Karnataka Politics: 31 ಜಿಲ್ಲೆಯ ಅಲ್ಪಸಂಖ್ಯಾತ ನಾಯಕರ ಜತೆ ಎಚ್‌ಡಿಕೆ ಸಭೆ,  ಜೆಪಿ ಭವನದ ಸಂದೇಶ

Published : Feb 02, 2022, 03:09 AM IST
Karnataka Politics: 31 ಜಿಲ್ಲೆಯ ಅಲ್ಪಸಂಖ್ಯಾತ ನಾಯಕರ ಜತೆ ಎಚ್‌ಡಿಕೆ ಸಭೆ,  ಜೆಪಿ ಭವನದ ಸಂದೇಶ

ಸಾರಾಂಶ

* 31 ಜಿಲ್ಲೆಯ ಅಲ್ಪಸಂಖ್ಯಾತ  ನಾಯಕರ ಜತೆ ಎಚ್‌ಡಿಕೆ ಸಭೆ *  ಬಿಬಿಎಂಪಿ, ವಿಧಾನಸಭೆ ಚುನಾವಣೆಗೆ ಪೂರ್ವಸಿದ್ಧತೆ * ಈ ಹಿಂದೆಯೂ ನಾಯಕರ ಸಭೆ ನಡೆಸಿದ್ದ ದಳಪತಿ * ಮುಂದಿನ ಚುನಾವಣೆಗೆ ಈಗಿನಿಂದಲೇ ಸಿದ್ಧತೆ

 ಬೆಂಗಳೂರು (ಫೆ. 02)  ಮುಂದಿನ ವಿಧಾನಸಭೆ (Assembly elections) ಚುನಾವಣೆ ಹಾಗೂ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (BBMP)ಚುನಾವಣೆಗೆ ಪಕ್ಷವನ್ನು ಸಜ್ಜು ಮಾಡುವ ನಿಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ (HD Kumaraswamy)31 ಜಿಲ್ಲೆಗಳ ಅಲ್ಪಸಂಖ್ಯಾತ ಮುಖಂಡರ ಜತೆ ಮಹತ್ವದ ಚರ್ಚೆ ನಡೆಸಿದರು. ಪಕ್ಷದ (JDS)ಕಚೇರಿ ಜೆ.ಪಿ.ಭವನದಲ್ಲಿ ಸುಮಾರು ನಾಲ್ಕು ತಾಸುಗಳ ಸಭೆ ನಡೆಸಿ ಮುಂದಿನ ವಿಧಾನಸಭೆ ಚುನಾವಣೆಗೆ ಸಜ್ಜಾಗುವ ನಿಟ್ಟಿನಲ್ಲಿ ಮುಖಂಡರಿಗೆ ಕೆಲ ಮಹತ್ವದ ಗುರಿಗಳನ್ನು ನಿಗದಿ ಮಾಡಿದರು.

ಈ ವೇಳೆ ಮಾತನಾಡಿದ ಅವರು, ಈ ಹಿಂದೆ ಬಿಜೆಪಿ ಜತೆ ಸರ್ಕಾರ ರಚಿಸಬೇಕಾದ ಅನಿವಾರ್ಯ ಪರಿಸ್ಥಿತಿಯನ್ನು ಹಾಗೂ ಆ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷ ಇಡೀ ಜೆಡಿಎಸ್‌ ಪಕ್ಷವನ್ನೇ ನುಂಗಿಹಾಕಲು ಷಡ್ಯಂತ್ರ ರೂಪಿಸಿದ್ದ ಸಂದರ್ಭಗಳನ್ನು ಅಲ್ಪಸಂಖ್ಯಾತ ಮುಖಂಡರ ಗಮನಕ್ಕೆ ತಂದರು.

Karnataka Congress ಪಾಟೀಲ್ ಜೊತೆಗಿನ ಮಿಟಿಂಗ್ 100%. ಸಕ್ಸಸ್ ಫುಲ್, ಸಂಚಲನ ಮೂಡಿಸಿದ ಇಬ್ರಾಹಿಂ ಹೇಳಿಕೆ

ಜೆಡಿಎಸ್‌-ಬಿಜೆಪಿ ಸಮ್ಮಿಶ್ರ ಸರ್ಕಾರ ರಚನೆಗೆ ಕಾರಣವಾದ ಅಂಶವನ್ನು ಮಾಜಿ ಮುಖ್ಯಮಂತ್ರಿಗಳು ಮುಖಂಡರಿಗೆ ಮನವರಿಕೆ ಮಾಡಿಕೊಟ್ಟರಲ್ಲದೆ, ಸೈದ್ದಾಂತಿಕವಾಗಿ ಪಕ್ಷದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಅಲ್ಪಸಂಖ್ಯಾತ ಸಮುದಾಯಕ್ಕೆ ಕಳೆದ 75 ವರ್ಷಗಳಲ್ಲಿ ಕಾಂಗ್ರೆಸ್‌ ಮಾಡಿರುವ ವಂಚನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಬಿಜೆಪಿ ಮುಸ್ಲಿಮರನ್ನು ನಡೆಸಿಕೊಳ್ಳುತ್ತಿರುವ ರೀತಿಯನ್ನು ಖಂಡಿಸಿದರು. ಈ ನಿಟ್ಟಿನಲ್ಲಿ ರಾಜ್ಯದ ಏಕೈಕ ಪ್ರಾದೇಶಿಕ ಶಕ್ತಿಯಾದ ಜೆಡಿಎಸ್‌ಗೆ 2023ಕ್ಕೆ ಅವಕಾಶ ಕೊಡಬೇಕು. ತಾವು ಭಾವನೆಗಳು, ಸೂಕ್ಷ್ಮ ವಿಚಾರಗಳಿಗೆ ಬದಲಾಗಿ ಅಭಿವೃದ್ಧಿಗೆ ಸಂಬಂಧಿ​ಸಿದ ವಿಚಾರಗಳನ್ನು ಜನರ ಮುಂದೆ ಇಡುವುದಾಗಿ ಹೇಳಿದರು.

ಇಬ್ರಾಹಿಂ ಏನ್ಮಾಡ್ತಾರೆ ಅಂತ ನೋಡೋಣ: ಕಾಂಗ್ರೆಸ್‌ ತೊರೆಯಲು ಮುಂದಾಗಿರುವ ಸಿ.ಎಂ. ಇಬ್ರಾಹಿಂ ಅವರು ಈಗಾಗಲೇ ರಾಜ್ಯ ಪ್ರವಾಸ  ಮಾಡುತ್ತಿದ್ದಾರೆ. ಕಾಂಗ್ರೆಸ್‌ ಬಿಟ್ಟಿದ್ದೇನೆ ಎಂದಿರುವ ಅವರು ಮತ್ತೆ ಆ ಪಕ್ಷಕ್ಕೆ ಹೋಗಲ್ಲ ಎಂದು ಹೇಳಿದ್ದಾರೆ. ನೋಡೋಣ ಏನಾಗುತ್ತದೆ ಎಂದ ಅವರು, ಪಕ್ಷಗಳನ್ನು ನಾಯಕರು ಬಿಟ್ಟು ಹೋಗುವುದು ಬರೀ ಕರ್ನಾಟಕದಲ್ಲಿ ಮಾತ್ರ ಆಗುತ್ತಿದೆ ಎಂದಲ್ಲ. ಉತ್ತರ ಪ್ರದೇಶ, ಗೋವಾ, ಪಂಜಾಬ್‌ ರಾಜ್ಯಗಳಲ್ಲಿ ಕೂಡ ಆಗುತ್ತಿದೆ. ಚುನಾವಣೆ ಸಂದರ್ಭಗಳಲ್ಲಿ ಈ ರೀತಿಯ ಪಕ್ಷಾಂತರ ಜಾಸ್ತಿ. ರಾಜಕೀಯ ನಾಯಕರಲ್ಲಿ ನಿಷ್ಠೆ ಎಂಬುದು ಇಲ್ಲ ಎಂದರು.

ಸಭೆಯಲ್ಲಿ ಪಕ್ಷದ ನೂತನ ಕಾರ್ಯಾಧ್ಯಕ್ಷ ಎನ್‌.ಎಂ.ನಬಿ, ಪಕ್ಷದ ಅಲ್ಪಸಂಖ್ಯಾತ ಘಟಕದ ನೂತನ ರಾಜ್ಯಾಧ್ಯಕ್ಷ ನಾಸೀರ್‌ ಹುಸೇನ್‌ ಉಸ್ತಾದ್‌, ಕೋರ್‌ ಕಮಿಟಿ ಅಧ್ಯಕ್ಷ ಬಂಡೆಪ್ಪ ಕಾಶೆಂಪೂರ್‌ ಇತರರು ಭಾಗವಹಿಸಿದ್ದರು. ನಾಯಕರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ರೋಪ ಬಂದ ಕಾರಣಕ್ಕೆ ಎಲ್ ಆರ್ ಶಿವರಾಮೇಗೌಡ ಅವರನ್ನು ಜೆಡಿಎಸ್ ಉಚ್ಚಾಟನೆ ಮಾಡಿತ್ತು.

ನಾನು ಬಿಜೆಪಿ ಬಿಡುವ ಮಾತೇ ಇಲ್ಲ:  ನಾನು ಬಿಜೆಪಿ(BJP) ತೊರೆದು ಕಾಂಗ್ರೆಸ್‌(Congress) ಸೇರುತ್ತಿದ್ದೇನೆ ಎಂಬ ವದಂತಿ ಮಾಧ್ಯಮಗಳಲ್ಲಿ ಹರಡುತ್ತಿದ್ದು, ಇದು ಸತ್ಯಕ್ಕೆ ದೂರ. ನಾನು ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯಲ್ಲ, ಕಾಂಗ್ರೆಸ್‌ ಸೇರಲ್ಲ ಎಂದು ಶಾಸಕ ಅರವಿಂದ ಬೆಲ್ಲದ(Aravind Bellad) ಸ್ಪಷ್ಟಪಡಿಸಿದ್ದರು.

ಪಕ್ಷದಲ್ಲಿ ನನ್ನ ಏಳಿಗೆ ಮತ್ತು ಕ್ಷೇತ್ರದ ಅಭಿವೃದ್ಧಿ ಸಹಿಸದ ಕೆಲವರು ಈ ರೀತಿಯ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. ಈ ಹಿನ್ನೆಲೆ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ಸುದ್ದಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ರಾಷ್ಟ್ರೀಯತೆ ಮತ್ತು ಹಿಂದುತ್ವದ  ಸಿದ್ಧಾಂತಗಳನ್ನು ಮೈಗೂಡಿಸಿಕೊಂಡಿರುವ ನನಗೆ ಬಿಜೆಪಿ ವರಿಷ್ಠರು ಟಿಕೆಟ್‌ ನೀಡಿ ಎರಡು ಬಾರಿ ಶಾಸಕನಾಗಲು ಅವಕಾಶ ಕಲ್ಪಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ(Narendra Modi) ನೇತೃತ್ವದಲ್ಲಿ ಕೇಂದ್ರ ಸರ್ಕಾರ ದೇಶವನ್ನು ಅಭಿವೃದ್ಧಿಯತ್ತ ಮುನ್ನಡೆಸಿಕೊಂಡು ಹೋಗುತ್ತಿದೆ. ಇದೇ ವೇಳೆ ಕ್ಷೇತ್ರದಲ್ಲಿ ನಾನೂ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇನೆ. ವಾಸ್ತವ ಹೀಗಿದ್ದರೂ ನಾನು ಬಿಜೆಪಿ ತೊರೆಯುತ್ತೇನೆ ಎಂದು ಸುಳ್ಳು ಸುದ್ದಿ ಹರಡಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ್ದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Karnataka News Live: ಜಾಸ್ತಿ ಬೇಡ ಎರಡೇ ಮಕ್ಕಳನ್ನಷ್ಟೇ ಮಾಡಿಕೊಳ್ಳಿ - ನವದಂಪತಿಗಳಿಗೆ ಸಿಎಂ ಸಲಹೆ
ಅಧಿವೇಶನ ವೇಳೆ ಹಳೆಯ ಬೇಡಿಕೆಗಳ ಹೊಸ ಕೂಗು!