Prajadhwani Yatre: ದೇವೇಗೌಡರು ಪ್ರಧಾನಿಯಾಗಿ ಜನರ ಮನ ಗೆಲ್ಲಲಿಲ್ಲ: ಡಿಕೆ ಶಿವಕುಮಾರ್ ಟೀಕೆ

By Sathish Kumar KHFirst Published Jan 26, 2023, 8:44 PM IST
Highlights

ರಾಜ್ಯದಲ್ಲಿ ಹಿಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ದೂರ ಇಡುವ ಕಾರಣಕ್ಕೆ ಜೆಡಿಎಸ್‌ಗೆ ಅಧಿಕಾರ ಕೊಟ್ಟಿದ್ದರೂ ಅದನ್ನು ಕುಮಾರಸ್ವಾಮಿ ಉಳಿಸಿಕೊಳ್ಳಲಿಲ್ಲ. ಇನ್ನು ಕಾಂಗ್ರೆಸ್‌ನಿಂದ ರಾಜ್ಯದ ಹೆಚ್.ಡಿ. ದೇವೇಗೌಡರನ್ನು ಪ್ರಧಾನಿ ಮಾಡಿದ್ದರೂ ಅವರಿಗೆ ಜನರ ಮನಸ್ಸು ಗೆಲ್ಲಲು ಆಗಲಿಲ್ಲ.

ಮೈಸೂರು (ಜ.26):  ರಾಜ್ಯದಲ್ಲಿ ಹಿಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ದೂರ ಇಡುವ ಕಾರಣಕ್ಕೆ ಜೆಡಿಎಸ್‌ಗೆ ಅಧಿಕಾರ ಕೊಟ್ಟಿದ್ದರೂ ಅದನ್ನು ಕುಮಾರಸ್ವಾಮಿ ಉಳಿಸಿಕೊಳ್ಳಲಿಲ್ಲ. ಇನ್ನು ಕಾಂಗ್ರೆಸ್‌ನಿಂದ ರಾಜ್ಯದ ಹೆಚ್.ಡಿ. ದೇವೇಗೌಡರನ್ನು ಪ್ರಧಾನಿ ಮಾಡಿದ್ದರೂ ಅವರಿಗೆ ಜನರ ಮನಸ್ಸು ಗೆಲ್ಲಲು ಆಗಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಟೀಕೆ ಮಾಡಿದ್ದಾರೆ.

ಮೈಸೂರಿನಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್‌ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್‌ ನಾಯಕರು ಯಾರೂ ಮುಖ್ಯಮಂತ್ರಿ ಸ್ಥಾನ ಬಯಸಿದವರಲ್ಲ. ಆದರೆ, ನಮ್ಮ ಯೋಗಕ್ಕಿಂತ ರಾಜ್ಯದ ಜನರ ಯೋಗಕ್ಷೇಮ ಮುಖ್ಯ ಎನ್ನುವ ದೃಷ್ಟಿಯಿಂದ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಕುಮಾರಸ್ವಾಮಿ ಅವರಿಗೆ ಅಧಿಕಾರ ಕೊಟ್ಟರೂ ಅದನ್ನು ಉಳಿಸಿಕೊಳ್ಳಲಿಲ್ಲ. ಇನ್ನು ಈ ಹಿಂದೆ ದೇವೇಗೌಡರನ್ನು ಕಾಂಗ್ರೆಸ್‌ನಿಂದ ಪ್ರಧಾನಮಂತ್ರಿ ಮಾಡಿದ್ದರೂ ದೇಶದ ಜನರ ಮನಸ್ಸು ಗೆಲ್ಲಲಿಲ್ಲ. ಈ ಬಾರಿ ಮೈಸೂರು ಜಿಲ್ಲೆಯಿಂದ 11 ಶಾಸಕರು ಹಾಗೂ ಚಾಮರಾಜನಗರದಿಂದ 4 ಶಾಸಕರನ್ನು ಕಳುಹಿಸಬೇಕು ಕಾಂಗ್ರೆಸ್‌ನಿಂದ ವಿಧಾನಸಭೆಗೆ ಕಳುಹಿಸಬೇಕು. ಎರಡು ಬಾರಿ ಕುಮಾರಣ್ಣನಿಗೆ ಅವಕಾಶ ಕೊಟ್ಟಿದ್ದೀರಾ. ಈಗ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯಗೆ ಮತ್ತೊಂದು ಅವಕಾಶ ಕೇಳಲು ಬಂದಿದ್ದೇವೆ ಎಂದರು. 

Assembly election: ಭ್ರಷ್ಟಾಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಶಾಮೀಲು: ಸಿದ್ದರಾಮಯ್ಯ ಆರೋಪ

ಭ್ರಷ್ಟಾಚಾರದ ರಾಜಧಾನಿ ಕಳಂಕ:  ಮೈಸೂರು ಭಾಗ ಸೇರಿ ರಾಜ್ಯದಾದ್ಯಂತ ಬಹಳಷ್ಟು ಜನ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಬರುತ್ತಿದ್ದಾರೆ. ಇವರೆಲ್ಲಾ ದಡ್ಡರೇ ? ಪ್ರಜ್ಞೆ ಇಲ್ವಾ ? ಕುಮಾರಸ್ವಾಮಿ ಅವರು ಪಕ್ಷ ವಿಸರ್ಜನೆ ಮಾಡುವವರೆಗೂ ಕಾಯಬೇಡಿ ಈಗಲೇ ಕಾಂಗ್ರೆಸ್ ಪಕ್ಷಕ್ಕೆ ಸೇರಿ ಬಲಿಷ್ಠ ಸರ್ಕಾರ ತರೋಣ. ಬಿಜೆಪಿ ಸರ್ಕಾರ ಬಂದ ಮೇಲೆ ಭ್ರಷ್ಟಾಚಾರದ ರಾಜಧಾನಿ ಅನ್ನೋ ಕಳಂಕ ತಂದಿದ್ದಾರೆ. ಹಳೆಯ ಬಜೆಟ್‌‌ ಶೇಕಡ 50 ಜಾರಿಯಾಗಿಲ್ಲ. ಪ್ರಣಾಳಿಕೆಯಲ್ಲಿ ಹೇಳಿದನ್ನು ಈಡೇರಿಸಿಲ್ಲ. ಬಿಜೆಪಿಯ ಪಾಪದ ಪುರಾಣ ಪುಸ್ತಕ ಬಿಡುಗಡೆ ಮಾಡಿದ್ದೇವೆ. ಪಿಎಸ್‌ಐ ಇನ್ನೂರು ಜನ ಜೈಲಿನಲಿದ್ದಾರೆ ಎಂದರು.

ಹಣ ಕೊಟ್ಟಿದ್ದರೆ ಹೇಳಿ ನಿವೃತ್ತಿ ಆಗುತ್ತೇನೆ: ಸಿದ್ದರಾಮಯ್ಯ ಸಿಎಂ ಆಗಿದ್ದಾಗ ನಾನು ಪವರ್ ಮಂತ್ರಿಯಾಗಿದ್ದೆ. ನಾನು ಹಲವು ನೇಮಕಾತಿ ಮಾಡಿದ್ದೇನೆ. ನನಗೆ ಅಥವಾ ಸಿದ್ದರಾಮಯ್ಯ ಅವರಿಗೆ ಹಣ ಯಾರಾದರೂ ಕೊಟ್ಟಿದ್ದರೆ ಹೇಳಿ. ನಾನು ರಾಜಕಾರಣದಿಂದ ನಿವೃತ್ತಿಯಾಗುತ್ತೇನೆ. 200 ಯೂನಿಟ್ ಉಚಿತ ಕೊಡುತ್ತೇವೆ. 2 ಸಾವಿರ ಕುಟುಂಬಕ್ಕೆ ಇದಕ್ಕಾಗಿ ನಾನು ಸಿದ್ದರಾಮಯ್ಯ ಗ್ಯಾರಂಟಿ ಚೆಕ್‌ಗೆ ಸಹಿ ಹಾಕಿದ್ದೇವೆ.  ಇದು ಜನ್ ಧನ್ ಅಲ್ಲ, ಗೃಹಲಕ್ಷ್ಮಿ ಖಾತೆ ಗೃಹ ಜ್ಯೋತಿ ಕರೆಂಟ್ ಆಗಿದೆ. ಮೋದಿ ಅವರು ಕೊರೊನಾ ಜಾಗಟೆ, ಚಪ್ಪಾಳೆ ತಟ್ಟಿ ದೀಪ ಹಚ್ಚಿ ಅಂದರು. ಇವರ ( ಬಿಜೆಪಿ ) ಮನೆ ಹಾಳಾಗ. ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಹಲವರು ಸಾವನ್ನಪ್ಪಿದರು. ಆಗ ಯಾವೊಬ್ಬ ಸಚಿವರಿಗೂ ಹೃದಯ, ಕಣ್ಣು, ಕಿವಿ ಏನು ಇರಲಿಲ್ಲ. ನಾವು ಹೋಗಿ ಹೋರಾಟ ಮಾಡಿದೆವು ಎಂದು ತಿಳಿಸಿದರು.

Assembly election: ನಮ್ಮಲ್ಲಿ ಭಿನ್ನಮತ ಇಲ್ಲ, ಒಗ್ಗಟ್ಟಾಗಿದ್ದೇವೆ: ಮುಂದಿನ ಸರ್ಕಾರ ನಮ್ಮದೇ: ಡಿಕೆಶಿ

ಜೆಡಿಎಸ್‌, ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ ಬೆಂಬಲಿಸಿ: ಮೈಸೂರಿನಲ್ಲಿ ನಡೆಯುತ್ತಿರುವ ಐತಿಹಾಸಿಕ ಸಭೆಯಲ್ಲಿ ಇಂದಿರಾಗಾಂಧಿ ಭಾಷಣ ಮಾಡಿದ್ದರು. ಬಿಜೆಪಿ ಸರ್ಕಾರ ಕಿತ್ತು ಹಾಕಲು ಈ ಸಮಾವೇಶ ಮಾಡಲಾಗಿದೆ. ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತು ಹಾಕಲು ಜನ ಸಂಕಲ್ಪ ಮಾಡಿದ್ದಾರೆ. ಕಾಂಗ್ರೆಸ್‌ ನಾಯಕರನ್ನು ಮೂರನೇ ಮಹಡಿಗೆ ನೀವು ಕಳುಹಿಸಬೇಕು. ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಬಿಬಿಎಂಪಿ, ಜಿ.ಪಂ ಹಾಗೂ ತಾ.ಪಂ ಚುನಾವಣೆ ಏಕೆ ಮಾಡಲಿಲ್ಲ? ಜನ ಸೋಲಿಸುತ್ತಾರೆ ಅಂತಾ ಚುನಾವಣೆ ಮಾಡಲಿಲ್ಲ. ಮೈಸೂರು ಚಾಮರಾಜ ನಗರ 15ಕ್ಕೆ 15 ಗೆಲ್ಲುತ್ತೇವೆ. ಬಿಜೆಪಿ ಸರ್ಕಾರ ಬರಲ್ಲ. ಬಿಜೆಪಿ, ಜೆಡಿಎಸ್ ಕಾರ್ಯಕರ್ತರಿಗೆ ಕೈ ಮುಗಿದು ಕೇಳುತ್ತೇನೆ. ನೀವೆಲ್ಲಾ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದು ಮನವಿ ಮಾಡಿದರು. 

click me!