ಕರಾವಳಿಯ ಪ್ರಭಾವಿ ನಾಯಕ , ಮಾಜಿ ಶಾಸಕ ಯುಆರ್ ಸಭಾಪತಿ ವಿಧಿವಶರಾಗಿದ್ದಾರೆ.
ಉಡುಪಿ (ಮೇ.21): ಉಡುಪಿಯ ಮಾಜಿ ಶಾಸಕ ಯುಆರ್ ಸಭಾಪತಿ (71) ವಿಧಿವಶರಾಗಿದ್ದಾರೆ. ಅಲ್ಪ ಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿದ್ದ ಸಭಾಪತಿ ಅವರು 1994ರಲ್ಲಿ ಎಸ್.ಬಂಗಾರಪ್ಪ ನೇತೃತ್ವದ ಕರ್ನಾಟಕ ಕಾಂಗ್ರೆಸ್ ಪಕ್ಷದಿಂದ ಉಡುಪಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದು ಶಾಸಕರಾಗಿ ಆಯ್ಕೆಯಾಗಿದ್ದರು. 1999 ರಲ್ಲಿ ಕಾಂಗ್ರೆಸ್ ನಿಂದ ಶಾಸಕರಾಗಿದ್ದರು. ಬಂಗಾರಪ್ಪ ಅನುಯಾಯಿಯಾಗಿದ್ದ ಯುಆರ್ ಸಭಾಪತಿ. ಆಸ್ಕರ್ ಫರ್ನಾಂಡಿಸ್ ರಾಜಕೀಯ ಪ್ರವೇಶಕ್ಕೂ ಪ್ರೇರಣೆಯಾಗಿದ್ದರು. ರಾಷ್ಟ್ರೀಯ ಜನತಾದಳ, ಜಾತ್ಯಾತೀತ ಜನತಾದಳದೊಂದಿಗೂ ಗುರುತಿಸಿಕೊಂಡಿದ್ದ ಯುಆರ್ ಸಭಾಪತಿ 80 -90 ರ ದಶಕದ ಕರಾವಳಿಯ ಪ್ರಭಾವಿ ನಾಯಕರಾಗಿದ್ದಾರೆ.
ವೀರಶೈವ-ಲಿಂಗಾಯತ ಲೆಕ್ಕಾಚಾರ ತಿರುಗುಬಾಣ: ಬಿಜೆಪಿಗೆ ಉಲ್ಟಾ ಹೊಡೆದ ತಂತ್ರಗಾರಿಕೆ
undefined
1987ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪರಿಷತ್ ನ ಉದ್ಯಾವರ ಕ್ಷೇತ್ರದ ಸದಸ್ಯರಾಗಿದ್ದ ಸಭಾಪತಿ ಅವರು, ಪರಿಷತ್ ನ ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇದೇ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಉತ್ತರ ವಿಭಾಗದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಕೂಡ ಕರ್ತವ್ಯ ನಿರ್ವಹಿಸಿದ್ದರು.
ನಾನು ಬಂಗಾರಪ್ಪ ಶಿಷ್ಯ, ಎಸ್.ಎಂ. ಕೃಷ್ಣ ಶಿಷ್ಯ ಅಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್
1989ರಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಉಡುಪಿ ಕ್ಷೇತ್ರದಿಂದ ಟಿಕೆಟ್ ಸಿಗದ ಕಾರಣ ಬಂಡಾಯ ಅಭ್ಯರ್ಥಿಯಾಗಿ ಮನೋರಮಾ ಮಧ್ವರಾಜ್ ವಿರುದ್ಧ ಸ್ಪರ್ಧಿಸಿ ಅಲ್ಪ ಮತಗಳ ಅಂತರದಲ್ಲಿ ಪರಾಜಯಗೊಂದಿದ್ದರು. 2004ರ ಚುನಾವಣೆಯಲ್ಲಿ ರಘುಪತಿ ಭಟ್ ವಿರುದ್ಧ ಸೋಲು ಕಂಡಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಗಣ್ಯರು ಸಂತಾಪ ಸೂಚಿಸಿದ್ದಾರೆ.
ಅಪ್ರತಿಮ ಕೃಷ್ಣ ಭಕ್ತ: ಯು ಆರ್ ಸಭಾಪತಿ ಉಡುಪಿಯಲ್ಲಿ ಇದ್ದಾರೆ ಅಂದರೆ ಬೆಳಗಿನ ಜಾವ 4.30 ಕ್ಕೆ ಕೃಷ್ಣಮಠದಲ್ಲಿ ಹಾಜರಾಗುತ್ತಿದ್ದರು. ಅಪ್ರತಿಮ ಕೃಷ್ಣಭಕ್ತರಾಗಿದ್ದ ಯು ಆರ್ ಸಭಾಪತಿ ಅಷ್ಟಮಠಾಧೀಶರೊಂದಿಗೂ ನಿಕಟಬಾಂಧವ್ಯ ಹೊಂದಿದ್ದರು. ಒಂದರ್ಥದಲ್ಲಿ ಆಸ್ಕರ್ ಫರ್ನಾಂಡಿಸ್ ಅವರ ರಾಜಕೀಯ ಪ್ರವೇಶಕ್ಕೂ ಯು.ಆರ್ .ಸಭಾಪತಿ ಪ್ರೇರಣೆಯಾಗಿದ್ದರು. ಎಲ್ ಐ ಸಿ ಉದ್ಯೋಗಿಯಾಗಿದ್ದ ಆಸ್ಕರ್ ಫರ್ನಾಂಡಿಸ್ ಅವರು ಕಾಂಗ್ರೆಸ್ ಮೂಲಕ ಸಕ್ರಿಯ ರಾಜಕೀಯಕ್ಕೆ ಬರಲು ಸಭಾಪತಿ ಸಮಕಾಲೀನ ನಾಯಕನಾಗಿ ಪ್ರೇರಣೆ ನೀಡಿದ್ದರು. ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯ ಪೀಡಿತರಾಗಿದ್ದ ಸಭಾಪತಿ ಬಳಿಕ ಚೇತರಿಸಿಕೊಂಡಿದ್ದರು.