ಈಶ್ವರಪ್ಪ ವಿರುದ್ಧ ಕೇಸ್ ಮುಖೇನ ಕಾನೂನಿದೆ ಎಂಬುದು ಸಾಬೀತು: ಸಚಿವ ಮಧು ಬಂಗಾರಪ್ಪ

By Govindaraj S  |  First Published Feb 11, 2024, 1:27 PM IST

ಈಶ್ವರಪ್ಪ ವಿರುದ್ಧ ಕೇಸ್ ದಾಖಲಾಗಿರುವುದು ಬಹಳ ಸಂತೋಷದ ವಿಚಾರ. ಈ ಮೂಲಕ ದೇಶದಲ್ಲಿ ಕಾನೂನಿದೆ ಎಂಬುದು ಸಾಬೀತಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅಭಿಪ್ರಾಯಪಟ್ಟರು.


ಶಿವಮೊಗ್ಗ (ಫೆ.11): ಈಶ್ವರಪ್ಪ ವಿರುದ್ಧ ಕೇಸ್ ದಾಖಲಾಗಿರುವುದು ಬಹಳ ಸಂತೋಷದ ವಿಚಾರ. ಈ ಮೂಲಕ ದೇಶದಲ್ಲಿ ಕಾನೂನಿದೆ ಎಂಬುದು ಸಾಬೀತಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅಭಿಪ್ರಾಯಪಟ್ಟರು. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ರಾಜ್ಯದಲ್ಲಿ ಕಾನೂನು ಇದೆ ಎಂಬುದು ನಮ್ಮ ಸರ್ಕಾರ ತೋರಿಸಿದೆ. ಯಾರ್ಯಾರು ಈ ತರ ಮಾತಾಡುತ್ತಾರರೋ, ಅವರ ಮೇಲೆ ‌ಮುಂದೆ ಇದೇ ರೀತಿ ಕೇಸ್ ದಾಖಲಾಗಬೇಕು. ಅಂಬೇಡ್ಕರ್ ಸಂವಿಧಾನ ಕೊಟ್ಟಿರೋದು ಈ ತರಹ ಹೇಳಿಕೆ ನೀಡೋಕೆ ಅಲ್ಲ. 

ಈಶ್ವರಪ್ಪನವರು ಕಾನೂನಾತ್ಮಕವಾಗಿ ಹೋರಾಡುತ್ತೇವೆ ಎಂದು ನಮ್ಮ ಮುಂದೆ ಹೇಳಿದ್ರೆ ಆಗೋಲ್ಲ. ಅವರು ಕೋರ್ಟ್ ಮುಂದೆ ಹೇಳಬೇಕು. ಕೋರ್ಟ್‌ನಲ್ಲಿ ಉತ್ತರ ಕೊಡಲಿ. ಸರಿ ಇತ್ತು ಅಂದ್ರೆ ಕೋರ್ಟ್ ತೀರ್ಮಾನ ಕೈಗೊಳ್ಳುತ್ತದೆ ಎಂದು ಕುಟುಕಿದರು. ಡಿ.ಕೆ.ಸುರೇಶ್ ದೇಶ ಒಡೆಯೋ ಹೇಳಿಕೆ ನೀಡಿಲ್ಲ. ಜನರ ಕೂಗನ್ನು ಡಿ.ಕೆ.ಸುರೇಶ್ ಹೇಳಿದ್ದಾರೆ. ನಾನು ಅವರ ಹೇಳಿಕೆಯನ್ನು ಸಮರ್ಥನೆ ಮಾಡಿಕೊಳ್ಳೋದಿಲ್ಲ. ಆದರೆ, ಬಿಜೆಪಿಯವರು ಸುರೇಶ್ ಮೇಲೆ ಕೇಸು ಹಾಕಲಿ, ಕಾನೂನು ನೋಡಿಕೊಳ್ಳುತ್ತೆ ಎಂದು ಗುಡುಗಿದರು.

Latest Videos

undefined

5 ವರ್ಷ ಕಾಂಗ್ರೆಸ್ ಗ್ಯಾರಂಟಿ ಯೋಜನೆ ರದ್ದಾಗದು: ಸಚಿವ ಮಧು ಬಂಗಾರಪ್ಪ

ಬಾರೇಹಳ್ಳ ಸೇತುವೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ: ತಾಲೂಕಿನ ಪುರದಾಳು ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಬಾರೇಹಳ್ಳ ಸೇತುವೆ ನಿರ್ಮಾಣ ಕಾಮಗಾರಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಕಾಮಗಾರಿ ಪೂರ್ಣಗೊಳಿಸಲು ಬೇಕಾದ ಅನುದಾವನ್ನು ಶೀಘ್ರದಲ್ಲೇ ಮಂಜೂರು ಮಾಡಲಾಗುವುದು ಭರವಸೆ ನೀಡಿದ ಅವರು, ಬಾರೇಹಳ್ಳ ಸೇತುವೆ ನಿರ್ಮಾಣದ ಕೊನೆ ಹಂತದ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆ ನೀಡಿದರು.

ಇದಕ್ಕೂ ಮೊದಲು ಗ್ರಾಮದ ಶ್ರೀ ಉದ್ಭವ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ಪೂಜೆ ಸಲ್ಲಿಸಿದರು. ದೇವಸ್ಥಾನ ಸೇವಾ ಸಮಿತಿ ವತಿಯಿಂದ ಸಚಿವ ಮಧುಬಂಗಾರಪ್ಪ ಹಾಗೂ ಶಾಸಕಿ ಶಾರದಾ ಪೂರ್‍ಯನಾಯ್ಕ್ ಅವರಿಗೆ ಸನ್ಮಾನಿಸಲಾಯಿತು. ದೇವಸ್ಥಾನ ಆಡಳಿತ ಮಂಡಳಿ ವತಿಯಿಂದ ಕಲ್ಯಾಣ ಮಂಟಪ ಮಂಜೂರು ಮಾಡುವಂತೆ ಹಾಗೂ ಅಗತ್ಯ ಅನುದಾನವನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಲಾಯಿತು. ಇದಕ್ಕೆ ಸಕಾರತ್ಮಾಕವಾಗಿ ಪ್ರತಿಕ್ರಿಯಿಸಿದ ಸಚಿವರು, ತಂದೆ ಬಂಗಾರಪ್ಪ ಅವರಿಗೆ ಪುರದಾಳು ಗ್ರಾಮದ ಬಗ್ಗೆ ವಿಶೇಷ ಅಭಿಮಾನವಿತ್ತು. 

ಕಾಂಗ್ರೆಸ್‌ ಗ್ಯಾರಂಟಿಯನ್ನು ವಿರೋಧಿಸೋಲ್ಲ, ಸ್ವಾಗತಿಸುವೆ: ಶಾಸಕ ಎಚ್.ಟಿ.ಮಂಜು

ರಸ್ತೆ, ತುಂಗಾ ಏತನೀರಾವರಿ, ಗೋದಾಮು ನಿರ್ಮಾಣಕ್ಕೆ ಅನುದಾನ ನೀಡಿದ್ದಾರೆ. ನಾನು ಕೂಡ ಕಲ್ಯಾಣ ಮಂಟಪವನ್ನು ಮಂಜೂರು ಮಾಡಿ ಅಗತ್ಯ ಅನುದಾನ ಒದಗಿಸುತ್ತೇನೆ ಎಂದು ಹೇಳಿದರು. ಪುರದಾಳು ಗ್ರಾಪಂ ವತಿಯಿಂದ ಸಚಿವರಿಗೆ ಸನ್ಮಾನಿಸಲಾಯಿತು. ಕಡ್ಲೆಒಡ್ಡು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಪುರದಾಳು ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗೆ ಭೇಟಿ ನೀಡಿದರು. ಶಾಸಕಿ ಶಾರದಾ ಪೂರ್‍ಯನಾಯ್ಕ್, ಕಾಂಗ್ರೆಸ್ ಮುಖಂಡರಾದ ಆರ್‌.ಪ್ರಸನ್ನಕುಮಾರ್‌, ಕಲಗೋಡು ರತ್ನಾಕರ್, ಜಿ.ಡಿ ಮಂಜುನಾಥ್‌ ಮತ್ತಿತರರು ಇದ್ದರು.

click me!