ಭಾರತ್ ಮಾತಾಕಿ ಜೈ ಅಂದವರಿಗೆ ಲಾಠಿ ಚಾರ್ಜ್, ಪಾಕಿಸ್ತಾನದ ಪರ ಘೋಷಣೆ ಕೂಗಿದವರಿಗೆ ರಕ್ಷಣೆ: ರೇಣುಕಾಚಾರ್ಯ ವಾಗ್ದಾಳಿ

Published : Sep 20, 2024, 05:02 PM IST
ಭಾರತ್ ಮಾತಾಕಿ ಜೈ ಅಂದವರಿಗೆ ಲಾಠಿ ಚಾರ್ಜ್, ಪಾಕಿಸ್ತಾನದ ಪರ ಘೋಷಣೆ ಕೂಗಿದವರಿಗೆ ರಕ್ಷಣೆ: ರೇಣುಕಾಚಾರ್ಯ ವಾಗ್ದಾಳಿ

ಸಾರಾಂಶ

ರಾಜ್ಯದಲ್ಲಿ ಇರುವುದು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇಲ್ಲ. ದೇಶದ್ರೋಹಿಗಳ ಸರ್ಕಾರ ಇದೆ ಎಂದು ಮಾಜಿ ಶಾಸಕ, ಬಿಜೆಪಿ ಮುಖಂಡ ಎಂ.ಪಿ.ರೇಣುಕಾಚಾರ್ಯ ಆಕ್ರೋಶವನ್ನು ವ್ಯಕ್ತಪಡಿಸಿದರು.

ದಾವಣಗೆರೆ (ಸೆ.20): ರಾಜ್ಯದಲ್ಲಿ ಇರುವುದು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇಲ್ಲ. ದೇಶದ್ರೋಹಿಗಳ ಸರ್ಕಾರ ಇದೆ ಎಂದು ಮಾಜಿ ಶಾಸಕ, ಬಿಜೆಪಿ ಮುಖಂಡ ಎಂ.ಪಿ.ರೇಣುಕಾಚಾರ್ಯ ಆಕ್ರೋಶವನ್ನು ವ್ಯಕ್ತಪಡಿಸಿದರು. ನಂತರ ಮಾತನಾಡಿದ ಅವರು, ಪಾಕಿಸ್ತಾನ ಜಿಂದಾಬಾದ್ ಅಂತ ಘೋಷಣೆ ಕೂಗ್ತಾರೆ. ಪಾಲೆಸ್ತೈನ್ ದ್ವಜ ಹಾರಿಸಿ ಅವರಿಗೆ ಬೆಂಬಲ‌ ಕೊಡ್ತಾ ಇದಾರೆ. ಪಾಕಿಸ್ತಾನ ಜಿಂದಾಬಾದ್ ಅಂದಾಗಲೇ ಕಠಿಣ ಕ್ರಮ ಜರುಗಿಸಿದ್ದರೆ ಇಂಥ ದುಷ್ಕೃತ್ಯ ನಡೆಯುತ್ತಿರಲಿಲ್ಲ ನಾಗಮಂಗಲದಲ್ಲಿ ವ್ಯವಸ್ಥಿತವಾಗಿ ಎಸ್ ಎಫ್ ಐನ ಕೇರಳ ಕಾರ್ಯಕರ್ತರು ಪೆಟ್ರೋಲ್ ಬಾಂಬ್ ಎಸೆದರು ರಾಜ್ಯದಲ್ಲಿ ಅಸಮರ್ಥ ಗೃಹ ಸಚಿವರಿದ್ದಾರೆ ಎಂದು ಹೇಳಿದರು.

ಗೃಹ ಸಚಿವ ಡಾ. ಜಿ ಪರಮೇಶ್ವರ್ ತಕ್ಷಣ ರಾಜೀನಾಮೆ ಕೊಡಬೇಕು. ಕಾಂಗ್ರೆಸ್ ನವರು ನಾವು ಕೋಮುವಾದಿಗಳು ಅಂತೀರಿ. ನಾವು‌ ಕೋಮುವಾದಿಗಳಲ್ಲ. ಈ ಘಟನೆಗೆ ಸತೀಶ್ ಪೂಜಾರಿ ಕಾರಣ ಅಲ್ಲ. ಎಸ್ ಪಿ ಅವರು ಕಾನೂನಿನ ಅಡಿಯಲ್ಲಿ ಕೆಲಸ ಮಾಡಬೇಕು. ಸರ್ಕಾರದ ಗುಲಾಮರಾಗಿ ಕೆಲಸ ಮಾಡಬೇಡಿ. ಸತೀಶ್ ಪೂಜಾರಿ ಪ್ರಚೋದನಕಾರಿಯಾಗಿ ಮಾತಾಡಿಲ್ಲ. ಮುಸಲ್ಮಾನರ ಹಬ್ಬಕ್ಕೆ ನಾವ್ಯಾರೂ ವಿದೋಧ ಮಾಡಲಿಲ್ಲ. ಡಿಕೆಶಿ ಕುಕ್ಕರ್ ಬಾಂಬ್ ಬ್ಲಾಸ್ಟ್ ಆದಾಗ ನಮ್ಮ ಬ್ರದರ್ಸ್ ಅಂತ ಹೇಳಿದರು. ಯಾರು ಭಾರತ ಮಾತೆಗೆ ಅವಮಾನ‌ ಮಾಡ್ತಾರೆ ಅವರನ್ನು ಮಟ್ಟ ಹಾಕಿ. ಸರ್ಕಾರಕ್ಕೆ ಸವಾಲು ಹಾಕ್ತೀನಿ ಎಂದರು.

ಎಲ್ಲರೂ ರಾಜ್ ಕುಮಾರ್ ಆಗಲು ಸಾಧ್ಯವಿಲ್ಲ: ದರ್ಶನ್ ವಿಷಯದಲ್ಲಿ ಕೋಪ ಸ್ವಲ್ಪ ಮಿತಿ ಮೀರಿತು ಎಂದ ಗುರುಕಿರಣ್!

ಒಬ್ಬ ಹಿಂದೂವನ್ನು ಬಂಧಿಸಿದರೆ ಹುಷಾರ್. ನಾವು ಕೈಗೆ ಬಳೆ ತೊಟ್ಟಿಲ್ಲ. ಹಳ್ಳಿ ಹಳ್ಳಿಯಿಂದ ಬರ್ತೀವಿ. ನಾವು ಅಬ್ದುಲ್ ಕಲಾಂ,ಷರೀಫರಂಥವರನ್ನು‌ ಗೌರವಿಸ್ತೀವಿ. ನಾವು ಕಾನೂನು ಕೈ ತಗೊಳಲ್ಲ. ಆ ಸಂದರ್ಭ ಬಂದರೆ ಅದೇ ಮಚ್ಚು ತಲ್ವಾರ್, ಲಾಠಿ ಬಳಸೋದು  ಗೊತ್ತು. ಮುಂದೆ ಕಹಿ ಘಟನೆ ನಡೆದರೆ ಈ ಸರ್ಕಾರವೇ ಕಾರಣ. ಹಿಂದೂ ವಿರೋದಿಯಾದರೆ ನಿಮ್ ಸರ್ಕಾರ ಉಳಿಯಲ್ಲ. ಭಾರತ್ ಮಾತಾಕಿ ಜೈ ಅಂದವರಿಗೆ ಲಾಠಿ ಚಾರ್ಜ್ ಮಾಡ್ತೀರಿ, ಗುಂಡು ಹಾರಿಸ್ತೀರಿ. ಪಾಕಿಸ್ತಾನದ ಪರ ಘೋಷಣೆ ಕೂಗಿದವರಿಗೆ ರಕ್ಷಣೆ ಕೊಡ್ತೀರಿ. ದೇವಾನುದೇವತೆಗಳ ಮೇಲೆ ಭಕ್ತಿ ಇರೋರು ಇಲ್ಲಿಗೆ ಬರ್ತಾರೆ. ಓಟ್ ಬ್ಯಾಂಕ್ ರಾಜಕಾರಣ ಮಾಡಬಾರದು ಎಂದು ತಿಳಿಸಿದರು.

ನಾವು ಕಾನೂನು‌ ಕೈ ತಗೊಳಲ್ಲ, ಕಾನೂನು ಗೌರವಿಸ್ತೀವಿ. ಅನಿವಾರ್ಯ ಸಂದರ್ಭದಲ್ಲಿ ನಾವೂ ಅನಿವಾರ್ಯವಾಗಿ ಬೀದಿಗಳಿಬೇಕಾಗುತ್ತೆ ಅಂತ ಎಚ್ಚರಿಕೆ ಕೊಟ್ಟಿದಿನಿ. ಕೇರಳ ಎಸ್ ಎಫ್ ಐ ರವರನ್ನು ಪತ್ತೆ ಹಚ್ಚಿ ಬಂಧಿಸಿ, ನಾಗಮಂಗಲದಲ್ಲಿ ಕ್ರಮ ತಗೊಂಡಿದ್ರೆ ಈ  ಪರಿಸ್ಥಿತಿ ಬರ್ತಿರಲಿಲ್ಲ. ಸಿಎಂ ಅವರೇ ನಾಚಿಗೆ ಆಗಲ್ವಾ?. ಜೀವದ ಹಂಗು ತೊರೆದು ಪೊಲೀಸರು ಕೆಲಸ ಮಾಡಿದಾರೆ. ಅವರ ಮೇಲೆ ಕ್ರಮ ಯಾಕೆ ತಗೊತೀರಿ?. ಅಸಮರ್ಥ ಗೃಹ ಸಚಿವರನ್ನು ಮೊದಲು ಉಚ್ಚಾಟಣೆ ಮಾಡಿ. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡಬೇಡಿ. ಯೋಗಿ ಆದಿತ್ಯನಾಥರಂಗೆ ಬುಲ್ಡೋಜರ್ ಕ್ರಮ ಸರಿಯಿದೆ. ಇದೇ ರೀತಿ ಕ್ರಮ ಆಗಬೇಕು ಎಂದು ಹೇಳಿದರು.

ಹಾರರ್‌ ಅಂದ್ರೆ ಭಯ, ಗಂಡನ ಪಕ್ಕ ಕೂತು 'ಹಗ್ಗ' ಸಿನಿಮಾ ನೋಡಿದೆ: ಅನು ಪ್ರಭಾಕರ್‌

ದಾವಣಗೆರೆ ಗಣೇಶ ವಿಸರ್ಜನಾ ಮೆರವಣಿಗೆ ಮೇಲೆ ಕಲ್ಲು ತೂರಾಟ ಪ್ರಕರಣ ಸಂಬಂಧಿಸಿದಂತೆ ಸ್ಥಳಕ್ಕೆ ಮಾಜಿ ಸಚಿವ ರೇಣುಕಾಚಾರ್ಯ, ಬಿಜೆಪಿ ಮುಖಂಡ ಮಾಡಾಳು ಮಲ್ಲಿಕಾರ್ಜುನ ಭೇಟಿ ನೀಡಿದ್ದಾರೆ. ಕಲ್ಲು ತೂರಾಟದಿಂದ ಆತಂಕಗೊಂಡ ಜನರಿಗೆ ರೇಣುಕಾಚಾರ್ಯ ಧೈರ್ಯ ತುಂಬಿದ್ದಾರೆ. ಜೊತೆಗೆ ನಿಮ್ಮ ಜೊತೆ ನಾವು ಇರುತ್ತೇವೆ ಧೈರ್ಯವಾಗಿ ಅಂತ ಅಭಯವನ್ನು ಕೊಟ್ಟಿದ್ದಾರೆ. ವೋಟ್ ಬ್ಯಾಂಕ್ ರಾಜಕಾರಣಕ್ಕೆ ಸರ್ಕಾರ ಈ ರೀತಿ ಮಾಡ್ತಾ ಇದೆ. ತುಷ್ಟಿಕರಣ ರಾಜಕಾರಣಕ್ಕೆ ಈ ರೀತಿ ಮಾಡುತ್ತಾರೆ. ನಾವು ಜೊತೆಗೆ ಇರುತ್ತೇವೆ ಧೈರ್ಯವಾಗಿರಿ ಎಂದು ರೇಣುಕಾಚಾರ್ಯ ತಿಳಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ
ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ