ವಿಧಾನಸಭಾ ಚುನಾವಣೆ ಸಮೀಕ್ಷೆಗಳಲ್ಲಿ ಜನಕಿ ಬಾತ್ ಸರ್ವೆ ನಂಬುತ್ತೇನೆ. ನಾವು ಮತ್ತೊಮ್ಮೆ ಅಧಿಕಾರಕ್ಕೆ ಬಂದೇ ಬರುತ್ತೇವೆ. ಬಹುಮತ ಬರದಿದ್ದರೆ, ನಮ್ಮ ಬಳಿ ಪ್ಲಾನ್ 'ಬಿ' ರೆಡಿ ಇದೆ.
ಬೆಂಗಳೂರು (ಮೇ 11): ಕರ್ನಾಟಕ ವಿಧಾನಸಭಾ ಚುನಾವಣೆಯ ಸಮೀಕ್ಷೆಗಳಲ್ಲಿ ನಾನು ಜನಕಿ ಬಾತ್ ಸರ್ವೆಯನ್ನು ನಂಬುತ್ತೇನೆ. ನಾವು ಮತ್ತೊಮ್ಮೆ ಅಧಿಕಾರಕ್ಕೆ ಬಂದೇ ಬರುತ್ತೇವೆ. ಒಂದು ವೇಳೆ ಬಹುಮತ ಬರದೆ ಇದ್ದರೆ, ನಮ್ಮ ಬಳಿ ಪ್ಲಾನ್ ಬಿ ರೆಡಿ ಇದೆ ಎಂದು ಬಿಜೆಪಿ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಮತದಾನ ಮುಕ್ತಾಯವಾದ ಬಳಿಕ ಎಲ್ಲರ ಮತಗಳು ರಾಜ್ಯಾದ್ಯಂತ ಸ್ಟ್ರಾಂಗ್ ರೂಮ್‌ನಲ್ಲಿ ಭದ್ರವಾಗಿದೆ. ಮೇ 13 ರಂದು ಫಲಿತಾಂಶ ಹೊರ ಬೀಳಲಿದ್ದು, ರಾಜ್ಯದ 5 ವರ್ಷದ ಭವಿಷ್ಯ ತಿಳಿಯಲಿದೆ. ಈ ಹಿನ್ನೆಲೆಯಲ್ಲಿ ಪದ್ಮನಾಭನಗರ ಬಿಜೆಪಿ ಅಭ್ಯರ್ಥಿ ಆರ್. ಅಶೋಕ್ ಅವರನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ವತಿಯಿಂದ ಮಾತನಾಡಿಸಲಾಗಿದೆ. ಈ ವೇಳೆ ಮಾತನಾಡಿದ ಅವರು, ಕಳೆದ ಬಾರಿ ಸಮೀಕ್ಷೆಯನ್ನು ನುಡಿದಿದ್ದ ಜನ್‌ಕಿ ಬಾತ್ ವರದಿಯೇ ಸತ್ಯವಾಗಿತ್ತು.ಈ ಹಿನ್ನೆಲೆಯಲ್ಲಿ ನಾನು ಜನಕಿ ಬಾತ್ ಸರ್ವೆಯನ್ನು ನಂಬುತ್ತೇನೆ. ನಾವು ಮತ್ತೊಮ್ಮೆ ಅಧಿಕಾರಕ್ಕೆ ಬಂದೇ ಬರುತ್ತೇವೆ. ಇದೇ ಸರ್ವೇ ಸತ್ಯವಾಗಲಿದೆ. ಒಂದು ವೇಳೆ ಬಹುಮತ ಬರದೆ ಇದ್ದರೆ,
ನಮ್ಮ ಬಳಿ ಪ್ಲಾನ್ ಬಿ ರೆಡಿ ಇದೆ ಎಂದು ಹೇಳಿದ್ದಾರೆ.
Karnataka election 2023: ಬೂತ್ ಏಜೆಂಟ್ ಆಗಿದ್ದ ಬಿಜೆಪಿ ಕಾರ್ಯಕರ್ತ ಮೃತ್ಯು!
ಕಾಂಗ್ರೆಸ್- ಜೆಡಿಎಸ್ ಮೈತ್ರಿ ಆಗೊಲ್ಲ: ರಾಜ್ಯದಲ್ಲಿ ನಾವು ಸನ್ಯಾಸಿಗಳು ಅಲ್ಲ. ಅಧಿಕಾರ ಮಾಡೋಕೆ ಬಂದವವರು. ಹೀಗಾಗಿ ಪ್ಲಾನ್ ಬಿ ಕೂಡ ರೆಡಿ ಮಾಡಿದ್ದೇವೆ. ಈಗ ಎಕ್ಸಿಟ್ ಪೋಲ್ (exit) ಬಂದಿದೆ. ನಾಡಿದ್ದು ಸ್ಪಷ್ಟ (exact) ರಿಸಲ್ಟ್ ಬರಲಿದೆ. ಅದರಲ್ಲಿ ಬಿಜೆಪಿ ಗೆಲ್ಲಲಿದೆ. ಕಳೆದ ಬಾರಿಯ ಕಾಂಗ್ರೆಸ್ ಜೆಡಿಎಸ್ ಮೈತ್ರಿ ನೋಡಿದಾಗ, ಜೆಡಿಎಸ್ ಮತ್ತೆ ಕಾಂಗ್ರೆಸ್ ಜೊತೆ ಹೋಗುವ ಸಾಧ್ಯತೆ ಕಡಿಮೆ ಇದೆ. ಸಿದ್ದರಾಮಯ್ಯ ಮತ್ತು ದೇವೆಗೌಡರು ಎಣ್ಣೆ ಸೀಗೆಕಾಯಿ ಅವರಿಬ್ಬರಿಗೂ ಆಗೋದಿಲ್ಲ. ಕಾಂಗ್ರೆಸ್ ಜೊತೆ ಅಂತೂ ನಾವು ಹೋಗೊದಿಲ್ಲ. ಹೀಗಾಗಿ ಮುಂದಿನ ನಿರ್ಧಾರ ಹೈಕಮಾಂಡ್ ಮಾಡಲಿದೆ ಎಂದು ಹೇಳಿದರು.
ಗೋವಾಕ್ಕೆ ಹೋಗಲು ಬಟ್ಟೆ ಪ್ಯಾಕ್ ಮಾಡಿಕೊಂಡ ಕಾಂಗ್ರೆಸ್: ರಾಜ್ಯದಲ್ಲಿ ಚುನಾವಣಾ ಮತದಾನದ ಬಳಿಕ ಸಮೀಕ್ಷೆಗಳನ್ನು ನೋಡಿದ ಕಾಂಗ್ರೆಸ್ ಭ್ರಮೆಯಲ್ಲಿ ಇದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಈಗಲೇ ಸಭೆ ಶುರು ಮಾಡಿದ್ದಾರೆ. ಗೋವಾಕ್ಕೆ ಡಿಕೆ ಶಿವಕುಮಾರ್ ಕಿಟ್ ಹೊತ್ತುಕೊಂಡು (ಬಟ್ಟೆ ಬರೆ ಕಟ್ಟಿಕೊಂಡು) ಹೋಗಿದ್ದರು. ಇವರು ಹೋಗ್ತಿದಂತೆ ಎಲ್ಲಾರೂ ಅಲ್ಲಿ ಓಡಿ ಹೋದರು. ರಾಜ್ಯದಲ್ಲಿ ಇನ್ನೂ ರಿಸಲ್ಟ್ ಬಂದಿಲ್ಲ. ಆಗಲೇ ರೆಸಾರ್ಟ್ ಅದು- ಇದು ಎನ್ನುತ್ತಿದ್ದಾರೆ. ಬಟ್ಟೆ ಬರೆ ಕಟ್ಕೊಂಡು ಹೋಗೊದಕ್ಕೆ ಸಿದ್ದ ಆಗಿದ್ದಾರೆ. ಆದರೆ ಗೋವಾದಲ್ಲಿ ಏನಾಯ್ತಲ್ಲ, ಅದೇ ಕರ್ನಾಟಕದಲ್ಲಿ ಆಗಲಿದೆ ಎಂದು ಹೇಳಿದರು.
Karnataka election: ಸಿಂಗಾಪುರಕ್ಕೆ ಹಾರಿದ ಹೆಚ್‌ಡಿ ಕುಮಾರಸ್ವಾಮಿ: ಅತಂತ್ರ ಸ್ಥಿತಿ ಬಂದರೆ ಅಧಿಕಾರ
ಬಿಜೆಪಿಯಲ್ಲಿ ಜಾತಿ ನೋಡಿ ಮಂತ್ರಿ ಮಾಡೊಲ್ಲ: ನಮ್ಮಲ್ಲಿ ಜಾತಿ ನೋಡಿ ಮುಖ್ಯಮಂತ್ರಿ ಮಾಡಲ್ಲ. ನಮ್ಮದು ಕೇಡರ್ ಪಾರ್ಟಿ. ನಮ್ಮಲ್ಲಿ ಪಾರ್ಲಿಮೆಂಟರಿ ಬೋರ್ಡ್ ತೀರ್ಮಾನ ಮಾಡತ್ತದೆ. ಆದರೆ ಕಾಂಗ್ರೆಸ್ ನಲ್ಲಿ ಸೋನಿಯಾ ಗಾಂಧಿ ಕುಟುಂಬಕ್ಕೆ ಹತ್ತಿರ ಇದ್ದವರು ಆಗಬೇಕು. ಜೆಡಿಎಸ್ ನಲ್ಲಿ ದೇವೇಗೌಡರು ಅಥವಾ ಅವರ ಕುಟುಂಬದವರು ಆಗೋದು ಖಚಿತವಾಗಿದೆ. ಆದರೆ, ನಮ್ಮಲ್ಲಿ ಹಾಗೆ ಆಗುವುದಿಲ್ಲ ಎಂದು ಬಿಜೆಪಿ ಮುಖಂಡ ಆರ್.ಅಶೋಕ್ ಹೇಳಿದರು.