ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ವಿಜಯೇಂದ್ರ ಮೊದಲ ಬಾರಿ ತವರು ಜಿಲ್ಲೆ ಶಿವಮೊಗ್ಗಕ್ಕೆ ಬಂದಾಗ ಆದ ಸಂಭ್ರಮವನ್ನು ಕಾಂಗ್ರೆಸ್‌ನವರು ನೋಡಿದರೆ ಅವರ ಎದೆಯೇ ಹೊಡೆದುಹೋಗುತ್ತದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಶಿವಮೊಗ್ಗ (ನ.29): ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ವಿಜಯೇಂದ್ರ ಮೊದಲ ಬಾರಿ ತವರು ಜಿಲ್ಲೆ ಶಿವಮೊಗ್ಗಕ್ಕೆ ಬಂದಾಗ ಆದ ಸಂಭ್ರಮವನ್ನು ಕಾಂಗ್ರೆಸ್‌ನವರು ನೋಡಿದರೆ ಅವರ ಎದೆಯೇ ಹೊಡೆದುಹೋಗುತ್ತದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಜಿಲ್ಲಾ ಬಿಜೆಪಿ ವತಿಯಿಂದ ನಗರದ ಪ್ರೇರಣಾ ಸಭಾಂಗಣದಲ್ಲಿ ಬುಧವಾರ ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ನಾಯಕರು ವಿಜಯೇಂದ್ರ ರಾಜ್ಯಾಧ್ಯಕ್ಷ ಅಂದಾಗ ರಾಜ್ಯದಲ್ಲಿ ಮಿಂಚಿನ ಸಂಚಾರ ಆಯ್ತು ಎಂದರು.
ಬಿಜೆಪಿ ಲಿಂಗಾಯತ ವಿರೋಧಿ ಅಂತ ಕಾಂಗ್ರೆಸ್ ಹೇಳುತ್ತಿದ್ದರು. ಈಗ ಅವರಿಗೆ ಹೇಳಲು ಪದಗಳೇ ಸಿಗುತ್ತಿಲ್ಲ. ಬಿ.ವೈ.ವಿಜಯೇಂದ್ರ ಕೇವಲ ಲಿಂಗಾಯತ ನಾಯಕ ಅಲ್ಲ, ಭಾರತ ದೇಶದ ಹಿಂದೂ ನಾಯಕ ಆಗ್ತಾರೆ ಎಂದು ಭವಿಷ್ಯ ನುಡಿದರು. ವಿಜಯೇಂದ್ರ ಜೊತೆ ಕರ್ನಾಟಕದ ಒಂದು ಕೋಟಿ ಕಾರ್ಯಕರ್ತರು ಇದ್ದಾರೆ. ರಾಜ್ಯಾಧ್ಯಕ್ಷರ ಆಯ್ಕೆ ವೇಳೆ ಪಕ್ಷದಲ್ಲಿ ಅಸಮಾಧಾನ ಇದ್ದಿದ್ದು ಹೌದು. ಯಾರೋ ಮೂವರಿಗೆ ಅಸಮಾಧಾನ ಇದೆ. ಅವರ ಬಳಿ ರಾಷ್ಟ್ರೀಯ ನಾಯಕರು ಮಾತನಾಡಿ, ಸರಿಪಡಿಸುತ್ತಾರೆ ಎಂದರು.
ಪ್ರತಾಪ ಸಿಂಹ ಅವರೇ ಕೇಂದ್ರದ ಯೋಜನೆಗಳ ಪಟ್ಟಿಯನ್ನಾದರೂ ಬಿಡುಗಡೆಗೊಳಿಸಿ: ಎಂ.ಲಕ್ಷ್ಮಣ್
ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ 25 ಸೀಟ್ ಗೆದ್ದಿದ್ದೇವೆ. ಸ್ಯಾಂಪಲ್‌ಗೆ ಒಂದು ಸ್ಥಾನವನ್ನು ಕಾಂಗ್ರೆಸ್ ಗೆದ್ದಿದೆ. ಆದರೆ, ಈ ಬಾರಿ ಒಂದೂ ಸೀಟ್ ಕೂಡ ಕಾಂಗ್ರೆಸ್ ಗೆಲ್ಲಲ್ಲ. ನಾವು 28ಕ್ಕೆ 28 ಸ್ಥಾನ ಗೆಲ್ಲುತ್ತೇವೆ. ಇದು ನೂರಕ್ಕೆ ನೂರು ಸತ್ಯಎಂದು ಹೇಳಿದರು. ರಾಜ್ಯಾಧ್ಯಕ್ಷ ಆದ ಕೂಡಲೇ ಎಲ್ಲರೂ ದೆಹಲಿ ಓಡಿ ಹೋಗ್ತಾರೆ. ಆದರೆ, ವಿಜಯೇಂದ್ರ ಬೂತ್ ಅಧ್ಯಕ್ಷರ ಮನೆಗೆ ಹೋದರು. ಹೀಗಾಗಿ ಪಕ್ಷದ ಎಲ್ಲ ಹಿರಿಯರು, ಪ್ರತಿಯೊಬ್ಬರು ವಿಜಯೇಂದ್ರ ಅವರಿಗೆ ಶಕ್ತಿ ಧಾರೆ ಎರೆಯಬೇಕಿದೆ ಎಂದರು.
ಪ್ರಪಂಚ ಗೆದ್ದಂತೆ ಕಾಂಗ್ರೆಸ್ ವರ್ತನೆ: ಜನರು ಗ್ಯಾರಂಟಿ ಮೋಸ ಜಾಲಕ್ಕೆ ಬಲಿಯಾದ ಕಾರಣ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಪ್ರಪಂಚವೇ ಗೆದ್ದಿದ್ದೇವೆ ಎನ್ನುವಂತೆ ಕಾಂಗ್ರೆಸ್‌ನವರು ವರ್ತಿಸುತ್ತಿದ್ದಾರೆ ಎಂದು ಈಶ್ವರಪ್ಪ ಟೀಕಿಸಿದರು. ವಿಧಾನಸಭೆಯಲ್ಲಿ ಎಲ್ಲ ಶಾಸಕರು ಮುಸ್ಲಿಂ ನಾಯಕ ಯು.ಟಿ.ಖಾದರ್‌ಗೆ ತಲೆಬಾಗಿ ಹೋಗಬೇಕು ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ. ನಾವು ದೇಶದ ಸಂವಿಧಾನಕ, ಸಭಾಧ್ಯಕ್ಷ ಪೀಠಕ್ಕೆ ತಲೆಬಾಗುತ್ತೇವೆ ಹೊರೆತು ಯು.ಟಿ.ಖಾದರ್‌ಗೆ ಅಲ್ಲ. ಜಮೀರ್ ಅಹಮದ್ ಒಬ್ಬ ರಾಷ್ಟ್ರ.
ರಾಜ್ಯ ಸರ್ಕಾರದ ವೈಫಲ್ಯದ ವಿರುದ್ಧ ಜಂಟಿ ಹೋರಾಟ: ಎಚ್.ಡಿ.ಕುಮಾರಸ್ವಾಮಿ
ಕರ್ನಾಟಕ ರಾಜ್ಯದಲ್ಲಿರುವ ಮುಸ್ಲಿಂ ದೇಶದ್ರೋಹಿಗಳನ್ನು ಸದೆ ಬಡಿಯುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹರಿಹಾಯ್ದರು. ಅಕ್ರಮ ಆಸ್ತಿ ಸಂಪಾದನೆ ವಿಚಾರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೇಲೆ ಇರುವ ಸಿಬಿಐ ಕೇಸ್ ಅನ್ನು ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯವರ ಕೃಪಾಕಟಾಕ್ಷದಿಂದ ವಾಪಸ್ ತೆಗೆಸಿದ್ದಾರೆ. ಡಿ.ಕೆ.ಶಿವಕುಮಾರ್ ಅವರನ್ನು ಉಳಿಸಲು ಕಾಂಗ್ರೆಸ್ ಎಲ್ಲರಿಗೂ ದ್ರೋಹ ಮಾಡುತ್ತಿದೆ. ಇಂದೆಲ್ಲ ನಾಳೆ ಜೈಲಿಗೆ ಹೋಗುತ್ತಾರೆ ಎಂದು ಭವಿಷ್ಯ ನುಡಿದರು.