ಬಿಜೆಪಿಯಲ್ಲಿ ಲಿಂಗಾಯತರನ್ನು ತುಳಿಯುವ ಬಗ್ಗೆ ಶೆಟ್ಟರ್‌ ಮಾಡಿರುವ ಆರೋಪ ಸುಳ್ಳು: ಕೆ.ಎಸ್‌.ಈಶ್ವರಪ್ಪ

Published : Sep 08, 2023, 05:56 PM IST
ಬಿಜೆಪಿಯಲ್ಲಿ ಲಿಂಗಾಯತರನ್ನು ತುಳಿಯುವ ಬಗ್ಗೆ ಶೆಟ್ಟರ್‌ ಮಾಡಿರುವ ಆರೋಪ ಸುಳ್ಳು: ಕೆ.ಎಸ್‌.ಈಶ್ವರಪ್ಪ

ಸಾರಾಂಶ

ಕೇಂದ್ರದ ನಾಯಕರು ವಿರೋಧ ಪಕ್ಷದ ನಾಯಕನ ನೇಮಕ ಕುರಿತಂತೆ ಮಾಹಿತಿ ಸಂಗ್ರಹಿಸಿದ್ದಾರೆ. ಶೀಘ್ರದಲ್ಲಿಯೇ ಹೈಕಮಾಂಡ್‌ ಪ್ರತಿ ಪಕ್ಷದ ನಾಯಕನನ್ನು ನೇಮಕ ಮಾಡಲಿದ್ದಾರೆ. ನಮ್ಮಲ್ಲಿ 66 ಶಾಸಕರೂ ವಿರೋಧ ಪಕ್ಷದ ನಾಯಕರಿದ್ದಾರೆ. 

ವಿಜಯಪುರ (ಸೆ.08): ಕೇಂದ್ರದ ನಾಯಕರು ವಿರೋಧ ಪಕ್ಷದ ನಾಯಕನ ನೇಮಕ ಕುರಿತಂತೆ ಮಾಹಿತಿ ಸಂಗ್ರಹಿಸಿದ್ದಾರೆ. ಶೀಘ್ರದಲ್ಲಿಯೇ ಹೈಕಮಾಂಡ್‌ ಪ್ರತಿ ಪಕ್ಷದ ನಾಯಕನನ್ನು ನೇಮಕ ಮಾಡಲಿದ್ದಾರೆ. ನಮ್ಮಲ್ಲಿ 66 ಶಾಸಕರೂ ವಿರೋಧ ಪಕ್ಷದ ನಾಯಕರಿದ್ದಾರೆ. ಎಲ್ಲರೂ ಸಮರ್ಥವಾಗಿ ಉತ್ತರ ನೀಡುತ್ತಾರೆ. ರಾಜ್ಯ ಬಿಜೆಪಿಯಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಹೇಳಿದರು. ಬಿಜೆಪಿ ಪಕ್ಷ ಲಿಂಗಾಯತರನ್ನು ಎಂದೂ ಕಡೆಗಣನೆ ಮಾಡಿಲ್ಲ. ಬಿಜೆಪಿಯಲ್ಲಿ ಲಿಂಗಾಯತರನ್ನು ತುಳಿಯಲಾಗುತ್ತದೆ ಎಂಬ ಆರೋಪದಲ್ಲಿ ಹುರುಳಿಲ್ಲ. 

ಬಿಜೆಪಿ ಯಾವುದೇ ಜಾತಿಯನ್ನು ತುಳಿಯಲು ಹೋಗಿಲ್ಲ. ಈ ಬಗ್ಗೆ ಕಾಂಗ್ರೆಸ್‌ ಮುಖಂಡರು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಬಿಜೆಪಿಯಲ್ಲಿ ಲಿಂಗಾಯತರನ್ನು ತುಳಿಯುವ ಬಗ್ಗೆ ಮಾಡಿರುವ ಆರೋಪ ಶುದ್ಧ ಸುಳ್ಳು. ಬಿಜೆಪಿಯಲ್ಲಿ ಯಾವುದೇ ಜಾತಿ ವ್ಯವಸ್ಥೆ ಇಲ್ಲ. ಎಲ್ಲರೂ ಹಿಂದೂ ಧರ್ಮದವರಾಗಿದ್ದಾರೆ ಎಂದು ತಿಳಿಸಿದರು. ಜಗದೀಶ ಶೆಟ್ಟರ್‌ ಅವರು ಬಿಜೆಪಿ ಸರ್ಕಾರದಲ್ಲಿ ಸಿಎಂ ಆಗಿದ್ದರು. ಟಿಕೆಟ್‌ ಸಿಗಲಿಲ್ಲ ಎಂಬ ಕಾರಣಕ್ಕೆ ಜಗದೀಶ ಶೆಟ್ಟರ್ ಅವರು ಕಾಂಗ್ರೆಸ್ ಸೇರಿದ್ದಾರೆ. 

ಮೋದಿ ಅವರೇ ನಿಮ್ಮ ಸಮಯ ಮುಗಿದಿದೆ, ಮುಂದಿನ ಪ್ರಧಾನಿ ರಾಹುಲ್‌ ಗಾಂಧಿ: ಸಲೀಂ ಅಹ್ಮದ್

ಜಗದೀಶ ಶೆಟ್ಟರ್‌ ಅವರು ಬಿಜೆಪಿ ತಮ್ಮ ತಾಯಿ ಎನ್ನುತ್ತಿದ್ದರು. ಆದರೆ ಈಗ ಜಗದೀಶ ಶೆಟ್ಟರ್‌ ಅಂತವರು ತಾಯಿಯನ್ನು ಒದ್ದು ಹೊರಗೆ ಹೋಗಿದ್ದಾರೆ ಎಂದರು. ಬಿಜೆಪಿ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ್‌ ಅವರು ಜಗದೀಶ ಶೆಟ್ಟರ್‌ ಅವರು ಮುಖ್ಯಮಂತ್ರಿಯಾಗಿದ್ದಾಗ ಬಿಜೆಪಿ ಬಗ್ಗೆ ಮಾತನಾಡಬೇಕಿತ್ತು. ಈಗ ಪ್ರದೀಶ ಶೆಟ್ಟರ್ ಅವರ ಒಂದು ಕಾಲ ಬಿಜೆಪಿಯಿಂದ ಹೊರಗಿದೆ. ಹಾಗಾಗಿ ಪ್ರದೀಪ ಶೆಟ್ಟರ್ ಅವರು ಮಾತನಾಡುತ್ತಿದ್ದಾರೆ ಎಂದು ನುಡಿದರು.

ಮುಸ್ಲಿಂ ಧರ್ಮದ ಮೂಲದ ಬಗ್ಗೆ ಮಾತನಾಡಿ: ಈ ಉದಯನಿಧಿಗೂ ಸನಾತನ ಧರ್ಮಕ್ಕೂ ಏನೂ ಸಂಬಂಧವಿಲ್ಲ. ಯಾವನ್ರಿ ಅವನು ಸ್ಟಾಲಿನ್‌ ಎಂದು ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಆಕ್ರೋಶ ಹೊರಹಾಕಿದರು. ನಗರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತಾಡಿದ ಅವರು, ಸ್ಟಾಲಿನ್ ಒಬ್ಬ ಅಯೋಗ್ಯ, ಹುಚ್ಚ. ಸನಾತನ ಧರ್ಮ ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಧರ್ಮದ ಬಗ್ಗೆ ಮಾತನಾಡಿದವರು, ಧರ್ಮವನ್ನು ಮುಟ್ಟಿದವರು ಯಾರಾದರೂ ಉದ್ದಾರ ಆಗಿದ್ದಾರಾ? ಎಂದು ಖಾರವಾಗಿ ನುಡಿದರು. ಉದಯನಿಧಿ ಸ್ಟಾಲಿನ್‌ ಸನಾತನ ಧರ್ಮವನ್ನು ನಾಶ ಮಾಡುತ್ತೇನೆ ಎಂದು ಹೇಳುತ್ತಾನೆ. 

ಇದು ಅವರಪ್ಪ, ತಾತನ ಕಡೆಯಿಂದಲೂ ಆಗಿಲ್ಲ.ಇವನ್ಯಾವನೋ ಇನ್ನೂ ಬಚ್ಚಾ. ಅವನಿಗೆ ತಾಕತ್ತಿದ್ದರೆ ಮುಸ್ಲಿಂ ಧರ್ಮದ ಮೂಲದ ಬಗ್ಗೆ ಕಾಮೆಂಟ್‌ ಮಾಡಿ ಬದುಕಲಿ ನೋಡೋಣ ಎಂದರು. ಹಿಂದೂಗಳು ಶಾಂತಿಪ್ರಿಯರು. ಆದರೆ, ಸನಾತನ ಹಿಂದೂ ಧರ್ಮದ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದವರು ಭಸ್ಮ ಆಗುತ್ತಾರೆಂಬುದು ಎಲ್ಲರಿಗೂ ಗೊತ್ತು ಎಂದರು. ಸಚಿವ ಜಿ.ಪರಮೇಶ್ವರ ಅವರಿಗೆ ಇನ್ನೂರು ವರ್ಷಗಳ ತಮ್ಮ ಮುತ್ತಜ್ಜನ ಬಗ್ಗೆಯೇ ಗೊತ್ತಿಲ್ಲ. ಇನ್ನು ಸಾವಿರಾರು ವರ್ಷಗಳ ಹಿಂದೂ ಧರ್ಮದ ಬಗ್ಗೆ ಕೇಳುತ್ತಾರೆ. ಇವರಿಗೆ ಏನೆನ್ನಬೇಕು ಎಂದು ಈಶ್ವರಪ್ಪ ಹೇಳಿದರು.

ನಾನು ಹಿಂದು ಅಲ್ಲ, ಸನಾತನಕ್ಕೆ ನಾನು ಹುಟ್ಟಿಲ್ಲ, ನನ್ನ ತಂದೆ- ತಾಯಿಗೆ ನಾನು ಹುಟ್ಟಿದ್ದೇನೆ ಎಂದು ಹೇಳಿಕೆ ನೀಡಿರುವ ಚಿತ್ರನಟ ಪ್ರಕಾಶ ರಾಜ್‌ ಒಬ್ಬಅಯೋಗ್ಯ, ಹುಚ್ಚ. ಅಪ್ಪ-ಅಮ್ಮನಿಗೆ ಹುಟ್ಟಿದ್ದೇನೆ ಎನ್ನುವುದಕ್ಕೆ ಇವನಿಗೇನು ಗ್ಯಾರಂಟಿ ಇದೆ ಎಂದು ಪ್ರಶ್ನಿಸಿದರು. ನನಗೆ ಚಿತ್ರನಟ ಪ್ರಕಾಶ ರಾಜ್‌ ಅವರ ಅಮ್ಮನ ಬಗ್ಗೆ ಗೌರವವಿದೆ. ಆದರೆ, ಇವರೇ ಅಪ್ಪ ಎಂದು ಅವರ ತಾಯಿ ಹೇಳಿದಾಗ ಮಾತ್ರ ಅಪ್ಪ ಯಾರೆಂದು ಗೊತ್ತಾಗುತ್ತದೆ ಎಂದರು.

ಕಾಂಗ್ರೆಸ್ಸಲ್ಲಿ ಲಿಂಗಾಯತರು 2ನೇ ದರ್ಜೆಯವರು: ಗೋವಿಂದ ಕಾರಜೋಳ

ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಸರ್ವ ಜನಾಂಗದ ಶಾಂತಿಯ ತೋಟ ವಿಚಾರದ ಬಗ್ಗೆ ಪ್ರಸ್ತಾಪಿಸಿದ ಅವರು, ಮಾಡುತ್ತಿರುವುದೆಲ್ಲ, ಇರುವುದೆಲ್ಲ ಹಲಕಟ್‌ ಗಿರಿ, ಶಾಂತಿ ಕೆಡಿಸುವುದೇ ಅವರ ಕೆಲಸ. ಮುಸ್ಲಿಂರಿಗೆ ನೋವು ಮಾಡಬೇಕು ಎಂದು ಹೇಳುವುದಿಲ್ಲ. ಕುರಾನ್‌, ಮುಸ್ಲಿಂರು ಎಲ್ಲಿ? ಯಾವಾಗ? ಹುಟ್ಟಿದ್ದರು ಎಂಬ ಪ್ರಶ್ನೆ ಕೇಳಲಿ ನೋಡೋಣ. ಅವರನ್ನು ಕೆಣಕಿ ನೋಡಲಿ ಗೊತ್ತಾಗುತ್ತದೆ. ಮೈಮೇಲೆ ಜ್ಞಾನ ಇಟ್ಟುಕೊಂಡು ಮಾತನಾಡಬೇಕು ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ: ಸಂಸದ ಜಗದೀಶ್ ಶೆಟ್ಟರ್
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮತ್ತು ಬೆಳಗಾವಿ ವಿಭಜನೆ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಹತ್ವದ ಮಾಹಿತಿ