Farm Laws Repeal: ವರ್ಷದ ಬಳಿಕ ಪ್ರಧಾನಿಗೆ ಜ್ಞಾನೋದಯ: ಸಲೀಂ ಅಹ್ಮದ್‌

By Kannadaprabha News  |  First Published Nov 25, 2021, 1:23 PM IST

*  ರೈತರ ಹೋರಾಟಕ್ಕೆ ಬೆಂಬಲವಾಗಿ ನಿಂತ ಕಾಂಗ್ರೆಸ್‌
*  ನಮ್ಮಲ್ಲಿ ಬಣ ರಾಜಕೀಯವಿಲ್ಲ. ನಮ್ಮಲ್ಲಿ ಏನಿದ್ದರೂ ಕಾಂಗ್ರೆಸ್‌ ಬಣ
*  ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ನೇತೃತ್ವದಲ್ಲಿ ಪಕ್ಷ ಮುಂದುವರಿಯಲಿದೆ 
 


ಹಾವೇರಿ(ನ.25):  ರೈತ ವಿರೋಧಿ ಮೂರು ಕೃಷಿ ಕಾನೂನು(Farm Laws) ವಿರುದ್ಧ ರೈತರು(Farmers) ದೇಶಾದ್ಯಂತ ಹೋರಾಟ ನಡೆಸಿದ ಒಂದು ವರ್ಷದ ಬಳಿಕ ಪ್ರಧಾನಿ ಮೋದಿಗೆ ಜ್ಞಾನೋದಯವಾಗಿದೆ. ರೈತರ ಹೋರಾಟಕ್ಕೆ ಕಾಂಗ್ರೆಸ್‌ ಬೆಂಬಲವಾಗಿ ನಿಂತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆಡಳಿತ ವೈಫಲ್ಯವನ್ನು ಮುಂದಿಟ್ಟು ಮತದಾರರ ಬಳಿ ಹೋಗುತ್ತೇನೆ ಎಂದು ಧಾರವಾಡ(Dharwad) ಸ್ಥಳೀಯ ಸಂಸ್ಥೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯೂ ಆಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌(Saleem Ahmed) ಹೇಳಿದರು.

ಇಲ್ಲಿಯ ಸಜ್ಜನರ ಸಭಾಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನ ವಿರೋಧಿ ಆಡಳಿತ ನಡೆಸುತ್ತಿವೆ. ಬೆಲೆ ಏರಿಕೆಯಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಗ್ರಾಮ ಪಂಚಾಯಿತಿಗಳಿಗೆ ಅನುದಾನ ಬಿಡುಗಡೆಯಾಗುತ್ತಿಲ್ಲ. ಈ ವಿಷಯ ಇಟ್ಟುಕೊಂಡು ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳಲ್ಲಿ ಮತಯಾಚಿಸುತ್ತೇನೆ. ಕಾಂಗ್ರೆಸ್‌ಗೆ(Congress) ಧಾರವಾಡ, ಗದಗ, ಹಾವೇರಿ ಒಳಗೊಂಡಂತೆ ಕ್ಷೇತ್ರದಲ್ಲಿ ಉತ್ತಮ ವಾತಾವರಣವಿದೆ. 25 ವರ್ಷಗಳಿಂದ ಜಿಲ್ಲೆಯಲ್ಲಿ ಕೆಲಸ ಮಾಡಿದ್ದೇನೆ ಎಂದರು.

Tap to resize

Latest Videos

Council Election : 'ಕಾಂಗ್ರೆಸ್ - ಜೆಡಿಎಸ್‌ನವರಿಂದಲೂ BJPಗೆ ಮತ ಸಿಗಲಿವೆ'

25 ಲಕ್ಷ ಪರಿಹಾರ ನೀಡಲಿ:

ರೈತರ ಹೋರಾಟಕ್ಕೆ ಮಣಿದು ಪ್ರಧಾನಿ ಮೋದಿಯವರು(Narendra Modi) ಕಾಯ್ದೆ ವಾಪಸ್‌ ಪಡೆಯುವುದಾಗಿ ಹೇಳಿದ್ದಾರೆ. ಹೋರಾಟದಲ್ಲಿ 700ಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದಾರೆ(Martyr). ಅವರ ಕುಟುಂಬಕ್ಕೆ ಸರ್ಕಾರ ತಲಾ .25 ಲಕ್ಷ ಪರಿಹಾರ ನೀಡಬೇಕು. ಚುನಾವಣೆ(Election) ಕಾರಣಕ್ಕೆ ಇಂಧನ ಬೆಲೆ ಇಳಿಸಿದ್ದಾರೆ. ಆದರೆ, ಅಡುಗೆ ಅನಿಲ ದರ ಏರಿಕೆಯಾಗಿದೆ. ಕಳೆದ ವಿಧಾನ ಪರಿಷತ್‌ ಚುನಾವಣೆಯಲ್ಲಿ(Vidhan Parishat Election) ಕಾಂಗ್ರೆಸ್‌ 14 ಸೀಟು ಗೆದ್ದಿತ್ತು. ಈ ಬಾರಿ ಅದಕ್ಕಿಂತ ಹೆಚ್ಚಿನ ಕಡೆ ಪಕ್ಷ ಗೆಲ್ಲಲಿದೆ. ಮೊದಲ ಬಾರಿಗೆ ಹಾವೇರಿಗೆ ಟಿಕೆಟ್‌ ಸಿಕ್ಕಿದೆ. ಅಖಂಡ ಧಾರವಾಡ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮೂರೂ ಜಿಲ್ಲೆಗಳ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ. ಅಧಿಕಾರ ವಿಕೇಂದ್ರೀಕರಣ ಮಾಡಿ ಗ್ರಾಮ ಪಂಚಾಯ್ತಿಗಳಿಗೆ ಹೆಚ್ಚಿನ ಅಧಿಕಾರ ನೀಡಿದ್ದೇ ರಾಜೀವ ಗಾಂಧಿಯವರು(Rajiv Gandhi) ಎಂದರು.

ನಮ್ಮಲ್ಲಿ ಅಸಮಾಧಾನವಿಲ್ಲ:

ಪರಿಷತ್‌ ಸ್ಥಾನದ ಟಿಕೆಟ್‌ಗಾಗಿ ಅನೇಕರು ಪ್ರಯತ್ನ ಮಾಡಿದ್ದರು. ಆದರೆ, ಪಕ್ಷ ನನಗೆ ಅವಕಾಶ ನೀಡಿದೆ. ನಮ್ಮಲ್ಲಿ ಯಾವುದೇ ಅಸಮಾಧಾನವಿಲ್ಲ. ಚುನಾವಣೆಯಲ್ಲಿ ಗೆಲ್ಲುವುದೊಂದೇ ನಮ್ಮ ಮುಂದಿರುವ ಗುರಿಯಾಗಿದೆ. ಇದಕ್ಕೆ ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರು ಬೆಂಬಲವಾಗಿ ನಿಂತಿದ್ದಾರೆ. ಪರಿಷತ್‌ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆದ್ದು 2023ರ ವಿಧಾನಸಭೆ ಚುನಾವಣೆಗೆ ಹೋಗುತ್ತೇವೆ. ಮುಂಬರುವ ಜಿಪಂ, ತಾಪಂ ಚುನಾವಣೆಯಲ್ಲೂ ಪಕ್ಷ ಹೆಚ್ಚಿನ ಕಡೆ ಗೆಲ್ಲಲಿದೆ. ಜೆಡಿಎಸ್‌ನವರು(JDS) ಅವಕಾಶವಾದಿ ರಾಜಕಾರಣ ಮಾಡುತ್ತಲೇ ಬಂದಿದ್ದಾರೆ. ಇವೆಲ್ಲವನ್ನೂ ಜನರು ಗಮನಿಸುತ್ತಿದ್ದಾರೆ ಎಂದರು.

Council Election : ವಿಜಯಪುರದಲ್ಲಿ ಕೈ, ಕಮಲ ಅವಿರೋಧ ಆಯ್ಕೆಗೆ ಕಸರತ್ತು

40 ಪರ್ಸೆಟ್‌ ಸರ್ಕಾರ ಎಂದು ಗುತ್ತಿಗೆದಾರರೇ ಪ್ರಧಾನಿಗಳಿಗೆ ಪತ್ರ ಬರೆದಿರುವುದು ಈ ಸರ್ಕಾರದ ಭ್ರಷ್ಟಾಚಾರವನ್ನು(Corruption) ಎತ್ತಿ ತೋರಿಸುತ್ತದೆ. ಪ್ರಧಾನಿಯವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು. ಹಾನಗಲ್ಲ ಉಪಚುನಾವಣೆ(Byelection) ಮೂಲಕ ಪಕ್ಷಕ್ಕೆ ಹೆಚ್ಚಿನ ಸ್ಫೂರ್ತಿ ಬಂದಿದೆ. ಆದರೆ, ನಮ್ಮಲ್ಲಿ ಬಣ ರಾಜಕೀಯವಿಲ್ಲ. ನಮ್ಮಲ್ಲಿ ಏನಿದ್ದರೂ ಕಾಂಗ್ರೆಸ್‌ ಬಣ. ಸೋನಿಯಾ ಗಾಂಧಿ(Sonia Gandhi), ರಾಹುಲ್‌ ಗಾಂಧಿ(Rahul Gandhi) ಅವರ ನೇತೃತ್ವದಲ್ಲಿ ಪಕ್ಷ ಮುಂದುವರಿಯಲಿದೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ಪ್ರಮುಖರಾದ ಕೆ.ಬಿ. ಕೋಳಿವಾಡ, ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣನವರ, ಮನೋಹರ ತಹಶೀಲ್ದಾರ್‌, ಜಿಲ್ಲಾಧ್ಯಕ್ಷ ಎಂ.ಎಂ. ಹಿರೇಮಠ, ಆರ್‌.ವಿ. ವೆಂಕಟೇಶ, ಸೋಮಣ್ಣ ಬೇವಿನಮರದ, ಶಾಸಕ ಶ್ರೀನಿವಾಸ ಮಾನೆ, ಬಿ.ಎಚ್‌. ಬನ್ನಿಕೋಡ, ಸಂಜೀವಕುಮಾರ ನೀರಲಗಿ, ಕೊಟ್ರೇಶಪ್ಪ ಬಸೇಗಣ್ಣಿ ಸೇರಿದಂತೆ ಪ್ರಮುಖರು ಇದ್ದರು.
 

click me!