ಕಾಣದ ಕೈಗಳ ಮೂಲಕ ವೀರಶೈವ-ಲಿಂಗಾಯತ ಸಮಾಜ ಮುಖಂಡರನ್ನು ಮೂಲೆ ಗುಂಪು ಮಾಡುವ ಅರಿವು ನಾಯಕರಿಗೆ ಇತ್ತೋ ಇಲ್ಲವೊ ಗೊತ್ತಿಲ್ಲ. ಆದರೆ, ಸಮಾಜದ ಮತದಾರರು ಅರಿತಿದ್ದರು. ವೀರಶೈವ ಸಮಾಜ ಒಗ್ಗಟ್ಟಿಲ್ಲ ಎಂದು ನಂಬಿದ ಪಕ್ಷಗಳಿಗೆ ಅವರು ಹೀಗೂ ಒಗ್ಗಟ್ಟಾಗಬಲ್ಲರು ಎಂದು ಚುನಾವಣೆಯ ಫಲಿತಾಂಶದ ಮೂಲಕ ತೊರಿಸಿರುವುದು ಮಾತ್ರ ಸತ್ಯ.
ಸಿ.ಎ.ಇಟ್ನಾಮಠ
ಅಥಣಿ(ಮೇ.21): ಕಾಂಗ್ರೆಸ್ ಗೆಲುವಿನಲ್ಲಿ ವೀರಶೈವ-ಲಿಂಗಾಯತರ ಪಾತ್ರ ಗಣನೀಯವಾಗಿದೆ ಎಂಬುವುದರಲ್ಲಿ ಎರಡು ಮಾತಿಲ್ಲ. ಬೆಳಗಾವಿ ಜಿಲ್ಲೆಯಲ್ಲಿ ಹಂತ ಹಂತವಾಗಿ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಬಿಜೆಪಿ ಹೈಕಮಾಂಡ್ ಕಾಣದ ಕೈಗಳನ್ನು ಮುಂದಿಟ್ಟುಕೊಂಡು ವೀರಶೈವ-ಲಿಂಗಾಯತ ಸಮಾಜದ ನಾಯಕರಿಗೆ ಹಂತ ಹಂತವಾಗಿ ಕಡೆಗಣನೆ ಮಾಡಲು ಆರಂಭಿಸಿದರು.
undefined
ವೀರಶೈವ-ಲಿಂಗಾಯತ ಸಮಾಜದ ಪ್ರಮುಖ ನಾಯಕರೆನಿಸಿಕೊಂಡ ಡಾ.ಪ್ರಭಾಕರ ಕೋರೆ ಅವರನ್ನು ರಾಜ್ಯಸಭಾ ಸ್ಥಾನಕ್ಕೆ ನಾಮಕರಣ ಮಾಡುವುದನ್ನು ಕೈಬಿಡುವ ಮೂಲಕ ಆರಂಭಿಸಿದ ತಂತ್ರಗಾರಿಕೆ ವಿಧಾನ ಪರಿಷತ್ ಚುನಾವಣೆಯಲ್ಲಿ ಕವಟಗಿಮಠ ಅವರವರೆಗೂ ಮುಂದುವರಿಯಿತು.
ಬೆಳಗಾವಿ: ತಪ್ಪಿದ ಡಿಸಿಎಂ, ಸತೀಶ್ ಜಾರಕಿಹೊಳಿಗೆ ನಾಲ್ಕನೇ ಬಾರಿಗೆ ಮಂತ್ರಿಗಿರಿ..!
ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಅವರಿಗೆ ಟಕೆಟ್ ನೀಡಿ ಅದೇ ಪಕ್ಷದ ಮುಖಂಡರು ಪಕ್ಷ ವಿರೋಧಿ ಚಟುವಟಿಕೆ ಮಾಡಿ ಅಭ್ಯರ್ಥಿ ಸೋಲಿಗೆ ಕಾರಣರಾದರು. ಅಭ್ಯರ್ಥಿಯನ್ನು ಸೋಲಿಸಿದವರ ಮೇಲೆ ಕ್ರಮ ಕೈಗೊಳ್ಳದೇ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸಿದವರಿಗೆ ಬಿಜೆಪಿ ಟಿಕೆಟ್ ಹಂಚುವಲ್ಲಿ ಮಣೆ ಹಾಕಿದೆ ಎಂಬ ಆರೋಪ ಕೂಡ ಕೇಳಿಬಂದಿದೆ.
ಈ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸಂಗಪ್ಪ ಸವದಿ ಅವರಿಗೆ ಅಥಣಿ ಟಿಕೆಟ್ ತಪ್ಪಿಸಿರುವುದು. ಅಲ್ಲದೆ ಮುಂದೆ ಉಮೇಶ ಕತ್ತಿಯ ಅವರ ಸ್ಥಾನದಲ್ಲಿ ರಮೇಶ ಕತ್ತಿ ಬಲಿಷ್ಠರಾಗಬಹುದು ಎಂದು ತಿಳಿದು ಬಿಜೆಪಿ ಆಯ್ಕೆಗೆ ಕಠಿಣವಾದ ಕ್ಷೇತ್ರ ಚಿಕ್ಕೋಡಿಗೆ ರಮೇಶ ಕತ್ತಿಯವರನ್ನು ಸ್ಪರ್ಧೆಗೆ ಇಳಿಸಿದ್ದರು. ಒಂದು ವೇಳೆ ಸೋತರೆ ಅವರನ್ನು ಪಕ್ಷದಲ್ಲಿ ಮೂಲೆ ಗುಂಪು ಮಾಡಬಹುದು ಎಂಬ ದೂರದ ಆಲೋಚನೆ ಕೂಡ ಬಿಜೆಪಿ ನಾಯಕರ ಪಡಸಾಲೆಯಲ್ಲಿ ಒಡಮೂಡಿತ್ತು. ಅಲ್ಲದೆ ಬಿಜೆಪಿ ಮಹಾದೇವಪ್ಪ ಯಾದವಾಡ, ವಿಶ್ವನಾಥ ಪಾಟೀಲನ್ನು ಕಡೆಗಣಿಸುವುದರ ಮೂಲಕ ಬಲಿಷ್ಠ ನಾಯಕರನ್ನು ಮೂಲೆ ಗುಂಪು ಮಾಡುವ ಒಳಸಂಚು ನಡೆದಿತ್ತು ಎಂಬ ಆರೋಪಗಳು ಈಗ ಬಹಿರಂಗವಾಗಿ ಕೇಳಿಬರುತ್ತಿವೆ. ಇದಲ್ಲದೇ ಬಿಜೆಪಿ ಒಂದು ಗುಂಪು ಅಪ್ರತ್ಯಕ್ಷವಾಗಿ ಶಶಿಕಲಾ ಜೊಲ್ಲೆಯವರನ್ನು ಸೋಲಿಸುವ ಸಲುವಾಗಿ ಪ್ರಯತ್ನ ಮಾಡಿದರೂ ಫಲ ನೀಡಲಿಲ್ಲ.
ಒಟ್ಟಾರೆ ಕಾಣದ ಕೈಗಳ ಮೂಲಕ ವೀರಶೈವ-ಲಿಂಗಾಯತ ಸಮಾಜ ಮುಖಂಡರನ್ನು ಮೂಲೆ ಗುಂಪು ಮಾಡುವ ಅರಿವು ನಾಯಕರಿಗೆ ಇತ್ತೋ ಇಲ್ಲವೊ ಗೊತ್ತಿಲ್ಲ. ಆದರೆ, ಸಮಾಜದ ಮತದಾರರು ಅರಿತಿದ್ದರು. ವೀರಶೈವ ಸಮಾಜ ಒಗ್ಗಟ್ಟಿಲ್ಲ ಎಂದು ನಂಬಿದ ಪಕ್ಷಗಳಿಗೆ ಅವರು ಹೀಗೂ ಒಗ್ಗಟ್ಟಾಗಬಲ್ಲರು ಎಂದು ಚುನಾವಣೆಯ ಫಲಿತಾಂಶದ ಮೂಲಕ ತೊರಿಸಿರುವುದು ಮಾತ್ರ ಸತ್ಯ...
ಬೆಳಗಾವಿ ಜಿಲ್ಲೆಗೆ ಸಿಗುತ್ತಾ ಕನಿಷ್ಠ ಮೂರು ಸಚಿವ ಸ್ಥಾನ?
ಇದ್ದೂ ಇಲ್ಲದಂತಾದ ಜಿಲ್ಲಾ ಉಸ್ತುವಾರಿ!
ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಗೋವಿಂದ ಕಾರಜೋಳರನ್ನು ನೇಮಿಸಲಾಗಿತ್ತು. ಒಂದು ದಿನ ಯಾವುದೇ ತಾಲೂಕಿಗೆ ಬರಲಿಲ್ಲ, ಜನರ, ಕಾರ್ಯಕರ್ತರ ಕಷ್ಟಗಳನ್ನು ಕೇಳಲಿಲ್ಲ. ಅಷ್ಟೆಏಕೆ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತ ಕೇಳಿರುವುದು ತುಂಬಾ ಕಡಿಮೆ. ಹೀಗಾಗಿ ವಿಧಾನಸಭಾ ಚುನಾವಣೆ ಪೂರ್ವದಲ್ಲಿಯೇ ಯಾವುದೇ ಪಕ್ಷ ಸಂಘಟನೆ ಸೇರಿದಂತೆ ಕೆಲವು ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಬೇಕಾದ ನಾಯಕರ ನಿರ್ಲಕ್ಷ್ಯಕ್ಕೆ ಚುನಾವಣೆಯಲ್ಲಿ ಬಿಜೆಪಿ ಕಡೆ ಒಲವು ತೋರದಿರುವುದು ಬಿಜೆಪಿ ಕಡಿಮೆ ಸ್ಥಾನಗಳನ್ನು ಪಡೆಯುವಲ್ಲಿನ ಕಾರಣಗಳಲ್ಲಿ ಒಂದು.
ಟಿಕೆಟ್ ಪಡೆಯುವುಕ್ಕೆ ಸುಳ್ಳು ವರದಿ
ಜಿಲ್ಲಾಮಟ್ಟದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ವರದಿ ನೀಡಲು ಬಿಜೆಪಿ ಹೈಕಮಾಂಡ್ ಚುನಾವಣೆ ಪೂರ್ವದಲ್ಲಿ ಆದೇಶ ಮಾಡಿತ್ತು. ಯಾರದೋ ಪ್ರಭಾವಕ್ಕೆ ಒಳಗಾಗಿ ಆಯ್ಕೆ ಆಗುವ ಅಭ್ಯರ್ಥಿಗಳ ವಿರುದ್ಧವೇ ಆಯ್ಕೆ ಆಗುವುದಿಲ್ಲ ಎಂಬ ಸುಳ್ಳು ವರದಿ ನೀಡಿದ್ದು ಒಂದು ಕಾರಣವಾಗಿದೆ ಎಂದು ಈಗ ಬಹುಚರ್ಚಿತ ವಿಷಯವಾಗಿದೆ. ಇದು ದೆಹಲಿ ಅಂಗಳದಲ್ಲಿ ಸುಳ್ಳು ವರದಿ ಎಂಬುವುದು ಫಲಿತಾಂಶ ಬಂದ ನಂತರ ಅರಿವೆ ಬಂದಿರುವುದು ವಿಪರ್ಯಾಸವೇ ಸರಿ.