
ಗದಗ (ಡಿ.22): ಹಿಂದು ರಾಷ್ಟ್ರ ಮಾಡುವುದು ಬಿಜೆಪಿ ಅಜೆಂಡಾ ಅಲ್ಲ, ಅದು ಹಿಂದುಗಳದ್ದು ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಹಿಂದುಗಳು ಹಿಂದು ರಾಷ್ಟ್ರ ಆಗಬೇಕು ಎಂದು ನಿರ್ಧಾರ ಮಾಡಿದ್ದಾರೆ. ಆಯೋಧ್ಯೆಯಲ್ಲಿ ರಾಮಮಂದಿರ ಕಟ್ಟಬೇಕು ಎನ್ನುವುದು ಇವತ್ತಿನ ತೀರ್ಮಾನ ಅಲ್ಲ, ಸ್ವಾತಂತ್ರ್ಯ ಪೂರ್ವದಿಂದ ಇದರ ಬಗ್ಗೆ ಹೋರಾಟ ಮಾಡಲಾಗುತ್ತಿದೆ. ಜ. 22ರಂದು ಅಯೋಧ್ಯೆಯಲ್ಲಿ ಇಡೀ ಪ್ರಪಂಚವೇ ನೋಡುವ ವಿಶೇಷ ಕಾರ್ಯಕ್ರಮವಾಗುತ್ತದೆ ಎಂದರು.
ಕಾಶಿ ಕುರಿತು ಕೋರ್ಟ ಆರ್ಡರ್ ಆಗಿದೆ, ಮಧುರಾ ಬಗ್ಗೆ ಸರ್ವೇ ಕೊಟ್ಟಿದ್ದಾರೆ. ದೇಶದಲ್ಲಿ ಹೊಸ ಮಸೀದಿಗಳ ಬಗ್ಗೆ ನಾನು ವಿರೋಧ ಮಾಡೋದಿಲ್ಲ. ದೇವಸ್ಥಾನ ಕೆಡವಿ ಕಟ್ಟಿದ ಒಂದೇ ಒಂದು ಮಸೀದಿ ಉಳಿಸೋದಿಲ್ಲ. ಇದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದರು. ಹೊಸ ಮಸೀದಿ ಕಟ್ಟಿ ಪ್ರಾರ್ಥನೆ ಮಾಡಿದರೆ ಸಂತೋಷದಿಂದ ಪ್ರೋತ್ಸಾಹಿಸುತ್ತೇನೆ. ಅವರು ಕೂಡ ನಮ್ಮ ಅಣ್ಣ ತಮ್ಮಂದಿರು. ಹಿಂದೂ ದೇವಸ್ಥಾನಗಳನ್ನು, ನಮ್ಮ ಶ್ರದ್ಧಾ ಕೇಂದ್ರಗಳನ್ನು ನಿಮ್ಮ ಪೂರ್ವಜರು, ವಿದೇಶದಿಂದ ಬಂದ ಮುಸಲ್ಮಾನರು ಕೆಡವಿ ಪುಡಿ ಪುಡಿ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ದೇಶದಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ: ಕೆ.ಎಸ್.ಈಶ್ವರಪ್ಪ
ನಾವು ಬಿಜೆಪಿಯವರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ರಕ್ತ ಹಂಚಿಕೊಂಡವರು, ನಮ್ಮಲ್ಲಿ ಟಿಪ್ಪು ರಕ್ತ ಇಲ್ಲ, ಅಯೋಧ್ಯೆ, ಕಾಶಿ, ಮಧುರಾ ಇಂತಹ ವಿಶೇಷ ದೇವಸ್ಥಾನಗಳನ್ನು ನಾವು ಉಳಿಸುತ್ತೇವೆ ಎಂದರು. ಭಾರತ ಹಿಂದು ರಾಷ್ಟ್ರ ಆಗಬೇಕಿಲ್ಲ, ಈಗಲೂ, ಹಿಂದೂ, ಮುಂದೂ ಹಿಂದು ರಾಷ್ಟ್ರವೇ ಎಂದರು. ಸಿಎಂ ಸಿದ್ದರಾಮಯ್ಯ ಬಿಜೆಪಿ ಸುಳ್ಳಿನ ಕಾರ್ಖಾನೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅವರು ಸುಳ್ಳಿನ ಕಾರ್ಖಾನೆ ಅಂತಾ ಹೇಳುತ್ತಾರೆ. ಅದನ್ನು ಜನ ನಂಬಿದ್ದರಾ ? ಮೂರು ರಾಜ್ಯದಲ್ಲಿ ಜನರು ಬಿಜೆಪಿಯನ್ನು ಅಧಿಕಾರಕ್ಕೆ ತಂದರು. ಆ ಮೂರು ರಾಜ್ಯದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಎನಾಗಿದೆ ಎಂದು ಪ್ರಶ್ನಿಸಿದರು.
ಸಂಸದ ಪ್ರತಾಪ್ ಸಿಂಹ ಅಪ್ಪಟ ಹಿಂದುತ್ವವಾದಿ: ಕೆ.ಎಸ್.ಈಶ್ವರಪ್ಪ
ಜಿನ್ನಾ ಸಂತತಿಯ ಸಚಿವ ಜಮೀರ್ ಅಹ್ಮದ ತೆಲಂಗಾಣದಲ್ಲಿ ತೀರಾ ವಿವಾದಾಸ್ಪದ ಹೇಳಿಕೆ ನೀಡಿದ್ದಾರೆ. ಮುಸಲ್ಮಾನರನ್ನು ಸ್ಪೀಕರ್ ಮಾಡಿದ್ದೇವೆ. ಬಿಜೆಪಿ ಸೇರಿದಂತೆ ಎಲ್ಲರೂ ಎದ್ದು ನಿಂತು ಅವರಿಗೆ ನಮಸ್ಕಾರ ಮಾಡಬೇಕು ಎಂದಿದ್ದಾರೆ. ನಾವು ಸ್ಪೀಕರ್ ಸ್ಥಾನಕ್ಕೆ ನಮಸ್ಕಾರ ಮಾಡುತ್ತೇವೆ. ಆ ಹುದ್ದೆಗೆ ಗೌರವ ನೀಡುತ್ತೇವೆ. ಜಮೀರ್ ತೀರಾ ಅವಿವೇಕಿ, ಸ್ಪೀಕರ್ ಸ್ಥಾನವನ್ನೂ ಧರ್ಮದ ಆಧಾರದಲ್ಲಿ ನೋಡುತ್ತಾರೆ ಎಂದು ಟೀಕಿಸಿದರಲ್ಲದೇ ಸಿಎಂ ಸಿದ್ದರಾಮಯ್ಯ ಅವರು ಅದನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.