'ಬೈ ಎಲೆಕ್ಷನ್‌ ಬಳಿಕ ನಾಲಾಯಕ್‌ ಬಿಜೆಪಿ ಸರ್ಕಾರ ಪತನ'

By Kannadaprabha NewsFirst Published Apr 12, 2021, 10:31 AM IST
Highlights

ಸತೀಶ್‌ ಜಾರಕಿಹೊಳಿ ಗೆಲುವಿನ ಬಳಿಕ ತನ್ನಷ್ಟಕ್ಕೆ ತಾನೇ ಕರ್ನಾಟಕ ಸರ್ಕಾರ ಬಿದ್ದು ಹೋಗುತ್ತದೆ| ಇದಾದ ಬಳಿಕ ಜನರ ಮತಗಳಿಂದ ಕಾಂಗ್ರೆಸ್‌ ಸರ್ಕಾರ ರಚನೆ|  ರಾಜ್ಯವನ್ನು ಕಾಂಗ್ರೆಸ್‌ ಮತ್ತೊಮ್ಮೆ ಅಭಿವೃದ್ಧಿಯತ್ತ ಕೊಂಡೊಯ್ಯುತ್ತದೆ:ಸುರ್ಜೇವಾಲಾ| 

ಬೆಳಗಾವಿ(ಏ.12): ಭ್ರಷ್ಟಾಚಾರ ತುಂಬಿದ ನಾಲಾಯಕ್‌ ಸರ್ಕಾರವನ್ನು ಬದಲಾಯಿಸಲು ಜನ ತುದಿಗಾಲಲ್ಲಿ ನಿಂತಿದ್ದಾರೆ. ದೇಶ ಹಾಗೂ ರಾಜ್ಯದಲ್ಲಿ ಸರ್ಕಾರ ಬದಲಾವಣೆ ಆಗೋದು ಗೋಡೆ ಬರಹದಷ್ಟೇ ಸ್ಪಷ್ಟ. ಬೆಳಗಾವಿ ಲೋಕಸಭೆ ಉಪಚುನಾವಣೆ ಫಲಿತಾಂಶ ಕರ್ನಾಟಕದ ಬಿಜೆಪಿ ಸರ್ಕಾರ ಪತನಕ್ಕೆ ಮುನ್ನುಡಿಯಾಗಲಿದೆ ಎಂದು ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಹೇಳಿದ್ದಾರೆ.

ನಗರದಲ್ಲಿ ಭಾನುವಾರ ಮಾತನಾಡಿದ ಅವರು, ಸಚಿವರು ಮುಖ್ಯಮಂತ್ರಿ ಮೇಲೆ ಆರೋಪ ಮಾಡುತ್ತಿದ್ದರೆ, ಮುಖ್ಯಮಂತ್ರಿಗಳು ಸಚಿವರ ಮೇಲೆ ಆರೋಪ ಮಾಡುತ್ತಾರೆ. ರಾಜ್ಯದ ಮಂತ್ರಿಗಳು ಕೇಂದ್ರ ಸಚಿವರ ಮೇಲೆ ಆರೋಪ ಹೊರಿಸುತ್ತಾರೆ. ಕೇಂದ್ರ ಸರ್ಕಾರದವರು ಇಲ್ಲಿಯ ಮಂತ್ರಿಗಳು ನಾಲಾಯಕ್‌ ಎನ್ನುತ್ತಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.
ಸತೀಶ್‌ ಜಾರಕಿಹೊಳಿ ಗೆಲುವಿನ ಬಳಿಕ ತನ್ನಷ್ಟಕ್ಕೆ ತಾನೇ ಕರ್ನಾಟಕ ಸರ್ಕಾರ ಬಿದ್ದು ಹೋಗುತ್ತದೆ. ಇದಾದ ಬಳಿಕ ಜನರ ಮತಗಳಿಂದ ಕಾಂಗ್ರೆಸ್‌ ಸರ್ಕಾರ ರಚನೆಯಾಗಲಿದೆ. ರಾಜ್ಯವನ್ನು ಕಾಂಗ್ರೆಸ್‌ ಮತ್ತೊಮ್ಮೆ ಅಭಿವೃದ್ಧಿಯತ್ತ ಕೊಂಡೊಯ್ಯುತ್ತದೆ ಎಂದರು.

ನಾವು 3 ರಾಜ್ಯ ಗೆಲ್ತೇವೆ, ನೀವು ಒಂದು ಗೆದ್ದು ತೋರಿಸಿ: ಕಾಂಗ್ರೆಸ್‌ಗೆ ಕಟೀಲ್‌ ಸವಾಲು

ಜೆಡಿಎಸ್‌ನ ಮತ ವಿಭಜಿಸೋ ತಂತ್ರ ವಿಫಲ

ಬಸವಕಲ್ಯಾಣದಲ್ಲಿ ನಡೆದ ಬೃಹತ್‌ ಸಮಾವೇಶದಲ್ಲಿ ಮಾತನಾಡಿದ ಅವರು, ಜೆಡಿಎಸ್‌ ತನ್ನ ಅಭ್ಯರ್ಥಿ ಹಾಕಿದ್ದು ಕಾಂಗ್ರೆಸ್‌ ಮತ ವಿಭಜಿಸಲು ಹೊರತು ಸ್ಪರ್ಧಾಸ್ಫೂರ್ತಿಯಿಂದಲ್ಲ. ಕಾಂಗ್ರೆಸ್‌ಗೆ ಬರುವ ಮತಗಳನ್ನು ವಿಭಜಿಸುವ ಕುತಂತ್ರವನ್ನು ಜೆಡಿಎಸ್‌ ಮಾಡಿದ್ದು ಜನ ಅದನ್ನು ವಿಫಲಗೊಳಿಸ್ತಾರೆ. ಯಾರು ಯಾವ ಅಭ್ಯರ್ಥಿನ್ನು ಕಣಕ್ಕಿಳಿಸಿದರೂ ಬಸವಕಲ್ಯಾಣದಲ್ಲಿ ದಿ. ನಾರಾಯಣರಾವ್‌ ಅವರ ಅಭಿವೃದ್ಧಿ ಕಾರ್ಯಗಳನ್ನು ಮನಗಂಡು ಕಾಂಗ್ರೆಸ್‌ಗೆ ಮತ ಹಾಕುತ್ತಾರೆ ಎಂದು ಸುರ್ಜೇವಾಲಾ ಹೇಳಿದ್ದಾರೆ.
 

click me!