ಸಿಎಂ ಸಿದ್ದರಾಮಯ್ಯಗೆ ಲಜ್ಜೆ, ಅಂಜಿಕೆ ಇಲ್ಲ: ಮಾಜಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ

Published : Jan 04, 2025, 11:23 AM IST
ಸಿಎಂ ಸಿದ್ದರಾಮಯ್ಯಗೆ ಲಜ್ಜೆ, ಅಂಜಿಕೆ ಇಲ್ಲ: ಮಾಜಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ

ಸಾರಾಂಶ

ಸಿದ್ದರಾಮಯ್ಯಗೆ ಲಜ್ಜೆ, ಅಂಜಿಕೆ ಇಲ್ಲ. ನಾಳೆ ಬೆಳಗ್ಗೆ ಚುನಾವಣೆ ನಡೆದರೂ ನೀವು ನಿರ್ನಾಮ ಆಗುತ್ತೀರ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು. 

ಮೈಸೂರು (ಜ.04): ಸಿದ್ದರಾಮಯ್ಯಗೆ ಲಜ್ಜೆ, ಅಂಜಿಕೆ ಇಲ್ಲ. ನಾಳೆ ಬೆಳಗ್ಗೆ ಚುನಾವಣೆ ನಡೆದರೂ ನೀವು ನಿರ್ನಾಮ ಆಗುತ್ತೀರ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು. ಸಚಿವರಾದ ಪ್ರಿಯಾಂಕ್ ಖರ್ಗೆ, ಲಕ್ಷ್ಮೀ ಹೆಬ್ಬಾಳ್ಕರ್ ರಾಜೀನಾಮೆ ಪಡೆಯದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಗರದಲ್ಲಿ ಶುಕ್ರವಾರ ಕಿಡಿಕಾರಿದ ಅವರು, ಮೊದಲು ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳಿಯಬೇಕು. ಭಂಡತನದಿಂದ ಮುಂದುವರೆದರೆ ಅವರ ಸಚಿವರು ಸಹ ಭಂಡತನ ಪ್ರದರ್ಶನ ಮಾಡುತ್ತಾರೆ. ರಾಜ್ಯವನ್ನು ಲೂಟಿ ಮಾಡುತ್ತಾರೆ. ಎಲ್ಲರೂ ಅಂಗಡಿ ತೆಗೆದು ಲೂಟಿ ಮಾಡುತ್ತಾರೆ. 

ಸಿಎಂಗೆ ಲಜ್ಜೆ ಇಲ್ಲ ಅಂದ ಮೇಲೆ ಅವರ ಸಚಿವರಿಗೆ ಅಂಜಿಕೆ ಇರುತ್ತಾ ಎಂದು ಪ್ರಶ್ನಿಸಿದರು. ಹಿಟ್ ಅಂಡ್ ರನ್ ರೀತಿಯಲ್ಲಿ ಪ್ರಿಯಾಂಕ್ ಖರ್ಗೆಯದ್ದು ಸ್ಲ್ಪಿಟ್ ಅಂಡ್ ರನ್. ಉಗಿದು ಓಡಿ ಹೋಗುವುದು ಪ್ರಿಯಾಂಕ್ ಖರ್ಗೆ ಕೆಲಸ. ಈಶ್ವರಪ್ಪ ವಿಚಾರ ಬಂದಾಗ ರಾಜೀನಾಮೆಗೆ ಒತ್ತಾಯಿಸಿದ್ದೀರಿ, ನಿಮ್ಮ ಸಚಿವರ ಪಿಎಸ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಅದಕ್ಕೆ ಸಾಕ್ಷಿ ಕೇಳುತ್ತೀರಾ. ನೀವು ನಿಮ್ಮ ಆರೋಪಗಳಿಗೆ ಸಾಕ್ಷಿ ಕೊಟ್ಟಿದ್ರಾ?, ಈಗ ಮಾತ್ರ ಸಾಕ್ಷಿ ಕೇಳುವುದು ಎಷ್ಟು ಸರಿ ಎಂದು ಅವರು ಕಿಡಿಕಾರಿದರು.

ಅಂಬೇಡ್ಕರ್ ಬಗ್ಗೆ ಮಾತಾಡಲು ಕಾಂಗ್ರೆಸ್‌ಗೆ ಮುಖವಿಲ್ಲ: ಪ್ರತಾಪ್ ಸಿಂಹ ಟೀಕೆ

ದರೋಡೆ ಮಾಡಿ ಕೊಡುವ ನಾಟಕ: ಬಸ್ ಪ್ರಯಾಣ ದರ ಏರಿಕೆ ಕುರಿತು ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ ಅವರು, ಪಂಚ ಗ್ಯಾರಂಟಿ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದರು. ಹೆಂಡತಿಗೆ ಕೊಟ್ಟು ಗಂಡನಿಂದ ಕಿತ್ತುಕೊಂಡು ಮೋಸ ಮಾಡಿದರು. ಈ ಸರ್ಕಾರ ಒಂದು ಕಡೆ ದರೋಡೆ ಮಾಡಿ, ಮತ್ತೊಂದು ಕಡೆ ಕೊಡುವ ನಾಟಕ ಆಡುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಗೃಹಲಕ್ಷ್ಮೀಗೆ ಎರಡು ಸಾವಿರ ಕೊಟ್ಟು, ಮದ್ಯಪಾನದಲ್ಲಿ ಡಬಲ್ ವಸೂಲಿ ಮಾಡಿದರು. ಯುವನಿಧಿಯನ್ನು ಕೊಡಲೇ ಇಲ್ಲ. ಜಾತಿ ಜಾತಿ ನಡುವೆ ತಂದು ಹಾಕುತ್ತಿದ್ದಾರೆ. ವಿಷಯಾಂತರ ಮಾಡಿ ಕಾಲ ಕಳೆಯುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ನನಗೆ ಕಾಂಗ್ರೆಸ್ ಹೋಗುವ ದರ್ದು ಇಲ್ಲ: ನಾನು ಕಾಂಗ್ರೆಸ್ ಹೋಗುವುದಾಗಿದ್ದರೆ ಚುನಾವಣೆ ಸಮಯಲ್ಲೇ ಹೋಗುತ್ತಿದೆ. ಇವಾಗ ಹೋಗುವ ದರ್ದು ಇಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಾಪ್ ಸಿಂಹಗೆ ಕಾಂಗ್ರೆಸ್ ಹೋಗುವ ಅನಿವಾರ್ಯತೆ ಬಂದಿಲ್ಲ. ಕಾಂಗ್ರೆಸ್ ನಿಂದ ಬಿಜೆಪಿ ಬರುವ ಅನಿವಾರ್ಯತೆ ಬೇರೆಯವರಿಗೆ ಇದೆ. ನಮ್ಮಪ್ಪನೂ ಜನ ಸಂಘ ಪ್ರತಾಪ್ ಸಿಂಹನೂ ಜನ ಸಂಘದದ ಹೊಸ ಅವತಾರ ಬಿಜೆಪಿಯಲ್ಲಿದ್ದೇನೆ ಎಂದರು.

ಪ್ರತಾಪ ಸಿಂಹ ಬಕೆಟ್‌ ಹಿಡಿಯುವುದು ಯಾವ ಉದ್ದೇಶಕ್ಕೆ: ರಘು ಕೌಟಿಲ್ಯ ಪ್ರಶ್ನೆ

ನಾನು ಸೈದ್ಧಾಂತಿಕ ಬದ್ಧತೆಯಿಂದ ಬಂದವನು. ಕಾಂಗ್ರೆಸ್ ನಿಂದ ನನಗೆ ಯಾರ್ಯರು ಟಿಕೆಟ್ ಆಫರ್ ಮಾಡಿದ್ದರು ಅವರನ್ನು ಕೇಳಿ. ಟಿಕೆಟ್ ಕಳೆದುಕೊಂಡವರು ಯಾರ್ಯರು ಎಲ್ಲಿದ್ದಾರೆ ನೋಡಿ. ಪ್ರತಾಪ್ ಸಿಂಹ ಒಬ್ಬನೇ ಹಿಂದುತ್ವಕ್ಕಾಗಿ ಹೋರಾಟ ಮಾಡುತ್ತಿರುವವನು ಎಂದು ಅವರು ಹೇಳಿದರು. ಸಿದ್ದರಾಮಯ್ಯ ಅವರಿಂದ ಅತಿ ಹೆಚ್ಚು ತೊಂದರೆಗೊಳಗಾದ ಹಳೇ ಮೈಸೂರು ಭಾಗದ ರಾಜಕಾರಣಿ ನಾನು. ವರುಣ ಚುನಾವಣೆ ವೇಳೆ ಹೋರಾಟ ಮಾಡಿದ್ದಕ್ಕೆ ಎರಡು ಕೇಸ್ ಹಾಕಿಸಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಬಂದ ಮೇಲೆ 5 ಕೇಸ್ ಹಾಕಿಸಿದ್ದಾರೆ. ಮೂರು ತಿಂಗಳಿನಲ್ಲಿ 5 ಎಫ್ಐಆರ್ ಯಾವ ಲೀಡರ್ ಗೂ ಹಾಕಿಲ್ಲ. ಸಿದ್ದರಾಮಯ್ಯ ಹಿಂದು ವಿರೋಧಿ, ಜಾತಿವಾದಿ ಎಂದು ಅವರು ವಾಗ್ದಾಳಿ ನಡೆಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Rambha Viral Post: ತಮಿಳುನಾಡಿನ ದೊರೆ ಆಗಿದ್ದಕ್ಕೆ ನಟ ವಿಜಯ್ ಜೋಸೆಫ್‌ಗೆ ನಟಿ ರಂಭಾ ಮಾಡಿರೋ ಪೋಸ್ಟ್ ಏನ್ ಗೊತ್ತಾ?
Yogi Adityanath: 22 ರಾಜ್ಯಗಳಲ್ಲಿ ಬಿಜೆಪಿಯದ್ದೇ ಪಾರುಪತ್ಯ; 'ರಾಷ್ಟ್ರ ಮೊದಲು' ಎಂದ ಯೋಗಿ, ಬೆಂಕಿ ಭಾಷಣ ವೈರಲ್