ರಾಜಕೀಯ ವಿರೋಧಿಗಳಿಗೆ ಏಡ್ಸ್ (HIV) ಇಂಜೆಕ್ಷನ್ ಮಾಡಿಸ್ತಿದ್ದ ಮುನಿರತ್ನ: ಡಿ.ಕೆ. ಸುರೇಶ್!

By Sathish Kumar KHFirst Published Sep 20, 2024, 12:19 PM IST
Highlights

ಶಾಸಕ ಮುನಿರತ್ನ ರಾಜ್ಯದಲ್ಲಿ 'ಬಯೋಲಾಜಿಕಲ್ ವಾರ್' ನಡೆಸುತ್ತಿದ್ದು, ತನ್ನ ರಾಜಕೀಯ ವಿರೋಧಿಗಳಿಗೆ ಏಡ್ಸ್ ಪೀಡಿತರಿಂದ ಹೆಚ್‌ಐವಿ ಇಂಜೆಕ್ಟ್  ಮಾಡಿದ್ದಾರೆ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಆರೋಪಿಸಿದ್ದಾರೆ.

ಬೆಂಗಳೂರು (ಸೆ.20): ಕರ್ನಾಟಕ ರಾಜಕಾರಣದಲ್ಲಿ ತನ್ನ ವಿರೋಧಿಗಳಿಗೆ ಶಾಸಕ ಮುನಿರತ್ನ ಹೆಚ್‌ಐವಿ (ಏಡ್ಸ್) ರೋಗವಿರುವವರ ರಕ್ತವನ್ನು ಇಂಜೆಕ್ಟ್ ಮಾಡುವ ಮೂಲಕ ರಾಜ್ಯದಲ್ಲಿ ಬಯೋಲಾಜಿಕಲ್ ವಾರ್ ಆರಂಭಿಸಿದ್ದರು. ಇದಕ್ಕಾಗಿ ಹೆಚ್‌ಐವಿ ಪೀಡಿತರನ್ನು ಬಳಸಿಕೊಂಡಿದ್ದಾರೆ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ವಾಗ್ದಾಳಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಬಯಾಲಜಿಕಲ್ ವಾರ್ ತರಹ ಕೃತ್ಯವನ್ನು ಮುನಿರತ್ನ ಮಾಡಿದ್ದಾರೆ. HIV ಇರುವವರನ್ನು ತಮ್ಮ ಕುಕೃತ್ಯಕ್ಕೆ ಬಳಸಿಕೊಂಡಿದ್ದಾರೆ. ಒಬ್ಬರಿಂದ ಒಬ್ಬರಿಗೆ ರೋಗ ಹರಡಿಸುವ, ಬಯಾಲಜಿಕಲ್ ವಾರ್ ತರಹ ಮಾಡುತ್ತಿದ್ದಾರೆ. ಹೀಗಾಗಿಯೇ ತನಿಖೆಗೆ ಒಂದು ವಿಶೇಷ ತಂಡ ರಚನೆಯಾಗಬೇಕು. ಯಾರಾರನ್ನ ಯಾವ ಯಾವ ಸಂದರ್ಭದಲ್ಲಿ ಬಳಸಿಕೊಂಡಿದ್ದಾರೆ. ಯಾವ ಯಾವ ರೀತಿ ಬಳಸಿಕೊಂಡಿದ್ದಾರೆ ಎಂಬುದು ತನಿಖೆಯಿಂದ ಗೊತ್ತಾಗಬೇಕು. ಈವರೆಗೆ ಯಾರಿಂದ ಎಚ್ಐವಿ ಇಂಜೆಕ್ಟ್ ಮಾಡಲು ಬಳಸಿಕೊಂಡಿದ್ದಾರೆ ಎಂಬುದು ಸುಧೀರ್ಘವಾಗಿ ತನಿಖೆ ಮಾಡಬೇಕಾಗುತ್ತದೆ ಎಂದು ತಿಳಿಸಿದರು.

Latest Videos

ಬಿಜೆಪಿ ಶಾಸಕ ಮುನಿರತ್ನಗೆ ಅಟ್ರಾಸಿಟಿ ಕೇಸಿನಲ್ಲಿ ಜಾಮೀನು ಮಂಜೂರು!

ಬಯೋಲಾಜಿಕಲ್ ವಾರ್ ಬಗ್ಗೆ ತನಿಖೆ ಮಾಡಲಿ ವಿಶೇಷ ತನಿಖಾ ತಂಡ (ಎಸ್ಐಟಿ) ಅಥವಾ ಬೇರೆ ತರಹದ ಒಂದು ತನಿಖಾ ತಂಡವನ್ನು ರಚಿಸಬೇಕು ಎಂದು ಒತ್ತಾಯ ಮಾಡಿದ್ದೇವೆ. ಇದುವರೆಗೆ ಕೇಳಿರದೇ ಇರುವ ಪದಗಳು ಕೇಳಿರದೇ ಇರುವ ಕಾರ್ಯಾಚರಣೆಗಳನ್ನು ಮಾಡಿದ್ದಾರೆ. ಬೇರೆ ಬೇರೆ ವಿದೇಶಗಳಲ್ಲಿ ಮಾಡುತ್ತಾರೆ ಎನ್ನಿಸುತ್ತದೆ. ವಿದೇಶಗಳಲ್ಲಿ ಬಯಾಲಜಿಕಲ್ ವಾರ್ ನಡೆಯುತ್ತದೆ. ಇಲ್ಲೀಗ ಜೂಯಾಲಾಜಿಕಲ್ ವಾರ್ ನಡೆಯುತ್ತಿದೆ. ಇವರದ್ದು ಯಾವ ರೀತಿಯ ಮನಸ್ಥಿತಿ ಗೊತ್ತಿಲ್ಲ. ಮೇಲ್ನೋಟಕ್ಕೆ ಇದು ವಾಸ್ತವ ಆಗಿದೆ ಎಂದು ಕಿಡಿಕಾರಿದರು.

ಈ ತನಿಖೆಯಿಂದ ಬಿಜೆಪಿಯವರ ಬಣ್ಣ ಕೂಡ ತನಿಖೆಯಿಂದ ಬಯಲಾಗಬೇಕು. ಬಯೋಲಾಜಿಕಲ್ ವಾರ್ ಮಾಡಿಸ ಆರೋಪಿ ಮುನಿರತ್ನ ಬೆನ್ನಿಗೆ ಸಿಟಿ ರವಿ, ಆರ್. ಅಶೋಕ್, ಕುಮಾರಸ್ವಾಮಿ ಮುಂತಾದವರು ನಿಂತಿದ್ದಾರೆ. ಕಾಂಗ್ರೆಸ್ ಅವರ ಮೇಲೆ ಇಂಥದ್ದೇ ಮಾಡಿ ಅಂತ ಬಿಜೆಪಿಯವರು ಬೆಂಬಲ ಕೊಡುತ್ತಿದ್ದಾರೆ. ಅದು ಕೂಡ ತನಿಖೆ ಆಗಬೇಕಾಗುತ್ತದೆ. ಒಕ್ಕಲಿಗ ಸಮುದಾಯ ದಲಿತ ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಸಮುದಾಯದ ಸ್ವಾಮೀಜಿಗಳು ಹೋರಾಟದ ನೇತೃತ್ವ ವಹಿಸಬೇಕು. ಇಲ್ಲದಿದ್ದರೆ ನಾಳೆಯಿಂದ ದಾರಿಯಲ್ಲಿ ಹೋಗುವವರೆಲ್ಲ ಸಮುದಾಯಕ್ಕೆ ಮಾತನಾಡಲು ತೊಡಗುತ್ತಾರೆ ಎಂದು ಮನವಿ ಮಾಡಿದರು.

ಇಡ್ಲಿ ಮಾರುತ್ತಿದ್ದ ಮುನಿರತ್ನ ಈ ಎತ್ತರಕ್ಕೆ ಬೆಳೆದಿದ್ದು ಹೇಗೆ?

ಬಿಜೆಪಿ, ಜೆಡಿಎಸ್ ಅದನ್ನು ಸಮರ್ಥನೆ ಮಾಡಿಕೊಳ್ಳುತ್ತಾರೆ ಅಂದ್ರೆ ನಾವು ಯಾರಿಗೆ ಹೇಳಬೇಕು? ಸ್ವಾಮೀಜಿಗಳು ಹೋರಾಟದ ನೇತೃತ್ವ ವಹಿಸಬೇಕು. ಹೋರಾಟವನ್ನು ನಾವು ಮಾಡಲೇಬೇಕಾಗುತ್ತದೆ. ದಲಿತ ಸ್ವಾಮೀಜಿಗಳು ಒಕ್ಕಲಿಗ ಸ್ವಾಮೀಜಿಗಳು ಹೋರಾಟದ ನೇತೃತ್ವ ವಹಿಸಿಕೊಳ್ಳಬೇಕು . ಇಲ್ಲದಿದ್ದರೆ ದಾರಿಯಲ್ಲಿ ಹೋಗುವವರೆಲ್ಲ ಸಮುದಾಯವನ್ನು ಬಳಸಿಕೊಳ್ಳುತ್ತಾರೆ. ನಾವೇನು ಉತ್ತರ ಪ್ರದೇಶದಲ್ಲೋ ಬಿಹಾರದಲ್ಲೋ ಇಲ್ಲ. ನಾವು ಕರ್ನಾಟಕದಂಥ ನಾಗರೀಕ ಸಮಾಜದಲ್ಲಿ ಇದ್ದೇವೆ. ಇಂಥ 30-35 ವರ್ಷಗಳ ವಾತಾವರಣ ಹೀಗಿರಲಿಲ್ಲ. ಸ್ವಾಮೀಜಿಗಳ ನೇತೃತ್ವದಲ್ಲಿ ಜನಜಾಗೃತಿ ಆಗಲೇಬೇಕಾಗುತ್ತದೆ ಎಂದು ತಿಳಿಸಿದರು.

click me!