾಂಶದಲ್ಲಿ ಖಚಿತವಾಗಲಿದೆ.
ETG ಪ್ರಕಟಿಸಿದ ಹಿಮಾಚಲ ಪ್ರದೇಶ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದಿದೆ. ಬಿಜೆಪಿ ಗರಿಷ್ಠ 38 ಸ್ಥಾನಗಳನ್ನು ಗೆಲ್ಲಲಿದೆ ಎಂದಿದೆ. ಇನ್ನು ಕಾಂಗ್ರೆಸ್ ಗರಿಷ್ಠ 28 ಸ್ಥಾನ ಗೆಲ್ಲಲಿದೆ. ಆದರೆ ಆಮ್ ಆದ್ಮಿ ಪಾರ್ಟಿ ಖಾತೆ ತೆರೆಯಲು ವಿಫಲವಾಗಲಿದೆ ಎಂದಿದೆ. ಇತ್ತ ಇತರರು ಗರಿಷ್ಠ 2 ಸ್ಥಾನ ಗೆಲ್ಲುವ ಸಾಧ್ಯತೆಗಳನ್ನು ETG ಚುನಾವಣೋತ್ತೋರ ಸಮೀಕ್ಷಾ ವರದಿಯಲ್ಲಿ ಹೇಳಿದೆ. ಇದೀಗ ಹಿಮಾಚಲ ಪ್ರದೇಶ ತೀವ್ರ ಕುತೂಹಲ ಕೆರಳಿದೆ. ಕಾರಣ ಗುಜರಾತ್ ವಿಧಾನಸಭಾ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಬಹುತೇಕ ಎಲ್ಲಾ ಸಮೀಕ್ಷೆಗಳು ಬಿಜೆಪಿ ದಾಖಲೆಯ ಸ್ಥಾನ ಗೆಲ್ಲಲಿದೆ ಎಂದಿದೆ.
ETG - ಹಿಮಾಚಲ ಪ್ರದೇಶ
ಬಿಜೆಪಿ - 38
ಕಾಂಗ್ರೆಸ್ - 28
ಆಪ್ - 00
ಇತರೆ - 02