ವಿಧಾನಪರಿಷ್ ಚುನಾವಣೆ ದಿನಾಂಕ ಪ್ರಕಟ: ಗರಿಗೆದರಿದ ರಾಜ್ಯ ರಾಜಕಾರಣ

By Suvarna News  |  First Published Jun 9, 2020, 2:15 PM IST

ಕೊರೋನಾ ಭೀತಿ ನಡುವೆ ರಾಜ್ಯ ವಿಧಾನ ಪರಿಷತ್ ಚುನಾವಣೆಗೆ ದಿನಾಂಕ ನಿಗಧಿಯಾಗಿದೆ. 7 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.


ಬೆಂಗಳೂರು, (ಜೂನ್. 09): ವಿಧಾನ ಪರಿಷತ್ ಚುನಾವಣೆಗೆ ದಿನಾಂಕ ನಿಗದಿಪಡಿಸಿ ಇಂದು (ಮಂಗಳವಾರ) ಚುನಾವಣಾ ಆಯೋಗ ಆದೇಶ ಹೊರಡಿಸಿದೆ.

 ಜೂನ್ 29 ರಂದು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆ ವರೆಗೆ ಮತದಾನ ನಡೆಯಲಿದ್ದು, ಅಂದೇ ಸಂಜೆ ಫಲಿತಾಂಶ ಪ್ರಕಟವಾಗಲಿದೆ.  ನಾಮಪತ್ರ ಸಲ್ಲಿಸಲು ಜೂನ್ 18 ರ ವರೆಗೆ ಅವಕಾಶ ಇದ್ದು, ಜೂನ್ ಜೂನ್ 22 ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿದೆ.

Tap to resize

Latest Videos

undefined

ರಾಜ್ಯದಲ್ಲಿ ನಡೆಯಬೇಕಿದ್ದ ವಿಧಾನಪರಿಷತ್ ಚುನಾವಣೆ ಮುಂದೂಡಿಕೆ...!

ಪಕ್ಷಗಳ ಸಂಖ್ಯಾಬಲ ಆಧಾರದ ಮೇಲೆ ಬಿಜೆಪಿ 4, ಕಾಂಗ್ರೆಸ್ 2, ಜೆಡಿಎಸ್ 1 ಸ್ಥಾನ ಗೆಲ್ಲಬಹುದಾಗಿದೆ.

ಇನ್ನು  ಕೋವಿಡ್ -19 ಭೀತಿ ಹಿನ್ನೆಲೆಯಲ್ಲಿ ಶಿಕ್ಷಕರ ಕ್ಷೇತ್ರ ಹಾಗೂ ಪದವಿದರ ನಾಲ್ಕು ಸ್ಥಾನಗಳಿಗೆ ಈ ತಿಂಗಳ ನಂತರ ನಡೆಯಬೇಕಾಗಿದ್ದ ಚುನಾವಣೆಯನ್ನು ಮುಂದೂಡಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.

click me!