ಗುತ್ತಿಗೆದಾರರ ಆರೋಪದ ವಿಚಾರದಲ್ಲಿ ಸಿದ್ದು ಸುಳ್ಳು ಹೇಳುತ್ತಿದ್ದಾರೆ: ಬೊಮ್ಮಾಯಿ

By Kannadaprabha News  |  First Published Aug 13, 2023, 9:25 PM IST

ಗುತ್ತಿಗೆದಾರರ ಆರೋಪದ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ. ನಮ್ಮ ಅವಧಿಯ 7,157 ಕೋಟಿಯನ್ನು ನಾವು ಬಿಡುಗಡೆ ಮಾಡಿದ್ದೇವೆ. ಆದರೆ ಆ ಬಿಲ್‌ ಅನ್ನು ಗುತ್ತಿಗೆದಾರರಿಗೆ ನೀಡಲು ಈಗ ಕಮಿಷನ್‌ ಕೇಳುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ. 
 


ಹಾವೇರಿ (ಆ.13): ಗುತ್ತಿಗೆದಾರರ ಆರೋಪದ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ. ನಮ್ಮ ಅವಧಿಯ 7,157 ಕೋಟಿಯನ್ನು ನಾವು ಬಿಡುಗಡೆ ಮಾಡಿದ್ದೇವೆ. ಆದರೆ ಆ ಬಿಲ್‌ ಅನ್ನು ಗುತ್ತಿಗೆದಾರರಿಗೆ ನೀಡಲು ಈಗ ಕಮಿಷನ್‌ ಕೇಳುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ. ಶಿಗ್ಗಾಂವಿಯಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿ, ಬಿಜೆಪಿ ಸರ್ಕಾರದ ಅವಧಿಯಲ್ಲಿನ ಕಾಮಗಾರಿಗಳ ಹಣವನ್ನು ಗುತ್ತಿಗೆದಾರರಿಗೆ ಬಿಡುಗಡೆಯಾಗಿಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯವರ ಹೇಳಿಕೆ ನಿಜವಲ್ಲ. ಮೂರು ವರ್ಷದ ಹಿಂದಿನ 6,500 ಕೋಟಿ ನಾವು ಬಿಡುಗಡೆ ಮಾಡಿದ್ದೇವೆ. 

ನಾಲ್ಕೈದು ತಿಂಗಳ ಹಿಂದೆ ನಮ್ಮ ಸರ್ಕಾರವಿದ್ದಾಗಲೇ ಮತ್ತೆ 657 ಕೋಟಿ ಬಿಡುಗಡೆ ಮಾಡಿದ್ದೇವೆ. ಆದರೆ ಈಗ ಬಿಡುಗಡೆಯಾಗಬೇಕಾದ ಆ ಬಿಲ್‌ಗಳಿಗೆ ಕಮಿಷನ್‌ ಕೇಳಲಾಗುತ್ತಿದೆ. ಹೀಗಾಗಿ ಇದರಲ್ಲೇನೋ ಅವ್ಯವಹಾರ ಇದೆ ಎಂದು ನಮಗೆ ಅನಿಸುತ್ತಿದೆ. ಇವರು ಸುಮ್ಮನೆ ತನಿಖೆ ಮಾಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಆ ತನಿಖೆ ಪಾರದರ್ಶಕವಾಗಿ ನಡೆಯುತ್ತಿಲ್ಲ. ಸತ್ಯ ಹೊರಬರಲೇಬೇಕು ಎಂದು ಹೇಳಿದರು. ನಾವು ಭ್ರಷ್ಟಾಚಾರ ರಹಿತ ಸರ್ಕಾರ ಕೊಡುತ್ತೇವೆ, ಭ್ರಷ್ಟಾಚಾರದ ವಿಚಾರದಲ್ಲಿ ನಮ್ಮದು ಝಿರೋ ಪರ್ಸೆಂಟ್‌ ಟಾಲರೆನ್ಸ್‌ ಎಂದು ರಾಹುಲ್‌ ಗಾಂಧಿಯವರೇ ಹೇಳಿದ್ದರು. ಆದರೆ ಇಲ್ಲಿ ಬಿಲ್‌ ಬಾಕಿ ಬಿಡುಗಡೆಗೆ ಕಮಿಷನ್‌ ಪಡೆಯಲಾಗುತ್ತಿದೆ. 

Tap to resize

Latest Videos

ರಾಜಕಾರಣ ಅದೃಷ್ಟವಲ್ಲ, ಜನಸೇವೆಗೆ ಸಿಕ್ಕ ಅವಕಾಶ: ಸಂಸದ ಸಿದ್ದೇಶ್ವರ

ಈ ಬಗ್ಗೆ ಕಾಂಗ್ರೆಸ್‌ನ ಕೇಂದ್ರ ನಾಯಕರು ತನಿಖೆ ಮಾಡಬೇಕು. ಇಲ್ಲವಾದರೆ, ಕೇಂದ್ರದ ವರಿಷ್ಠರು ಇದರಲ್ಲಿ ಭಾಗಿಯಾಗಿದ್ದಾರೆ ಎಂಬ ಸಂದೇಶ ಹೋಗುತ್ತದೆ ಎಂದು ಬೊಮ್ಮಾಯಿ ಹೇಳಿದರು. ಬಿಜೆಪಿ ಸರ್ಕಾರದ ರೈತ ಪರ ಯೋಜನೆಗಳಿಗೆ ಬ್ರೇಕ್‌ ಹಾಕಿದ ವಿಚಾರಕ್ಕೂ ಆಕ್ರೋಶ ಹೊರಹಾಕಿದ ಬೊಮ್ಮಾಯಿ, ಇದು ರೈತ ವಿರೋಧಿ ಸರ್ಕಾರ. ರೈತರ ಮಕ್ಕಳ ಶಿಕ್ಷಣಕ್ಕೆ ನೀಡುತ್ತಿದ್ದ ರೈತ ವಿದ್ಯಾನಿಧಿ ನಿಲ್ಲಿಸಿದ್ದಾರೆ. ರೈತರ ಬದುಕಿಗೆ ಉಪಯೋಗವಾಗುವ ರೈತರ ಆವರ್ತ ನಿಧಿ ಕೂಡಾ ಬಂದ್‌ ಮಾಡಿದ್ದಾರೆ. ರೈತರಿಗೆ ಸಹಾಯವಾಗುವ ಯೋಜನೆಗಳನ್ನೆಲ್ಲ ನಿಲ್ಲಿಸಿದ್ದಾರೆ. ನಾವು ಇದರ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ಗುತ್ತಿಗೆದಾರರಿಗೆ ರಾಹುಲ್‌ ಹಣ ಕೊಡಿಸಲಿ: ‘ಬಿಬಿಎಂಪಿ ಗುತ್ತಿಗೆದಾರರ ಸಂಘದವರು ಕಾಂಗ್ರೆಸ್‌ ಸರ್ಕಾರದಲ್ಲಿ ಶೇ.65ರಷ್ಟುಕಮಿಶನ್‌ ಕೇಳುತ್ತಿದ್ದಾರೆ ಎಂಬ ಮಾಹಿತಿಯನ್ನು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಗಮನಕ್ಕೆ ತಂದಿದ್ದಾರೆ. ರಾಹುಲ್‌ ಗಾಂಧಿ ಭ್ರಷ್ಟಾಚಾರ ಸಹಿಸದಿದ್ದಲ್ಲಿ ತಕ್ಷಣ ಮಧ್ಯಪ್ರವೇಶಿಸಿ ಗುತ್ತಿಗೆದಾರರ ಬಾಕಿ ಬಿಲ್‌ ಬಿಡುಗಡೆಗೆ ಸೂಚಿಸಬೇಕು. ಇಲ್ಲದಿದ್ದರೆ ಕರ್ನಾಟಕ ಕಾಂಗ್ರೆಸ್‌ನ ಎಟಿಎಂ ಎನ್ನುವುದು ಸಾಬೀತಾದಂತೆ’ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಇಲ್ಲೇ ನೀರಿಲ್ಲ, ತಮಿಳುನಾಡಿಗೆ ಕೊಡೋದ್ಹೇಗೆ?: ಸಿಎಂ ಸಿದ್ದರಾಮಯ್ಯ

ಗುರುವಾರ ತಮ್ಮನ್ನು ಭೇಟಿಯಾದ ಬಿಬಿಎಂಪಿ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳ ಮನವಿ ಸ್ವೀಕರಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಹೈಕಮಾಂಡ್‌ ಭ್ರಷ್ಟಾಚಾರ ಸಹಿಸುವುದಿಲ್ಲ ಅಂತ ರಾಹುಲ್‌ ಗಾಂಧಿ ಹೇಳಿದ್ದಾರೆ. ಆದರೆ, ಗುತ್ತಿಗೆದಾರರು ರಾಹುಲ್‌ ಗಾಂಧಿಗೆ ಟ್ವೀಟ್‌ ಮಾಡಿ, ನಿಮ್ಮ ಸರ್ಕಾರ ಶೇ.65ರಷ್ಟುಕಮಿಶನ್‌ ವಸೂಲಿ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ರಾಹುಲ್‌ ಗಾಂಧಿಯವರು ಭ್ರಷ್ಟಾಚಾರದ ಬಗ್ಗೆ ಝಿರೋ ಟಾಲೆರೆನ್ಸ್‌ ಇದ್ದರೆ ತಕ್ಷಣ ಮಧ್ಯಪ್ರವೇಶಿಸಿ 24 ಗಂಟೆಯಲ್ಲಿ ಗುತ್ತಿಗೆದಾರರ ಬಾಕಿ ಹಣ ಕೊಡಿಸಲಿ ಎಂದು ಆಗ್ರಹಿಸಿದರು.

click me!