ಟಿಪ್ಪು, ಬಾಬರ್, ಔರಂಗಜೇಬ, ಘಜ್ನಿ ಮಹಮ್ಮದ್ ಹೆಸರುಗಳು ಮಾತ್ರವೇ ಕಾಂಗ್ರೆಸ್ಸಿಗರ ನೆನಪಿಗೆ ಬರುತ್ತಿದ್ದು, ಇದೇ ಕಾರಣಕ್ಕೆ ಕಾಂಗ್ರೆಸ್ ನ ಸಚಿವರು ಟಿಪ್ಪು ಹೆಸರನ್ನೇ ಜಪ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಲೇವಡಿ ಮಾಡಿದ್ದಾರೆ.
ದಾವಣಗೆರೆ (ಡಿ.22): ಟಿಪ್ಪು, ಬಾಬರ್, ಔರಂಗಜೇಬ, ಘಜ್ನಿ ಮಹಮ್ಮದ್ ಹೆಸರುಗಳು ಮಾತ್ರವೇ ಕಾಂಗ್ರೆಸ್ಸಿಗರ ನೆನಪಿಗೆ ಬರುತ್ತಿದ್ದು, ಇದೇ ಕಾರಣಕ್ಕೆ ಕಾಂಗ್ರೆಸ್ ನ ಸಚಿವರು ಟಿಪ್ಪು ಹೆಸರನ್ನೇ ಜಪ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಲೇವಡಿ ಮಾಡಿದ್ದಾರೆ. ಕಾಂಗ್ರೆಸ್ ಸಚಿವರು ತಮ್ಮ ಮನೆಗಳಿಗೆ ಟಿಪ್ಪು ಮಂಜಿಲ್, ಔರಂಗಜೇಬ್ ಮಂಜಿಲ್ ಅಥವಾ ನಿವಾಸ ಅಂತಾ ಹೆಸರಿಟ್ಟುಕೊಳ್ಳಲಿ. ಆದರೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡಲು ನಾವು ತೀವ್ರವಾಗಿ ಖಂಡಿಸುತ್ತೇವೆ. ಓಟು ಬ್ಯಾಂಕ್‌ಗಾಗಿ ಅಲ್ಪಸಂಖ್ಯಾತರ ಓಲೈಕೆಗಾಗಿ ಟಿಪ್ಪು ಜಪ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಕುಕ್ಕರ್ ಬ್ಲಾಸ್ಟ್ ಆದಾಗ ಅಲ್ಪಸಂಖ್ಯಾತರು ತಮ್ಮ ಸಹೋದರರೆಂದು ಇದೇ ಡಿಸಿಎಂ ಡಿ.ಕೆ.ಶಿವಕುಮಾರ ಹೇಳುತ್ತಾರೆ. ಮೈಸೂರು ಮಹಾರಾಜ, ಸುತ್ತೂರು ಶ್ರೀಗಳಂತಹವರ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಡಲಿ. ಆದರೆ, ಓಟು ಬ್ಯಾಂಕ್‌ಗಾಗಿ ಟಿಪ್ಪುನಂತಹ ಮತಾಂಧರ ಹೆಸರಿಡುವುದಲ್ಲ. ಯಾವುದೇ ಕಾರಣಕ್ಕೂ ಟಿಪ್ಪು ಹೆಸರಿಡಲು ನಾವು ಬಿಡುವುದೂ ಇಲ್ಲ ಎಂದು ಆಕ್ರೋಶ ಹೊರ ಹಾಕಿದರು.
ಯತ್ನಾಳ್ ಹುಚ್ಚುನಾಯಿ ಇದ್ದಂತೆ, ನಾಯಿ ನಿಯತ್ತೂ ಇಲ್ಲದ ವ್ಯಕ್ತಿ: ರೇಣುಕಾಚಾರ್ಯ
ಘೋಷಣೆ, ಭರವಸೆಗಳು ಮಾತಿಗೆ ಸೀಮಿತ: ಸಿದ್ದರಾಮಯ್ಯಗೆ ರೈತರ ಬಗ್ಗೆ ನಿಜವಾದ ಕಾಳಜಿ ಇದ್ದರೆ ಬರ ಪರಿಹಾರವಾಗಿ ಎಕರೆಗೆ 25 ಸಾವಿರ ರು. ನೀಡಲಿ. ನಿಮ್ಮ ಘೋಷಣೆಗಳು, ಭರವಸೆಗಳು ಕೇವಲ ಮಾತಿಗೆ ಸೀಮಿತವಾಗಿದ್ದು, ಕಾರ್ಯ ರೂಪಕ್ಕಂತೂ ಬಂದಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಬಂದಿಲ್ಲ. ರೈತರಿಗೆ ನೀವು ಕೊಟ್ಟ ಭರವಸೆ ಈಡೇರಿಲ್ಲ. ಶೀಘ್ರವೇ ಕಾಂಗ್ರೆಸ್ ಸರ್ಕಾರದ ವಿರುದ್ದ ಹೊನ್ನಾಳಿ ಕ್ಷೇತ್ರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ ಎಂದು ತಿಳಿಸಿದರು.
ಡಿಕೆಶಿಯಿಂದ ಔತಣಕ್ಕೆ ಆಹ್ವಾನ: ಕಾಂಗ್ರೆಸ್ಸಿಗರ ಔತಣಕೂಟಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಆಹ್ವಾನ ಮಾಡಿದ್ದಕ್ಕೆ ಕೆಲವು ಶಾಸಕರು ಮಾತ್ರ ಹೋಗಿದ್ದಾರೆ. ಔತಣಕೂಟಕ್ಕೆ ಹೋಗಿದ್ದಾರೆಂದ ಮಾತ್ರಕ್ಕೆ ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಾರೆಂದು ಅರ್ಥನಾ? ಸ್ವತಃ ಶಾಸಕರೇ ಹೇಳಿದ್ದಾರಲ್ಲವೇ? ಡಿಕೆಶಿ ಕಡೆಯಿಂದ ಆಹ್ವಾನವಿತ್ತು. ಹಾಗಾಗಿ ಔತಣ ಕೂಟಕ್ಕೆ ಹೋಗಿ ಬಂದಿದ್ದಾಗಿ ಪ್ರತಿಕ್ರಿಯಿಸಿದ್ದಾರಲ್ಲ ಎಂದು ಪ್ರಶ್ನೆಯೊಂದಕ್ಕೆ ರೇಣುಕಾಚಾರ್ಯ ತಮ್ಮ ಶಾಸಕರ ಪರ ಬ್ಯಾಟ್ ಬೀಸಿದರು.
ಮಲ್ಲಿಕಾರ್ಜುನ ಖರ್ಗೆಯವರಿಗೆ ಪ್ರತಿ ವಿಚಾರದಲ್ಲೂ ಜ್ಞಾನವಿದೆ: ಸಚಿವ ಎಸ್.ಎಸ್.ಮಲ್ಲಿಕಾರ್ಜುನ
ನಂತರ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ನೇಕಾರ ಸಮಾಜ ಹಮ್ಮಿಕೊಂಡಿದ್ದ ಕ್ರಿಕೆಟ್ ಪಂದ್ಯಾವಳಿಯನ್ನು ಬ್ಯಾಟಿಂಗ್ ಮಾಡುವ ಮೂಲಕ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಉದ್ಘಾಟಿಸಿದರು. ಬಿಜೆಪಿ ಹಿರಿಯ ಮುಖಂಡ ಕಕ್ಕರಗೊಳ್ಳ ಕೆ.ಪಿ.ಕಲ್ಲಿಂಗಪ್ಪ, ಪ್ರವೀಣ ಜಾಧವ್, ರಾಜು ವೀರಣ್ಣ, ಅಣಜಿ ಬಸವರಾಜ ಇತರರಿದ್ದರು.