ಮುಖ್ಯ ಚುನಾವಣಾ ಆಯುಕ್ತರ ನೇಮಕಾತಿ ಮಸೂದೆ ಪಾಸ್‌

By Anusha Kb  |  First Published Dec 22, 2023, 7:13 AM IST

ದೇಶದ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಹಾಗೂ ಚುನಾವಣಾ ಆಯುಕ್ತರ (ಇಸಿ) ನೇಮಕಾತಿಗೆ ಸಂಬಂಧಿಸಿದಂತೆ ನಿರ್ದಿಷ್ಟ ವ್ಯವಸ್ಥೆಯೊಂದನ್ನು ರೂಪಿಸುವ ಮಸೂದೆಗೆ ಲೋಕಸಭೆ ಗುರುವಾರ ಅಂಗೀಕಾರ ನೀಡಿದೆ. ರಾಜ್ಯಸಭೆಯಲ್ಲಿ ಈ ಮಸೂದೆ ಈಗಾಗಲೇ ಪಾಸಾಗಿದೆ.


ನವದೆಹಲಿ: ದೇಶದ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಹಾಗೂ ಚುನಾವಣಾ ಆಯುಕ್ತರ (ಇಸಿ) ನೇಮಕಾತಿಗೆ ಸಂಬಂಧಿಸಿದಂತೆ ನಿರ್ದಿಷ್ಟ ವ್ಯವಸ್ಥೆಯೊಂದನ್ನು ರೂಪಿಸುವ ಮಸೂದೆಗೆ ಲೋಕಸಭೆ ಗುರುವಾರ ಅಂಗೀಕಾರ ನೀಡಿದೆ. ರಾಜ್ಯಸಭೆಯಲ್ಲಿ ಈ ಮಸೂದೆ ಈಗಾಗಲೇ ಪಾಸಾಗಿದೆ.
‘ಮುಖ್ಯ ಚುನಾವಣಾ ಆಯುಕ್ತ ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ನಿಯಮಗಳು ಹಾಗೂ ಸೇವಾವಧಿ) ಮಸೂದೆ-2023’ನ್ನು ಲೋಕಸಭೆ ಸದಸ್ಯರು ಧ್ವನಿಮತದಿಂದ ಅಂಗೀಕರಿಸಿದರು.

ಈ ಮೊದಲು ಕೇಂದ್ರ ಸರ್ಕಾರ ಶಿಫಾರಸು ಮಾಡಿದವರನ್ನು ರಾಷ್ಟ್ರಪತಿಗಳು ಸಿಇಸಿ ಹಾಗೂ ಇಸಿಯಾಗಿ ನೇಮಕ ಮಾಡುತ್ತಿದ್ದರು. ಈ ನಿರ್ಧಾರ ಸರಿಯಲ್ಲ ಎಂಬ ಕಾರಣಕ್ಕೆ ಕಾಯ್ದೆ ರಚನೆಯಾಗುವವರೆಗೆ ಪ್ರಧಾನಿ, ಲೋಕಸಭೆಯ ವಿಪಕ್ಷ ನಾಯಕ ಮತ್ತು ಸಿಜೆಐ ಅವರಿರುವ ಸಮಿತಿ ಸಿಇಸಿ ಮತ್ತು ಇಸಿ ನೇಮಕಕ್ಕೆ ಶಿಫಾರಸು ಮಾಡಬೇಕು ಎಂದು ಸೂಚಿಸಿತ್ತು. ಇದೀಗ ಕೇಂದ್ರ ಸರ್ಕಾರ ಮಂಡಿಸಿರುವ ಹೊಸ ಮಸೂದೆಯಲ್ಲಿ ಪ್ರಧಾನಿ, ವಿಪಕ್ಷ ನಾಯಕ, ಕೇಂದ್ರ ಸಚಿವರು ಆಯ್ಕೆ ಸಮಿತಿಯ ಸದಸ್ಯರಾಗಿಲಿದ್ದಾರೆ. ಒಂದು ವೇಳೆ ಲೋಕಸಭೆಯಲ್ಲಿ ವಿಪಕ್ಷ ಇಲ್ಲದಿದ್ದಲ್ಲಿ, ಅತಿ ಹೆಚ್ಚು ಸ್ಥಾನ ಗೆದ್ದಿರುವ ಪಕ್ಷದ ನಾಯಕ ಈ ಸಮಿತಿಯ ಸದಸ್ಯರಾಗಲಿದ್ದಾರೆ.

ಕರ್ನಾಟಕ ಎಲೆಕ್ಷನ್‌ಗೆ ₹196 ಕೋಟಿ ವೆಚ್ಚ ಮಾಡಿದ ಬಿಜೆಪಿ

Tap to resize

Latest Videos

ಹೊಸ ಕ್ರಿಮಿನಲ್‌ ಕಾಯ್ದೆಗಳಿಗೆ ಸಂಸತ್ತಿನ ಅನುಮೋದನೆ

ನವದೆಹಲಿ: ಶತಮಾನ ಹಳೆಯ ಇಂಡಿಯನ್‌ ಪೆನಲ್ ಕೋಡ್‌, ಇಂಡಿಯನ್‌ ಎವಿಡೆನ್ಸ್‌ ಕೋಡ್‌ ಹಾಗೂ ಸಿಆರ್‌ಪಿಸಿ ಕಾಯ್ದೆಗಳನ್ನು ಬದಲಿಗೆ ತಂದಿರುವ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಕಾಯ್ದೆ ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಗಳಿಗೆ ಗುರುವಾರ ರಾಜ್ಯಸಭೆಯಲ್ಲಿ ಧ್ವನಿಮತದ ಮೂಲಕ ಅಂಗೀಕಾರ ದೊರೆಯಿತು. ಈ ಮೂರು ಕಾಯ್ದೆಗಳಿಗೆ ಬುಧವಾರ ಲೋಕಸಭೆಯಲ್ಲಿ ಧ್ವನಿಮತದ ಅಂಗೀಕಾರ ದೊರೆಯಿತು. ಗುರುವಾರ ಬಹುತೇಕ ವಿಪಕ್ಷ ಸಂಸದ ಅನುಪಸ್ಥಿತಿಯಲ್ಲಿ ಒಪ್ಪಿಗೆ ದೊರೆತಿದೆ. ಇನ್ನು ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಲಾಗುತ್ತದೆ. ರಾಷ್ಟ್ರಪತಿ ಸಹಿ ದೊರೆತ ಬಳಿಕ ಜಾರಿಯಾಗುತ್ತದೆ.

ಪತ್ರಿಕೆ ನೋಂದಣಿ ಸರಳ ಮಾಡುವ ಹೊಸ ಕಾಯ್ದೆ ಲೋಕಸಭೆಯಲ್ಲಿ ಪಾಸ್‌
ನವದೆಹಲಿ: ಪತ್ರಿಕೆ ಮತ್ತು ನಿಯತಕಾಲಿಕೆಗಳ ನೋಂದಣಿಯನ್ನು ಸುಲಭಗೊಳಿಸುವ ನೂತನ ಕಾಯ್ದೆಗೆ ಗುರುವಾರ ಲೋಕಸಭೆಯಲ್ಲಿ ಅಂಗೀಕಾರ ದೊರೆತಿದೆ. ಪತ್ರಿಕೆ ಹಾಗೂ ನಿಯತಕಾಲಿಕೆ ನೋಂದಣಿ ಕಾಯ್ದೆ 2023ಕ್ಕೆ ಲೋಕಸಭೆಯಲ್ಲಿ ಧ್ವನಿಮತದ ಮೂಲಕ ಅನುಮೋದನೆ ದೊರೆತಿದೆ.  ಇದು 1867ರ ಪತ್ರಿಕೆ ಮತ್ತು ಪುಸ್ತಕ ನೋಂದಣಿ ಕಾಯ್ದೆಯ ಬದಲಿ ಕಾಯ್ದೆಯಾಗಿದೆ. ಈ ಮೊದಲು ಪತ್ರಿಕೆಗಳ ನೋಂದಣಿಗೆ ಸತತ 8 ಹಂತ ತೆಗೆದುಕೊಳ್ಳುತ್ತಿತ್ತು. ಆದರೆ ನೂತನ ಕಾಯ್ದೆ ಅಡಿಯಲ್ಲಿ ಕೇವಲ ಒಂದೆ ಹಂತದಲ್ಲಿ, ಬೆರಳಿನಂಚಿನಲ್ಲಿ ಪೂರ್ಣಗೊಳ್ಳಲಿದೆ ಎಂದು ಸಚಿವ ಅನುರಾಗ್‌ ಸಿಂಗ್‌ ಠಾಕೂರ್‌ ತಿಳಿಸಿದರು. ಈ ಕಾಯ್ದೆಗೆ ಆ.3ರಂದು ರಾಜ್ಯಸಭೆ ಅಂಗೀಕಾರ ನೀಡಿತು.

ಸೆಪ್ಟೆಂಬರ್ 2024ರೊಳಗೆ ಜಮ್ಮು ಕಾಶ್ಮೀರದಲ್ಲಿ ಎಲೆಕ್ಷನ್‌ ನಡೆಸಿ: ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ಡೆಡ್‌ಲೈನ್‌

click me!