ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ತೀವ್ರ ಜಿದ್ದಾಜಿದ್ದಿಯ ಕಣವಾಗಿದ್ದ ಕೊಡಗು ಜಿಲ್ಲೆಯ ಎರಡು ಕ್ಷೇತ್ರಗಳು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿವೆ. ಚುನಾವಣೆಯಲ್ಲಿ ಗೆಲುವು ಸಾಧಿಸಲೇಬೇಕೆಂಬ ಹಠದಲ್ಲಿ ಮೂರು ಪಕ್ಷಗಳ ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತು ನಡೆಸಿದ್ದವು.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಮೇ.11): ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ತೀವ್ರ ಜಿದ್ದಾಜಿದ್ದಿಯ ಕಣವಾಗಿದ್ದ ಕೊಡಗು ಜಿಲ್ಲೆಯ ಎರಡು ಕ್ಷೇತ್ರಗಳು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿವೆ. ಚುನಾವಣೆಯಲ್ಲಿ ಗೆಲುವು ಸಾಧಿಸಲೇಬೇಕೆಂಬ ಹಠದಲ್ಲಿ ಮೂರು ಪಕ್ಷಗಳ ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತು ನಡೆಸಿದ್ದವು. ಆದರೆ ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟಿತ್ತು. ಹೀಗಾಗಿಯೇ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಅಭ್ಯರ್ಥಿಗಳು ಬಿಡುವಿಲ್ಲದೆ ಸುತ್ತಾಡಿದ್ದರು. ಬುಧವಾರ ಚುನಾವಣೆ ಮುಗಿಸಿದ್ದ ಅಭ್ಯರ್ಥಿಗಳು ಗುರುವಾರ ಸಂಪೂರ್ಣ ರಿಲ್ಯಾಕ್ಸ್ ಮೂಡಿಗೆ ಜಾರಿದ್ದರು.
undefined
ಆರು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಐದು ಬಾರಿ ಗೆದ್ದಿರುವ ಶಾಸಕ ಅಪ್ಪಚ್ಚು ರಂಜನ್ ಆರನೇ ಬಾರಿಗೆ ಮತ್ತೆ ಗೆದ್ದು ಶಾಸಕನಾಗುತ್ತೇನೆ ಎಂಬ ಅಚಲ ವಿಶ್ವಾಸದಲ್ಲಿ ಇದ್ದಾರೆ. ಬುಧವಾರದವರೆಗೆ ಚುನಾವಣೆಯ ಬ್ಯುಸಿಯಲ್ಲೇ ಎರಡು ದಿನಗಳ ಕಾಲ ಓಡಾಡಿದ್ದ ಶಾಸಕ ಅಪ್ಪಚ್ಚು ರಂಜನ್ ಗುರುವಾರ ಸಂಪೂರ್ಣ ಆರಾಮವಾಗಿ ಕಾಲ ಕಳೆದಿದ್ದಾರೆ. ಎರಡು ತಿಂಗಳಿನಿಂದ ಚುನಾವಣೆಗಾಗಿ ತಲೆಕೆಡಿಸಿಕೊಂಡು ಓಡಾಡಿದ್ದ ಅಪ್ಪಚ್ಚು ರಂಜನ್ ಗುರುವಾರ ತಮ್ಮ ಕಾಫಿ ತೋಟದ ಕಡೆಗೆ ಗಮನಹರಿಸಿದ್ದರು. ತಮ್ಮ ಪಿಕಪ್ ಜೀಪು ತೆಗೆದುಕೊಂಡು ಕಾಫಿ ತೋಟದಲ್ಲಿ ಓಡಾಡಿದ್ರು. ಕಾಫಿ ತೋಟದಲ್ಲಿ ಕಾರ್ಮಿಕರಿಂದ ಕೆಲಸ ಮಾಡಿಸಿದ್ರು.
Udupi: ಚುನಾವಣೆ ಮುಗಿತು, ರಿಲ್ಯಾಕ್ಸ್ ಮೂಡ್‌ಗೆ ಜಾರಿದ ಅಭ್ಯರ್ಥಿಗಳು
ಹೇಗೆ ಕೆಲಸ ಮಾಡುತ್ತಿದ್ದಾರೆ, ಏನೆಲ್ಲಾ ಆಗಿದೆ ಎಂದು ಗಮನಿಸಿದರು. ಈ ನಡುವೆ ಸುವರ್ಣ ನ್ಯೂಸ್ ನೊಂದಿಗೆ ಮಾತನಾಡಿದ ಅಪ್ಪಚ್ಚು ರಂಜನ್ ಅವರು ನನ್ನ ವಿರುದ್ಧ ಅಭ್ಯರ್ಥಿ ಸೂಟ್ಕೇಸ್ ಅಭ್ಯರ್ಥಿ ಆಗಿದ್ದರಿಂದ ಚುನಾವಣೆ ಸ್ವಲ್ಪ ಟಫ್ ಇತ್ತು. ಆದರೆ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 38 ಸಾವಿರ ಮತಗಳನ್ನು ಪಡೆದಿದ್ದರೆ, ನಾನು 70 ಸಾವಿರ ಮತಗಳನ್ನು ಪಡೆದಿದ್ದೆ. ಹೀಗಾಗಿ ಅವರು ಒಂದೇ ಬಾರಿ ಡಬ್ಬಲ್ ಆಗಿ 70 ಸಾವಿರ ಮತಗಳನ್ನು ಪಡೆಯಲು ಸಾಧ್ಯವಿಲ್ಲ. ಆದರೆ ಈ ಬಾರಿ ನಾನು 90 ಸಾವಿರ ಮತಗಳನ್ನು ಪಡೆದು 20 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದಿದ್ದಾರೆ.
ಇನ್ನು ಯಾವುದೇ ಸರ್ವೇ ಏನೇ ಹೇಳಿದರು, ಇಡೀ ರಾಜ್ಯದ ಬಹುತೇಕ ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಇದ್ದಿದ್ದು ಗೊತ್ತಾಗಿದೆ. ತ್ರಿಕೋನ ಸ್ಪರ್ಧೆ ಇದ್ದ ಕಡೆಗಳಲ್ಲಿ ಬಿಜೆಪಿ ಗೆಲ್ಲುವುದು ಖಚಿತ. ಜೆಡಿಎಸ್ ಕಾಂಗ್ರೆಸ್ ನ ಮತಗಳನ್ನು ಸೆಳೆದಿರುತ್ತದೆ. ಹೀಗಾಗಿ ನಾವು 130 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆದ್ದು ಸರ್ಕಾರ ರಚಿಸುತ್ತೇವೆ ಎಂದು ರಂಜನ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮತ್ತೊಂದೆ ವಿರಾಜಪೇಟೆ ಕ್ಷೇತ್ರದ ಶಾಸಕರಾಗಿರುವ ಕೆ.ಜಿ. ಬೋಪಯ್ಯ ಕೂಡ ಚುನಾವಣೆ ಮುಗಿದ ಹಿನ್ನೆಲೆಯಲ್ಲಿ ಗುರುವಾ ಸಂಪೂರ್ಣ ರಿಲ್ಯಾಕ್ಸ್ ಮೂಡಿಗೆ ಜಾರಿದ್ದರು.
ಒಂದು ಮತವಾದರೂ ಹೆಚ್ಚು ಪಡೆದು ಗೆಲ್ಲುತ್ತೇನೆ: ಲಕ್ಷ್ಮೀ ಹೆಬ್ಬಾಳಕರ
ಕೆ.ಜಿ. ಬೋಪಯ್ಯ ಅವರು ಮಡಿಕೇರಿಯ ತಮ್ಮ ಮನೆ ಮುಂಭಾಗದಲ್ಲಿರುವ ಹೂವು ತೋಟದಲ್ಲಿ ಓಡಾಡಿ ರಿಲ್ಯಾಕ್ಸ್ ಮಾಡಿದ್ರು. ತಮ್ಮ ಮುದ್ದಿನ ಸಾಕು ನಾಯಿಗಳಾದ ರೂಬಿ, ಕ್ಯಾಂಡಿ ಮತ್ತು ಓರಿಯೋಗಳೊಂದಿಗೆ ಕಾಲ ಕಳೆದರು. ಜೊತೆಗೆ ಸುವರ್ಣ ನ್ಯೂಸ್ ನೊಂದಿಗೆ ಮಾತನಾಡಿದ ಅವರು ಹೊರಗಿನಿಂದ ಬಂದ ಅಭ್ಯರ್ಥಿಗಳು ಹಣದ ಹೊಳೆಯನ್ನೇ ಹರಿಸಿದ್ದಾರೆ. ಆದರೆ ಜನರು ಇದಕ್ಕೆ ಸೊಪ್ಪು ಹಾಕುವುದಿಲ್ಲ. ನಾವು ಮತ್ತೆ ಗೆಲ್ಲುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ವಿರಾಜಪೇಟೆಯ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಎ.ಎಸ್. ಪೊನ್ನಣ್ಣ ಅವರು ನಾವು 10 ಸಾವಿರ ಅಂತರದಿಂದ ಗೆಲುವು ಸಾಧಿಸುತ್ತೇವೆ ಎಂದಿದ್ದಾರೆ.