ಅರೆ ಮಲೆನಾಡು, ಬಯಲು ಸೀಮೆ ಸಂಗಮವಾದ ಮಧ್ಯ ಕರ್ನಾಟಕದ ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ 14ನೇ ಚುನಾವಣೆ ಬಿಜೆಪಿ-ಕಾಂಗ್ರೆಸ್ಸಿಗೆ ಪ್ರತಿಷ್ಠೆಯ ಕಣ.
ದಾವಣಗೆರೆ (ಮೇ.03): ಅರೆ ಮಲೆನಾಡು, ಬಯಲು ಸೀಮೆ ಸಂಗಮವಾದ ಮಧ್ಯ ಕರ್ನಾಟಕದ ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ 14ನೇ ಚುನಾ ವಣೆ ಬಿಜೆಪಿ-ಕಾಂಗ್ರೆಸ್ಸಿಗೆ ಪ್ರತಿಷ್ಠೆಯ ಕಣ. ಕಳೆದ ಏಳು ಚುನಾವಣೆಯಲ್ಲಿ ಬೀಗರ ಕದನದಿಂದ ಗಮನ ಜಿ.ಮಲ್ಲಿಕಾರ್ಜುನಪ್ಪನವರ ಬೀಗರಾದ ಹಾಲಿ ಶಾಸಕ ಡಾ.ಶಾಮನೂರು ಶಿವಶಂಕರಪ 1998 ನಂತರ 1999ರ ರಲ್ಲಿ ಬೀಗರ ಎದುರು ಗೆದ್ದು ಬೀಗಿದ್ದೇ ಕಡೆ. ಚುನಾವಣೆಯಲ್ಲಿ ಶಾಮನೂರುರನ್ನು ಸೋಲಿಸಿದ್ದ ಮಲ್ಲಿಕಾರ್ಜು ನಪ್ಪ ಗೆಲುವಿನ ನಗೆ ಬೀರಿದ್ದರು. ಆ ಬಳಿಕ ಈ ಕ್ಷೇತ್ರ ಕಾಂಗ್ರೆಸ್ ಪಾಲಿಗೆ ಕಬ್ಬಿಣದ ಕಡಲೆಯಾಗಿದೆ. ಮಲ್ಲಿಕಾರ್ಜುನ ನಿಧನದಿಂದಾಗಿ ಹಿರಿಯ ಪುತ್ರ ಜಿ.ಎಂ.ಸಿದ್ದೇಶ್ವರ 2004ರಲ್ಲಿ ಸೆಳೆದಿದ್ದ ಕ್ಷೇತ್ರದಲ್ಲಿ ಇದೇ ಮೊದಲ ಬಾರಿ ವರಸೆಯಲ್ಲಿ ತಾಯಿ-ಮಗಳ ಮಧ್ಯೆ ನಾನಾ -ನೀನಾ ಎಂಬ ಜಿದ್ದಾಜಿದ್ದಿ ಶುರುವಾಗಿದೆ. ಇದೇ ಮೊದಲ ಸಲ ಎರಡೂ ಪಕ್ಷಗಳು ಮಹಿಳೆಯರಿಗೆ ಟಿಕೆಟ್ ನೀಡಿರುವುದು ವಿಶೇಷ.
ದಾವಣಗೆರೆ ಕ್ಷೇತ್ರಕ್ಕೆ 1971ರಿಂದ ಈವರೆಗೆ 13 ಚುನಾವಣೆನಡೆದಿವೆ.ಈಪೈಕಿ1991ರವರೆಗೆ ಇದು ಕಾಂಗ್ರೆಸ್ಸಿನ ಭದ್ರ ಕೋಟೆಯಾಗಿತ್ತು. ಆದರೆ, ಅವಿಭಜಿತ ಚಿತ್ರದುರ್ಗ ಜಿಲ್ಲೆಯ ಭಾಗವಾಗಿದ್ದ ಭೀಮಸಮುದ್ರದ ಜಿ. ಮಲ್ಲಿಕಾರ್ಜುನಪ್ಪ ರಂಗ ಪ್ರವೇಶದೊಂದಿಗೆ ಮೊದಲ ಬಾರಿಗೆ ಇಲ್ಲಿ ಬಿಜೆಪಿ ಗೆದ್ದಿತ್ತು. ನಂತರ ಮೊದಲ ಸಲ ಸಂಸದರಾಗಿ ಆಯ್ಕೆಯಾದರು. ಬಳಿಕ ಸತತ 3 ಬಾರಿ ಗೆದ್ದು ದಾಖಲೆ ನಿರ್ಮಿಸಿದ್ದಾರೆ. ಎರಡೂ ಪಕ್ಷದಲ್ಲಿ ಬೇಗುದಿ: ಈ ಸಾರಿ ಟಿಕೆಟ್ ವಿಚಾರದಲ್ಲಿ ಕಾಂಗ್ರೆಸ್-ಬಿಜೆಪಿ ಎರಡರಲ್ಲೂ ಬೇಗುದಿ ಉಂಟಾಗಿತ್ತು. ಸಹಜವಾಗಿಯೇ ಶಾಮನೂರು ಕುಟುಂಬಕ್ಕೆ ಟಿಕೆಟ್ ನಿರೀಕ್ಷೆ ಇತ್ತು. ಆದರೆ, ಜಿ.ಬಿ.ವಿನಯ್ ಕುಮಾರ್ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿ ಬರುವುದ ರೊಂದಿಗೆ ಹೈಕಮಾಂಡ್‌ಗೆ ತಲೆ ನೋವಾಗಿತ್ತು. ಅದೇ ರೀತಿ ಬಿಜೆಪಿಯಲ್ಲಿ ಜಿ.ಎಂ.ಸಿದ್ದೇಶ್ವರಗೆ ಟಿಕೆಟ್ ನೀಡದಂತೆ ಮಾಜಿ ಸಚಿವರು, ಮಾಜಿ ಶಾಸಕರು, ಕಳೆದ ಚುನಾವಣೆಗೆ ಸ್ಪರ್ಧಿಸಿದ್ದವರ ಗುಂಪು ಧ್ವನಿ ಎತ್ತತೊಡಗಿತ್ತು.
Kalaburgi Lok Sabha Constituency: ಮಾವ ಖರ್ಗೆ ಸೋಲಿಗೆ ಸೇಡು ತೀರಿಸಿಕೊಳ್ತಾರಾ ಅಳಿಯ ರಾಧಾಕೃಷ್ಣ?
ಕೊನೆಗೆ ಸಮೀಕ್ಷೆಯಲ್ಲಿ ಡಾ.ಪ್ರಭಾ ಹೆಸರು ಕೇಳಿ ಬಂತೆಂದು ಕಾಂಗ್ರೆಸ್ ಅವರಿಗೆ ಟಿಕೆಟ್ ಘೋಷಿಸಿತು. ಇನ್ನು ವಿನಯ್ ಪಕ್ಷೇತರರಾಗಿ ಕಣಕ್ಕಿಳಿದು ಕಾಂಗ್ರೆಸ್ಸಿಗೆ ಬಂಡಾಯ ಸಾರಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಘೋಷಣೆಗೆ ಕಾದಿದ್ದ ಬಿಜೆಪಿ ಅಳೆದು ತೂಗಿ ಸಂಸದ ಜಿ.ಎಂ.ಸಿದ್ದೇಶ್ವರ ಪತ್ನಿ ಗಾಯತ್ರಿ ಸಿದ್ದೇಶ್ವರ್‌ಗೆ ಟಿಕೆಟ್ ನೀಡಿದೆ. ಸಿದ್ದೇಶ್ವರ್‌ಗೆ ಟಿಕೆಟ್ ನೀಡದಂತೆ ಪಟ್ಟುಹಿಡಿದಿದ್ದ ಮಾಜಿ ಸಚಿವ ರವೀಂದ್ರನಾಥ, ರೇಣುಕಾ ಚಾರ್ಯ ಇತರರ ಗುಂಪಿನ ಮನವಿಗೆ ಮನ್ನಣೆ ನೀಡಿದಂತೆಯೂ ಆಗಬೇಕು, 6 ಚುನಾವಣೆ ಯಲ್ಲಿ ದಾವಣಗೆರೆಯನ್ನು ಬಿಜೆಪಿ ಭದ್ರಕೋಟೆ ಮಾಡಿದ್ದ ಸಿದ್ದೇಶ್ವರ್‌ಗೂ ಅಸಮಾಧಾನ ಆಗಬಾರದೆಂಬ ಲೆಕ್ಕಾಚಾರದಲ್ಲಿ ಮಲ್ಲಿಕಾರ್ಜು ನಪ್ಪ ಮನೆಯ ಹಿರಿಯ ಸೊಸೆ ಗಾಯತ್ರಿ ಅವರನ್ನು ಅಖಾಡಕ್ಕಿಳಿಸಿತು. ಮೇಲ್ನೋಟಕ್ಕೆ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಪೈಪೋಟಿ ಇದ್ದರೂ ವಿನಯ್ ಪಡೆಯುವ ಮತಗಳು ಕುತೂಹಲ ಮೂಡಿಸಿದೆ.
ಜಾತಿ-ಮತ ಲೆಕ್ಕಾಚಾರ: ಕ್ಷೇತ್ರದಲ್ಲಿ ವೀರಶೈವ ಲಿಂಗಾಯತರೇ ನಿರ್ಣಾಯಕರು. ಲಿಂಗಾಯಿತರ ಸಂಖ್ಯೆಯೇ ಹೆಚ್ಚಿರುವ ಕಾರಣ ಆ ಸಮುದಾಯ ಯಾರಿಗೆ ಮತ ಹಾಕಲಿದೆ ಎನ್ನುವುದರ ಮೇಲೆ ಫಲಿತಾಂಶ ನಿರ್ಧಾರವಾಗಲಿದೆ. ಇನ್ನು ಕುರುಬರು, ಪರಿಶಿಷ್ಟರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳ ಮತಗಳು ಹಂಚಿ ಹೋಗಲಿವೆ. ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳು ಲಿಂಗಾಯತ ರಾಗಿದ್ದು, ಜಾತಿ ಮತಗಳು ಯಾರಿಗೆ ಎಂಬ ಪ್ರಶ್ನೆ ಕಾಡುತ್ತದೆ.
ಗಾಯತ್ರಿ ಸಿದ್ದೇಶ್ವರ, ಬಿಜೆಪಿ: ಮಾವ ಜಿ.ಮಲ್ಲಿಕಾರ್ಜುನಪ್ಪ 2 ಸಲ, ಪತಿ ಜಿ. ಎಂ.ಸಿದ್ದೇಶ್ವರ ಪರ 4 ಸಲ, ವಿಧಾನಸಭೆ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಪರ ಗೌಡತಿ ಗಾಯತ್ರಿ ಅವರು ಕೆಲಸ ಮಾಡಿದ್ದಾರೆ. ಈವರೆಗೆ ಮನೆ ಹಿರಿಯರು, ಪಕ್ಷದ ಅಭ್ಯರ್ಥಿಗಳ ಪರ ಕೆಲಸ ಮಾಡಿದ್ದ ಗಾಯತ್ರಿ ಇದೇ ಮೊದಲ ಸಲ ಅಭ್ಯರ್ಥಿ ಯಾಗಿದ್ದಾರೆ. ಕಳೆದ 2-3 ದಶಕದಿಂದ ಮನೆಯಿಂ ದಲೇ ರಾಜಕೀಯ ಚಟುವಟಿಕೆ ಹತ್ತಿರದಿಂದ ಬಲ್ಲ ವರು. ರಾಜಕಾರಣದ ತಂತ್ರ, ಪ್ರತಿ ತಂತ್ರಗಳನ್ನೆಲ್ಲಾ ಕಣ್ಣಾರೆ ಕಂಡವರು. ಸತತ 4 ಅವಧಿಗೆ ತಮ್ಮ ಗೆಲು ವಿಗೆ ದುಡಿದಿದ್ದ ಗಾಯತ್ರಿ ಪರ ಈಗ ಪತಿ ಸಿದ್ದೇಶ್ವರ ಕಾಲಿಗೆ ಚಕ್ರ ಕಟ್ಟಿ ಪ್ರಚಾರ ಮಾಡುತ್ತಿದ್ದಾರೆ.
‘ಮೋದಿ ಮೋದಿ’ ಎನ್ನುತ್ತಿದ್ದ ಯುವಕರಿಗೆ ನಾಮ: ಸಿಎಂ ಸಿದ್ದರಾಮಯ್ಯ
ಡಾ.ಪ್ರಭಾ ಮಲ್ಲಿಕಾರ್ಜುನ, ಕಾಂಗ್ರೆಸ್: ಶಾಮನೂರು ಶಿವಶಂಕರಪ್ಪನವರ ಕಿರಿ ಸೊಸೆ, ಸಚಿವ ಎಸ್ಸೆಸ್ ಮಲ್ಲಿಕಾರ್ಜುನರ ಪತ್ನಿ ಡಾ.ಪ್ರಭಾ ಮೂಲತಃ ದಂತ ವೈದ್ಯೆ. ತಾವು ಓದಿದ್ದ ಕಾಲೇಜಿನ ಆಡಳಿತ ಮಂಡಳಿಯ ಪ್ರಮುಖರೂ ಹೌದು. ಮಾವ, ಪತಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಾಲಿಗೆ ಸ್ಟಾರ್‌ಪ್ರಚಾರಕಿಯಾಗಿಯೂ ಶ್ರಮಿಸಿರುವ ಡಾ.ಪ್ರಭಾ ಹಲವು ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡವರು. ಸದ್ಯಕ್ಕೆ ದಾವಣಗೆರೆ ಕ್ಷೇತ್ರದ 14ನೇ ಚುನಾವಣೆಗೆ ಬಿಜೆಪಿಗೆ ಸವಾಲಾಗಿ ಕಾಂಗ್ರೆಸ್ ಕಣಕ್ಕಿಳಿಸಿರುವ ವಿಶ್ವಾಸಾರ್ಹ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್.