ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ಯಾಕೆ? ಕಾರಣ ಕೊಟ್ಟ ಮಧು ಬಂಗಾರಪ್ಪ!

By Suvarna News  |  First Published Apr 12, 2021, 2:51 PM IST

ಸೊರಬ ಜೆಡಿಎಸ್  ಮಾಜಿ ಶಾಸಕ ಮಧು ಬಂಗಾರಪ್ಪ ಅವರು ಕಾಂಗ್ರೆಸ್ ಸೇರಿದ್ಯಾಕೆ ಎನ್ನುವುದಕ್ಕೆ ಸ್ಪಷ್ಟ ಕಾರಣ ಕೊಟ್ಟಿದ್ದಾರೆ.


ಬೆಳಗಾವಿ, (ಏ.12): ಮಧುಬಂಗಾರಪ್ಪ ಅವರು ಈಗಾಗಲೇ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರದಲ್ಲಿ ತೊಡಗಿದ್ದಾರೆ.

ಇನ್ನು ಈ ಹಿಂದೆ ಮಧು ಬಂಗಾರಪ್ಪ ಅವರು ಜೆಡಿಎಸ್ ಪಕ್ಷವನ್ನು ಏಕೆ ತೊರೆದರು ಎನ್ನುವ ಪ್ರಶ್ನೆಗಳು ಉದ್ಭವಿಸಿದ್ದವು. ಇದೀಗ ಅದಕ್ಕೆ ಸ್ವತಃ ಮಧು ಬಂಗಾರಪ್ಪನವರೇ ಸ್ಪಷ್ಟನೆ ಕೊಟ್ಟಿದ್ದಾರೆ.

Tap to resize

Latest Videos

ಜೆಡಿಎಸ್‌ ನಾಯಕರನ್ನೂ ಕಾಂಗ್ರೆಸ್‌ಗೆ ಕರೆದೊಯ್ಯಲು ಮಧುಬಂಗಾರಪ್ಪ ಪ್ಲಾನ್!

ಈ ಬಗ್ಗೆ ಬೆಳಗಾವಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಧು ಬಂಗಾರಪ್ಪ, ಬಂಗಾರಪ್ಪನವರ ರಾಜಕೀಯ ಚಿಂತನೆಗಳನ್ನು ಜಾರಿಗೆ ತರುವ ಸಲುವಾಗಿ ತಾನು ಕಾಂಗ್ರೆಸ್​ ಪಕ್ಷವನ್ನ ಸೇರಿರುವುದಾಗಿ ಹೇಳಿದರು.

ಕಾಂಗ್ರೆಸ್​ ಪಕ್ಷದ ಪರವಾಗಿ ಕೆಲಸ, ಪ್ರಚಾರ ಮಾಡಲು ನನಗೆ ಸಂತೋಷ ಆಗುತ್ತದೆ. ಇದರಿಂದಾಗಿ ನಾನು ಅಧಿಕೃತವಾಗಿ ಕಾಂಗ್ರೆಸ್​ ಸೇರಿದಂತಾಗಿದೆ. ನಮ್ಮ ತಂದೆ ಬಂಗಾರಪ್ಪ ಈ ಭಾಗದಲ್ಲಿ ಸತೀಶ್​ ಜಾರಕಿಹೊಳಿ‌ ಅವರ ಬಳಿ ಉಳಿದುಕೊಳ್ಳುತ್ತಿದ್ದರು, ಅವರಿಗೆ ನಾನು ಧನ್ಯವಾದ ಹೇಳುತ್ತೇನೆ. ಕಾಂಗ್ರೆಸ್​ ಪಕ್ಷ ಸೇರಲು ಮನಸ್ಸು ಮಾಡಿದ್ರೆ ಸಾಕು, ನಾನು ಸೇರಿದಂತೆ ಆಗಿದೆ. ಕಾಂಗ್ರೆಸ್​ ಪಕ್ಷದ ಪರವಾಗಿ ಪ್ರಚಾರ ಮಾಡುವ ಕೆಲಸವನ್ನ ಕೂಡ ಶುರುಮಾಡಿದ್ದೇನೆ. ನಾನು ಮನಸಾರೆ ಕಾಂಗ್ರೆಸ್​ಗೆ ಬಂದಿದ್ದೇನೆ ಎಂದರು.

ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಒಡೆದು ಆಳುತ್ತಿದ್ದಾರೆ‌, ಬಡವರನ್ನ ಬಡವರಾಗಿಯೇ ನೋಡುತ್ತಿದ್ದಾರೆ. ದೇಶದ ರೈತರನ್ನ ಕರೆದು ಮಾತನಾಡುವ ಸೌಜನ್ಯ ಅವರಲ್ಲಿ ಇಲ್ಲ. ಇವರಿಗೆ ರಾಜಕಾರಣ ಮಾಡಲು ಬರಲ್ಲ, ಹಾಗಾಗಿ ಹಿಂಬಾಗಿಲಿನಿಂದ ಬರ್ತಾ ಇದ್ದಾರೆ. ರಾಜ್ಯವನ್ನ ಕಾರ್ಪೊರೇಟ್​ಗೆ ಮಾರಿ ಬಿಡಬಹುದೆನ್ನುವ ಪರಿಸ್ಥಿತಿ ಬಂದಿದೆ. ಸತೀಶ್​ ಜಾರಕಿಹೊಳಿ‌ ಗೆಲುವು ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಸಂದೇಶವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

click me!