ಎಲ್ಲಾದ್ರೂ ಹೋದ್ರೆ ವಿಕೃತಕಾಮಿ ಮುನಿರತ್ನ ಏಡ್ಸ್ ಪಿನ್ನು ಚುಚ್ಚಿಬಿಡ್ತಾನೋ ಅಂತಾ ಭಯ ಆಗ್ತಿದೆ: ಮೊಹಮ್ಮದ್ ನಲಪಾಡ್

Published : Sep 20, 2024, 04:35 PM ISTUpdated : Sep 20, 2024, 05:00 PM IST
ಎಲ್ಲಾದ್ರೂ ಹೋದ್ರೆ ವಿಕೃತಕಾಮಿ ಮುನಿರತ್ನ ಏಡ್ಸ್ ಪಿನ್ನು ಚುಚ್ಚಿಬಿಡ್ತಾನೋ ಅಂತಾ ಭಯ ಆಗ್ತಿದೆ: ಮೊಹಮ್ಮದ್ ನಲಪಾಡ್

ಸಾರಾಂಶ

ಒಬ್ಬ ಬಿಜೆಪಿ ಶಾಸಕನ ವಿರುದ್ಧ ಇವತ್ತು ಪ್ರತಿಭಟನೆ ಮಾಡುತ್ತಿದ್ದೇವೆ. ಮುನಿರತ್ನ ಮಾತನಾಡಿರುವ ಮಾತುಗಳು ನಾನು ಇದೇ ಮೊದಲ ಬಾರಿಗೆ ಕೇಳಿದ್ದೇನೆ. ಮಾನವ ಕುಲಕ್ಕೇ ನೀಚ ಮಾತುಗಳನ್ನಾಡಿದ್ದಾರೆ ಎಂದು ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರು (ಸೆ.20): ಒಬ್ಬ ಬಿಜೆಪಿ ಶಾಸಕನ ವಿರುದ್ಧ ಇವತ್ತು ಪ್ರತಿಭಟನೆ ಮಾಡುತ್ತಿದ್ದೇವೆ. ಮುನಿರತ್ನ ಮಾತನಾಡಿರುವ ಮಾತುಗಳು ನಾನು ಇದೇ ಮೊದಲ ಬಾರಿಗೆ ಕೇಳಿದ್ದೇನೆ. ಮಾನವ ಕುಲಕ್ಕೇ ನೀಚ ಮಾತುಗಳನ್ನಾಡಿದ್ದಾರೆ ಎಂದು ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಆಕ್ರೋಶ ವ್ಯಕ್ತಪಡಿಸಿದರು.

ದಲಿತ, ಒಕ್ಕಲಿಗರ ಅವಮಾನ, ಮಹಿಳಾ ವಿರೋಧಿ ಹೇಳಿಕೆ ನೀಡಿರುವ ಶಾಸಕ ಮುನಿರತ್ನ ವಿರುದ್ಧ ಪ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ವೇಳೆ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಮೊಹಮ್ಮದ್ ನಲಪಾಡ್,  ನಿಮಗೆ ವೋಟು ಹಾಕಿದ್ದಾರೆ ಅನ್ನೋ ನಂಬಿಕೆ ಇಟ್ಟುಕೊಂಡಿರೊ ಅದೇ ಜನರ ಮೇಲೆ ದೌರ್ಜನ್ಯ ಮಾಡುತ್ತಾನೆ. ಯಾವ ಮಟ್ಟಕ್ಕೆ ಜಾತಿ ದ್ವೇಷ ಬೆಳೆಸಿಕೊಂಡಿದ್ದಾರೆ ನೋಡಿ. ಮಂಜು ಅವರು ಹೇಳಿದ್ರು ಮುನಿರತ್ನ ಯಾವ ರೀತಿ ಬಂದಿದ್ದಾರೆ, ಅವರ ಹಿನ್ನೆಲೆ ಏನು, ಏನೆಲ್ಲ ಕೆಲಸ ಮಾಡಿದ್ದಾರೆ ಎಂದು. ಗುತ್ತಿಗೆದಾರನಿಗೆ ಮಾತಾಡಿರೋ ಆಡಿಯೋ ಕೇಳಿಸಿಕೊಳ್ಳಲು ಆಗೊಲ್ಲ ಅಷ್ಟು ನೀಚ ಮಾತುಗಳನ್ನಾಡಿದ್ದಾರೆ ಎಂದು ಹರಿಹಾಯ್ದರು.

INTERVIEW: ನಾಗಮಂಗಲ ಗಲಭೆಯ ನೈಜ ಆರೋಪಿಗಳನ್ನೇ ಬಿಟ್ಟಿದ್ದಾರೆ; ಡಾ ಅಶ್ವತ್ಥನಾರಾಯಣ

ರಾಜಕಾರಣ ಮಾಡೋಕೆ ಹೆದರಿಕೆ ಆಗುತ್ತಿದೆ. ಎಲ್ಲದ್ರೂ ಹೋದ್ರೆ ಏಡ್ಸ್ ಪಿನ್ ಚುಚ್ಚಿಬಿಡುತ್ತಾನೋ ಅಂತಾ ಭಯವಾಗ್ತಿದೆ. ನೀವು ಬಯೋಲಾಜಿಕಲ್ ವಾರ್ ಅಂತ ಕೇಳಿದ್ದೀರ? ಮುನಿರತ್ನ ಅದೇ ರೀತಿ ಮಾಡಿದ್ದಾರೆ. ನನ್ನ ಬಗ್ಗೆ ಸಿಟಿ ರವಿ ಅವರು ಮಾತನಾಡಿದ್ರು. ಸಿಟಿ ರವಿಯವರೇ ಹುಷಾರು ಮುನಿರತ್ನ ಪಕ್ಕ ಹೋದ್ರೆ ಏಡ್ಸ್ ಪಿನ್ ಚುಚ್ಚಿಬಿಡ್ತಾನೆ. ನಮ್ಮ ಅಭ್ಯರ್ಥಿ ಕುಸುಮ ಹಾಗೂ ಡಿ.ಕೆ.ಸುರೇಶ್ ಮೇಲೆ ಬಯೋಲಾಜಿಕಲ್ ಟಾರ್ಗೇಟ್ ಮಾಡಿದ್ದಾರೆ ಎಂದು ಆರೋಪಿಸಿದರು.

ಪೊಲೀಸರೇ ನಿಮಗೆ ಎಚ್ಚರಿಕೆ ಕೊಡುತ್ತೇನೆ. ಮುನಿರತ್ನ ಜೈಲಿನಿಂದ ಹೊರಗಡೆ ಬಂದ್ರೆ ನಾವು ಬಿಡುವುದಿಲ್ಲ. ಅವರನ್ನ ರಾಜ್ಯದಿಂದ ಗಡಿಪಾರು ಮಾಡುವವರೆಗೆ ಬಿಡುವುದಿಲ್ಲ. ನಾವು ವಿಕೃತಕಾಮಿ ಪ್ರಜ್ವಲ್ ನ್ನು ನೋಡಿದ್ವಿ. ಇದೀಗ ಮುನಿರತ್ನ ಕೂಡ ಅದೇ ರೀತಿ ವಿಕೃತ ಕಾಮಿ. ಏಡ್ಸ್ ಬಂದಿರೋ ಮಹಿಳೆಯನ್ನ ರಾಜಕಾರಣಿಗಳ ಬಳಿಗೆ ಕಳಿಸುತ್ತಿದ್ದನಂತೆ. ಮುನಿರತ್ನ ಜೊತೆ ಒಬ್ಬ ಪೊಲೀಸ್ ಅಧಿಕಾರಿಯೂ ಇದ್ದಾರಂತೆ ಅವರ ಮೇಲೂ ಕ್ರಮ ಆಗಬೇಕು ಎಂದು ಆಗ್ರಹಿಸಿದರು.\

ಇಡ್ಲಿ ಮಾರುತ್ತಿದ್ದ ಮುನಿರತ್ನ ಈ ಎತ್ತರಕ್ಕೆ ಬೆಳೆದಿದ್ದು ಹೇಗೆ?

ಇದು ಕೇವಲ ನಮ್ಮ ಮೊದಲ ಹೆಜ್ಜೆ. ಮುನಿರತ್ನರನ್ನ ಮಟ್ಟಹಾಕುವವರೆಗೆ ನಾವು ಸುಮ್ಮನಿರುವುದಿಲ್ಲ. ಮುನಿರತ್ನ ನಾಯ್ಡು ರಾಜೀನಾಮೆ ಕೊಡುವವರೆಗೂ ನಾವು ಹೋರಾಟ ಮುಂದುವರಿಸುತ್ತೇವೆ. ಆರ್.ಅಶೋಕ್ ಅವರು ನಿಮ್ಮದೇ ಪಕ್ಷದ ನಾಯಕರು. ಅವರಿಗೆ ಚುಚ್ಚಲು ಇವರು ರೆಡಿಯಾಗಿದ್ರು. ನಿಮ್ಮ ಪಕ್ಷದಲ್ಲಿರುವವರು, ನಿಮ್ಮ ಮನೆಯವರ ಬಗ್ಗೆ ಕಾಳಜಿ ಇಲ್ವ? ನಿಮ್ಮ ಮೈತ್ರಿ ಸರ್ಕಾರದಲ್ಲಿ ಇಂತಹ ಎಷ್ಟು ಜನ ವಿಕೃತಕಾಮಿಗಳನ್ನ ಇಟ್ಟುಕೊಂಡಿದ್ದೀರ? ಬಿಜೆಪಿಯವರು ದ್ವೇಷ ರಾಜಕಾರಣ ಮಾಡೊಲ್ಲ ಅಂತಾರೆ ಹಾಗಾದರೆ ಆರ್‌ಅಶೋಕ್‌ಗೆ ಏಡ್ಸ್ ಪಿನ್ ಚುಚ್ಚಿ ಅಂತಾ ನಾವು ಹೇಳಿದ್ವ? ಮಹಿಳೆಯರ ಬಗ್ಗೆ ನೀಚ ಮಾತಾಡೋಕೆ ನಾವು ಸ್ಕ್ರಿಪ್ಟ್ ಬರೆದುಕೊಟ್ಟಿದ್ವ ಎಂದು ಹರಿಹಾಯ್ದ ನಲಪಾಡ್.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗ್ಯಾರಂಟಿ ಹೆಸರಿನಲ್ಲಿ ಕಾಲಹರಣ ಮಾಡುವ ಕೆಲಸ ಆಗುತ್ತಿದೆ: ಛಲವಾದಿ ನಾರಾಯಣಸ್ವಾಮಿ
ಕೇಂದ್ರ ಯೋಜನೆಗಳ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ: ಸಂಸದ ಯದುವೀರ್