ದೇವೇಗೌಡರು ಪ್ರತಾಪ್ ಸಿಂಹ ಟಿಕೆಟ್ ತಪ್ಪಿಸಿದ್ರು ಎಂಬುದು ಜಗತ್ತಿನ ಎಂಟನೇ ಅದ್ಛುತ: ಎಚ್‌ಡಿಕೆ

By Govindaraj S  |  First Published Apr 4, 2024, 11:24 AM IST

ಸಂಸದೆ ಸುಮಲತಾ ಅವರು ನನಗೆ ಸಹೋದರನ ರೀತಿ ಪ್ರೀತಿ ತೋರಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಮನೆಗೆ ಹೋದಾಗ ರಾಜಕೀಯ ಭಿನ್ನಾಭಿಪ್ರಾಯ ಮರೆತು ವಿಶ್ವಾಸ ಅಭಿಮಾನದಿಂದ ಮಾತಾಡಿದ್ದೇವೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. 


ಮೈಸೂರು (ಏ.04): ಸಂಸದೆ ಸುಮಲತಾ ಅವರು ನನಗೆ ಸಹೋದರನ ರೀತಿ ಪ್ರೀತಿ ತೋರಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಮನೆಗೆ ಹೋದಾಗ ರಾಜಕೀಯ ಭಿನ್ನಾಭಿಪ್ರಾಯ ಮರೆತು ವಿಶ್ವಾಸ ಅಭಿಮಾನದಿಂದ ಮಾತಾಡಿದ್ದೇವೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. ಸಿದ್ದರಾಮಯ್ಯ ಅವರದು ಯಾವಾಗಲೂ ದೇವೇಗೌಡರ ಭಜನೆ ಮಾಡುವುದೆ ಕೆಲಸ. ಸಿಎಂ ಜವಾಬ್ದಾರಿ ಜೊತೆಗೆ ಜ್ಯೋತಿಷ್ಯ ಕೂಡ ಕಲಿತಿರಬೇಕು. ಅವರು ಈಗ ದೊಡ್ಡ ಜ್ಯೋತಿಷಿ ಆಗಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.

ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಇದ್ದಾಗ ನಾವು ಮೈತ್ರಿ ಧರ್ಮ ಪಾಲನೆ ಮಾಡಿದ್ದೇವೆ. ನಾನು ಮೈತ್ರಿ ಧರ್ಮ ಮುರಿದಿದ್ದರೆ ಕಾಂಗ್ರೆಸ್ ಒಂದು ಸ್ಥಾನವೂ ಬರ್ತಾ ಇರಲಿಲ್ಲ. ನಾನು ಮೈತ್ರಿ ಧರ್ಮ ಪಾಲನೆ ಮಾಡಬೇಡಿ ಅಂತಾ ಹೇಳಿದ್ರೆ ಕಳೆದ ಬಾರಿಯೆ ಬಿಜೆಪಿ ಬೆಂಗಳೂರು ಗ್ರಾಮಾಂತರದಲ್ಲಿ ಗೆಲ್ತಾ ಇತ್ತು. ನಮ್ಮ ಭದ್ರ ಕೋಟೆಗೆ ಕಾಂಗ್ರೆಸ್ ನುಗ್ಗಲು ಆಗ ನಾನೇ ಅವಕಾಶ ಮಾಡಿಕೊಟ್ಟು ಬಿಟ್ಟೆ. ಆಗ ಸಾಲ ಮಾಡಿ ಪಕ್ಷ ಸಂಘಟನೆ ಮಾಡಿದ್ದು ನಾವು. ಪೆಂಡಾಲ್ ಹಾಕಿ ವೇದಿಕೆ ಹಾಕಿದ್ದು ನಾವು, ಬಂದು ಭಾಷಣ ಮಾಡಿ ಹೋಗ್ತಾ ಇದ್ದಿದ್ದು ಸಿದ್ದರಾಮಯ್ಯ. ಜೆಡಿಎಸ್ ಸಂಘಟನೆಗೆ ಸಿದ್ದರಾಮಯ್ಯ ಯಾವತ್ತು ಸಾಲ ಮಾಡಿದ್ದಾರೆ? ಎಂದು ಅವರು ಪ್ರಶ್ನಿಸಿದರು.

Tap to resize

Latest Videos

ಜಗತ್ತಿನ ಎಂಟನೇ ಅದ್ಛುತ: ದೇವೇಗೌಡರು ಪ್ರತಾಪ್ ಸಿಂಹ ಗೆ ಟಿಕೆಟ್ ತಪ್ಪಿಸಿದ್ರು ಎಂಬುದು ಜಗತ್ತಿನ ಎಂಟನೇ ಅದ್ಛುತ. 2004 ರಲ್ಲೇ ಬಿಜೆಪಿಯ ಅರುಣ್ ಜೆಟ್ಲಿ ನನಗೆ ಸಿಎಂ ಆಫರ್ ಕೊಟ್ಟಿದ್ದರು. ಆಗ ಸಿದ್ದರಾಮಯ್ಯ ರನ್ನು ಬಿಜೆಪಿ ಕೇಳಿರಲಿಲ್ಲ. ಒಕ್ಕಲಿಗರ ಮೇಲೆ ಈಗ ಮಮತೆ ಬಂದಿದೆ ಎಂದು ಅವರು ಟೀಕಿಸಿದರು. ಸಿದ್ದರಾಮಯ್ಯ ಕಣ್ಣೀರು ಕೃತಕ. ನಮ್ಮ ಕಣ್ಣೀರು ಭಾವನಾತ್ಮಕ. ಚಾಮುಂಡೇಶ್ವರಿ ಕ್ಷೇತ್ರಕ್ಕೆ ಇವರು ಏನೂ ಕಡಿದು ಕಟ್ಟೆ ಹಾಕಿದ್ದಾರೆ ಹೇಳಲಿ.ಬಾದಾಮಿ ಕ್ಷೇತ್ರಕ್ಕೆ ಏನೂ ಕೊಟ್ಟರು? ನಾನು ಸಿಎಂ ಆಗಿದ್ದಾಗ ಇವರಂತೆ ನನ್ನ ಮಗನಿಗೆ ಕ್ಷೇತ್ರದ ಜವಾಬ್ದಾರಿ ಕೊಟ್ಟಿರಲಿಲ್ಲ. 

ಕಾಂಗ್ರೆಸ್‌ ಬಗ್ಗೆ ಮುನಿಸಿಕೊಂಡಿದ್ದ ಎಚ್.ವಿಶ್ವನಾಥ್‌ರನ್ನು ಬಿಜೆಪಿಗೆ ಸೆಳೆದ ವಿಜಯೇಂದ್ರ

ಯಡಿಯೂರಪ್ಪಗೆ ಅವತ್ತು ನಮ್ಮ ಸರ್ಕಾರ ಬೀಳಿಸಲು ಸಹಾಯ ಮಾಡಿದ್ದು ಯಾರು? ಸಿದ್ದರಾಮಯ್ಯ ಚಿತಾವಣೆ ಇರಲಿಲ್ವಾ. ಸಿದ್ಧವನದಲ್ಲಿ ಸಿದ್ಧ ಔಷಧ ಸಿದ್ದ ಮಾಡಿದ್ದು ಯಾರು? ಸಿದ್ದರಾಮಯ್ಯ ಮಾತಲ್ಲಿ ಬರೀ ಗರ್ವ ತುಂಬಿರುತ್ತೆ. ವಿಧಾನಸೌಧದಲ್ಲೆ ಮೈಸೂರು ಪೈಲ್ವಾನ್ ಥರ ತೊಡೆ ತಟ್ಟಿ ಗರ್ವ ತೋರಿಸಿದ್ದು ಯಾರು? ಎಂದು ಅವರು ಪ್ರಶ್ನಿಸಿದರು. ಕಾಂಗ್ರೆಸ್ ಸರ್ಕಾರ ನಿತ್ಯ ಮಾಡ್ತಾ ಇರೋದು ಜಾತಿ ರಾಜಕಾರಣ ಎಂದು ಅವರು ಹೇಳಿದರು.

click me!