ಜನರ ಮಧ್ಯೆ ಇರುವುದು ಕಾಂಗ್ರೆಸ್ಸಿಗೆ ಅಪರಾಧ ಅನಿಸುತ್ತೆ: ಸಿ.ಟಿ.ರವಿ

By Kannadaprabha News  |  First Published Aug 27, 2023, 10:43 AM IST

ಜನರ ಜೊತೆ ಇರುವುದು ನಮಗೆ ಸಂತೋಷ ತರುವ ಸಂಗತಿ. ಆದರೆ, ಜನಸಾಮಾನ್ಯರ ಜೊತೆ ಇರುವುದು ಕಾಂಗ್ರೆಸಿಗರಿಗೆ ಕೀಳರಮೆ, ಅಪರಾಧ ಅನಿಸುತ್ತೆ. ಒಡ್ಡೋಲಗದ ಮೂಲಕವೇ ತಮ್ಮನ್ನು ಗುರುತಿಸಿಕೊಳ್ಳಲು ಕಾಂಗ್ರೆಸ್ಸಿಗರು ಪ್ರಯತ್ನಿಸುತ್ತಾರೆ ಎಂದು ಮಾಜಿ ಸಚಿವ ಸಿ.ಟಿ.ರವಿ ವ್ಯಂಗ್ಯವಾಡಿದರು. 
 


ಚಿಕ್ಕಮಗಳೂರು (ಆ.27): ಜನರ ಜೊತೆ ಇರುವುದು ನಮಗೆ ಸಂತೋಷ ತರುವ ಸಂಗತಿ. ಆದರೆ, ಜನಸಾಮಾನ್ಯರ ಜೊತೆ ಇರುವುದು ಕಾಂಗ್ರೆಸಿಗರಿಗೆ ಕೀಳರಮೆ, ಅಪರಾಧ ಅನಿಸುತ್ತೆ. ಒಡ್ಡೋಲಗದ ಮೂಲಕವೇ ತಮ್ಮನ್ನು ಗುರುತಿಸಿಕೊಳ್ಳಲು ಕಾಂಗ್ರೆಸ್ಸಿಗರು ಪ್ರಯತ್ನಿಸುತ್ತಾರೆ ಎಂದು ಮಾಜಿ ಸಚಿವ ಸಿ.ಟಿ.ರವಿ ವ್ಯಂಗ್ಯವಾಡಿದರು. 

ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಭೇಟಿ ನೀಡಿರುವ ಸಂದರ್ಭದಲ್ಲಿ ಬಿಜೆಪಿ ಶಾಸಕರ ಬಗ್ಗೆ ಟ್ವಿಟ್‌ ಮೂಲಕ ಕಾಂಗ್ರೆಸ್‌ ವ್ಯಂಗ್ಯವಾಡಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಚಂದ್ರಯಾನ 140 ಕೋಟಿ ಜನರಿಗೆ ಸೇರಿದ್ದು ಎಂದು ಸ್ವತಃ ಪ್ರಧಾನಿಯೇ ಹೇಳಿದ್ದಾರೆ. ಈ 140 ಕೋಟಿಯಲ್ಲಿ ಕಾಂಗ್ರೆಸ್‌ನವರೂ ಇದ್ದಾರೆ ಎಂದು ಭಾವಿಸಿದ್ದೇನೆ. ಇಲ್ಲ ಅಂದುಕೊಂಡರೆ ಅದು ಅವರ ದುರ್ದೈವ ಎಂದರು. ಚಂದ್ರಯಾನ-3 ಬಗ್ಗೆ ದೇಶವೇ ಸಂಭ್ರಮಿಸಿದೆ. ಇದು ಒಂದು ಪಕ್ಷಕ್ಕೆ ಸೀಮಿತವಾದುದಲ್ಲ, ಮೋದಿ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಲು ಬಂದಿದ್ದರು. ನಮ್ಮವರು ಜನರ ಜೊತೆ ಇದ್ದು ಪ್ರಧಾನಿಯನ್ನು ಸ್ವಾಗತಿಸಿದ್ದಾರೆ ಎಂದಷ್ಟೆಹೇಳಿದರು.

Latest Videos

undefined

ನಾನು ಇಂಧನ ಸಚಿವನಾಗಿದ್ದಾಗ ಸೋಲಾರ್‌ ಪಾರ್ಕ್ ಮಾಡಿ ವಿಶ್ವದ ಗಮನ ಸೆಳೆದಿದ್ದೆ: ಡಿಕೆಶಿ

ಕಾಂಗ್ರೆಸ್‌ಗೆ ಹೋದವರಿಗೆ ಮರ್ಯಾದೆ ಸಿಗೋಲ್ಲ: ಪಕ್ಷ ಸೇರುವವರನ್ನು ಮರ್ಯಾದೆ ಕೊಟ್ಟು ಕರೆದುಕೊಳ್ಳುತ್ತಿಲ್ಲ. ಬಂದವರು ಲಾಸ್ಟ್‌ ಬೆಂಚ್‌ ಅಂತ ಅವರೇ ಹೇಳಿದ್ದಾರೆ. ಹಾಗಾಗಿ ಮರ್ಯಾದೆ ಇರೋರು ಯಾರೂ ಕಾಂಗ್ರೆಸ್‌ ಸೇರುವುದಿಲ್ಲ. ಹೋಗುವವರಿಗೆ ನಾನೇನೂ ಹೇಳಲ್ಲ. ಯಾವ ಭಯಕ್ಕೆ ಹೋಗುತ್ತಿದ್ದಾರೋ ಗೊತ್ತಿಲ್ಲ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು. ನಮ್ಮಪ್ಪನೂ ಬಿಜೆಪಿ ಅಲ್ಲ. ನಮ್ಮಪ್ಪ ದೇವೇಗೌಡರ ಪಾರ್ಟಿ ಸೇರಿಕೋ ಎಂದಿದ್ದರು. ನಾವು ಯಡಿಯೂರಪ್ಪನ ಹೋರಾಟ ನೋಡಿ ಬಂದವರು. 

ಅವರ ಜೊತೆ ಪಕ್ಷ ಕಟ್ಟಿದ್ದೇವೆ. ಪಕ್ಷ ಉಳಿಸಿಕೊಂಡು ಹೋಗುವ ಕೆಲಸ ಮಾಡುತ್ತೇವೆ. ಈಗ ಹೋಗುತ್ತೇವೆ ಅಂತ ಹೋದರೆ ಅವರಿಗೂ ಮರ್ಯಾದೆ ಸಿಗುವುದಿಲ್ಲ ಎಂದರು. ಪಕ್ಷ ಬಿಡುತ್ತಿರುವವರ ಬಗ್ಗೆ ವದಂತಿಗಳು ಹರಡುತ್ತಿವೆ. ಆ ವಿಚಾರವಾಗಿ ನಾನು ಮುನಿರತ್ನ, ಕೆ.ಗೋಪಾಲಯ್ಯ, ಎಸ್‌.ಟಿ.ಸೋಮಶೇಖರ್‌ ಜೊತೆ ಮಾತನಾಡಿದ್ದೇನೆ. ಅವರು ಸುಳ್ಳುಸುದ್ದಿ ಎಂದಿದ್ದಾರೆ. ವದಂತಿ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ. ಹಾಗಾಗಿ ಯಾರೂ ಕಾಂಗ್ರೆಸ್‌ ಸೇರುತ್ತಿಲ್ಲ ಎಂದರು.

ನಾಯಕತ್ವ ಹಸ್ತಾಂತರಿಸಲಾಗದು: ಬಿಜೆಪಿಗೆ ನಾಯಕತ್ವದ ಕೊರತೆ ಎಂಬ ಕಾಂಗ್ರೆಸ್‌ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ, ನಾಯಕತ್ವ ಎನ್ನುವುದು ಸನ್ನಿವೇಶವನ್ನು ಎದುರಿಸಿ ನಿಲ್ಲುವುದು. ಅಧಿಕಾರ ಹಸ್ತಾಂತರ ಮಾಡಬಹುದು, ನಾಯಕತ್ವ ಹಸ್ತಾಂತರ ಮಾಡಲು ಆಗುವುದಿಲ್ಲ. ನಾಯಕತ್ವ ಜನರ ನಡುವೆ ಬರುತ್ತದೆ. ಕಾಂಗ್ರೆಸ್‌ನಲ್ಲಿ ಹೊಸ ಹೊಸ ಹೆಸರಿಟ್ಟು ಒಬ್ಬರನ್ನ ರೀ-ಲಾಂಚ್‌ ಮಾಡುತ್ತಲೇ ಇದ್ದಾರೆ. ಆದರೆ, ಇನ್ನು ಕೂಡ ಲಾಂಚ್‌ ಆಗಲು ಆಗುತ್ತಿಲ್ಲ. ಯಡಿಯೂರಪ್ಪ, ದೇವೇಗೌಡರು ಜನನಾಯಕರು. ಅವರೆಲ್ಲಾ ಜನರ ನಡುವೆ ನಾಯಕರಾಗಿ ಬೆಳೆದು ಬಂದವರು ಎಂದು ನುಡಿದರು.

ನಮ್ಮ ಹಣ್ಣನ್ನು ಬೇರೆಯವರಿಗೆ ಬಿಡಬಾರದು: ಎಸ್‌ಟಿಎಸ್‌ ಬಗ್ಗೆ ಡಿಕೆಶಿ ಮಾರ್ಮಿಕ ನುಡಿ

ಶ್ವೇತಪತ್ರದ ಅವಶ್ಯಕತೆ ಇಲ್ಲ: ಕಾಂಗ್ರೆಸ್‌ ಸರ್ಕಾರಕ್ಕೆ ಶ್ವೇತ ಪತ್ರದ ಅವ್ಯಶ್ಯಕತೆ ಇಲ್ಲ. ಜಿಲ್ಲಾಧಿಕಾರಿ ಕಾರಿಗೆ ಡೀಸೆಲ ಇಲ್ಲ. ಮಕ್ಕಳಿಗೆ ಮೊಟ್ಟೆಇಲ್ಲ. ಸಾರಿಗೆ ಸಿಬ್ಬಂದಿಗೆ ಸಂಬಳವೇ ಇಲ್ಲ. ಇನ್ನು ಎಣ್ಣೆ ರೇಟ್‌ ಹೇಗಿದೆ ಅಂತ ಕುಡಿಯುವವರಿಗೆ ಗೊತ್ತು, ನನಗೆ ಗೊತ್ತಿಲ್ಲ. ಮಧ್ಯಮ ವರ್ಗದವರಿಗೆ ಈ ಸರ್ಕಾರ ಬರೆ ಮೇಲೆ ಬರೆ ಹಾಕ್ತಿದೆ. 200 ಯೂನಿಟ್‌ ಉಚಿತ ವಿದ್ಯುತ್‌ ಎಂದರು.

click me!