ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ
ನಿಶ್ಚಳ ಬಹುಮತದೊಂದಿಗೆ ಬಿಜೆಪಿ ಅಧಿಕಾರ ಹಿಡಿಯಲಿದೆ
ಕಾಂಗ್ರೆಸ್ ನಾಯಕರಿಂದ ಆಧಾರ ರಹಿತ ಆರೋಪ
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಜ.26): ಬಿಜೆಪಿ ಚುನಾವಣಾ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದು, ನಿಶ್ಚಳ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಹತಾಶವಾಗಿದ್ದು, ಉಚಿತಕೊಡುಗೆಗಳ ಮಹಾಪೂರವನ್ನೆ ಹರಿಸುತ್ತಿದೆ ಎಂದು ಶಾಸಕ ಸಿ.ಟಿ.ರವಿ ಟೀಕಿಸಿದರು.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು ಪಕ್ಷ ಬೂತ್ಮಟ್ಟದ ಚುಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು, ವಿಜಯಸಂಕಲ್ಪ ಅಭಿಯಾನ ಆರಂಭಿಸಿದೆ. ಭೂತ್ ವಿಜಯಯಾತ್ರೆ ಕೈಗೊಂಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಸಾಧನೆಗಳ ರಿಪೋರ್ಟ್ಕಾರ್ಡ್ನ್ನು ವಿತರಿಸಲಾಗುತ್ತಿದೆ. ಪ್ರತಿಬೂತ್ನಲ್ಲಿ ಬಿಜೆಪಿ ಸಿಂಬಲ್ ಇರುವಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.ರಾಜ್ಯದಲ್ಲಿ 59 ಸಾವಿರ ಮತಗಟ್ಟೆಯಲ್ಲಿ ಕಾರ್ಯ ಆರಂಭಗೊಂಡಿದೆ. ಸದಸ್ಯತ್ವ ನೊಂದಣಿ ನಡೆಯುತ್ತಿದೆ.
ಬಿಜೆಪಿ ಸೇರಲು ಕಾಂಗ್ರೆಸ್ ಶಾಸಕರೂ ತುದಿಗಾಲಲ್ಲಿ: ಸಿ.ಟಿ. ರವಿ
ರಾಜ್ಯಮಟ್ಟದಲ್ಲಿ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ, ಗೃಹ ಸಚಿವ ಅಮಿತ್ಷಾ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ವಿವಿಧ ಸಮುದಾಯ, ವರ್ಗಗಳ ಸಮಾವೇಶ ನಡೆಯುತ್ತಿದ್ದು, ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪಾಲ್ಗೊಳ್ಳುತ್ತಿದ್ದಾರೆ. ರಾಜ್ಯಾಧ್ಯಕ್ಷ ಕಟೀಲ್, ರಾಜ್ಯ ಉಸ್ತುವಾರಿ ಅರುಣ್ಸಿಂಗ್ಪ್ರವಾಸ ಆರಂಭಿಸಿದ್ದಾರೆ ಎಂದರು.
ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ : ಯಾವುದೇ ಪರಿಸ್ಥಿತಿ ಇದ್ದರೂ ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತೇವೆಂದು ವಿಶ್ವಾಸ ವ್ಯಕ್ತಪಡಿಸಿದ ಸಿ.ಟಿ ರವಿ ಸುಳ್ಳನ್ನೆ ಕಾಂಗ್ರೆಸ್ ಇತಿಹಾಸ ಹೇಳುತ್ತದೆ. ರಾಜಾಸ್ತಾನ್ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ 10ದಿನದಲ್ಲಿ ರೈತರ ಎಲ್ಲಾ ಸಾಲ ಮನ್ನಾ ಮಾಡುತ್ತೇವೆಂದರು. ನಾಲ್ಕು ವರ್ಷವಾಯ್ತು 1 ರೂ. ಸಾಲಮನ್ನಾ ಮಾಡಿಲ್ಲ. ಕರ್ನಾಟಕದಲ್ಲಿ ಭರವಸೆ ಮಹಾಪೂರವನ್ನೇ ಹರಿಸುತ್ತಿದೆ. ಹೆಸರಿಗೆ ಪ್ರಜಾಧ್ವನಿ ಯಾತ್ರೆ ಮಾಡುತ್ತಿರುವುದು ಪ್ರಜಾದ್ರೋಹವೆಂದು ಆರೋಪಿಸಿದರು.
ಆರೋಪ ಬದಲು ಆಧಾರ ನೀಡಬೇಕು : ಕಾಂಗ್ರೆಸ್‌ನವರು ಭ್ರಷ್ಟಚಾರದ ಬಗ್ಗೆ ಆರೋಪ ಮಾಡುತ್ತಿದ್ದಾರೆ. ಆರೋಪ ಮಾಡುವವರು ಆಧಾರಗಳನ್ನು ನೀಡಬೇಕು. ಸಂವಿಧಾನಿಕ ಸಂಸ್ಥೆಗಳ ಮೇಲೆ ಭರವಸೆ ಇಟ್ಟುಕೊಳ್ಳಬೇಕು. ಆಧಾರ ಕೊಟ್ಟು ಆರೋಪ ಮಾಡಿದರೇ ನಂಬಬಹುದು. ಸರ್ವಸಾಮಾನ್ಯವಾಗಿ ಆರೋಪ ಮಾಡಿದರೇ ಅದು ಆರೋಪ ಅನಿಸಿಕೊಳ್ಳುವುದಿಲ್ಲ ಎಂದು ಹೇಳಿದರು.ರಾಜಕಾರಣ ಕಲುಷಿತಗೊಂಡಿದೆ ಎಂದು ಹೇಳಲು ಸಾಧ್ಯವಿಲ್ಲ. ವ್ಯವಸ್ಥೆಯಲ್ಲಿ ಎಲ್ಲರೂ ಕಳ್ಳರಲ್ಲ. ಹಾಗಂತ ಎಲ್ಲರೂ ಒಳ್ಳೇಯವರಲ್ಲ. ಅವರ ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಂಡರೇ ಅವರಿಗೆ ಅರಿವಾಗುತ್ತದೆ ಎಂದ ಅವರು ಹಾಸನ ಜೆಡಿಎಸ್ ಅಭ್ಯರ್ಥಿ ವಿಚಾರ ಪ್ರತಿಕ್ರಿಯಿಸಿ ಎಚ್.ಡಿ.ದೇವೇಗೌಡರ ಕುಟುಂಬದೊಳಗಿನ ಜಗಳಕ್ಕೆ ಕೈಹಾಕುವುದಿಲ್ಲ. ಆ ಕುಟುಂಬದ ಜಗಳ ಅವರಿಗೆ ಬಿಡುತ್ತೇವೆ ಎಂದರು.
ಅಧಿಕಾರಿ ಜತೆ ಸಂಬಂಧಕ್ಕೆ ಪತ್ನಿಗೆ ಸ್ಯಾಂಟ್ರೋ ಒತ್ತಡ..!
ಪದ್ಮಶ್ರೀ ಪ್ರಶಸ್ತಿ ಹಿರಿಮೆ ಗರಿಮೆ ಹೆಚ್ಚು : ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾದ ಬಳಿಕ ಪದ್ಮಶ್ರೀ ಪ್ರಶಸ್ತಿ ಹಿರಿಮೆ ಗರಿಮೆ ಹೆಚ್ಚಾಗಿದೆ. ಈ ಹಿಂದೆ ಪ್ರಶಸ್ತಿಗಾಗಿ ದೊಡ್ಡ ಲಾಭಿ ನಡೆಯುತ್ತಿತ್ತು. ಈಗ ಪದ್ಮಶ್ರೀ ಪ್ರಶಸ್ತಿ ಜನರ ಪ್ರಶಸ್ತಿಯಾಗಿದೆ. ಎಲೆಮರೆ ಕಾಯಿಯಂತೆ ಕೆಲಸ ಮಾಡುವವರನ್ನು ಪ್ರಶಸ್ತಿ ಹುಡುಕಿಕೊಂಡು ಬರುತ್ತಿದೆ ಎಂದು ಹೇಳಿದರು.ರಾಜ್ಯದ ೮ ಮಂದಿಗೆ ಪ್ರಶಸ್ತಿ ಬಂದಿದ್ದು, ಅವರನ್ನು ಅಭಿನಂದಿಸುವುದಾಗಿ ತಿಳಿಸಿದ ಅವರು, ಮುತ್ಸದ್ದಿ ರಾಜ ಕಾರಣಿ ಎಸ್.ಎಂ.ಕೃಷ್ಣ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿ ಲಭಿಸಿದೆ. ಶ್ರೀಮಂತಿಕೆಯ ಅಹಂಕಾರದ ಲವಲೇಶವು ಇಲ್ಲದ ಸೇವೆಯನ್ನೇ ಧ್ಯೇಯವಾಗಿಸಿಕೊಂಡಿರುವ ಸುಧಾಮೂರ್ತಿ, ಸಾಹಿತ್ಯ ಕ್ಷೇತ್ರದಿಂದ ಎಸ್.ಎಲ್. ಭೈರಪ್ಪ ಅವರಿಗೆ ಪ್ರಶಸ್ತಿ ಲಭಿಸಿರುವುದು ಸಂತೋಷ ತಂದಿದೆ ಎಂದರು.