ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ರಾಜ್ಯದಲ್ಲಿ ಸ್ಪಷ್ಟ ಬಹುಮತ ಪಡೆದು ಅಧಿಕಾರ ಹಿಡಿಯುವ ತಂತ್ರವನ್ನು ರೂಪಿಸಿದ್ದು, ಈ ಹಿನ್ನೆಲೆಯಲ್ಲಿ ಯಾದಗಿರಿಯ ಮಾಜಿ ಸಚಿವ ಮಾಲಕರೆಡ್ಡಿ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭೇಟಿಯಾಗಿ ಚರ್ಚೆ ಮಾಡಿದ್ದಾರೆ.
ಯಾದಗಿರಿ (ನ.19): ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ಬೆನ್ನಲ್ಲೇ ಇತ್ತೀಚೆಗೆ ಭಾರಿ ಪ್ರಮಾಣದಲ್ಲಿ ಗರಿಗೆದರಿದ ಪಕ್ಷಾಂತರ ಪರ್ವಕ್ಕೆ ಈಗ ಯಾದಗಿರಿ ಜಿಲ್ಲೆಯ ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಡಾ.ಎ.ಬಿ.ಮಾಲಕರೆಡ್ಡಿ ಕೂಡ ಒಳಗಾಗಲಿದ್ದಾರೆ ಎಂಬ ಸುಳಿವು ಲಭ್ಯವಾಗುತ್ತಿದೆ. ಕಾಂಗ್ರೆಸ್‌ನಿಂದ ರಾಜ್ಯದಲ್ಲಿ ಸ್ಪಷ್ಟ ಬಹುಮತ ಪಡೆದು ಅಧಿಕಾರ ಹಿಡಿಯುವ ತಂತ್ರವನ್ನು ರೂಪಿಸಿದ್ದು, ಈ ಹಿನ್ನೆಲೆಯಲ್ಲಿ ಯಾದಗಿರಿಯ ಮಾಜಿ ಸಚಿವ ಮಾಲಕರೆಡ್ಡಿ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭೇಟಿಯಾಗಿ ಚರ್ಚೆ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷದ ಹಳೆಯ ನಾಯಕರು ಮತ್ತು ಈ ಹಿಂದೆ ವಿವಿಧ ಕಾರಣಕ್ಕೆ ಬಿಜೆಪಿ (BJP) ಅಥವಾ ಜೆಡಿಎಸ್ (JDS)ಪಕ್ಷಕ್ಕೆ ಹೋದವರನ್ನು ಸೆಳೆದುಕೊಳ್ಳುವ ತಂತ್ರವನ್ನು ಕಾಂಗ್ರೆಸ್ (Congress) ಮಾಡುತ್ತಿದೆ. ಇದರಲ್ಲಿ ಮುಖ್ಯವಾಗಿ ತಾವಿರುವ ಪಕ್ಷದಿಂದ ಶಾಸಕರಾಗಲು ಟಿಕೆಟ್ (Ticket) ವಂಚಿತರಾದವರು, ಪಕ್ಷಕ್ಕಾಗಿ ದುಡಿದರೂ ಸೂಕ್ತ ಸ್ಥಾನಮಾನ ಸಿಗದವರು ಹಾಗೂ ಜನಬೆಂಬಲ ಇದ್ದರೂ ಪಕ್ಷದಿಂದ ಮೂಲೆಗುಂಪು (Sideline) ಆದವರನ್ನು ಪತ್ತೆಹಚ್ಚಿ ಪಕ್ಷಕ್ಕೆ ಸೆಳೆಯುವ ಕಾರ್ಯ ಮಾಡುತ್ತಿದೆ. ಈಗ ಯಾದಗಿರಿ ಜಿಲ್ಲೆಯ ನಾಯಕರಾದ ಡಾ.ಎ.ಬಿ.ಮಾಲಕರೆಡ್ಡಿ (Malakareddy) ಅವರನ್ನು ಸೆಳೆಯುವ ನಿಟ್ಟಿನಲ್ಲಿ ಅವರ ಮನೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (Shivakumar) ಭೇಟಿ ಮಾಡಿದ್ದಾರೆ. ಇದರ ಬೆನ್ನಲ್ಲೇ ಮಾಲಕರೆಡ್ಡಿ ಅವರು ಮರಳಿ ಕಾಂಗ್ರೆಸ್ ಸೇರ್ಪಡೆ ಆಗುತ್ತಾರಾ ಎನ್ನುವ ಕುತೂಹಲ (curiosity)ಗಳು ಕಂಡುಬರುತ್ತಿವೆ. ಈ ಬಗ್ಗೆ ಸ್ವತಃ ಡಿಕೆಶಿವಕುಮಾರ್ ಟ್ವೀಟ್ (Tweet) ಮಾಡಿದ್ದು, 'ಮಾಲಕರೆಡ್ಡಿ ಅವರು ಗೃಹ ಕಚೇರಿಯಲ್ಲಿ ಭೇಟಿಯಾಗಿ ಹಲವು ವಿಚಾರಗಳ ಕುರಿತು ಮಾತನಾಡಲಾಗಿದೆ' ಎಂದು ಹೇಳಿಕೊಂಡಿದ್ದಾರೆ.
undefined
Karnataka Elections: ಡಿಕೆಶಿ- ಸಿದ್ದರಾಮಯ್ಯ ಬೆಂಬಲಿಗರಿಂದ ಟಿಕೆಟ್ ಪೈಪೋಟಿ
ಕಾಂಗ್ರೆಸ್‌ನಿಂದ 5 ಬಾರಿ ಶಾಸಕ : ಯಾದಗಿರಿ ಜಿಲ್ಲೆಯ ಪ್ರಸ್ತುತ ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಡಾ.ಎ.ಬಿ.ಮಾಲಕರೆಡ್ಡಿ 40 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದು, 5 ಬಾರಿ ಕಾಂಗ್ರೆಸ್ ಶಾಸಕರಾಗಿ (MLA)cಆಯ್ಕೆಯಾಗಿದ್ದರು. ಈ ಅವಧಿಯಲ್ಲಿ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಆದರೆ, ಕಳೆದ ಲೋಕಸಭಾ ಚುನಾವಣೆ (Loksabha election) ಸಂದರ್ಭದಲ್ಲಿ ಮಾಲಕರೆಡ್ಡಿ ಅವರು ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿ ಸೇರ್ಪಡೆಯಾಗಿದ್ದರು. ಇದಕ್ಕೆ ಮಲ್ಲಿಕಾರ್ಜುನಖರ್ಗೆ (Mallikarjun Kharge) ನಡೆಗೆ ಬೇಸತ್ತು ಕಾಂಗ್ರೆಸ್ ತೊರೆದಿದ್ದರು ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ. ಈಗ 2023ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಭೇಟಿಯಾಗಿದ್ದು ರಾಜಕೀಯ (Political) ವಲಯದಲ್ಲಿ ಭಾರಿ ಚರ್ಚೆ ಉಂಟುಮಾಡಿದೆ. ಆದರೆ, ಇದರ ಬಗ್ಗೆ ಮಾಲಕರೆಡ್ಡಿ ಅವರು ಯಾವುದೇ ಗುಟ್ಟು ಬಿಟ್ಟುಕೊಡುತ್ತಿಲ್ಲ.