ಕುರ್ಚಿ ಉಳಿಸಿಕೊಳ್ಳಲು ಸಿದ್ದು, ಕಿತ್ತುಕೊಳ್ಳಲು ಡಿಕೆಶಿ ಸಭೆ ಮೇಲೆ ಸಭೆ: ಸಿ.ಟಿ.ರವಿ

By Kannadaprabha NewsFirst Published Nov 8, 2023, 11:03 PM IST
Highlights

ಮುಖ್ಯಮಂತ್ರಿ ಸಿದ್ದರಾಮಯ್ಯನವರೆ ನಿಮ್ಮ ಖಜಾನೆ ಖಾಲಿಯಾಗಿದ್ಯಾ, ರಾಜ್ಯ ಸರ್ಕಾರ ದಿವಾಳಿಯಾಗಿದ್ಯಾ, ಹಾಗಿದ್ದರೆ ಡಿಕ್ಲೇರ್ ಮಾಡಿ, ಬ್ರೇಕ್ ಫಾಸ್ಟ್, ಡಿನ್ನರ್ ಪಾರ್ಟಿ ಮೀಟಿಂಗ್‌ನಿಂದ ಹೊರಬನ್ನಿ. 

ಚಿಕ್ಕಬಳ್ಳಾಪುರ/ ಶಿಡ್ಲಘಟ್ಟ: ಮುಖ್ಯಮಂತ್ರಿ ಸಿದ್ದರಾಮಯ್ಯನವರೆ ನಿಮ್ಮ ಖಜಾನೆ ಖಾಲಿಯಾಗಿದ್ಯಾ, ರಾಜ್ಯ ಸರ್ಕಾರ ದಿವಾಳಿಯಾಗಿದ್ಯಾ, ಹಾಗಿದ್ದರೆ ಡಿಕ್ಲೇರ್ ಮಾಡಿ, ಬ್ರೇಕ್ ಫಾಸ್ಟ್, ಡಿನ್ನರ್ ಪಾರ್ಟಿ ಮೀಟಿಂಗ್‌ನಿಂದ ಹೊರಬನ್ನಿ. ಕೆಲವರು ಕುರ್ಚಿ ಉಳಿಸಿಕೊಳ್ಳಲು ಸಭೆ ಮಾಡಿದ್ರೆ, ಇನ್ನೊಬ್ಬರು ಕುರ್ಚಿ ಪಡೆದುಕೊಳ್ಳಲು ಸಭೆ ಮಾಡ್ತಿದ್ದಾರೆ ಎಂದು ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಟೀಕಿಸಿದರು. ಸಿ.ಟಿ.ರವಿ ನೇತೃತ್ವದ ರಾಜ್ಯ ಬಿಜೆಪಿ ಬರ ಅಧ್ಯಯನ ತಂಡದಿಂದ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲೂಕಿನ ಮರಳಕುಂಟೆ ಮತ್ತು ಶಿಡ್ಲಘಟ್ಟ ತಾಲೂಕಿನ ಇದ್ದಲೋಡು ಗ್ರಾಮಗಳಲ್ಲಿ ಪ್ರವಾಸ ಮಾಡಿ, ಬರ ವೀಕ್ಷಣೆ ನಡೆಸಿದ ನಂತರ ಶಿಡ್ಲಘಟ್ಟ ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,

ಪಾಪರ್‌ ಆಗಿದ್ದರೆ ಪ್ರಕಟಿಸಿ: ಕೇಂದ್ರದತ್ತ ಬೊಟ್ಟು ಮಾಡೋ ಸಿದ್ದರಾಮಯ್ಯನವರೇ ರಾಜ್ಯದ ಬೊಕ್ಕಸ ಖಾಲಿ ಆಗಿದೆಯಾ, ಹಣ ಇದ್ದರೇ ಇದೇ ಅಂತಾ ಹೇಳಲಿ, ಇಲ್ಲವಾದರೇ ಪಾಪರ್ ಆಗಿದ್ದೇವೆ ಅಂತಾ ಹೇಳಿದರೆ ಕೂಡಲೇ ಕೇಂದ್ರದಿಂದ ಬರ ಪರಿಹಾರಕ್ಕೆ ಹಣ ಕೊಡಿಸುತ್ತೇವೆ ಎಂದರು. ನಮ್ಮ ರಾಜ್ಯ ಸರ್ಕಾರದ ಕೈನಲ್ಲಿ ಕುಡಿಯೋ ನೀರು ಕೊಡಲು ಆಗುತ್ತಿಲ್ಲ, ಜನರ ಬವಣೆಗೆ ಸ್ಪಂದಿಸದೇ, ನಿಮ್ಮ ಪಕ್ಷದ ಖಜಾನೆ ಭರ್ತಿ ಮಾಡಲು ಮಗ್ನರಾಗಿದ್ದೀರಿ ಅನ್ನಿಸುತ್ತಿದೆ. ಬಿಜೆಪಿ ಬರ ಅಧ್ಯಯನ ಮಾಡಿದ ಮೇಲೆ ಕಾಂಗ್ರೆಸ್ ಸರ್ಕಾರ ಎಚ್ಚೆತ್ತುಕೊಂಡಿದೆ. ಬರದ ವೇಳೆ ಮುಖ್ಯ ಮಂತ್ರಿ ಕೊಪ್ಪಳದಲ್ಲಿ ಡ್ಯಾನ್ಸ್ ಮಾಡುತ್ತಿದ್ದಾರೆ. ತಮ್ಮ ಡ್ಯಾನ್ಸ್ ನಲ್ಲಿ ತಾವು ತಾಳ ತಪ್ಪದೆ ನೃತ್ಯ ಮಾಡಿದ್ದೀರಿ.ಆದರೆ ನಿಮ್ಮ ಸರ್ಕಾರ 5 ತಿಂಗಳಲ್ಲೆ ತಾಳ ತಪ್ಪಿದೆ. ನಿಮ್ಮ ಡ್ಯಾನ್ಸ್ ನೋಡಿ ಸಂತಸಪಡುವ ಸ್ಥಿತಿಯಲ್ಲಿ ರಾಜ್ಯದ ಜನತೆ ಇಲ್ಲ, ಸರ್ಕಾರ 135 ಶಾಸಕರ ಬೆಂಬಲ ಇದ್ದರೂ ಸರ್ಕಾರಕ್ಕೆ ಅಭದ್ರತೆ ಕಾಡುತ್ತಿದೆ ಎಂದರು. 

ಪ್ರಧಾನಿ ಮೋದಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಲಿ: ಸಚಿವ ಎಂ.ಸಿ.ಸುಧಾಕರ್

ರಾಜ್ಯದಲ್ಲಿ ಹಸಿರು ಬರ: ಬರ ಪೀಡಿತ ಜಿಲ್ಲೆಯಲ್ಲಿ ಹಸಿರು ಬರ ಇದೆ ನೋಡಕ್ಕೆ ಹಸಿರು ಕಾಣುತ್ತೆ ಬೆಳೆ ಇಲ್ಲ. 5 ಗಂಟೆ ವಿದ್ಯುತ್ ಕೊಡ್ತೀನಿ ಅಂದವರು ಕೇವಲ 3 ಗಂಟೆ ಕೊಡ್ತಿದ್ದಾರೆ. ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಇದರಿಂದ ರೈತರ ಪಂಪ್ ಸೆಟ್, ಟಿಸಿಗಳು ಸುಟ್ಟು ಹೋಗುತ್ತಿವೆ, ಟಿಸಿ ಬದಲಿಸಲು ಹೇಳಿದರೆ 2 ಲಕ್ಷ ಹಣವನ್ನು ಡೆಪಾಸಿಟ್‌ ಕೇಳ್ತಾರೆ ಎಂದು ರೈತರು ತಿಳಿಸಿದ್ದಾರೆ. ರೈತರ ಸ್ಪಂದಿಸದೆ ಹೋದರೆ ನಾವು ಬೀದಿಗಿಳಿದು ಹೋರಾಟ ಮಾಡುತ್ತೇವೆಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಎಲ್ಲದಕ್ಕೂ ಕೇಂದ್ರದತ್ತ ತೋರಿಸ್ತಾರೆ: ರಾಜ್ಯ ಸರ್ಕಾರ ಕೇಂದ್ರದಿಂದ 17 ಸಾವಿರ ಕೋಟಿ ಕೇಳಿದೆ. ಆದರೆ ಮೊದಲು ರಾಜ್ಯ ಸರ್ಕಾರ 5000 ಕೋಟಿ ಬಿಡುಗಡೆ ಮಾಡಲಿ ನಂತರ ಕೇಂದ್ರದಿಂದ ಹಣ ಬರುತ್ತದೆ. ನಿಮ್ಮ ತಪ್ಪನ್ನು ಮುಚ್ಚಿ ಹಾಕಲು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದೀರಿ. ರಾಜ್ಯದ ಖಜಾನೆಯನ್ನು ಜನರಿಗೆ ಬಳಸದೆ ಪಕ್ಷದ ಖಜಾನೆ ತುಂಬಿಸಲು ಹೊರಟಿದ್ದಾರೆ. ಸರ್ಕಾರದ ಕೀಲಿ ಕೈಯನ್ನು ಎಐಸಿಸಿಯ ವೇಣುಗೋಪಾಲ್‌ ಮತ್ತು ಸುರ್ಜೇವಾಲ ಕೈಗೆ ಕೊಟ್ಟಿದ್ದೀರಿ. ಇದರ ಪರಿಣಾಮ ಏನೂ ಅಂತ ಅರಿತಿದ್ದೀರಾ. ಮೈಸೂರು ದಸರಾದಲ್ಲಿ ಕಲಾವಿದರಿಗೆ ಸರ್ಕಾರ ಕೊಟ್ಟ ಚೆಕ್ ಬೌನ್ಸ್ ಆಗಿದೆ. ಇದರಿಂದ ರಾಜ್ಯದ ಮಾನ ಹರಾಜಾಗಿದೆ ಎಂದರು.

ಡಿಕೆಶಿ ಕಾಂಗ್ರೆಸ್‌ ಬಿಟ್ಟು ಬರಲಿ: ಚಿಕ್ಕಬಳ್ಳಾಪುರ ತಾಲೂಕು ಮರಳುಕುಂಟೆ ಗ್ರಾಮದಲ್ಲಿ ಬರ ಪರಿಶೀಲಿಸಿದ ನಂತರ ಡಿ.ಕೆ. ಶಿವಕುಮಾರ್ ಸಿಎಂ ಆಗುವುದಾದರೆ ಜೆಡಿಎಸ್ ಶಾಸಕರ ಬೆಂಬಲ ಎಂಬ ಎಚ್ಡಿಕೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿ.ಟಿ.ರವಿ ಅವರು, ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಬಿಟ್ಟು ಬಂದರೆ ಆಗ ಬಿಜೆಪಿ ಯೋಚನೆ ಮಾಡುತ್ತದೆ. ಕಾಂಗ್ರೆಸ್ ನಲ್ಲಿ ಅಜ್ಜೀರ್ಣವಾಗುವಷ್ಟು ಶಾಸಕರಿದ್ದಾರೆ. ಇದು ಸಾಲದು ಎಂಬಂತೆ ಬೇರೆ ಬೇರೆ ಪಕ್ಷಗಳ ಬುಟ್ಟಿಗೂ ಕೈ ಹಾಕಿದ್ದೇವೆ ಅಂತಿದ್ದಾರೆ. ಕಾಂಗ್ರೆಸ್‌ಗೆ ಯಾಕೆ ಬೇರೆ ಪಕ್ಷದ ಶಾಸಕರ ಬೆಂಬಲ ಬೇಕು ಎಂದರು.

ಕೇಂದ್ರದ ಕಡೆ ಕೈ ತೋರುವ ಬದಲು ತಮ್ಮ ಕೆಲಸ ಮಾಡಲಿ: ಸಿಎಂಗೆ ಎಚ್‌ಡಿಕೆ ತಿರುಗೇಟು

ಗೃಹ ಸಚಿವರಿಗೆ ತಿರುಗೇಟು: ಅಯೋಧ್ಯೆಯ ಶ್ರೀರಾಮ ಮಂದಿರ ಯಾತ್ರೆಗೆ ಜನರನ್ನು ಕಳುಹಿಸುವ ವಿಚಾರಕ್ಕೆ ಗೃಹ ಸಚಿವ ಪರಮೇಶ್ವರ್‌ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಟಿ ರವಿ, ಹಜ್ ಗೆ ಕಳುಹಿಸಿದ್ರೆ ಜಾತ್ಯತೀತ ಆಗುತ್ತೆ, ಶ್ರೀರಾಮ ಮಂದಿರಕ್ಕೆ ಕಳುಹಿಸಿದ್ರೆ ಜಾತಿಯತೆ ಆಗುತ್ತಾ. ಚುನಾವಣೆಯಲ್ಲಿ ಕಾಂಗ್ರೆಸ್ಸಿಗರು ಉದ್ದುದ್ದ ನಾಮ ಜೈಶ್ರಿರಾಮ ಘೋಷಣೆ ಎಲ್ಲಾ ಮಾಡ್ತಾರೆ. ನಂತರ ಎಲ್ಲಾ ಮರೆತು ಬಿಡುತ್ತಾರೆ. ಹಿಂದೂಗಳಲ್ಲಿ ಸರ್ವಭಾವ ಸಮಭಾವ ಇದೆ. ತಾಲಿಬಾನಿಗಳು, ಹಮಾಸ್ ಹತ್ತಿರ ಸರ್ವಧರ್ಮ ಸಮಭಾವ ಇಲ್ಲ ಎಂದು ತಿರುಗೇಟು ನೀಡಿದರು. ಈ ಸಂದರ್ಭದಲ್ಲಿ ಸಂಸದ ಎಸ್. ಮುನಿಸ್ವಾಮಿ, ವಿಧಾನ ಪರಿಷತ್‌ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾ ಅಧ್ಯಕ್ಷ ರಾಮಲಿಂಗಪ್ಪ, ಸೀಕಲ್ಲು ರಾಮಚಂದ್ರಗೌಡ, ವೇಣುಗೋಪಾಲ್, ಮುನಿರಾಜು, ಸುರೇಂದ್ರಗೌಡ, ಮತ್ತಿತರರು ಇದ್ದರು.

click me!