ಮೊಟ್ಟೆ ಎಸೆತ: 26ಕ್ಕೆ ಕೊಡಗಲ್ಲಿ ಕಾಂಗ್ರೆಸ್‌ ಶಕ್ತಿ ಪ್ರದರ್ಶನ

By Govindaraj SFirst Published Aug 20, 2022, 3:00 AM IST
Highlights

ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಮೇಲೆ ಮೊಟ್ಟೆದಾಳಿ ನಡೆಸಿರುವುದನ್ನು ಖಂಡಿಸಿ ಬೃಹತ್‌ ಮಟ್ಟದಲ್ಲಿ ಕಾರ್ಯಕರ್ತರನ್ನು ಸೇರಿಸಿ ಆ.26ರಂದು ಮಡಿಕೇರಿ ಚಲೋ ನಡೆಸಲು ಕಾಂಗ್ರೆಸ್‌ ಸಿದ್ಧತೆ ಆರಂಭಿಸಿದೆ. 

ಬೆಂಗಳೂರು (ಆ.20): ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಮೇಲೆ ಮೊಟ್ಟೆದಾಳಿ ನಡೆಸಿರುವುದನ್ನು ಖಂಡಿಸಿ ಬೃಹತ್‌ ಮಟ್ಟದಲ್ಲಿ ಕಾರ್ಯಕರ್ತರನ್ನು ಸೇರಿಸಿ ಆ.26ರಂದು ಮಡಿಕೇರಿ ಚಲೋ ನಡೆಸಲು ಕಾಂಗ್ರೆಸ್‌ ಸಿದ್ಧತೆ ಆರಂಭಿಸಿದೆ. ಪ್ರತಿಪಕ್ಷ ನಾಯಕರ ಮೇಲೆ ಗೂಂಡಾಗಿರಿ ನಡೆಸಿರುವ ಬಿಜೆಪಿ ಕಾರ್ಯಕರ್ತರನ್ನು ಒಂದೇ ದಿನದಲ್ಲಿ ಬಿಡುಗಡೆ ಮಾಡಲಾಗಿದೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಬಂಧಿಸಬೇಕು ಎಂದು ಒತ್ತಾಯಿಸಿ ಖುದ್ದು ಸಿದ್ದರಾಮಯ್ಯ ಉಪಸ್ಥಿತಿಯಲ್ಲೇ ಕೊಡಗು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ.

ಹಾಸನ, ಮೈಸೂರು, ದಕ್ಷಿಣ ಕನ್ನಡ, ಚಾಮರಾಜನಗರ, ಮಂಡ್ಯ ಸೇರಿದಂತೆ ರಾಜ್ಯದ ಮೂಲೆ-ಮೂಲೆಗಳಿಂದ ಸಾವಿರಾರು ಕಾರ್ಯಕರ್ತರನ್ನು ಮಡಿಕೇರಿಯಲ್ಲಿ ಸೇರಿಸಲಾಗುವುದು. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಸೇರಿದಂತೆ ಪಕ್ಷದ ಎಲ್ಲಾ ಹಿರಿಯ ನಾಯಕರು, ಶಾಸಕರು, ಪರಿಷತ್‌ ಸದಸ್ಯರು ಮಡಿಕೇರಿಯಲ್ಲಿ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ. ತನ್ಮೂಲಕ ಸಂಘಟನಾತ್ಮಕವಾಗಿ ಹಿಂದುಳಿದಿರುವ ಮಡಿಕೇರಿ ಭಾಗದಲ್ಲಿ ಪಕ್ಷದ ಕಾರ್ಯಕರ್ತರಿಗೆ ಹುಮ್ಮಸ್ಸು ನೀಡುವ ಜತೆಗೆ ಸಿದ್ದರಾಮಯ್ಯ ಅವರ ಮೇಲಿನ ದಾಳಿಯನ್ನು ಉಗ್ರವಾಗಿ ಖಂಡಿಸಲು ನಿರ್ಧರಿಸಿದ್ದು, ಮಾಜಿ ಸಚಿವ ಎಚ್‌.ಎಂ. ರೇವಣ್ಣ ಅವರಿಗೆ ಸಿದ್ಧತೆ ಜವಾಬ್ದಾರಿ ವಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Udupi; ಮತ್ತಷ್ಟು ಪ್ರತಿಭಟನೆ ಎದುರಿಸಲು ರೆಡಿಯಾಗಿ, ಸಿದ್ದುಗೆ ಸಚಿವ ಸುನಿಲ್ ಕುಮಾರ್ ಚಾಟಿ

ಸಿದ್ದರಾಮಯ್ಯ ಮೇಲೆ ಮೊಟ್ಟೆಎಸೆತ ಖಂಡಿಸಿ ಪ್ರತಿ​ಭ​ಟ​ನೆ: ಕಾಂಗ್ರೆಸ್‌ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಿ​ನ ಮೇಲೆ ಮೊಟ್ಟೆಎಸೆಯುವ ಮೂಲಕ ಬಿಜೆಪಿ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳುವ ಕಾರ್ಯ ಮಾಡುತ್ತಿದೆ ಎಂದು ಆರೋಪಿಸಿ ಗದ​ಗ-ಬೆಟ​ಗೇರಿ ಬ್ಲಾಕ್‌ ಯುವ ಕಾಂಗ್ರೆಸ್‌ನಿಂದ ನಗ​ರದ ಗಾಂಧಿ ವೃತ್ತ​ದಲ್ಲಿ ಪ್ರತಿ​ಭ​ಟನೆ ನಡೆ​ಸ​ಲಾ​ಯಿತು. ಜಿಲ್ಲಾ ಯುವ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ಮಾತ​ನಾಡಿ, ವಿಪಕ್ಷ ನಾಯಕ ಸಿದ್ದ​ರಾ​ಮ​ಯ್ಯ ಅ​ವರು ಕೊಡು​ಗಿಗೆ ಯಾವುದೇ ರಾಜ​ಕೀಯ ಸಭೆ ಸಮಾ​ರಂಭ​ಗ​ಳಿಗೆ ತೆರ​ಳಿ​ದ್ದಿಲ್ಲ. ಅಲ್ಲಿ ಮಳೆಯಿಂದ ಹಾನಿಯಾಗಿರುವ ಪ್ರದೇಶಗಳ ವೀಕ್ಷಣೆ ಮಾಡಿ ಜನರ ಸಮ​ಸ್ಯೆ​ಗ​ಳನ್ನು ಕೇಳಲು ತೆರ​ಳಿ​ದ್ದರು. 

ಕೆಲವು ಕಿಡಿ​ಗೇ​ಡಿ​ಗಳು, ಬಿಜೆಪಿ ಏಜೆಂಟರು ಅವರ ಮೇಲೆ ಮೊಟ್ಟೆಎಸೆ​ಯುವ ಮೂಲಕ ಗೂಂಡಾ ವರ್ತನೆ ತೋರಿ​ದ್ದಾರೆ. ವಿಪಕ್ಷ ನಾಯ​ಕ​ರಿಗೆ ಭದ್ರತೆ ನೀಡುವು​ದಕ್ಕೂ ಅಶ​ಕ್ತ​ವಾ​ಗಿ​ರುವ ಸರ್ಕಾರ ಇನ್ನ ರಾಜ್ಯದ ಜನ​ತೆಗೆ ಎಷ್ಟರ ಮಟ್ಟಿಗೆ ಭದ್ರ​ತೆ​ಯನ್ನು ನೀಡು​ತ್ತದೆ? ಪೊಲೀಸರೂ ಬಿಜೆಪಿ ಏಜೆಂಟರಂತೆ ವರ್ತಿಸಿದ್ದಾರೆ. ಮೊಟ್ಟೆಎಸೆ​ದ​ವರ ಮೇಲೆ ಕ್ರಮ ಕೈಗೊ​ಳ್ಳದೆ ಇರು​ವುದು ಖಂಡ​ನೀ​ಯ. ಮಾಜಿ ಮುಖ್ಯ​ಮಂತ್ರಿ​ಗೆ ಬಿಜೆಪಿಯ ಕಾರ್ಯ​ಕ​ರ್ತರು ಮೊಟ್ಟೆ ಎಸೆ​ಯುವ ಮೂಲಕ ರಾಜ್ಯ​ದ​ಲ್ಲಿ ಕಾನೂ​ನನ್ನು ಅಭ​ದ್ರತೆಗೊಳಿಸಲಾಗುತ್ತಿದೆ. ಆದ್ದ​ರಿಂದ ಈ ಭ್ರಷ್ಟಬಿಜೆಪಿ ಸರ್ಕಾರ ರಾಜ್ಯ​ದಿಂದ ತೊಲ​ಗ​ಬೇಕು ಎಂದು ಆಕ್ರೋಶ ವ್ಯಕ್ತ​ಪ​ಡಿ​ಸಿ​ದ​ರು.

ಸರ್ಕಾರವನ್ನು ಕೋಮುವಾದಿಗಳ ಮತ್ತು ಗೂಂಡಾಗಳ ಕೈಗೆ ಕೊಡಲಾಗಿದೆ: ಖಾದರ್ ಆಕ್ರೋಶ

ಕಾಂಗ್ರೆಸ್‌ ಶಹರ ಘಟ​ಕದ ಅಧ್ಯ​ಕ್ಷ ಸರ್ಫ​ರಾಜ ಬರ್ಬಜಿ, ಶಂಭು ​ಕಾಳೆ, ಮಹಾಂತೇಶ ಮಡಿ​ವಾಳ, ಭರಖ​ ತಲಿ ಮುನ್ನಾ, ನಗ​ರ​ಸಭೆ ಸದ​ಸ್ಯ​ರಾ​ದ ಲಕ್ಷೀ ಸಿದ್ದ​ಮ​ನ​ಹಳ್ಳಿ, ಮಹ​ಮ್ಮ​ದ್‌ಸಾಬ್‌ ಬೆಟ​ಗೇರಿ, ಮೋಹನ್‌ ಡಿ, ವಿನಾ​ಯಕ ಹಾಲೂರ, ಅಜ್ಜೆಪ್ಪ ಹು​ಗ್ಗೆ​ಣ್ಣ​ವರ, ಉಮ​ರ್‌​ಫಾ​ರೂಕ್‌ ಭಾರಿ​ಗಿ​ಡದ, ಉಮರ್‌​ಫಾ​ರೂ​ಕ್‌ ಹುಬ್ಬಳ್ಳಿ, ರಾಘ​ವೇಂದ್ರ ದೊಡ್ಮನಿ ವೀರ​ನ​ಗೌಡ್ರ, ವಿಜ​ಯ​ಕು​ಮಾರ ಚಲ​ವಾದಿ ಹಾಗೂ ಕಾಂಗ್ರೆಸ್‌ ಕಾರ್ಯ​ಕ​ರ್ತರು ಇದ್ದ​ರು.

click me!