ನಾನೂ ರಾಮಭಕ್ತ, ಕರಸೇವಕ ನನ್ನನ್ನೂ ಬಂಧಿಸಿ: ಪೊಲೀಸ್ ಠಾಣೆ ಮೆಟ್ಟಿಲಲ್ಲಿ ಕುಳಿತು ಸಿ.ಟಿ.ರವಿ ಪ್ರತಿಭಟನೆ

By Govindaraj S  |  First Published Jan 4, 2024, 7:11 PM IST

ನಾನೂ ರಾಮಭಕ್ತ, ಕರಸೇವಕ ನನ್ನನ್ನೂ ಬಂಧಿಸಿ ಎಂದು ಮಾಜಿ ಶಾಸಕ ಸಿ.ಟಿ.ರವಿ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ಮೆಟ್ಟಿಲಲ್ಲಿ ಕುಳಿತು ಕೆಲ ಕಾಲ ಧರಣಿ ನಡೆಸಿದರು. 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಜ.04): ನಾನೂ ರಾಮಭಕ್ತ, ಕರಸೇವಕ ನನ್ನನ್ನೂ ಬಂಧಿಸಿ ಎಂದು ಮಾಜಿ ಶಾಸಕ ಸಿ.ಟಿ.ರವಿ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ಮೆಟ್ಟಿಲಲ್ಲಿ ಕುಳಿತು ಕೆಲ ಕಾಲ ಧರಣಿ ನಡೆಸಿದರು. ಹುಬ್ಬಳ್ಳಿಯ ಕರಸೇವಕ ಶ್ರೀಕಾಂತ್ ಪೂಜಾರಿ ಅವರನ್ನು 31 ವರ್ಷಗಳ ಬಳಿಕೆ ಬಂಧಿಸಿರುವ ರಾಜ್ಯ ಕಾಂಗ್ರೆಸ್ ಸಕಾರದ ಕ್ರಮವನ್ನು ಖಂಡಿಸಿ ಠಾಣೆ ಎದುರು ದಿಢೀರ್ ಪ್ರತಿಭಟಿಸಿದ ರವಿ, ಅಲ್ಲಿಯೇ ಕುಳಿತು ಶ್ರೀರಾಮ ನಾಪ ಜಪಿಸಿದ್ದಲ್ಲದೆ, ಭಜನೆಯನ್ನೂ ಮಾಡಿದರು.

Tap to resize

Latest Videos

undefined

ಮಳೆಯಲ್ಲೇ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ: ಕೆಲವೇ ನಿಮಿಷದಲ್ಲಿ ಬಿಜೆಪಿಯ ಹಲವು ಮುಖಂಡರು, ಕಾರ್ಯಕರ್ತರು ಠಾಣೆ ಬಳಿ ಜಮಾಯಿಸಿ ಗೇಟ್ ಬಳಿ ಮಳೆಯಲ್ಲೇ ಪ್ರತಿಭಟನೆ ನಡೆಸಿದರು. ನಾವೂ ರಾಮ ಭಕ್ತರು, ನಾವೂ ಕರಸೇವಕರೇ ನಮ್ಮನ್ನೂ ಬಂಧಿಸಿ ಎಂದು ಘೋಷಣೆಗಳನ್ನು ಕೂಗಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶ್ರೀರಾಮನ ವಿರೋಧಿಗಳು, ಹಿಂದೂಗಳ ವಿರೋಧಿಗಳು ಎಂದು ಆರೋಪಿಸಿದರು.

ಸಿದ್ದರಾಮಯ್ಯ ಪೂಜೆ ಮಾಡ್ಕೊಳ್ಳಿ: ಎಚ್‌.ಆಂಜನೇಯಗೆ ಈಶ್ವರಪ್ಪ ತಿರುಗೇಟು

ಠಾಣೆಗೆ ನುಗ್ಗುವ ಯತ್ನ: ಹೆಚ್ಚುವರಿ ಪೊಲೀಸ್ ಮುಖ್ಯಾಧಿಕಾರಿ ಕೃಷ್ಣಮೂರ್ತಿ ಸ್ಥಳಕ್ಕಾಗಮಿಸಿ ಸಿ.ಟಿ.ರವಿ ಅವರ ಮನವೊಲಿಸುವ ಪ್ರಯತ್ನ ನಡೆಸಿದರಾದರೂ ಪ್ರಯೋಜನವಾಗಲಿಲ್ಲ. ಅರ್ಧಗಂಟೆ ಬಳಿಕ ರವಿ ಅವರನ್ನು ಪೊಲೀಸರು ಠಾಣೆಯ ಒಳಕ್ಕೆ ಕರೆದೊಯ್ಯರು.ಇದರೊಂದ ರೊಚ್ಚಿಗೆದ್ದ ಕಾರ್ಯಕರ್ತರು ಏರುಧ್ವನಿಯಲ್ಲಿ ಘೋಷಣೆ ಹಾಕುತ್ತಾ ಗೇಟ್ ಬಳಿಯಿಂದ ಆಗಮಿಸಿ ಠಾಣೆಗೆ ನುಗ್ಗಲು ಪ್ರಯತ್ನಿಸಿದರು. ಆದರೆ ಅಲ್ಲಿದ್ದ ಪೊಲೀಸ್ ಸಿಬ್ಬಂದಿ ಪ್ರತಿಭಟನಾಕಾರರನ್ನು ತಡೆದರು.ಕಾರ್ಯಕರ್ತರೆಲ್ಲರೂ ಸ್ಥಳದಲ್ಲೇ ಕುಳಿತು ಘೋಷಣೆಗಳನ್ನು ಮುಂದುವರಿಸಿದರು. ಸಿ.ಟಿ.ರವಿ ಅವರನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು. ಈ ವೇಳೆ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ನೂಕಾಟ, ತಳ್ಳಾಟ ಉಂಟಾಯಿತು.ಅಂತಿಮವಾಗಿ ಪೊಲೀಸರು ಸಿ.ಟಿ.ರವಿ ಅವರನ್ನು ಠಾಣೆಯಿಂದ ಹೊರಕ್ಕೆ ಕರೆತಂದರು. ನಂತರ ಠಾಣೆ ಮುಂದೆ ಜಮಾಯಿಸಿದ್ದ ಕಾರ್ಯಕರ್ತರನ್ನು ಅಲ್ಲಿಂದ ಚದುರಿದರು.

ರಾಮ ಭಕ್ತರಿಗೆ ಅಪಮಾನ: ರಾಮ ಭಕ್ತರಿಗೆ ಅಪಮಾನ ಮಾಡುವ ದುರುದ್ದೇಶ ರಾಜ್ಯ ಸರ್ಕಾರದ್ದಾಗಿದೆ. ಅಯೋಧ್ಯೆಯ ಕರಸೇವಕರನ್ನೆಲ್ಲಾ ಬಂಧಿಸುವುದು ಈ ಸರ್ಕಾರದ ನೀತಿಯಾಗಿದ್ದರೆ, ನಾನೂ ಕೂಡ ಕರ ಸೇವೆಯಲ್ಲಿ ಭಾಗಿಯಾದವನು. ಹಾಗಾಗಿ ನನ್ನನ್ನೂ ಬಂಧಿಸಿ ಎಂದು ಧರಣಿ ನಡೆಸುತ್ತಿದ್ದೇನೆ ಎಂದು ಮಾಜಿ ಶಾಸಕ ಸಿ.ಟಿ.ರವಿ ತಿಳಿಸಿದರು.ನಗರ ಠಾಣೆ ಎದುರು ಮಾದ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಶ್ರೀಕಾಂತ್ ಪೂಜಾರಿ ಎಂಬ ಶ್ರೀರಾಮ ಭಕ್ತ, ಕರಸೇವಕನನ್ನ 31 ವರ್ಷಗಳ ನಂತರ ಹಳೇ ಕೇಸ್ ನೆಪದಲ್ಲಿ ಬಂಧಿಸಿರುವುದರಲ್ಲಿರಾಜ್ಯ ಸರ್ಕಾರದ ದುರುದ್ದೇಶ ಇದೆ. ಮಂದಿರ ನಿರ್ಮಾಣದ ಕಾರ್ಯ ಮುಗಿಯುವ ಹಂತಕ್ಕೆ ಬಂದಿರುವುದು ನಮಗೆ ಜೀವನದ ಆನಂದದ ಸಂಗತಿ. 

2017ರ ದತ್ತಪೀಠ ಆವರಣದ ಗೋರಿ ಹಾನಿ ಪ್ರಕರಣ: 14 ಹಿಂದು ಕಾರ್ಯಕರ್ತರಿಗೆ ಕೋರ್ಟ್ ಸಮನ್ಸ್!

ಇಂತಹ ಸಂದರ್ಭದಲ್ಲಿ ಕರ ಸೇವಕರನ್ನು ಬಂಧಿಸುತ್ತಿರುವುದು ಸರಿಯಲ್ಲ ಎಂದರು. ಶ್ರೀಕಾಂತ್ ಪೂಜಾರಿ ದೇಶಬಿಟ್ಟು ಹೋಗಿರಲಿಲ್ಲ. ಅವರ ಮೇಲೆ ಪ್ರಕರಣ ದಾಖಲಾಗಿರುವುದು ಸಹ ಅವರಿಗೆ ಗೊತ್ತಿರಲಿಲ್ಲ. ಅವರು ಹುಬ್ಬಳ್ಳಿಯಲ್ಲೇ ಇದ್ದರು. ದೇಶ ಬಿಟ್ಟು ಹೋದವರಾಗಿದ್ದರೆ ಬಂದ ಕೂಡಲೇ ಬಂದಿಸಿದ್ದೇವೆ ಎಂದು ಹೇಳಬಹುದಾಗಿತ್ತು ಎಂದರು. ಅಯೋಧ್ಯೆ ಮಂದಿರ ನಿರ್ಮಾಣ ಅಂತಿಮ ಕ್ಷಣದಲ್ಲಿ ಉದ್ಘಾಟನೆಗೆ ಮನೆ ಮನೆಗೆ ಶ್ರೀರಾಮ ಮಂತ್ರಾಕ್ಷತೆ ತಲುಪುತ್ತಿರುವ ಸಂದರ್ಭದಲ್ಲಿ ರಾಮ ಭಕ್ತ ಕರಸೇವಕನನ್ನು ಬಂಧಿಸಿರುವ ಹಿನ್ನೆಲೆ ದುರುದ್ದೇಶದ್ದು ಅನ್ನಿಸಿದೆ. ಹೀಗಾಗಿ ರಾಮ ಕರ ಸೇವಕನನ್ನು ಬಂಧಿಸುವುದಾದರೆ ನಾನೂ ಕರಸೇವಕ ನನ್ನನ್ನೂ ಬಂಧಿಸಿ ಎಂದು ಹೇಳಿ ಠಾಣೆಗೆ ಬಂದಿದ್ದೇನೆ ಎಂದರು.ನಾವು ಪ್ರಭು ಶ್ರೀರಾಮ, ರಾಮ ಭಕ್ತರ ಪರವಾಗಿ ಇಲ್ಲ ಎನ್ನುವ ಸಂದೇಶ ಕೊಡಲು ಸರ್ಕಾರ ಹೊರಟಿದೆ. ಅದಕ್ಕಾಗಿ ಶ್ರೀಕಾಂತ್ ಪೂಜಾರಿಯನ್ನ ಬಂಧಿಸಿದೆ ಎಂದು ದೂರಿದರು.

click me!